ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಇಲ್ಲಿದೆ ನಿಮಗಾಗಿ ಕೆಲವು ಸಲಹೆಗಳು

ಅಧಿಕ ರಕ್ತದ ಒತ್ತಡ ಸಮಸ್ಯೆಯು ನಮ್ಮನ್ನು ಹಲವಾರು ಕಾಯಿಲೆಗಳಿಗೆ ಒಡ್ಡುವಂತೆ ಮಾಡುತ್ತದೆ. ಇದರ ನಿಯಂತ್ರಣಕ್ಕೆ ಹಲವಾರು ನೈಸರ್ಗಿಕ ಉಪಾಯಗಳಿದ್ದು ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

suffering-from-high-bp-ways-manage-it-naturally

ನಮ್ಮ ಇಂದಿನ ಜೀವನ ಶೈಲಿಯಿಂದ ಬಹಳಷ್ಟು ಜನರಲ್ಲಿ ಈ ಅಧಿಕ ರಕ್ತದೊತ್ತಡ ಸಮಸ್ಯೆಯು ಕಂಡುಬರುತ್ತದೆ. ಇದು ಅವರ ಜೀವನ ನಿರ್ವಹಣೆಯನ್ನು ಅಲ್ಲೋಲ ಕಲ್ಲೋಲ ಮಾಡುವುದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆರಂಭದಲ್ಲಿಯೇ ನಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮತ್ತು ಅಗತ್ಯ ಔಷಧಗಳ ಸೇವನೆಯಿಂದ ಈ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು.

ರಕ್ತದೊತ್ತಡ ತನ್ನ ನಿಯಂತ್ರಣವನ್ನು ಕಳೆದುಕೊಂಡ ನಂತರ ಹಲವಾರು ಕಾಯಿಲೆಗಳನ್ನು ತಂದೊಡ್ಡುತ್ತದೆ. ಇದರಿಂದಾಗಿ ಹೃದಯ ಸಮಸ್ಯೆ, ಪಾರ್ಶ್ವವಾಯು, ಮೂತ್ರಪಿಂಡಗಳಲ್ಲಿ ಸಮಸ್ಯೆ ಮತ್ತು ಮೆದುಳಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರ ನಿಯಂತ್ರಕ್ಕೆ ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ಪತ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ನಾವಿಂದು ಅಂತಹ ಕೆಲವೊಂದು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ ಅವುಗಳನ್ನು ಪಾಲಿಸಿ…

ಮೆಗ್ನಿಷಿಯಂ ಅಧಿಕವಾಗಿರುವ ಆಹಾರ ಸೇವಿಸಿ

ಮೆಗ್ನಿಷಿಯಂ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತನಾಳಗಳು ಸಡಿಲಗೊಂಡು ತಮ್ಮ ಕಾರ್ಯವನ್ನು ಉತ್ತಮಗೊಳಿಸುತ್ತವೆ. ಅಲ್ಲದೆ ಮೆಗ್ನೆಶಿಯಂ ಹೆಚ್ಚಿರುವ ಆಹಾರವನ್ನು ಸೇವಿಸಿದಾಗ ದೇಹಕ್ಕೆ ರಿಲ್ಯಾಕ್ಸೇಶನ್ ದೊರೆಯುತ್ತದೆ. ಇದರಿಂದಾಗಿ ರಕ್ತದ ಅಧಿಕ ಒತ್ತಡವು ನಿಯಂತ್ರಣದಲ್ಲಿ ಇರುತ್ತದೆ. ಬಾಳೆಹಣ್ಣು, ಬೆಣ್ಣೆಹಣ್ಣು, ಬಾದಾಮಿ, ಗೆಣಸು, ಎಲೆಕೋಸು, ಕೊತ್ತಂಬರಿ ಸೊಪ್ಪು ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನಿಷಿಯಂ ಅಂಶವು ತುಂಬಿದೆ. ಇವುಗಳನ್ನು ನಮ್ಮ ದಿನನಿತ್ಯದ ಆಹಾರಗಳಲ್ಲಿ ಬಳಕೆ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿ.

