ಪ್ರತಿದಿನ ಮೂರು ಖರ್ಜೂರ ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ಪಡೆಯಬಹುದಂತೆ !

ಖರ್ಜೂರವನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ಸೇವಿಸುತ್ತಾರೆ, ಅಲ್ಲದೆ ಇದರಲ್ಲಿ ಅನೇಕ ಉಪಯುಕ್ತವಾದ ಆರೋಗ್ಯ ಪ್ರಯೋಜನಗಳು ಇವೆ. ಇವುಗಳನ್ನು ನಿಮ್ಮೆಲ್ಲರಿಗೆ ತಿಳಿಸುವ ಉದ್ಧೇಶವೇ ಈ ಪ್ರಯತ್ನ...

things-that-happen-your-body-if-you-eat-three-dates-day

ಹಣ್ಣುಗಳೆಂದರೆ ಪ್ರತಿಯೊಬ್ಬರಿಗೂ ಬಹಳವಾಗಿಯೇ ಇಷ್ಟವಾಗುತ್ತವೆ. ಈ ಹಣ್ಣುಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಂತಹ ಹಣ್ಣುಗಳಲ್ಲಿ ಖರ್ಜುರವೂ ಒಂದು, ಇದರಲ್ಲಿ ನೈಸರ್ಗಿಕವಾದ ಸಿಹಿ ಅಂಶದ ಜೊತೆ ಜೊತೆಗೆ ಹಲವಾರು ಜೀವಸತ್ವಗಳು, ವಿಟಮಿನ್ಗಳು, ನಾರಿನಂಶ ಹೀಗೆ ನಮ್ಮ ದೇಹಕ್ಕೆ ಅಗತ್ಯವಾದ ಅಂಶಗಳನ್ನು ಹೊಂದಿದೆ. 

ನಮ್ಮ ಆರೋಗ್ಯ ಉತ್ತಮವಾಗಿರಲು ನಾವು ಸೇವಿಸುವ ಆಹಾರದಲ್ಲಿ ಜೀವಸತ್ವಗಳು, ವಿಟಮಿನ್ಗಳು, ಖನಿಜಗಳು, ಸೂಕ್ಷ್ಮ ಪೋಷಕಾಂಶಗಳು ಇರುವುದು ಅವಶ್ಯವಾಗಿರುತ್ತವೆ. ಇವುಗಳನ್ನು ಪಡೆಯಲು ಕೇವಲ ದಿನನಿತ್ಯದ ಆಹಾರಗಳಷ್ಟೇ ಸಾಲುವುದಿಲ್ಲ. ಹಾಗಾಗಿ ನಮ್ಮ ದೈನಂದಿನ ಆಹಾರದ ಜೊತೆಯಲ್ಲಿ ಮೂರೇ ಮೂರು ಖರ್ಜೂರವನ್ನು ಸೇರಿಸಿಕೊಂಡಲ್ಲಿ ಹಲವಾರು ಪ್ರಯೋಜನಗಳು ನಮಗೆ ದೊರೆಯುತ್ತವೆ. ಅಂತಹ ಖರ್ಜೂರವನ್ನು ಪ್ರತಿದಿನ ಸೇವಿಸುವುದರಿಂದ ಏನೆಲ್ಲಾ ಆರೋಗ್ಯಗಳು ದೊರೆಯುತ್ತವೆ ಎನ್ನುವ ಕುರಿತು ವಿವರವಾಗಿ ತಿಳಿದುಕೊಳ್ಳೋಣ…

