ತುಳಸಿ ವಿವಾಹ: ಆಚರಣೆಯ ವಿಧಾನ, ಮಹತ್ವ ಮತ್ತು ಆರೋಗ್ಯ ಪ್ರಯೋಜನ

ತುಳಸಿ ವಿವಾಹ ಮತ್ತು ಆಚರಣೆಯ ವಿಧಾನ । method-and-significance-tulsi-vivah-pooja
tulasi-gida

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಗಿಡಕ್ಕೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಈ ತುಳಸಿಯ ಗಿಡವನ್ನು ಶುಭ ಮತ್ತು ಅಶುಭ ಎರಡೂ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ತುಳಸಿಯ ಗಿಡವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಆ ಕಾರಣಕ್ಕಾಗಿಯೇ ದೇವಾಲಯ ಮತ್ತು ಮನೆಗಳ ಸುತ್ತ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ಮಹಾವಿಷ್ಣು ಮತ್ತು ತುಳಸಿ ಮಾತೆಯ ವಿವಾಹವು ಪೌರಾಣಿಕ ಹಿನ್ನೆಯನ್ನು ಸಹ ಹೊಂದಿದೆ ಇದೇ ಕಾರಣಕ್ಕಾಗಿ ದೇಶದಲ್ಲಿ ತುಳಸಿ ವಿವಾಹ ಒಂದು ಹಬ್ಬವಾಗಿ ಆಚರಿಸಲಾಗುತ್ತದೆ.

ಹಿಂದೂಗಳಿಗೆ ದೀಪಾವಳಿಯ ನಂತರ ಬರುವ ವಿಷೇಶ ಹಬ್ಬವೇ ತುಳಸಿ ಹಬ್ಬ. ಈ ಹಬ್ಬವನ್ನು ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಮತ್ತು ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ತುಳಸಿ ವಿವಾಹ ಕುರಿತಾಗಿ ಪುರಾಣದಲ್ಲಿ ಒಂದು ದೊಡ್ಡ ಕಥೆಯೇ ಬರುತ್ತದೆ.

ತುಳಸಿ ವಿವಾಹ ಆಚರಣೆಯ ವಿಧಾನ

ತುಳಸಿ ಕಟ್ಟೆಯ ಸುತ್ತಲೂ ಸಾರಿಸಿ ಶುಚಿಗೊಳಿಸುತ್ತಾರೆ. ನಂತರ ರಂಗೋಲಿಗಳನ್ನು ಹಾಕಿ, ಮದುವೆ ಮಂಟಪದಂತೆ ಮಂಟಪವನ್ನು ನಿರ್ಮಿಸುತ್ತಾರೆ. ಪೂಜೆಯನ್ನು ಮಾಡುವವರು ಆ ದಿನ ಉಪವಾಸವನ್ನು ಕೈಗೊಂದಿರುತ್ತಾರೆ. ಸಾಮಾನ್ಯವಾಗಿ ಈ ಮಂಟಪವನ್ನು ಬಾಳೆಯ ದಿಂಡು ಮತ್ತು ಬಾಳೆ ಕಂಬಗಳಿಂದಲೇ ನಿರ್ಮಾಣ ಮಾಡಲಾಗುತ್ತದೆ. ರೈತರು ಚಿಕ್ಕ ಬಾಳೆ  ಗಿಡ ಮತ್ತು ಕಬ್ಬುಗಳನ್ನು ಕಟ್ಟಿ ಮಂಟಪವನ್ನು ತಯಾರು ಮಾಡುತ್ತಾರೆ.

ಹೆಂಗಸರೆಲ್ಲ ತುಂಬಾ ಸಂಭ್ರಮದಿಂದ ಮದುವೆಯ ಮಂಟಪ ಸೇರಿದಂತೆ ಮನೆಯನ್ನೆಲ್ಲ ಸಿಂಗರಿಸುತ್ತಾರೆ. ಅಲ್ಲದೇ ತುಳಸಿ ಗಿಡದ ಜೊತೆಯಲ್ಲಿ ಫಲಭರಿತ ಬೆಟ್ಟದ ನೆಲ್ಲಿಯ ಗಿಡ ಮತ್ತು ಹುಣಸೆಯ ಗಿಡಗಳನ್ನು ಇಟ್ಟು ಪೂಜಿಸಲಾಗುತ್ತದೆ. ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿ ವೈಭವದಿಂದ ಪೂಜೆಯು ನಡೆಯುತ್ತದೆ. ವಿಶೇಷವಾಗಿ ಪೂಜೆಯ ನೈವೇದ್ಯಕ್ಕಾಗಿ ಬೆಲ್ಲ ಹಾಕಿದ ಅವಲಕ್ಕಿಯನ್ನು ತಯಾರಿಸುತ್ತಾರೆ. ಸಂಭ್ರಮದಿಂದ ಮಹಾವಿಷ್ಣು ಮತ್ತು ತುಳಸಿಯ ವಿವಾಹವು ನೆರವೇರುತ್ತದೆ. ಇದು ಹಿಂದೂ ವಿವಾಹ ಕಾರ್ಯಗಳ ಆರಂಭವೂ ಆಗಿರುತ್ತದೆ.

