ಸ್ವಾತಂತ್ರ್ಯೋತ್ಸವದ ಸಂಭ್ರಮ: ಆತ್ಮೀಯತೇಯ ಬಂಧವೇ ಸ್ವಾತಂತ್ರ್ಯ…

ನಾಡಿನ ಎಲ್ಲ ಓದುಗ ಸ್ನೇಹಿತರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು…

ಸ್ವಾತಂತ್ರ್ಯ  ಎಂದ ಕೂಡಲೇ ನಮ್ಮ ನಿಮ್ಮೆಲ್ಲರ ಕಣ್ಣೆದುರು ಮೊಟ್ಟ ಮೊದಲು ಬಂದು ನಿಲ್ಲುವವರು ಗಾಂಧಿಜೀಯವರು. ಸ್ವಾತಂತ್ರ್ಯ  ಹೋರಾಟಗಾರರು ಮತ್ತೆ ಹಲವಾರು ನೋಟುಗಳ ಮೇಲಿದ್ದ ಅವರ ಚಿತ್ರಣಗಳು ಅಲ್ಲವೇ ಆದರೆ ನಾವು ಸ್ವಲ್ಪ ಇದರಿಂದಚೆಗೆ ಬರೋಣವೇ..?  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಹಲವು ವರುಷಗಳೇ ಕಳೆದು ಹೋಗಿವೆ ಆದರೆ ನಮ್ಮ ಜನರ ಭಾವನೆಗಳಿಗೆ ಮಾತ್ರ ಇನ್ನು ಅದು ಕಾಣದಾಗಿದೆ. ಏಕೆ ಎಂಬ ಪುಟ್ಟ ಪ್ರೆಶ್ನೇಯು ಒಮ್ಮೆ ನಮ್ಮನ್ನು ಕಾಡುವುದು ಸಹಜ ಅಲ್ಲವೇ..?

ನಾವು ಎಲ್ಲವನ್ನು ಎಲ್ಲರಿಂದಲೂ ಕಸಿದುಕೊಳ್ಳುತ್ತಿದ್ದೇವೇ ಎಂದು ಒಮ್ಮೊಮ್ಮೆ ಅನ್ನಿಸುವುದಿಲ್ಲವೇ..?  ಸ್ನೇಹಿತರೇ… ಅಂದು ಎಲ್ಲರೂ ದೇಶಕ್ಕಾಗಿ ಒಟ್ಟುಗೂಡಿದ್ದರು ಆದರೆ ಇಂದು ಒಂದು ಮನೆಯ ಸದಸ್ಯರು ಕೂಡ ನಮ್ಮವರು-ತಮ್ಮವರು ಎಂಬುದನ್ನು ಮರೆತಿದ್ದಾರೆ. ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸಲಾರದಷ್ಟು. ಸ್ವಾತಂತ್ರ್ಯವೆಂದರೇ ನಮ್ಮ ಮನಸಾ ಇಚ್ಛೆ ಬೇಕೆಂದಲ್ಲಿ ಬೇಕಾದಾಗ ತಿರುಗಾಡುವುದಲ್ಲ. ಸ್ವಾತಂತ್ರ್ಯವೆಂಬುದು ಇಂದು ಪಡೆಯಬೇಕಾದ್ದಲ್ಲ ಹಾಗಂತ ಕೊಡಬೇಕಾದದ್ದಲ್ಲ ಅದು ಕಲಿಯಬೇಕಾದದ್ದು ಮತ್ತು ತಿಳಿಸಬೇಕಾದದ್ದು…

