ಡ್ರೈ ಸ್ಕಿನ್ ಇರುವವರಿಗೆ ಮ್ಯಾಜಿಕ್ ಮಾಡುವ ಫೆಸ್ ಪ್ಯಾಕ್ ಇಲ್ಲಿದೆ ನೋಡಿ

flax-seed-face-pack-for-dry-skin

ಒಣ ಚರ್ಮ (ಡ್ರೈ ಸ್ಕಿನ್) ಸಮಸ್ಯೆ ಹಲವರನ್ನು ಕಾಡುತ್ತಿರುತ್ತದೆ, ಇದು ಸಾಮಾನ್ಯವಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ,  ಅಥವಾ ಚಳಿಗಾಲದಂತಹ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ನಮ್ಮ ಸೌಂದರ್ಯವನ್ನು ಕಳೆಗುಂದುವಂತೆ ಮಾಡುತ್ತದೆ. ಇದರ ನಿವಾರಣೆಗೆ ಹಲವಾರು ವಿಧಾನಗಳಿದ್ದು, ನಾವಿಂದು ನೈಸರ್ಗಿಕವಾಗಿ ತಯಾರಿಸಲಾದ ಒಂದು ಸುಲಭವಾದ ಫೇಸ್ ಪ್ಯಾಕ್ ನ್ನು ನಿಮಗೆ ತಿಳಿಸಿ ಕೊಡಲಿದ್ದೇವೆ. 

ನಾವಿಂದು ತಿಳಿಸುವ ಫೇಸ್ ಪ್ಯಾಕ್ ನಲ್ಲಿ ಅಗಸೆ ಬೀಜವನ್ನು ಬಳಸುತ್ತಿದ್ದು, ಇದು ಆಂಟಿಆಕ್ಸಿಡೆಂಟ್ ಅಂಶವನ್ನು ಹೊಂದಿದೆ. ಇದು ಒಣಚರ್ಮವನ್ನು ಮೃದುಗೊಳಿಸಿ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚುವುದರಿಂದ ಬಿಸಿಲಿನಿಂದಾದ ಕಲೆಗಳು, ಮೊದವೆಯ ಕಲೆಗಳು ಹೀಗೆ ಒಣಚರ್ಮದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ದೊರಕಿಸಿಕೊಡುತ್ತದೆ. 

flax-seed-face-pack-for-dry-skin

ಇದನ್ನೂ ಓದಿರಿ: ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ

ಈ ಫೇಸ್ ಪ್ಯಾಕ್ ತಯಾರಿಸಲು ಎರಡು ಕಪ್ ನಷ್ಟು ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಬೇಕು. ಬಿಸಿಯಾಗಿ ಗುಳ್ಳೆಗಳು ಬರುವಷ್ಟಾದ ನಂತರ ಎರಡು ಚಮಚ ಅಗಸೆಯ ಬೀಜವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ನೆರೆಯು ಬರಲು ಪ್ರಾರಂಭವಾದ ತಕ್ಷಣ ಗ್ಯಾಸ್ ನಿಂದ ಇಳಿಸಿ, ತಣ್ಣಗಾಗಲು ಬಿಡಬೇಕು. ಈ ಬಿಸಿಮಾಡಿದ ಅಗಸೆಯನ್ನು ಒಂದು ಬಟ್ಟೆಯ ಮೂಲಕ ಸೊಸಿಕೊಳ್ಳಬೇಕು. ಸೋಸಿಕೊಂಡ ಜೆಲ್ ನ್ನು ಕೂದಲಿಗೆ ಮತ್ತು ಒಣಚರ್ಮಕ್ಕೆ ನಿಯಮಿತವಾಗಿ ಹಚ್ಚಿಕೊಳ್ಳುವ ಮೂಲಕ ನಿಮ್ಮ ಹಲವಾರು ಸಮಸ್ಯೆಗಳು ದೂರಮಾಡಿಕೊಳ್ಳಬಹುದು.

ಇನ್ನು ನಾವು ಸೋಸಿದ ನಂತರ ಉಳಿಯುವ ಅಗಸೆ ಬೀಜದಿಂದ ಯಾವ ರೀತಿಯಲ್ಲಿ ಫೇಸ್ ಪ್ಯಾಕ್ ತಯಾರಿಸಿಕೊಂಡು ನಮ್ಮ ಒಣಚರ್ಮದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ. ಅಗಸೆ ಬೀಜಗಳನ್ನು ರುಬ್ಬಿಕೊಂಡು ಚೆನ್ನಾಗಿ ಪೇಸ್ಟ್ ಹದಕ್ಕೆ ತಾಯಾರಿಸಿಕೊಳ್ಳಬೇಕು. ಪೇಸ್ಟ್ ತಯಾರಿಸುವಾಗ ಅಗತ್ಯವಿದ್ದರೆ ಮೊಸರನ್ನು ಸೇರಿಸಿಕೊಳ್ಳಬಹುದು. ಈ ರೀತಿಯಾಗಿ ಸಿದ್ದವಾದ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಹೆಳೆಯುವ ಸುಂದರ ಚರ್ಮವು ನಿಮ್ಮದಾಗುತ್ತದೆ. 

