ನಮ್ಮ ದೇಹದಲ್ಲಿ ವಾತಾವರಣದ ಉಷ್ಣತೆ ಮತ್ತು ಅನುಚಿತ ಆಹಾರ ಸೇವನಾ ಕ್ರಮಗಳಿಂದಾಗಿ ಉಷ್ಣಾಂಶ ಏರಿಕೆಯಾಗುತ್ತದೆ. ಇದರಿಂದಾಗಿ ನಮಗೆ ಅನಾರೋಗ್ಯ ಪರಿಸ್ಥಿತಿಗಳು ಉಂಟಾಗುವುದಲ್ಲದೇ ದೇಹದಲ್ಲಿನ ಅಂಗಾಂಗಗಳ ಕಾರ್ಯಕ್ಕೂ ತೊಡಕು ಉಂಟಾಗುತ್ತದೆ. ಇದರಿಂದಾಗಿ ನಮ್ಮ ದೇಹದ ಮೇಲೆ ತಕ್ಷಣ ಮತ್ತು ದೀರ್ಘಕಾಲಿಕ ಪರಿಣಾಮಗಳು ಕಂಡುಬರುತ್ತವೆ. ಇದನ್ನು ನೈಸರ್ಗಿಕವಾಗಿಯೇ ಪರಿಹರಿಸಿಕೊಳ್ಳಬಹುದಾಗಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಸಲಹೆಗಳು ನಿಮಗಾಗಿ…
ದೇಹದ ಉಷ್ಣಾಂಶ ಹೆಚ್ಚಲು ಆಹಾರದಲ್ಲಿ ಅತಿಯಾದ ಮಸಾಲೆಯುಕ್ತಗಳ ಬಳಕೆ, ಖಾರವಾದ ಆಹಾರಗಳ ಸೇವನೆ, ನೀರಿನ ಕಡಿಮೆ ಸೇವನೆ ಮತ್ತು ಮದ್ಯ ಹಾಗೂ ಕೆಫಿನ್ ಯುಕ್ತ ಆಹಾರಗಳ ಅತಿಯಾದ ಸೇವನೆಯು ಸಹ ಕಾರಣವಾಗಿರುತ್ತದೆ. ಇದಲ್ಲದೆ ಹೆಚ್ಚಿನ ಉಷ್ಣಾಂಶದಲ್ಲಿ ಸತತವಾಗಿ ಕೆಲಸಗಳನ್ನು ಮಾಡುವುದು ಕೂಡಾ ದೇಹದಲ್ಲಿ ಉಷ್ಣಾಂಶ ಹೆಚ್ಚಲು ಕಾರಣವಾಗುತ್ತದೆ.
ನಮ್ಮ ದೇಹದ ಈ ಅನಾರೋಗ್ಯಕರ ಸ್ಥಿತಿಯನ್ನು ನೈಸರ್ಗಿಕವಾಗಿ ಪರಿಹಾರ ಮಾಡಿಕೊಳ್ಳಲು ಕೆಲವು ಸಲಹೆಗಳನ್ನು ನಾವಿಂದು ತಿಳಿದುಕೊಳ್ಳುತ್ತ ಹೋಗೋಣ..
ಎಳನೀರು ಸೇವನೆ :
ದೇಹದ ಉಷ್ಣಾಂಶ ಹೆಚ್ಚಿದಾಗ ಎಳನೀರು ಸೇವನೆ ಅತ್ಯುತ್ತಮ ಆಹಾರವಾಗಿದೆ. ಪ್ರತಿದಿನ ಸೇವಿಸುವುದರಿಂದ ಇದರಲ್ಲಿರುವ ಹೇರಳವಾದ ಜೀವಸತ್ವಗಳು ಮತ್ತು ಖನಿಜಾಂಶಗಳು ದೇಹಕ್ಕೆ ಪೋಷಣೆಯನ್ನು ನೀಡುತ್ತವೆ. ಅಲ್ಲದೇ ಇದರಲ್ಲಿರುವ ಇಲೆಕ್ಟ್ರೋಲೈಟ್ಸ್ ಗಳು ದೇಹವನ್ನು ಮತ್ತೆ ಚೈತನ್ಯ ಪೂರ್ಣಗೊಳಿಸಲು ಸಹಕಾರಿಯಾಗುತ್ತವೆ. ಇದಲ್ಲದೇ ಎಳನೀರು ಸೇವನೆ ಮಾಡುವುದರಿಂದ ಹೃದಯ ತೊಂದರೆಗಳು, ಮಧುಮೇಹ ಸಮಸ್ಯೆ, ಮೂತ್ರಕೋಶದಲ್ಲಿನ ಕಲ್ಲಿನ ಸಮಸ್ಯೆ ಮತ್ತು ಇನ್ನೂ ಮುಂತಾದ ತೊಂದರೆಗಳಿಗೆ ದೂರವಾಗುತ್ತವೆ.
ಇದನ್ನೂ ಓದಿರಿ: ಬೆಲ್ಲದ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಗೊತ್ತೇ ..?
ನಿಂಬೆ ಹಣ್ಣಿನ ಜ್ಯೂಸ್ :
ದೇಹವು ಹೆಚ್ಚಿನ ತಾಪಮಾನಕ್ಕೆ ತಲುಪಿದಾಗ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತದೆ. ಇದನ್ನು ತಡೆಗಟ್ಟಲು ನಿಂಬೆ ಹಣ್ಣಿನ ಜ್ಯೂಸ್ ಉಪಯುಕ್ತವಾಗಿದೆ. ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ ಮತ್ತು ತಾಪಮಾನ ಹೆಚ್ಚಳದಿಂದಾಗಿ ಉಂಟಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತದೆ. ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ಅಂಶದಿಂದಾಗಿ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ಇದರೊಂದಿಗೆ ದೇಹಕ್ಕೆ ಚೈತನ್ಯವನ್ನು ಸಹ ಒದಗಿಸಲು ಸಹಾಯಮಾಡುತ್ತದೆ.
