ತಣ್ಣಗಿನ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದೇ..?

drinking-cold-water-have-a-negative-effect-on-health
Image Credit: google.com
ಬಿಸಿಲಿನ ತಾಪದಿಂದ ಬಳಲಿದ ನೀವು ಬಾಯಾರಿಸಿಕೊಳ್ಳಲು ತಣ್ಣನೆಯ ನೀರನ್ನು ಕುಡಿದಿದ್ದಿರೆ..? ಹೌದು ಎಂದಾದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮಗಳಾಗುತ್ತವೆ ಎಂದು ತಿಳಿಯಬೇಡವೇ? ಹಲವರು ನಿಮಗೆ ಬೆಚ್ಚಗಿನ ನೀರನ್ನು ಕುಡಿಯಲು ಸಲಹೆ ನೀಡಿಲ್ಲವೇ? ಹಾಗಾದರೆ ಬೆಚ್ಚಗಿನ ನೀರನ್ನು ಕುಡಿಯುವುದು ತಣ್ಣಗಿನ ನೀರಿಗಿಂತ ಒಳ್ಳೆಯದೇ? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣ ಓದಲೇ ಬೇಕು.
ಆರೋಗ್ಯದ ಕುರಿತು ಕಾಳಜಿಯನ್ನು ಹೊಂದಿರುವ ಪ್ರತಿಯೊಬ್ಬನೂ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಅಗತ್ಯವಾಗಿದೆ. ಆದರೆ ತಣ್ಣೀರನ್ನು ಕುಡಿಯುವುದು ಆರೋಗ್ಯಕ್ಕೆ ಮಾರಕವೆಂದು ಹಲವರು ಅಂದುಕೊಂಡಿದ್ದರೆ. ನೀವು ಕುಡಿಯುವ ನೀರು 4 ಡಿಗ್ರಿ ಗಿಂತಲೂ ಕಡಿಮೆ ತಾಪಮಾನವನ್ನು ಹೊಂದಿದ್ದರೆ ಅದು ಕಂಡಿತ ಹಾನಿಕಾರಕ. ಏಕೆಂದರೆ ಅದು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹವು ಸೂಕ್ತವಾದ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಾಗುತ್ತದೆ.
ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದೇ.
Image Credit: google.com
ಹಿಂದೆ ನಡೆದಂತಹ ಅನೇಕ ಅಧ್ಯಯನಗಳ ಪ್ರಕಾರ ನೆಗಡಿಯಾದವರಲ್ಲಿ ಉಸಿರಾಡಲು ತೊಂದರೆಯಾದಂತಹ ಸಮಯದಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸ್ವಲ್ಪ ಮಟ್ಟಿಗಿನ ಆರಾಮ ಕಂಡುಬಂದಿರುವುದು ದಾಖಲಾಗಿದೆ. ಅಲ್ಲದೇ ಜ್ವರ ಬಂದವರಲ್ಲಿ ತನ್ನಿರಿನ ಸೇವನೆಯು ಅಪಾಯಕಾರಿಯಾಗಿದೆ. ಅಲ್ಲದೇ ಹಲವಾರು ಸಂಸ್ಕೃತಿಗಳಲ್ಲಿ ಮತ್ತು ವೈದ್ಯ ಶಾಸ್ತ್ರಗಳಲ್ಲಿ ಬೆಚ್ಚಗಿನ ನೀರನ್ನೇ ಕುಡಿಯಲು ಸಲಹೆ ನೀಡಿದ್ದಾರೆ. ಇವುಗಳನ್ನು ತಿಳಿದ ನೀವು ತಣ್ಣೀರು ಸೇವನೆ ಅಪಾಯಕಾರಿ ಎಂಬ ತಿರ್ಮಾನಕ್ಕೆ ಬರಬಹುದೇ ಎಂದು ತಿಳಿಯಲು ಮುಂದೆ ಓದಿ..

