ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||
ಅಂದರೆ ಒಬ್ಬ ಗುರು ಬ್ರಹ್ಮನಂತೆ ಸೃಷ್ಟಿಕರ್ತನಾಗಿ, ವಿಷ್ಣುವಿನಂತೆ ರಕ್ಷಕನಾಗಿ, ಮಹೇಶ್ವರನಂತೆ ವಿದ್ವಾಂಸನಾಗಿರುವ ಈ ಗುರುವಿಗೆ ನನ್ನ ವಂದನೆ ಎಂಬುದು ಇದರ ಅರ್ಥ. ಗುರು=’ಗು’ ಅಂದರೆ ಕತ್ತಲೆ/ಅಜ್ಞಾನ+’ರು’ ಅಂದರೆ ಹೋಗಲಾಡಿಸುವವನು ಎಂದರ್ಥ.
ನಿಜ ಜೀವನದಲ್ಲಿ ಶಿಕ್ಷಕನ ಪಾತ್ರವನ್ನು ಯಾರು ಬೇಕಾದರೂ ವಹಿಸಬಹುದು, ಉದಾಹರಣೆಗೆ ಕಾಲೇಜಿಗೆ ಹೋಗುತ್ತಿರುವ ಒಬ್ಬ ಯುವಕ ತನ್ನೂರಲ್ಲಿ ಬೆಳಗಿನ ಸಮಯದಲ್ಲೋ ಅಥವಾ ಸಂಜೆಯ ಸಮಯದಲ್ಲಿ ಸಮಯದಲ್ಲಿ ಒಂದು ಗಂಟೆ ಮಕ್ಕಳಿಗೆ ಪಾಟ ಹೇಳಿಕೊಟ್ಟರೆ ದುಬಾರಿ ಟ್ಯೂಷನ್ ಫಿಸು ಕೊಡಲು ಆಗದ ಮಕ್ಕಳೂ ಸಹ ಈ ಯುವಕರು ಹೇಳಿಕೊಟ್ಟ ಪಾಟಗಳಿಂದ ಜಾಣರಾಗುತ್ತಾರೆ. ಮುಂದೆ ಅವರೇ ನಮ್ಮ ದೇಶದ ಸತ್ಪ್ರಜೆಗಳಾಗುತ್ತಾರೆ ಹಾಗೂ ಕಲಿಸಿದ ಶಿಕ್ಷಕನಿಗೂ ಒಂದು ತೃಪ್ತಿ ಇರುತ್ತದೆ. ಹಾಗಾಗಿ ಶಿಕ್ಷಕನ ಪಾತ್ರವನ್ನು ವಹಿಸುವವರು ಯಾರಾದರೂ ಆಗಿರಬಹುದು ಕಲಿಸುವ ಮನಸ್ಸು ಮತ್ತು ಕಲಿಸುವಿಕೆಗಾಗಿ ಸ್ವಲ್ಪ ಸಮಯವನ್ನು ಕಾಯ್ದಿರಿಸಿದರೆ ಅವರೂ ಸಹ ಸಮಾಜದಲ್ಲಿ ಒಬ್ಬ ಉತ್ತಮ ಶಿಕ್ಷಕರಾಗಬಹುದು.

