ತೂಕ ಇಳಿಸಿಕೊಳ್ಳಬೇಕೇ ? ಬೆಳಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ..!

ಅತಿಯಾದ ದೇಹದ ತೂಕ ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ವ್ಯಕ್ತಿಯ ಸೌಂದರ್ಯ ಮತ್ತು ಆತ್ಮವಿಶ್ವಾಸದ ಮೇಲೆಯೂ ಪ್ರಭಾವ ಬೀರುತ್ತದೆ. ಅತಿಯಾದ ತೂಕದಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕೊಲೆಸ್ಟ್ರಾಲ್ ಮತ್ತು ಸಂಧಿವಾತದಂತಹ ಅನೇಕ ತೊಂದರೆಗಳಿಂದ ಬಳಲಬೇಕಾಗುತ್ತದೆ.

ಈ ಎಲ್ಲ ತೊಂದರೆಗಳಿಂದ ಹೊರಬರಲು ಮೊಟ್ಟಮೊದಲು ದೇಹದ ತೂಕ ಹೆಚ್ಚಾಗಲು  ಕಾರಣವಾದ ಸ್ಥೂಲಕಾಯದಿಂದ ಹೊರಬರಲು ಗಟ್ಟಿಮನಸ್ಸು ಮಾಡುವುದು ಪ್ರಮುಖವಾಗಿದೆ. ಉಳಿದಂತೆ ಉತ್ತಮ ಆಹಾರ ಕ್ರಮದ ಜೊತೆಗೆ ನಿಯಮಿತ ವ್ಯಾಯಾಮವನ್ನು ಅನುಸರಿಸಿದರೆ ಸಾಕಾಗುತ್ತದೆ.

ತೂಕ ಇಳಿಸಲು ಪ್ರಮುಖವಾಗಿ ತಾಳ್ಮೆ ಮತ್ತು ದೃಢ ನಿರ್ಧಾರದ ಅವಶ್ಯಕತೆಯಿದೆ. ತೂಕವನ್ನು ಇಳಿಸಿಕೊಳ್ಳಲು ದ್ರವಆಹಾರಗಳ ಮೊರೆಹೋಗುವುದು ಉತ್ತಮ ಮಾರ್ಗವಾಗಿದೆ. ಈ ತಾಜಾ ರಸಗಳು ಅನೇಕ ಜೀವಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಕೊಬ್ಬಿನಂಶದ ಮೇಲೆ ಒತ್ತಡ ಹೇರಲು ಸಹಾಯಕವಾಗಿವೆ. ಇವುಗಳಲ್ಲಿ ತೂಕ ಇಳಿಸಲು ಸಹಾಯಕವಾಗುವ ಕೆಲವು ಜ್ಯೂಸ್ ಗಳನ್ನೂ  ಹೆಸರಿಸಲಾಗುವೆ.

ಆಮ್ಲಾ ಜೂಸ್ (ಫೋಟೋ ಗೂಗಲ್ ಕ್ರಪೆ )

ಕಿತ್ತಳೆ  ಜ್ಯೂಸ್     

ಬೆಳಗಿನ ಪ್ರಥಮ ಆಹಾರವಾಗಿ ಕಿತ್ತಳೆ ಹಣ್ಣಿನ ಜ್ಯೂಸ್  ತೆಗೆದುಕೊಳ್ಳುವುದರಿಂದ ಅಪಾರವಾದ ಪ್ರಭಾವವನ್ನು ಬೀರುತ್ತದೆ. ಇದನ್ನು ನಿಮ್ಮ ಬೆಳಗಿನ ಆಹಾರದ ಬದಲಿಯಾಗಿಯೂ ತೆಗೆದುಕೊಳ್ಳಬಹುದು. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವು ಇರುವುದರಿಂದ ಕೊಬ್ಬಿನಂಶವಾಗಿ ಜಮೆಯಾಗುವ ಪ್ರಕ್ರಿಯೆ ನಿಲ್ಲುತ್ತದೆ. ಅಲ್ಲದೆ ಕಡಿಮೆಯಾಗುವ ಕ್ಯಾಲೋರಿ ಸರಿದೂಗಿಸಿಕೊಳ್ಳಲು ಹಳೆಯ ಕೊಂಬ್ಬನ್ನು ಕ್ಯಾಲೋರಿಯಾಗಿ ಕರಗಿಸಿಕೊಳ್ಳುತ್ತದೆ.