things-that-happen-your-body-if-you-eat-three-dates-day

ರಕ್ತದೊತ್ತಡ ನಿಯಂತ್ರಣ

ಈ ಹಣ್ಣಿನಲ್ಲಿ ಮೆಗ್ನಿಷಿಯಂ ಅಂಶವು ಲಭ್ಯವಿದೆ, ಇದರಿಂದಾಗಿ ದೇಹದಲ್ಲಿ ರಕ್ತಪರಿಚಲನೆಯು ಸರಾಗವಾಗಿ ಸಾಗುತ್ತದೆ. ನಮ್ಮ ದೇಹಕ್ಕೆ ಪ್ರತಿದಿನ 370 ಮಿ. ಗ್ರಾಂ. ಮೆಗ್ನೆಶಿಯಂ ಅವಶ್ಯಕತೆ ಇರುವುದರಿಂದ ಇದನ್ನು ಪುರೈಸುವುದರಲ್ಲಿ ಖರ್ಜೂರದ ಪಾತ್ರವು ಮಹತ್ವದ್ದಾಗಿರುತ್ತದೆ. ಹಾಗಾಗಿ ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಎದ್ದ ತಕ್ಷಣ ಕಾಲಿ ಹೊಟ್ಟೆಯಲ್ಲಿ 3 ಖರ್ಜೂರ ಸೇವಿಸಿ, ಸುಮಾರು ಒಂದು ಗಂಟೆಯ ನಂತರ ಬೆಳಗಿನ ತಿಂಡಿಯನ್ನು ಸೇವಿಸುವುದು ಉತ್ತಮವಾಗಿರುತ್ತದೆ. 

ಮಲಬದ್ಧತೆ ನಿವಾರಿಸುತ್ತದೆ

ಸಾಮಾನ್ಯವಾಗಿ ನಾವು ಸೇವಿಸುವ ಆಹಾರದಲ್ಲಿನ ನಾರಿನಂಶದ ಕೊರತೆಯು ಮಲಬದ್ಧತೆ ಉಂಟಾಗಲು ಕಾರಣವಾಗುತ್ತದೆ. ನಾರಿನಂಶವಿರುವ ಆಹಾರವನ್ನು ಹೆಚ್ಚೇಚ್ಚು ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ದೂರಾಗಬಹುದಾಗಿದೆ. ಖರ್ಜೂರ ಸೆವನೆಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಏಕೆಂದರೆ ಖರ್ಜುರದಲ್ಲಿ ನಾರಿನ ಪ್ರಮಾಣವು ಹೇರಳವಾಗಿದ್ದು, ಇದು ಮಲ ಸರಾಗವಾಗಿ ವಿಸರ್ಜನೆಯಾಗುವಂತೆ ಸಹಾಯವನ್ನು ಮಾಡುತ್ತದೆ. 

ಇದನ್ನೂ ಓದಿರಿ: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಇಲ್ಲಿದೆ ನಿಮಗಾಗಿ ಕೆಲವು ಸಲಹೆಗಳು

things-that-happen-your-body-if-you-eat-three-dates-day-01

ಶಕ್ತಿಯ ಮೂಲವಾಗಿದೆ

ಈ ಖರ್ಜೂರದಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲುಕೋಸ್ ನಂತಹ ನೈಸರ್ಗಿಕ ಸಕ್ಕರೆಯ ಅಂಶವು ಅಂಶವು ತುಂಬಿದೆ. ಇಗಿದರಿಂದಾ ದೇಹಕ್ಕೆ ಬೇಗನೆ ಶಕ್ತಿ ದೊರೆಯುತ್ತದೆ. ಹೆಚ್ಚಿನ ಶಕ್ತಿಯ ಅವಶ್ಯಕತೆಯಿರುವವರು ಇದನ್ನು ಸೇವನೆ ಮಾಡುವುದರಿಂದ ಪ್ರಯೋಜನವಾಗುತ್ತದೆ. ನಿಶ್ಯಕ್ತಿ, ಆಲಸ್ಯ ತೊಂದರೆಗಳಿಂದ ಬಳಲುವವರು ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಎದ್ದ ತಕ್ಷಣ ನೀರಿನೊಂದಿಗೆ ಹಣ್ಣನ್ನು ಸೇವನೆ ಮಾಡುತ್ತಾ ಬಂದರೆ ಉತ್ತಮ ಪಲಿತಾಂಶವನ್ನು ಪಡೆಯಬಹುದಾಗಿದೆ.

ದೇಹದ ತೂಕ ಹೆಚ್ಚಿಸುತ್ತದೆ

ಇದರಲ್ಲಿರುವ ಪೋಷಕಾಂಶಗಳು ಹೇರಳವಾಗಿ ತುಂಬಿಕೊಂಡಿವೆ. ಇದರಿಂದಾಗಿ ದೇಹದಲ್ಲಿನ ಆರೋಗ್ಯವು ಸಮತೋಲನದಲ್ಲಿ ಇರುತ್ತದೆ. ಜೊತೆಗೆ ಇದರಲ್ಲಿ ಕಬ್ಬಿಣಾಂಶವು ಇರುವುದರಿಂದ ರಕ್ತದ ಉತ್ಪತ್ತಿಗೆ ಸಹಾಯವಾಗುತ್ತದೆ. ಇದರಿಂದಾಗಿ (30%) ದೇಹದ ತೂಕವು ಹೆಚ್ಚಾಗುತ್ತದೆ ಎಂದು ಹಲವಾರು ಸಂಶೋಧನೆಗಳು ದೃಡಪಡಿಸಿವೆ. 

ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ

ಖರ್ಜೂರವು ಲೈಂಗಿಕ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಹಲವಾರು ಸಂಶೋಧನೆಗಳು ತಿಳಿಸಿವೆ. ಯುವಕರಲ್ಲಿ ಲೈಂಗಿಕ ಶಕ್ತಿ ಹೆಚ್ಚಲು ಹಾಲು ಮತ್ತು ಖರ್ಜೂರ ಸೇವನೆ ಉಪಯುಕ್ತ ಎಂದು ಹೇಳಲಾಗುತ್ತದೆ.

ಇದನ್ನೂ ಓದಿರಿ: ಮೂಲವ್ಯಾಧಿಯಿಂದ ಬಳಲುತ್ತಿದ್ದಿರೇ ? ಹಾಗಾದರೆ ಇಲ್ಲಿದೆ ಪರಿಹಾರ..!

things-that-happen-your-body-if-you-eat-three-dates-day

ಗರ್ಭಿಣಿಯರಿಗೆ ಸಹಾಯಕ

ಗರ್ಭಿಣಿಯರು ಖರ್ಜೂರ ಹಣ್ಣನ್ನು ಸೇವನೆ ಮಾಡುವುದರಿಂದ ತಾಯಿಯ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಗರ್ಭಿಣಿಯರಲ್ಲಿ ಕಾಡುವ ಮಲಬದ್ಧತೆಯ ತೊಂದರೆಗೆ ಇದು ಅತ್ಯುತ್ತಮವಾಗಿದೆ. ನಿಯಮಿತವಾಗಿ ಇದರ ಸೇವನೆಯನ್ನು ಮಾಡುವುದರಿಂದ ಗರ್ಭಾಶಯದ ಸ್ನಾಯುಗಳು ಭಲಗೊಳ್ಳುತ್ತವೆ. ಇದರಿಂದಾಗಿ ತಾಯಿಯಾಗುವ ಸಮಯದಲ್ಲಿ ಸ್ವಲ್ಪ ಮಟ್ಟಿನ ನೋವು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಇವುಗಳಲ್ಲದೆ ತಾಯಿಯಾದ ನಂತರ ತಾಯಿಯ ಹಾಲು ಸಮೃದ್ಧವಾಗಿ ತಯಾರಾಗಲು ಖರ್ಜೂರ ಪ್ರೇರಣೆಯಾಗುತ್ತದೆ. 

ಎಲುಬಿನ ಆರೋಗ್ಯಕ್ಕೆ ಉತ್ತಮ 

ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂ, ಮ್ಯಾಂಗನಿಸ್, ಸೆಲೇನಿಯಂ, ಬೋರಾನ್ ಸೇರಿದಂತೆ ಹಲವು ಉಪಯುಕ್ತ ಅಂಶಗಳು ಇವೆ. ಇವುಗಳಿಂದಾಗಿ ಗಟ್ಟಿಮುಟ್ಟಾದ ಎಲುಬು ನಮಗೆ ದೊರೆಯುತ್ತದೆ. ಇದರಿಂದಾಗಿ ಎಲುಬಿನ ಹಲವಾರು ಕಾಯಿಲೆಗಳು ದೂರವಾಗುತ್ತವೆ. ಆಸ್ಟಿಯೋಪೋರೋಸಿಸ್,ಸಂಧಿವಾತ, ಅಸ್ಥಿರಂಧ್ರ, ಹಲ್ಲಿನ ತೊಂದರೆಗಳು ಸೇರಿದಂತೆ ಎಲುಬಿನ ಕಾಯಿಲೆಗಳಿಗೆ ಇದು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿರಿ: ಒಣ ದ್ರಾಕ್ಷಿಯ ಸೇವನೆಯಿಂದ ದೊರೆಯುತ್ತದೆ ಅಧ್ಬುತವಾದ ಆರೋಗ್ಯ ಪ್ರಯೋಜನಗಳು…!

LEAVE A REPLY

Please enter your comment!
Please enter your name here