flax-seed-face-pack-for-dry-skin

ಇದನ್ನೂ ಓದಿರಿ: ನಿಮ್ಮ ಕೂದಲು ಉದುರುತ್ತಿದೆಯೇ? ಉದ್ದ ಹಾಗೂ ದಟ್ಟ ಕೂದಲಿಗಾಗಿ ಈ ತೈಲವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಯಾವುದೇ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವ ಮುನ್ನ ಚೆನ್ನಾಗಿ ತೊಳೆದುಕೊಳ್ಳಬೇಕು. ಮುಖವನ್ನು ಸ್ವಚ್ಚಗೊಲಿಸಿಕೊಂಡ ನಂತರ ಅಗಸೆ ಬೀಜದ ಮಿಶ್ರಣವನ್ನು ಲೇಪನ ಮಾಡಿಕೊಳ್ಳಬೇಕು. ಈ ಮಿಶ್ರಣದಿಂದ ಸಂಪೂರ್ಣ ಮುಖಕ್ಕೆ ಲೇಪಿಸಿಕೊಂಡ ನಂತರ ಸುಮಾರು 20 ನಿಮಿಷ ಬಿಟ್ಟು ಈ ಫೇಸ್ ಪ್ಯಾಕ್ ನ್ನು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬೇಕು.

ಅಗಸೆ ಬೀಜದಲ್ಲಿ ಒಮೇಗಾ-3 ಇರುವುದರಿಂದ ಒಣ ಚರ್ಮದ ಸಮಸ್ಯೆಗೆ ಉತ್ತಮ ಪರಿಹಾರವಾಗುವುದು, ಇದರೊಂದಿಗೆ ಆಕ್ಸಿಡೆಂಟ್ಸ್ ಇರುವುದರಿಂದಾಗಿ ಬಿಸಿಲಿಗೆ ರೆಡ್ನೆಸ್ ಆಗಿದ್ದರೆ ಅಥವಾ ಸ್ಕಿನ್ ಇರ್ರಿಟೇಶನ್ ಇದ್ದರೆ ಕಡಿಮೆ ಆಗುತ್ತದೆ. ಚರ್ಮದ ಸುಕ್ಕುಗಳನ್ನು ದೂರಮಾಡಿ ಚರ್ಮವು ಬಿಗಿಗೊಳ್ಳುವಂತೆ ಮಾಡುತ್ತದೆ. ಈ ಮೂಲಕ ಒಣಚರ್ಮದ ಸಮಸ್ಯೆ ದೂರವಾಗಿ ಕಲೆಗಳಿಂದ ಮುಕ್ತ ಮತ್ತು ಹೊಳೆಯುವ ಚರ್ಮ ನಿಮ್ಮದಾಗುತ್ತದೆ.

flax-seed-face-pack-for-dry-skin

ಇದನ್ನೂ ಓದಿರಿ: ಈ ಒಂದು ಟ್ಯಾಬ್ಲೆಟ್ ನಿಂದ ನಿಮ್ಮ ಮೊಡವೆಗಳಿಗೆ ಹೇಳಿ ಗುಡ್ ಬೈ..!

ತಣ್ಣನೆಯ ನೀರಿನಿಂದ ತೊಳೆದುಕೊಂಡ ಮುಖಕ್ಕೆ ಮೊದಲೇ ಸೋಸಿ ಇಟ್ಟುಕೊಂಡಿರುವ ಅಗಸೆ ಬೀಜದ ಜೆಲ್ ನ್ನು ಮತ್ತೊಮ್ಮೆ ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು ಐದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರದಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಈ ಫೇಸ್ ಪ್ಯಾಕ್ ರಿಮೂವ್ ಮಾಡುವ ಸಮಯದಲ್ಲಿ ಯಾವುದೇ ರೀತಿಯ ಸೋಪು ಅಥವಾ ಫೇಸ್ ವಾಶ್ ಬಳಸದಿರುವುದು ಉತ್ತಮ ಎಂದು ಹೇಳಲಾಗುತ್ತದೆ.

ನಾವು ತಿಳಿಸಿರುವ ಅಗಸೆ ಬೀಜದ ಫೇಸ್ ಪ್ಯಾಕ್ ಹಾಗೂ ಜೆಲ್ ನಿಮ್ಮ ಒಣ ಚರ್ಮವನ್ನ ಮೃದು ಮಾಡುತ್ತದೆ. ಇದರೊಂದಿಗೆ ಕಪ್ಪು ಕಲೆಗಳ ವಿರುದ್ಧ ಹೋರಾಡಿ ಹೊಳೆಯುವ ತ್ವಚೆಯು ನಿಮ್ಮದಾಗುತ್ತದೆ. ಈ ಫೇಸ್ ಪ್ಯಾಕ್ ನ್ನು ನಿಯಮಿತವಾಗಿ ವಾರದಲ್ಲಿ ಒಂದು ಬಾರಿ ಹಚ್ಚಿಕೊಳ್ಳುವುದರಿಂದ ಉತ್ತಮ ಪರಿಣಾಮವನ್ನು ನೀವು ಕಾಣಬಹುದಾಗಿದೆ. ಫೇಸ್ ಪ್ಯಾಕ್ ತಯಾರಿ ಮತ್ತು ಹಚ್ಚಿಕೊಳ್ಳುವ ವಿವರಗಳನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. 

LEAVE A REPLY

Please enter your comment!
Please enter your name here