ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು

health-benefits-of-curry-leaves

ಕರಿಬೇವಿನ ಸೊಪ್ಪನ್ನು ಅಡುಗೆಯಲ್ಲಿ ಬಳಸುವುದರಿಂದ ಅದರ ಸುವಾಸನೆ ಮತ್ತು ರುಚಿ ಬದಲಾಗುತ್ತದೆ. ಆದರೆ ನಾವು ಆ ಎಲೆಗಳನ್ನು ಸೇವಿಸುವುದಕ್ಕಿಂತ ತೆಗೆದು ಪಕ್ಕಕ್ಕಿಡುವುದೇ ಹೆಚ್ಚು. ಆದರೆ ಇದರ ಸೇವನೆಯಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಹಲವಾರು. ಅವುಗಳನ್ನು ತಿಳಿದರೆ ನೀವು ಆಶ್ಚರ್ಯಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದರೆ ನಾವಿಂದು ಆ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.

ರಕ್ತ ಕ್ಯಾನ್ಸರ್ ತಡೆಯುತ್ತದೆ

ನಮ್ಮ ಜೀವರಕ್ಷಕವಾದ ಬಿಳಿರಕ್ತಕಣಗಳು ಅಗತ್ಯಕ್ಕಿಂತ ಹೆಚ್ಚಾದರೆ ಅವುಗಳೇ ರಕ್ತ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಇಂತಹ ರಕ್ತ ಕ್ಯಾನ್ಸರ್ ಗೆ ಕಾರಣವಾಗಗುವ ಅತಿಯಾದ ಬಿಳಿರಕ್ತಕಣಗಳ ಬೆಳವಣಿಗೆಯನ್ನು ನಿಯಂತ್ರಿಸುವುದರಲ್ಲಿ ಕರಿಬೇವಿನ ಎಲೆಗಳ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಕಾರ್ಬೋಜೋಲ್ ಅಲ್ಕಲೈಡ್(Carbozole Alkaloid)ಎಂಬ ಅಂಶವು ಇದ್ದು, ಇದು ಕ್ಯಾನ್ಸರ್ ಕಾರಕವಾಗುವ ಲಕ್ಷಣಗಳಿಂದ ನಮ್ಮನ್ನು ಕಾಪಾಡುತ್ತದೆ.

ಮೂತ್ರ ಪಿಂಡಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ

ಮುತ್ರಪಿಂಡಗಳು ನಮ್ಮ ರಕ್ತವನ್ನು ಶುದ್ದೀಕರಿಸುವ ಕಾರ್ಯದಲ್ಲಿ ಸದಾಕಾಲ ನಿರತವಾಗಿರುತ್ತವೆ. ಈ ಸ್ವಚ್ಛತೆಯ ಕಾರ್ಯವನ್ನು ಮಾಡುತ್ತಾ ಲವಣಗಳ ಪರಿಣಾಮದಿಂದ ಮೂತ್ರ ಪಿಂಡಗಳಲ್ಲಿ ಕಲ್ಲು ನಿರ್ಮಾಣವಾಗುತ್ತವೆ. ಇವುಗಳಿಂದಾಗಿ ಅನೇಕ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ ಕರಿಬೇವಿನ ಜ್ಯೂಸನ್ನು ಕುಡಿಯುವುದರಿಂದ ಮೂತ್ರ ಪಿಂಡಗಳ ಕಾರ್ಯಕ್ಷಮತೆ ಹೆಚ್ಚುವ ಜೊತೆಗೆ ಕಲ್ಲಿನ ಸಮಸ್ಯೆಯು ದೂರವಾಗುತ್ತವೆ.