ಇದನ್ನೂ ಓದಿರಿ: ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

ಕೆಲವು ಪ್ರಾಂತ್ಯಗಳಲ್ಲಿ ಈ ಆಚರಣೆಯು ಬೇರೆ ಬೇರೆ ವಿಧಾನವನ್ನು ಹೊಂದಿದ್ದರೂ, ಎಲ್ಲೆಡೆಯೂ ವಿಷ್ಣು ಮತ್ತು ತುಳಸಿಯ ವಿವಾಹವನ್ನು ಮಾಡಿ ಖುಶಿ ಪಡುತ್ತಾರೆ. ಇವೆಲ್ಲ ಏನೇ ಆದರೂ ಈ ತುಳಸಿಯ ಸಾಂಗತ್ಯವು ಮಾನವನ ಆರೋಗ್ಯ ವೃದ್ಧಿಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಹಿರಿಯರು ತುಳಸಿಗೆ ಇಷ್ಟು ಮಹತ್ವದ ಸ್ಥಾನವನ್ನು ನೀಡಿದ್ದಾರೆ.

ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

ತುಳಸಿ ವಿವಾಹ ಆಚರಣೆಯ ಮಹತ್ವ

ಕಾರ್ತೀಕ ಮಾಸದಲ್ಲಿ ಪ್ರತಿದಿನ ತುಳಸಿಗೆ ಪುಜೆಮಾಡಿ, ಸಂಧ್ಯಾ ಕಾಲದಲ್ಲಿ  ದೀಪವನ್ನು ಬೆಳಗುವುದರಿಂದ ಒಂದು ಯುಗದಲ್ಲಿ ಮಾಡಿದ ಪಾಪಗಳೆಲ್ಲವೂ ಕಳೆಯುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ತುಳಸಿ ವಿವಾಹ ಸಮಯದಲ್ಲಿ ಹಾಲಿನ ಅಭಿಷೇಕವನ್ನು ಮಾಡುವುದರಿಂದ ದೇವಾನು ದೇವತೆಗಳ ಆಶೀರ್ವಾದ ಲಭಿಸಿ ಇಷ್ಟಾರ್ತಗಳೆಲ್ಲವೂ ನೆರವೇರುವುದು ಎಂದು ಹೇಳಲಾಗುತ್ತದೆ. ತುಳಸಿಯು ಅಮೃತದಿಂದ ಜನಿಸಿದವಳಾಗಿರುವುದರಿಂದ ಇದನ್ನು ಯಾವುದೇ ರೀತಿಯಲ್ಲಿ ಬಳಸಿದರೂ ಅದು ಒಳ್ಳೆಯದನ್ನೇ ಮಾಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಿ: ತುಳಸಿ ವಿವಾಹದ ಮಹತ್ವ, ಆಚರಣೆಯ ವಿಧಾನ ಮತ್ತು ಶುಭಾಶಯ ಸಂದೇಶಗಳು

ತುಳಸಿಯ ಆರೋಗ್ಯ ಪ್ರಯೋಜನ

ತುಳಸಿ ಪೌರಾಣಿಕವಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿಯು ಮಹತ್ವದ ಸ್ಥಾನವನ್ನು ಪಡೆದಿದೆ. ತುಳಸಿ ಗಿಡಗಳು ಬೆಳೆದಿರುವಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು, ಸೊಳ್ಳೆಗಳು ಕ್ರಿಮಿ ಕೀಟಗಳು ಹತ್ತಿರಕ್ಕೆ ಬರುವುದಿಲ್ಲ. ಅಲ್ಲದೇ ತುಳಸಿ ಕಷಾಯವು ಕೆಮ್ಮು, ನೆಗಡಿ, ಶೀತ, ಕಫಗಳ ನಿವಾರಣೆಗೂ ಸಹಾಯಮಾಡುತ್ತದೆ. ತುಳಸಿ ಎಲೆಗಳನ್ನು ಚರ್ಮದ ಸಮಸ್ಯೆ, ಅಲರ್ಜಿಯಂತಹ ತೊಂದರೆಗಳ ನಿವಾರಣೆಯಲ್ಲಿಯೂ ಬಳಕೆಯಾಗುತ್ತದೆ.

1 COMMENT

LEAVE A REPLY

Please enter your comment!
Please enter your name here