ಇದನ್ನೂ ಓದಿರಿ: ಸಕ್ಕರೆ ತಿಂದರೆ ಡಯಾಬಿಟಿಸ್ ಬರುತ್ತಾ ? ಈ ಕುರಿತು ಇರುವ ಗೊಂದಲ ನಿವಾರಣೆಗೆ ಇಲ್ಲಿ ಓದಿ

ಕೆಫಿನ್ ಹೊಂದಿರುವ ಆಹಾರವನ್ನು ಕಡಿಮೆಮಾಡಿ

ಕೆಫಿನ್ ಹೊಂದಿರುವ ಆಹಾರವನ್ನು ದಿನದಲ್ಲಿ ಹಲವುಬಾರಿ ಸೇವಿಸುವುದರಿಂದ ಅದು ನಮ್ಮ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ. ಕೆಫಿನ್ ಅಂಶವು ರಕ್ತದ ಒತ್ತಡವನ್ನು ತಕ್ಷಣವೇ ಹೆಚ್ಚಿಸುವುದರಿಂದ ತುಂಬಾ ಅಪಾಯಕಾರಿಯಾಗಬಹುದು. ಹಾಗಾಗಿ ಸಾಧ್ಯವಾದಷ್ಟು ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರು ಕಾಫಿ, ಚಹಾ ಇವುಗಳಿಂದ ದೂರವಿರುವುದು ಉತ್ತಮ.

suffering-from-high-bp-ways-manage-it-naturally

ಸೋಡಿಯಂ ಅಂಶವಿರುವ ಆಹಾರಗಳನ್ನು ಕಡಿಮೆ ಸೇವಿಸಿ

ಸೋಡಿಯಂ ಅಂಶವನ್ನು ಹೊಂದಿರುವ ಉಪ್ಪು, ಉಪ್ಪಿನಕಾಯಿ, ಪ್ಯಾಕ್ ಮಾಡಲ್ಪಟ್ಟ ತಿಂಡಿ ತಿನಿಸುಗಳು ಸದಾ ಆರೋಗ್ಯಕ್ಕೆ ಹಾನಿಕಾರಕ. ಇವುಗಳು ನಮ್ಮ ದೇಹದಲ್ಲಿ ಸೋಡಿಯಂ ಅಂಶವನ್ನು ಹೆಚ್ಚಿಸಿ ಮೂತ್ರ ಪಿಂಡದಲ್ಲಿ ತೊಂದರೆಯನ್ನು ಉಂಟುಮಾಡುತ್ತವೆ. ಇದರಿಂದಾಗಿ ಕಲ್ಮಶಗಳು ಹೊರಹೋಗದೆ ದೇಹದ ರಕ್ತದ ಒತ್ತಡವು ಹೆಚ್ಚಳವಾಗುತ್ತದೆ.

ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರಿ

ಧೂಮಪಾನ ಮತ್ತು ಮಧ್ಯಪಾನಗಳೆರಡು ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಇವುಗಳು ರಕ್ತದೊತ್ತಡ ಮಾತ್ರವಲ್ಲದೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಇವುಗಳನ್ನು ಬಿಡುವುದು ಅತ್ಯಾವಶ್ಯಕವಾಗಿದೆ.

suffering-from-high-bp-ways-manage-it-naturally

ಇದನ್ನೂ ಓದಿರಿ: ನಿಮ್ಮವರನ್ನು ಧೂಮಪಾನ ವ್ಯಸನದಿಂದ ಹೊರತರಬೇಕೆ ? ಹಾಗಾದರೆ ಈ ಸಲಹೆಗಳನ್ನು ಪಾಲಿಸಿ…

