ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದುಗಳು

home-remedies-to-turn-white-hair-black-without-chemical-dyes

ತಲೆಯ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರಾ? ಹಾಗಾದರೆ ನಿಮಗೆ ಈ ಮಾಹಿತಿ ಉಪಯುಕ್ತವಾಗಿದೆ. ವಯಸ್ಸಾದವರು ಮಾತ್ರವಲ್ಲ, ಯುವಕ-ಯುವತಿಯರೂ ಬಿಳಿ ಕೂದಲಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಾಗಿದೆ.

ಬಿಳಿ ಕೂದಲನ್ನು ಮರೆಮಾಡಲು ಜನರು ಅನೇಕ ಕೂದಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಕಂಡುಬರುತ್ತವೆ, ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲಿನ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು.

ಇದನ್ನೂ ಓದಿರಿ: ಲೈಂಗಿಕ ಜೀವನ ಹಾಳು ಮಾಡುತ್ತೆ ನಿಮ್ಮ ಈ ನಡವಳಿಕೆಗಳು !

ಬಿಳಿಕೂದಲಿನ ಸಮಸ್ಯೆ ನಿವಾರಣೆಗೆ ಒಂದೊಂದೇ ಮನೆಮದ್ದುಗಳನ್ನು ನೋಡೋಣ ಬನ್ನಿ.. 

  • ನೆಲ್ಲಿಕಾಯಿ ರಸಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಶೀಘ್ರವೇ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.
  • ಶುಂಠಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ, ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಕೂದಲಿಗೆ ಚೆನ್ನಾಗಿ ಹಚ್ಚಿ. ಇದು ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  • ತುಳಸಿ ಮತ್ತು ಬೃಂಗರಾಜ ಎಲೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ನೆಲ್ಲಿಕಾಯಿಯನ್ನು ಸೇರಿಸಿ, ಚೆನ್ನಾಗಿ ಜಜ್ಜಿ ರಸ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಕೂದಲಿಗೆ ಪ್ರತಿದಿನ ಲೇಪಿಸಿ. ಇದು ಕೂದಲನ್ನು ಕಪ್ಪಾಗಿಸಲು ಇದು ಪ್ರಯೋಜನಕಾರಿ ಎಂದು ಸಾಬೀತಾಗಿದೆ.
  • ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಬಿಳಿಕೂದಲು ಮಾಯವಾಗಿ ಕೂದಲು ಕಪ್ಪಾಗಿ ಹೇಳೆಯುತ್ತದೆ.

ಇದನ್ನೂ ಓದಿರಿ: ಗರಿಕೆ ಹುಲ್ಲಿನ ಕಷಾಯ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತೇ ?

home-remedies-to-turn-white-hair-black-without-chemical-dyes

  • ಬಿಳಿ ಕೂದಲಿನ ಸಮಸ್ಯೆಯಿಂದ ದೂರವಾಗಲು ಕೂದಲಿಗೆ ಪ್ರತಿದಿನ ಸಾಸಿವೆ ಎಣ್ಣೆಯನ್ನು ಹಚ್ಚಿರಿ.
  • ಹೀರೆಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ 3-4 ಗಂಟೆಗಳ ಕಾಲ ಕುದಿಸಬೇಕು. ಕುದಿಸಿದ ಎಣ್ಣೆ ಕಪ್ಪು ಬಣ್ಣಕ್ಕೆ ಬಂದ ಮೇಲೆ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ತೊಲಗಿ ಕಪ್ಪಾದ ಕೂದಲನ್ನು ಪಡೆಯುವಿರಿ.
  • ಬಾದಾಮಿ ಎಣ್ಣೆಯೊಂದಿಗೆ ನೆಲ್ಲಿಕಾಯಿ ಎಣ್ಣೆಯನ್ನು ಬೆರೆಸಿ ಪ್ರತಿ ದಿನ ಕೂದಲಿಗೆ ಹಚ್ಚುದರಿಂದ ಕೂದಲು  ಕಪ್ಪಾಗುತ್ತದೆ.
  • ಕರಿಬೇವಿನ ಎಲೆಯ ಪೇಸ್ಟನ್ನು ಮಾಡಿ ಅಥವಾ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಹಾಕಿ ಬಿಸಿಮಾಡಿ, ಈ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚಿಕೊಳ್ಳಿ.
  • ಮೆಹೆಂದಿ ಮತ್ತು ಮೊಸರನ್ನು ಸಮಪ್ರಮಾಣದಲ್ಲಿ ಬೆರೆಸಿ ಹಚ್ಚಿಕೊಂಡರೆ ಕೂದಲಿನ ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.
  • ಕುಂಬಳಕಾಯಿ ರಸದೊಂದಿಗೆ ಆಲಿವ್ ಎಣ್ಣೆ ಮತ್ತು ಎಳ್ಳಿನ ಎಣ್ಣೆಯನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲಿನ ಬಣ್ಣ ಕಪ್ಪಾಗಿಸಬಹುದು.

ಇದನ್ನೂ ಓದಿರಿ: ತಲೆಯಲ್ಲಿ ಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಹಾಗಾದರೆ ಇಲ್ಲಿದೆ ಪರಿಹಾರ

ಈ ಸಲಹೆಗಳು ನಿಮಗೆ ಇಷ್ಟವಾದರೆ ಇತರರೊಂದಿಗೂ ಹಂಚಿಕೊಳ್ಳಿ ಮತ್ತು ನಿಮಗೆ ಬಿಳಿಕೂದಲು ಸಮಸ್ಯೆ ನಿವಾರಣೆಗೆ ಮನೆ ಔಷಧ ಗೊತ್ತಿದ್ದರೆ ಕಮೆಂಟ್ ಮಾಡಿ. 

LEAVE A REPLY

Please enter your comment!
Please enter your name here