ಒಬ್ಬ ಅತ್ಯುತ್ತಮ ಶಿಕ್ಷಕನ ಕರ್ತವ್ಯಗಳೆಂದರೆ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ, ಕಲೆ-ಸಂಸೃತಿ ಮತ್ತು ಜೀವನ ಕೌಶಲ್ಯಗಳ ಜ್ಞಾನ ನೀಡುವುದು. ಶಿಕ್ಷಕರಾದವರು ಕ್ರಿಯಾಶೀಲತೆಯೊಂದಿಗೆ ಮಕ್ಕಳಿಗೆ ಪಾಠ ಮಾಡಿದರೆ ಅವರೂ ಖುಶಿಯಿಂದ ಪಾಠವನ್ನು ಅರ್ಥಮಾಡಿಕೊಂಡು ಕಲಿಯುತ್ತಾರೆ. ಶಿಕ್ಷಕರು ಪಠ್ಯದಲ್ಲಿರುವ ಪಾಠದ ಜೊತೆಗೆ ಅದಕ್ಕೆ ಪೂರಕವಾಗಿ ಚಿಕ್ಕ ಚಿಕ್ಕ ನೀತಿ ಕಥೆಗಳನ್ನು ಹೇಳುತ್ತಾ ಕಲಿಸಿದರೆ ಮಕ್ಕಳು ಇನ್ನೂ ಪರಿಣಾಮಕಾರಿಯಾಗಿ ಆಲಿಸುತ್ತಾ ಸರಿಯಾಗಿ ಕಲಿಯುತ್ತಾರೆ. ಇದರಿಂದ ಮಕ್ಕಳಿಗೆ ತರಗತಿಗಳು ಬೇಸರವೆನಿಸದೆ, ಶೃದ್ದೆಯಿಂದ ಕೇಳಿ ಎಲ್ಲವನ್ನೂ ತಿಳಿದುಕೊಳ್ಳುತ್ತಾರೆ.
ಇದನ್ನೂ ಓದಿರಿ: ತುಳಸಿ ವಿವಾಹ ಮತ್ತು ಆಚರಣೆಯ ವಿಧಾನ
Image Credit: google.com
ಒಬ್ಬ ಅತ್ಯುತ್ತಮ ಶಿಕ್ಷಕನಾಗಬೇಕಾದರೆ ಅವನು ಕೆಲವೊಂದಿಷ್ಟು ಸಾಮರ್ಥ್ಯವನ್ನು ಅಳವಡಿಸಿಕೊಂಡಿರಬೇಕಾಗುತ್ತದೆ. ಒಬ್ಬ ಶಿಕ್ಷಕನು ಮೊದಲು ವಿದ್ಯಾರ್ಥಿಯಾಗಿ, ಜವಾಬ್ದಾರಿಯುತ ರಕ್ಷಕನಾಗಿ, ಸೂಚನಾ ವ್ಯವಸ್ಥಾಪಕನಾಗಿ, ಸಾಂಸ್ಕೃತಿಕ ಮತ್ತು ಸ್ನೇಹಪರ ವ್ಯಕ್ತಿತ್ವ ಹೊಂದಿರಬೇಕು. ಒಬ್ಬ ಅತ್ಯುತ್ತಮ ಶಿಕ್ಷಕನು ಸಮಾಜದಲ್ಲಿ ಸಮಾಜದೊಂದಿಗೆ ಕೆಲಸ ಮಾಡಬೇಕಾಗಿರುವುದರಿಂದ ಸದಾ ಸಮಾಜಮುಖಿಯಾಗಿರಬೇಕು. ಹೀಗೆ ಸಮಾಜದಿಂದ ಅವನಿಗೂ ಸಹಾಯವಾಗುವುದರ ಜೊತೆಗೆ ಸಮಾಜದಲ್ಲಿ ಅವನ ಗೌರವವು ಹೆಚ್ಚಾಗುತ್ತದೆ. ಹೀಗೆ ಒಬ್ಬ ಉತ್ತಮ ಶಿಕ್ಷಕ ಒಳ್ಳೆಯ ಮನೋಧರ್ಮದ ಮೂಲಕ ವಿದ್ಯಾರ್ಥಿಗಳನ್ನು ಸದಾ ಸನ್ಮಾರ್ಗಯುತವಾದ ಸತ್ಯದ ಹಾದಿಯಲ್ಲಿ ನಡೆಸುತ್ತ ಅವರು ಗುರಿ ಮುಟ್ಟುವವರೆಗೂ ಸಹಕರಿಸಿದಾಗ ಮಾತ್ರ ಶಿಕ್ಷಕ ಕಲಿಸಿದ ಶಿಕ್ಷಣಕ್ಕೆ ಶಕ್ತಿ ಬರುತ್ತದೆ. ಆಗ ಶಿಕ್ಷಣವೇ ಶಕ್ತಿ ಎಂಬ ಉಕ್ತಿಗೆ ಸರ್ವರಲ್ಲಯೂ ಭಕ್ತಿ ಮೂಡುತ್ತದೆ.