ಜರ್ನಲ್ ಆಫ್ ಅನಿಮಲ್ ಸೈಕೊಲಾಜಿ ಆಂಡ್ ನ್ಯೂಟ್ರಿಷನ್ ಸಂಸ್ಥೆ ನಡೆಸಿದ ಪ್ರಯೋಗಗಳಿಂದಾಗಿ ನಿಂಬೆ ಹಣ್ಣಿನ ಜ್ಯೂಸ್ ಸೇವನೆಯು ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಕಂಡುಕೊಂಡಿದ್ದಾರೆ.
ಇದನ್ನೂ ಓದಿರಿ: ಒಂದು ಚಮಚ ಜೇನುತುಪ್ಪವನ್ನ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ಮೆಂತೆ ಕಾಳು :
ಮೆಂತೆ ಕಾಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲ ಶಕ್ತಿಯನ್ನು ಹೊಂದಿದೆ. ಅಂತೆಯೇ ದೇಹದ ಉಷ್ಣತೆಯನ್ನು ಸಹ ನಿಯಂತ್ರಿಸುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಮೆಂತೆಯ ಕಾಳನ್ನು ಸೇರಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೆಂತೆಯ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಅದರ ನೀರನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೇ ಮೆಂತೆ ಗಂಜಿಯನ್ನು ಕೂಡಾ ಮಾಡಿಕೊಂಡು ಸೇವನೆ ಮಾಡಬಹುದು. ಇದಲ್ಲದೇ ಮೆಂತೆ ಕಾಲು ಮಧುಮೇಹ, ಕಿಡ್ನಿ ಸಮಸ್ಯೆ, ಮಹಿಳೆಯರ ಋತುಚಕ್ರದ ಸೆಳತದ ಸಮಸ್ಯೆ, ಬಾಣಂತಿಯರಲ್ಲಿ ಹಾಲಿನ ಉತ್ಪತ್ತಿ ಕೊರತೆ ಹೀಗೇ ಇನ್ನೂ ಅನೇಕ ತೊಂದರೆಗಳಿಗೆ ಔಷಧವಾಗಿ ನಿಲ್ಲುತ್ತದೆ.
ಇದನ್ನೂ ಓದಿರಿ: ಕುಡಿಯುವ ನೀರನ್ನು ಯಾವ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಒಳ್ಳೆಯದು ನಿಮಗೆ ಗೊತ್ತೇ..?
ಅಲೋವೆರಾ (ಲೋಳೆಸರ) :
ಅಲೋವೆರಾ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ದೇಹದ ಉಷ್ಣತೆ ಹೆಚ್ಚಿದ ಸಮಯದಲ್ಲಿ ಅದರ ಎಲೆಯಲ್ಲಿರುವ ತಿರುಳನ್ನು ಚರ್ಮದ ಮೇಲೆ ಮತ್ತು ನೆತ್ತಿಯ ಮೇಲೆ ಹಚ್ಚಿಕೊಳ್ಳುವುದರಿಂದ ದೇಹವು ತಂಪಾಗುತ್ತದೆ. ಇದಲ್ಲದೆ ಇದರ ತಿರುಳನ್ನು ಎರಡು ಚಮಚದಷ್ಟು ನೀರಿಗೆ ಸೇರಿಸಿ ಜ್ಯೂಸ್ ರೀತಿಯಲ್ಲಿ ಸೇವನೆ ಮಾಡುವುದು ಸಹ ತುಂಬಾ ಸಹಾಯಕಾರಿ.
ಇದನ್ನೂ ಓದಿರಿ: ಒಣ ದ್ರಾಕ್ಷಿಯ ಸೇವನೆಯಿಂದ ದೊರೆಯುತ್ತದೆ ಅಧ್ಬುತವಾದ ಆರೋಗ್ಯ ಪ್ರಯೋಜನಗಳು…!
ದಾಳಿಂಬೆ ಜ್ಯೂಸ್ :
ದಾಳಿಂಬೆ ಹಣ್ಣಿನ ಜ್ಯೂಸ್ ದೇಹದ ಉಷ್ಣತೆ ಹೆಚ್ಚದೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಲ್ಲದೆ ಅಧಿಕ ಉಷ್ಣತೆಯಿಂದ ಉಂಟಾಗುವ ಹಲವಾರು ಸಮಸ್ಯೆಗಳ ನಿವಾರಣೆಗೂ ಇದರ ಬಳಕೆ ಮಾಡಬಹುದು. ಇದಲ್ಲದೆ ದಾಳಿಂಬೆ ಜ್ಯೂಸ್ ಸೇವನೆಯಿಂದ ಪ್ಲೇಟ್ಲೆಟ್ ಕೌಂಟ್ ಸಹ ಹೆಚ್ಚಳವಾಗುತ್ತದೆ.
ಇದನ್ನೂ ಓದಿರಿ: ಪ್ಲೇಟ್ಲೆಟ್ ಕೌಂಟ್ ಕೊರತೆಯಿಂದ ಬಳಲುತ್ತಿದ್ದಿರೇ..? ಹಾಗಾದರೆ ಇಲ್ಲಿದೆ ನೈಸರ್ಗಿಕ ಪರಿಹಾರ..!