ಒತ್ತಡವನ್ನು ಕಡಿಮೆ ಮಾಡಿ

ಒತ್ತಡದ ಜೀವನವು ನಮ್ಮ ಮನಸ್ಸನ್ನು ಮತ್ತು ಆರೋಗ್ಯವನ್ನು ಕೆಡಿಸುತ್ತದೆ. ನಮ್ಮ ಹಲವಾರು ತೊಂದರೆಗಳನ್ನು ನಾವು ತಲೆಗೆ ಹಚ್ಚಿಕೊಂಡು ಕೊರಗುವುದರಿಂದ ನಮ್ಮ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ. ಸಾಧ್ಯವಾದಷ್ಟು ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಹಾಗೆಯೇ ಅವುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುವ ಬದಲು ಸಾಧ್ಯವಾದಷ್ಟು ದೂರವಾಗಲು ಪ್ರಯತ್ನಿಸಿ. ಇದರಿಂದ ನಿಮ್ಮ ಜೀವನವು ಸುಧಾರಿಸಲು ಸಹಾಯವಾಗುತ್ತದೆ. ಮುಖ್ಯವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಇವುಗಳು ನಮ್ಮ ಒತ್ತಡವನ್ನು ನಿಯಂತ್ರಿಸಲು ಬಹಳವಾಗಿಯೇ ಸಹಾಯಕ್ಕೆ ಬರುತ್ತವೆ.

ನಿಯಮಿತ ವ್ಯಾಯಾಮ

ನಮ್ಮ ದೇಹಕ್ಕೆ ಅಗತ್ಯವಿರುವ ವ್ಯಾಯಾಮವನ್ನು ಮಾಡುವುದರಿಂದ ಉತ್ತಮವಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತವೆ. ಪ್ರತಿದಿನ ಅಗತ್ಯವಿರುವಷ್ಟು ವ್ಯಾಯಾಮವನ್ನು ಮಾಡುತ್ತಾ ಬನ್ನಿ. ವ್ಯಾಯಾಮ ಮಾಡುವುದೆಂದು ಹೆಚ್ಚಿನ ಕಠಿಣವಾದ ವ್ಯಾಯಾಮಗಳನ್ನು ಮಾಡಲುಹೋಗದಿರುವುದು ಉತ್ತಮ. ಅಲ್ಲದೇ ಮದ್ಯ ಮದ್ಯ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಇವುಗಳೊಂದಿಗೆ ಯೋಗಾಸನಗಳು, ಮುದ್ರೆಗಳು ನಿಮ್ಮ ಸಹಾಯಕ್ಕೆ ಬರುತ್ತವೆ, ಇವುಗಳನ್ನು ತಜ್ಞರ ಸಹಾಯದ ಮೇರೆಗೆ ಅಳವಡಿಸಿಕೊಳ್ಳಿ.

suffering-from-high-bp-ways-manage-it-naturally

ದೇಹದ ತೂಕವನ್ನು ಇಳಿಸಿಕೊಳ್ಳಿ

ದೇಹದ ಅತಿಯಾದ ತೂಕವು ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಅತಿಯಾದ ಬೊಜ್ಜು ಹೃದಯಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ಬಹಳವೇ ಕಷ್ಟವಾಗುತ್ತದೆ. ಹಾಗಾಗಿ ದೇಹದ ತೂಕವು ಕಡಿಮೆ ಇರುವುದು ಉತ್ತಮ. ನಿಯಮಿತವಾಗಿ ವ್ಯಾಯಾಮ ಮತ್ತು ಪೋಷಕಾಂಶಯುಕ್ತ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ದೇಹದ ತೂಕವನ್ನು ನಿಯತ್ರಣದಲ್ಲಿ ಇಡಬಹುದಾಗಿದೆ. ಪ್ರತಿದಿನ ಅರ್ಧ ಗಂಟೆಗಳ ಕಾಲ ನಡಿಗೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ.

ಇದನ್ನೂ ಓದಿರಿ: ತೂಕ ಇಳಿಸಿಕೊಳ್ಳಬೇಕೇ ? ಬೆಳಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ..!

LEAVE A REPLY

Please enter your comment!
Please enter your name here