ಆಮ್ಲಾ ಜ್ಯೂಸ್

ಆಮ್ಲಾ ಜ್ಯೂಸ್ ನಿಂದ ದಿನವನ್ನು  ಆರಂಭಿಸಿದರೆ ಚಯಾಪಚಯ ಕ್ರಿಯೆಯು ಉತ್ತಮವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾದ ಕ್ರಮದಲ್ಲಿ ನಡೆಸಲು ಸಹಾಯಕವಾಗಲಿದೆ. ಇದರಿಂದಾಗಿ ಕೊಬ್ಬನ್ನು ಸುಟ್ಟು ದೇಹವನ್ನು ಕರಗಿಸಿಕೊಳ್ಳಬಹುದಾಗಿದೆ. ಆಯುರ್ವೇದದಲ್ಲಿ ಆಮ್ಲಾ ಜ್ಯೂಸ್ ಗೆ ವಿಶೇಷ ಸ್ಥಾನವನ್ನು  ನೀಡಲಾಗಿದ್ದು, ಇದನ್ನು ಸೇವಿಸುವುದರಿಂದ ಚೈತನ್ಯ ಪೂರ್ಣವಾಗಿಯೂ ಮತ್ತು ಶಕ್ತಿಯುತವಾಗಿಯೂ ಇರಬಹುದೆಂದು ಹೇಳಲಾಗುತ್ತದೆ.

ಬೀಟ್ರೂಟ್ ಜ್ಯೂಸ್ 

ಬೀಟ್ರೂಟ್ ಜೂಸ್ (ಫೋಟೋ ಗೂಗಲ್ ಕ್ರಪೆ )

ತೂಕ ಕಳೆದುಕೊಳ್ಳಲು ಬಯಸುವವರಿಗೆ ಬೀಟ್ರೂಟ್ ಜ್ಯೂಸ್ ಉತ್ತಮ ಸೇರ್ಪಡೆಯಾಗಿದೆ. ಬೀಟ್ರೂಟ್ ಪೋಷಕಾಂಶಗಳಿಂದ ತುಂಬಿದ್ದು, ಯಾವುದೇ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿಲ್ಲ. ಬೀಟ್ರೂಟ್ ರಸವು ಆರೋಗ್ಯಕರ ಕರುಳಿನ ಚಲನೆಗೆ ಸಹಾಯಕವಾಗಿದೆ. ಈ ರಸಕ್ಕೆ ಸ್ವಲ್ಪ ಉಪ್ಪು, ಲಿಂಬುರಸ ಮತ್ತು ಜೀರಿಗೆಯನ್ನು ಸೇರಿಸಿಕೊಳ್ಳುವುದರಿಂದ ರುಚಿಯ ಜೊತೆಗೆ ಆರೋಗ್ಯವು ದೊರೆಯುತ್ತದೆ.

ತೂಕವನ್ನು ಕಳೆದುಕೊಳ್ಳಲು ತಾಜಾ ರಸಗಳ ಜೊತೆಯಲ್ಲಿ ನಿಯಮಿತವಾಗಿ ವ್ಯಾಯಾಮ, ಯೋಗ, ಧ್ಯಾನಗಳನ್ನೂ ಮಾಡುತ್ತಾ  ತೂಕ ಹೆಚ್ಚಿಸುವ ಆಹಾರಗಳನ್ನು ವ್ಯರ್ಜಿಸುವುದು ಸಹಕಾರಿಯಾಗಲಿದೆ. ಇವುಗಳಲ್ಲದೆ ಉತ್ತಮ ತೂಕ ನಷ್ಟ ಮಾಡುವ ಜ್ಯುಸಗಳನ್ನು ನೀವು ಬಲ್ಲವರಾಗಿದ್ದಾರೆ ಕಾಮೆಂಟ್ ಮಾಡಿ  ತಿಳಿಸಿ.

LEAVE A REPLY

Please enter your comment!
Please enter your name here