ಬಿಸಿಗೆ ನಾಲಿಗೆ ಸುಟ್ಟುಕೊಂಡಿದ್ದೀರೆ ? ಶೀಘ್ರ ಶಮನಕ್ಕೆ ಇಲ್ಲಿದೆ ಮನೆ ಮದ್ದು

five-burning-tongue-remedies

ಸಾಮಾನ್ಯವಾಗಿ ಎಲ್ಲರೂ ಬಿಸಿಯಾದ ಆಹಾರವನ್ನು ಸೇವಿಸಲು ಬಯಸುತ್ತಾರೆ. ಕೆಲವೊಮ್ಮೆ ಬಿಸಿಯಾದ ಚಹಾ, ಕಾಪಿಯನ್ನು ಕುಡಿಯುವಾಗ ನಾಲಿಗೆಯನ್ನು ಸುಟ್ಟುಕೊಳ್ಳುತ್ತೇವೆ. ಈ ರೀತಿ ನಾಲಿಗೆ ಸುಡುವುದರಿಂದ ನಾಲಗೆಯೂ ಎರಡು ಮೂರೂ ದಿನಗಳ ಕಾಲ ತನ್ನ ರುಚಿಯನ್ನು ನೋಡುವ ಗುಣವನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಬಿಸಿಯಾದ, ಖಾರವಾದ ಆಹಾರವನ್ನು ತಿನ್ನಲು ತೊಂದರೆಯನ್ನು ಅನುಭವಿಸುತ್ತೇವೆ. ಈ ತೊಂದರೆಗಳಿಂದ ಪಾರಾಗಲು ಸರಳ ಮನೆಮದ್ದನ್ನು ಇಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇವುಗಳನ್ನು ಮಾಡುವುದರಿಂದ ಶೀಘ್ರದಲ್ಲಿಯೇ ಉಪಶಮನವನ್ನು ಕಾಣಬಹುದಾಗಿದೆ.

ತಣ್ಣನೆಯ ನೀರು

ನಾಲಿಗೆಯನ್ನು ಸುಟ್ಟುಕೊಂಡ ತಕ್ಷಣ ತಣ್ಣನೆಯ ನೀರನ್ನು ಕುಡಿಯುವುದರಿಂದ ನಾಲಿಗೆ ತಂಪಾಗಿ ಸುಟ್ಟ ಪರಿಣಾಮ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಬಹುಬೇಗನೆ ನೋವು ಮತ್ತು ಉರಿ ಕಡಿಮೆಯಾಗುತ್ತದೆ.

ಸಕ್ಕರೆ ಸೇವನೆ

ಬಿಸಿಯಾದ ಆಹಾರವನ್ನು ಸೇವಿಸಿದಾಗ ನಾಲಿಗೆಯನ್ನು ಸುಟ್ಟುಕೊಳ್ಳುತ್ತೇವೆ. ತಕ್ಷಣದಲ್ಲಿ ಸ್ವಲ್ಪ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ನಾಲಿಗೆಯ ಮೇಲೆ ಇಟ್ಟುಕೊಳ್ಳುವುದರಿಂದ ಶೀಘ್ರದಲ್ಲಿಯೇ ನೆಮ್ಮದಿಯನ್ನು ಕಾಣಬಹುದಾಗಿದೆ.

ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?
five-burning-tongue-remedies

ತೆಂಗಿನ ಕಾಯಿ

ನಾಲಿಗೆಯನ್ನು ಸುಟ್ಟುಕೊಂಡಾಗ ತೆಂಗಿನ ಕಾಯಿಯನ್ನು ಬಾಯಿಗೆ ಹಾಕಿ ಜಗಿಯುತ್ತಾ ಸ್ವಲ್ಪ ಸಮಯ ಬಾಯಿಯಲ್ಲಿಯೇ ಇಟ್ಟುಕೊಳ್ಳಬೇಕು. ಇದರಿಂದಾಗಿ ನಾಲಿಗೆಯ ಮೇಲೆ ಉಂಟಾದ ಬಿಸಿಯ ತೊಂದರೆಯನ್ನು ಸರಿಪಡಿಸಿಕೊಳ್ಳಬಹುದು. ತೆಂಗಿನ ಕಾಯಿಯೂ ಸುಟ್ಟ ಉರಿಯನ್ನು ಕಡಿಮೆ ಮಾಡಿ ಶಾಂತಗೊಳಿಸುತ್ತದೆ.

ಜೇನುತುಪ್ಪ

ಜೇನುತುಪ್ಪವು ಸುಟ್ಟ ಉರಿಯನ್ನು ಉಪಶಮನ ಮಾಡಲು ಉತ್ತಮ ಔಷಧವಾಗಿದೆ. ನಾಲಿಗೆಯು ಸುಟ್ಟತಕ್ಷಣ ಸ್ವಲ್ಪ ಜೇನುತುಪ್ಪವನ್ನು ಬಾಯಿಗೆ ಹಾಕಿಕೊಳ್ಳುವುದರಿಂದ ಕಡಿಮೆಯಾಗುತ್ತದೆ. ಇದನ್ನು ಬಾಯಿಮಾತ್ರವಲ್ಲದೆ ಸುಟ್ಟ ಎಲ್ಲಾ ಗಾಯಗಳಿಗೂ ಔಷಧವಾಗಿ ಬಳಸುತ್ತಾರೆ.

ಆಲೋವೆರಾ

five-burning-tongue-remedies
ಚಹಾ ಅಥವಾ ಕಾಪಿಯಿಂದ ನಾಲಿಗೆಯನ್ನು ಸುಟ್ಟುಕೊಂಡರೆ ತಕ್ಷಣ ಆಲೋವೆರಾ ರಸವನ್ನು ನಾಲಿಗೆಯ ಮೇಲೆ ಇಟ್ಟುಕೊಳ್ಳುವುದರಿಂದ ತಂಪಾಗಿ ಶೀಘ್ರ ಉಪಶಮನ ದೊರೆಯುತ್ತದೆ. ಆಲೋವೆರವು ದೇಹವನ್ನು ತಂಪಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಇದನ್ನೂ ಓದಿರಿ: ನಿಮ್ಮ ಜೀವನದಲ್ಲಿ ಯೋಗಾಸನವನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ ಇದನ್ನೊಮ್ಮೆ ಓದಿರಿ

LEAVE A REPLY

Please enter your comment!
Please enter your name here