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

health-benefits-of-curry-leaves

ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ

ಅಜೀರ್ಣ ಸಮಸ್ಯೆಯನ್ನು ಅನುಭವಿಸುತ್ತಿರುವವರು ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಉತ್ತಮ ಪರಿಹಾರ ಪಡೆದುಕೊಳ್ಳಬಹುದಾಗಿದೆ.  ಇದು ಹೊಟ್ಟೆಯ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. 1-2 ಟಿ ಚಮಚ ಕರಿಬೇವಿನ ರಸಕ್ಕೆ 1ಟಿ ಚಮಚ ಲಿಂಬೆರಸ ಮತ್ತು ಸಕ್ಕರೆಯನ್ನು ಸೇರಿಸಿ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಉತ್ತಮ ಪರಿಣಾಮವನ್ನು ಕಾಣುತ್ತೀರಿ.

ಮಧುಮೇಹ ನಿಯಂತ್ರಿಸುತ್ತದೆ

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನ ಹೆಚ್ಚುತ್ತಲೇ ಇದೆ. ಇದು ಬಂದ ನಂತರದಲ್ಲಿ ಅದರ ನಿಯಂತ್ರಣವನ್ನು ಮಾಡಿಕೊಳ್ಳುವುದರಿಂದ ಉತ್ತಮ ಜೀವನವನ್ನು ನಡೆಸಬಹುದಾಗಿದೆ. ಮಧುಮೇಹವನ್ನು ನಿಯಂತ್ರಿಸುವಲ್ಲಿ ಕರಿಬೇವಿನ ಎಲೆಯು ಉತ್ತಮ ಪರಿಣಾಮವನ್ನು ಬೀರುತ್ತದೆ. ಆಹಾರ ತಯಾರಿಕೆಯಲ್ಲಿ ಬಳಸಿದ ಎಲೆಗಳನ್ನು ತೆಗೆದಿಡುವ ಬದಲು ಅದನ್ನು ಸೇವಿಸುತ್ತಾ ಇದ್ದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ.
health-benefits-of-curry-leaves

ಇದನ್ನೂ ಓದಿರಿ:ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಿ

ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ

ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಆಹಾರ ತಯಾರಿಕೆಯಲ್ಲಿ ಬಳಸಿ, ಸೇವಿಸುತ್ತಾ ಬಂದರೆ ರಕ್ತ ಹೀನತೆಯ ತೊಂದರೆ ದೂರವಾಗುತ್ತದೆ. ಇದರಲ್ಲಿ ರಕ್ತದ ಉತ್ಪಾದನೆಗೆ ಅಗತ್ಯವಾದ ಕಬ್ಬಿಣದ ಅಂಶ ಹೇರಳವಾಗಿದೆ. ಅಲ್ಲದೇ ಇದರಲ್ಲಿ ಪೋಲಿಕ್ ಆಮ್ಲವೂ ಇದ್ದು,  ರಕ್ತ ಹೀನತೆ ನಿವಾರಣೆಗೆ ಸಹಾಯಕವಾಗುತ್ತದೆ.

ಕೂದಲು ಉದುರುವಿಕೆಯನ್ನು ತಡೆಯುತ್ತದೆ

ತಲೆಗೂದಲು ಉದುರುವ ಸಮಸ್ಯೆಯು ಹಲವರನ್ನು ಕಾಡುತ್ತಿರುತ್ತದೆ. ಇದು ಒಂದು ಗಂಬೀರವಾದಸಮಸ್ಯೆಯಾಗಿದ್ದು, ಇದರ ಚಿಕಿತ್ಸೆಗೆ ಕರಿಬೇವನ್ನು ಬಳಸುವುದು ಪರಿಣಾಮಕಾರಿಯಾಗಿದೆ. ಎಲೆಗಳನ್ನು ಬಿಡಿಸಿಕೊಂಡು ಎಣ್ಣೆಯಲ್ಲಿ ಹಾಕಿ ಕೂಡಿಸಿಕೊಂಡು, ಅವುಗಳನ್ನು ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳುತ್ತ ಬರುವುದರಿಂದ ಕಪ್ಪಗಿನ ಮತ್ತು ದಟ್ಟವಾದ ಕೂದಲನ್ನು ಪಡೆಯಬಹುದಾಗಿದೆ.

ಇದನ್ನೂ ಓದಿರಿ: ಒಂದೆಲಗದಲ್ಲಿದೆ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ..!

LEAVE A REPLY

Please enter your comment!
Please enter your name here