ನವರಾತ್ರಿಯಲ್ಲಿ ಈ ರೀತಿ ಮಾಡಿದರೆ ಅದೃಷ್ಟವೋ ಅದೃಷ್ಟ !

ನವದುರ್ಗೆಯರ ರೂಪದಲ್ಲಿ ಒಂಬತ್ತೂ ದಿನಗಳು ಶ್ರದ್ಧೆ ಭಕ್ತಿಯಿಂದ ಪೂಜಿಸುವ ವಿಶೇಷ ಹಬ್ಬವೇ ನವರಾತ್ರಿ. ಈ ಹಬ್ಬವನ್ನು ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಿ, ಜಂಬೂ ಸವಾರಿಯಲ್ಲಿ ಕೊನೆಗೊಳ್ಳುವುದು ಎಲ್ಲಾರಿಗೂ ತಿಳಿದಿರುವ ವಿಚಾರವೇ ಆಗಿದೆ. ಈ ಬಾರಿ ನವರಾತ್ರಿ ಅಕ್ಟೋಬರ್ 7 ರಿಂದ ಆರಂಭವಾಗಲಿದೆ.

ಈ ನವರಾತ್ರಿಯಲ್ಲಿ ದುರ್ಗೆಯನ್ನು ಭಕ್ತಿಯಿಂದ ಪೂಜಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಗಳು ಇವೆ. ಭಕ್ತಿ ಮತ್ತು ಶ್ರದ್ಧೆಯಿಂದ ದುರ್ಗಾ ಮಾತೆಯನ್ನು ಪೂಜಿಸುವ ಜೊತೆಗೆ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ನಮ್ಮ ಜೀವನದಲ್ಲಿ ಅದೃಷ್ಟ ತೆರೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಲ್ಲದೇ ಕೆಲವು ವಸ್ತುಗಳನ್ನು ಈ ಸಮಯದಲ್ಲಿ ದಾನ ಮಾಡುವುದರಿಂದ ಜಗನ್ಮಾತೆ ಸಂತೃಪ್ತಳಾಗುತ್ತಾಳೆ.

bringing-these-things-to-home-during-navratri-to-avoid-shortage-of-money

ನವರಾತ್ರಿಯ ಸಮಯದಲ್ಲಿ ಮಹಾಲಕ್ಷ್ಮಿಯ ಚಿತ್ರವಿರುವ ಫೋಟೋವನ್ನು ದೇವರ ಕೊನೆಯಲ್ಲಿ ಸ್ಥಾಪನೆ ಮಾಡಿ, ಪೂಜಿಸುವುದರಿಂದ ಅದೃಷ್ಟವು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದಲ್ಲದೆ ಸಂತೋಷ, ಸಮೃದ್ಧಿಯ ಜೊತೆಗೆ ಹಣಕಾಸಿನ ತೊಂದರೆಗಳೂ ನಿವಾರಣೆಯಾಗುತ್ತದೆ. ಇದಲ್ಲದೇ ದೇವರ ಕೊಣೆಯಲ್ಲಿ ಗಣಪತಿ ಮತ್ತು ಮಹಾಲಕ್ಷ್ಮಿಯಿರುವ ನಾಣ್ಯಗಳನ್ನು ಇರಿಸುವುದರಿಂದ ಸಹ ಸಮೃದ್ಧಿ ಒಲಿಯಲಿದೆ.

ದುರ್ಗಾದೇವಿಗೆ ಕೆಂಪು ಬಣ್ಣವು ನೆಚ್ಚಿನ ಬಣ್ಣವಾಗಿದ್ದು, ಕೆಂಪು ಬಟ್ಟೆಗಳಿಂದ ದೇವರ ಕೋಣೆಗಳನ್ನು ಅಲಂಕರಿಸಬಹುದು, ಕೆಂಪು ಬಣ್ಣದ ಹೂವುಗಳನ್ನು ಬಳಕೆ ಮಾಡಬಹುದು. ಇದಲ್ಲದೇ ನವರಾತ್ರಿಯ ಸಮಯದಲ್ಲಿ ಮನೆಗೆ ಯಾರೇ ಹಸಿವಿನಿಂದ ಬಂದರೆ ಅವರಿಗೆ ಊಟ ಬಡಿಸುವುದು ಮರೆಯಬಾರದು. ನವರಾತ್ರಿಯ ನಮಯದಲ್ಲಿ ಹೆಣ್ಣುಮಗು ಮನೆಗೆ ಬಂದರೆ ಕಾಲಿಕೈಲ್ಲಿ ಕಳುಹಿಸಬಾರದು. ಪ್ರಮುಖವಾಗಿ ಕಪ್ಪು ಬಟ್ಟೆಗಳನ್ನು, ಚರ್ಮದ ಬೆಲ್ಟುಗಳನ್ನು ಬಳಸುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಹಿಂಸೆ, ಮೋಸ ಮಾಡುವುದು ಒಳ್ಳೆಯದಲ್ಲ. ಇವುಗಳಿಂದ ದರಿದ್ರವು ಪ್ರಾಪ್ತವಾಗುತ್ತದೆ.

bringing-these-things-to-home-during-navratri-to-avoid-shortage-of-money

ನವರಾತ್ರಿಯ ಸಮಯದಲ್ಲಿ ಮನೆಗೆ ಆಗಮಿಸುವ ಮುತ್ತೈದೆಯರನ್ನು ಗೌರವಿಸಿ, ಹೂವು, ಹಣ್ಣು, ಬಾಗಿನ ಮತ್ತು ಕೆಂಪು ಬಳೆಗಳನ್ನು ನೀಡುವುದು ಉತ್ತಮ. ಇದರಿಂದಾಗಿ ಆ ತಾಯಿ ಪ್ರಸನ್ನಳಾಗುತ್ತಾಳೆ ಎನ್ನುವುದು ಹಿರಿಯರು ಹೇಳಿರುವ ಸತ್ಯ. ಇದಲ್ಲದೇ ಈ ಸಮಯದಲ್ಲಿ ಪುಸ್ತಕ, ನಿರ್ಗತಿಕರಿಗೆ ಧವಸ, ಧಾನ್ಯಗಳನ್ನು ದಾನವಾಗಿ ನೀಡಬೇಕು. ಇದರಿಂದ ದುರ್ಗೆಯು ಪ್ರಸನ್ನಳಾಗಿ, ಪ್ರತಿಯೊಬ್ಬರಿಗೂ ಸುಖ, ಶಾಂತಿ, ನೆಮ್ಮದಿ ನೀಡಿ ಹಣಕಾಸಿನ ತೊಂದರೆಯನ್ನೂ ದೂರಮಾಡುತ್ತಾಳೆ ಎಂದು ಹೇಳಲಾಗಿತ್ತದೆ.

ನಮ್ಮನ್ನು ಪ್ರಮುಖ ತಾಣಗಳಲ್ಲಿ ಫಾಲೋ ಮಾಡಿ..

LEAVE A REPLY

Please enter your comment!
Please enter your name here