ಇದನ್ನೂ ಓದಿರಿ: ನೀವು ಹಪ್ಪಳವನ್ನು ತುಂಬಾ ಇಷ್ಟಪಡುತ್ತೀರಾ? ಹಾಗಾದರೆ ಇದನ್ನು ಓದಲೇ ಬೇಕು

ಕಠಿಣ ಪರಿಶ್ರಮದ, ತೀವ್ರ ವ್ಯಾಯಾಮದ ಸಮಯದಲ್ಲಿ ತಣ್ಣೀರು ಕುಡಿಯುವುದರಿಂದ ದೇಹಕ್ಕೆ ತಾಪಮಾನ ಕಾಪಾಡಲು ಸಹಾಯವಾಗುತ್ತದೆ. ಅಲ್ಲದೇ ಹೆಚ್ಚಿನ ನೀರನ್ನು ಕುಡಿಯುವುದರಿಂದ ದೇಹವು ಅತಿಯಾದ ತಾಪಮಾನಕ್ಕೆ ಒಳಗಾಗದೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ತಣ್ಣಗಿನ ನೀರನ್ನು ಕುಡಿಯುವುದರಿಂದ ದೇಹವು ತಾಪಮಾನ ಸರಿದುಗಿಸಲು ಹೆಚ್ಚಿನ ಕೆಲೋರಿಯನ್ನು ಉಪಯೋಗಿಸಿಕೊಲ್ಲುತ್ತದೆ. ಇದರಿಂದಾಗಿ ಹೆಚ್ಚುವರಿ ಕ್ಯಾಲೋರಿ ಇಲ್ಲಿ ವ್ಯಯವಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ತೂಕ ಇಳಿಕೆ ಸಾಧ್ಯವಾಗದಿದ್ದರೂ ದೇಹದ ತೂಕವನ್ನಂತು ನಿಯಂತ್ರಿಸಬಹುದು.
ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆಯು ಉತ್ತಮವಾಗುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಜೊತೆಯಲ್ಲಿ ದೇಹದಲ್ಲಿ ಅಡಕವಾಗಿರುವ ವಿಷಯುಕ್ತ ಅಂಶಗಳನ್ನು ಹೊರಹಾಕಲು ಸಹಕಾರಿಯಾಗಿದೆ. ಆದರೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕಡಿಮೆ ಪ್ರಮಾಣದಲ್ಲಿ ಬಾಯಾರಿಕೆ ಉಂಟಾಗಬಹುದು. ಇದರಿಂದ ದೇಹದಲ್ಲಿನ ನೀರಿನಂಶ ಬೆವರಿನ ಮೂಲಕ ಹೊರಹೋಗಿ ಅಪಾಯವನ್ನು ತಂದೊಡ್ಡಬಹುದು.
ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದೇ.
Image Credit: google.com
ಇವುಗಳಿಂದ ತಿಳಿದು ಬಂದಿರುವುದೇನೆಂದರೆ ಕಠಿಣ ಪರಿಶ್ರಮದ ಕೆಲಸಗಳನ್ನು ಅಥವಾ ವ್ಯಾಯಾಮವನ್ನು ಮಾಡುತ್ತಿರುವ ಸಮಯದಲ್ಲಿ ತಣ್ಣಗಿನ ನೀರನ್ನು ಕುಡಿಯಬಹುದು. ಆದರೆ ಅರೋಗ್ಯ ಹದಗೆಟ್ಟ ಸಮಯದಲ್ಲಿ, ನೆಗಡಿ, ಜ್ವರ ಕಾಣಿಸಿಕೊಂದಂತ ಸಮಯದಲ್ಲಿ ದುರವಿರುವುದು ಉತ್ತಮ. ಈ ಲೇಖನದಿಂದ ನೀವು ಬೆಚ್ಚಗಿನ ನೀರು ಅಥವಾ ತಣ್ಣಗಿನ ನೀರನ್ನು ಯಾವಾಗ ಮತ್ತು ಯಾವುದು ಕುಡಿದರೆ ಉತ್ತಮ ಎಂಬುದನ್ನು ತಿಳಿದುಕೊಂಡಿದ್ದೀರಿ ಎಂದು ಭಾವಿಸುತ್ತೇವೆ.
ನಾವು ಅನೇಕ ಕಡೆಗಳಿಂದ ವಿಷಯವನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಲೈಕ್ ಮತ್ತು ಫಾಲೋ ಮಾಡುವ ಮೂಲಕ ಕ್ರತಜ್ನತೆ ನೀಡಿ. ಆ ಮೂಲಕ ನಮ್ಮನ್ನು ಇನ್ನೂ ಹೆಚ್ಚು ಮಾಹಿತಿ ನೀಡಲು ಪ್ರೋತ್ಸಾಹಿಸಿ..ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.

ಇದನ್ನೂಓದಿರಿ: ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಲು ನೆನೆಸಿದ ಬಾದಾಮಿ ತಿನ್ನಿರಿ..!

LEAVE A REPLY

Please enter your comment!
Please enter your name here