ಸ್ನೇಹಿತರೇ  ನಾವು ಮಕ್ಕಳಿಗೆ ತನ್ನಿಷ್ಟದ ಆಟಗಳನ್ನು ಎಲ್ಲರೊಂದಿಗು ಆಡುವ,  ತನ್ನಿಷ್ಟದ ವಿಷಯಗಳನ್ನು ಓದುವ, ಅವರಿಷ್ಟದ ಉತ್ತಮವಾದ ಕನಸುಗಳನ್ನು ಈಡೇರಿಸಿಕೊಳ್ಳುವ ಸ್ವಾತಂತ್ರ್ಯವನ್ನಾದಾರು ನಾವುಗಳು ನೀಡಬೇಕು. ಪ್ರತಿಯೊಂದು ಮಗುವಿಗು ಸ್ವಾತಂತ್ರ್ಯವೆಂಬುದು ಕೇವಲ ಮನುಷ್ಯನಿಗೆ ಮಾತ್ರವಲ್ಲ ಅದು ಪ್ರತಿಯೊಂದು ಜೀವಿಗೂ ಇದೆ ಎಂದು ತಿಳಿಸಬೇಕು. ಇಂದಿನ ಮಕ್ಕಳಿಗೆ ಕನಸು ಕಾಣುವುದೇ ಗೊತ್ತಿಲ್ಲವೇನೋ ಎಂದು ಅನ್ನಿಸುತ್ತದೆ. ಮೊಬೈಲ್, ಟಿ.ವಿ ಮುಂತಾದವುಗಳನ್ನು ಕೊಟ್ಟರೆ ಮಾತ್ರ ಅವರಿಗೆ ಸ್ವಾತಂತ್ರ್ಯ ಕೊಟ್ಟಂತೆ ಎಂಬಂತಾಗಿದೆ. ಇದು ತಾಮಾಷೇಯಾದರು ನಿಜವೇ ಸರಿ. ಹಾಗೆಯೇ  ನಮ್ಮಲ್ಲಿ ಇನ್ನು ಹಲವರಿದ್ದಾರೆ ವಯಸ್ಸಾದ ತಂದೆ-ತಾಯಿಯರ ಸ್ವಾತಂತ್ರ್ಯವನ್ನು ಕಸಿದು ಅವರ ಮೇಲೆ ಇಲ್ಲದ ಒತ್ತಡವನ್ನು ಹೇರಿ ಮಾನಸಿಕವಾಗಿ ಕುಗ್ಗಿಸುವವರು. ಯಾವುದೇ ಒಬ್ಬ ವ್ಯಕ್ತಿಗೆ ಧೀಡಿರನೆ  ಸುಲಭವಾಗಿ ಅಧಿಕಾರ ಸಿಕ್ಕ ಕೂಡಲೇ  ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ  ಪ್ರಯತ್ನವನ್ನು ಮಾಡುತ್ತಾರೆ. ಅವರಿಗೆ ಬುದ್ದಿ ಬರುವುದು ಅವರು ಫೊಟೊದಲ್ಲಿ ಚಿತ್ರಣವಾದಗಲೇ…

ಅದೇನೇಯಿರಲಿ ಸ್ನೇಹಿತರೇ ಈಗ ಸ್ವಾತಂತ್ರ್ಯಬೇಕಿರುವುದು ಬುದ್ದಿಗಲ್ಲ, ಭಾವನೆಗಳಿಗೆ.  ತಮ್ಮ ಭಾವನೆಗಳನ್ನು ಸ್ವಾತಂತ್ರ್ಯವಾಗಿ ಬಿಟ್ಟು ನೋಡಿ ದೇಶ-ವಿದೇಶಗಳಂತೆ ವಿಭಜನೆಗೊಂಡ  ಸಂಭಂದಗಳು ಗಟ್ಟಿಯಾಗುತ್ತವೆ. ಎಲ್ಲಾರೊಂದಿಗೂ ಆತ್ಮೀಯತೇ  ಬೆಳೆಯುತ್ತದೆ. ಯಾವುದೇ ಕಲ್ಮಶವಿಲ್ಲದೇ  ಅವರೆಲ್ಲರೊಂದಿಗೆ ಮನಸ್ಪೂರ್ತಿಯಾಗಿ ಒಮ್ಮೆ ನಕ್ಕರೆ… ಸಂಪೂರ್ಣ ಸ್ವಾತಂತ್ರ್ಯ  ಮುಗುಳ್ನಗುತ್ತದೆ…

  • ಸೌಮ್ಯಾ ಸಾಗರ್

LEAVE A REPLY

Please enter your comment!
Please enter your name here