ಸುಲಭವಾಗಿ ಈ ಮುದ್ರೆಯನ್ನು ಮಾಡುವ ಮೂಲಕ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ

increase-memorization-and-concentration-by-doing-this-Mudra

ಯೋಗಾಸನ ನಮ್ಮ ದಿನನಿತ್ಯದ ಜೀವನವನ್ನು ಸುಲಭ ಮತ್ತು ಆರೋಗ್ಯಪೂರ್ಣವಾಗಿ ಮಾಡಲು ಅತ್ಯುತ್ತಮ ತಂತ್ರವಾಗಿದೆ. ಪುರಾತನ ಭಾರತೀಯರು ನಮಗೆ ಈ ಮಹಾನ್ ಶಕ್ತಿಯನ್ನು ಮತ್ತು ಅದನ್ನು ಪಡೆದುಕೊಳ್ಳುವ ತಂತ್ರವನ್ನು ತಿಳಿಸಿಕೊಟ್ಟು ಹೋಗಿದ್ದಾರೆ. ಈ ಯೋಗಾಸನದಲ್ಲಿ ಕೇವಲ ದೇಹವನ್ನು ದಂಡಿಸುವ ವ್ಯಾಯಾಮಗಳಷ್ಟೆ ಅಲ್ಲದೇ ಧ್ಯಾನ, ಪ್ರಾಣಾಯಾಮ ಮತ್ತು ಮುದ್ರೆಗಳನ್ನು ತಿಳಿಸಿಕೊಟ್ಟಿದ್ದಾರೆ. ಈ ಮುದ್ರೆಗಳು ಯೋಗದ ಅಂಶ ಎಂದು ಪರಿಗಣಿಸಲಾಗಿದೆ. ಇದು ಬೆರಳುಗಳ ಸಹಾಯದಿಂದ ನಮ್ಮ ದೇಹರಚನೆಯ ತತ್ವಗಳಲ್ಲಿ ಉಂಟಾದ ಅವ್ಯವಸ್ಥೆಯನ್ನು ಸರಿಪಡಿಸುವ ತಂತ್ರವಾಗಿದೆ.

ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ನಮ್ಮ ಕೈಯ ಐದು ಬೆರಳುಗಳು ಪಂಚಬೂತಗಳನ್ನು ಪ್ರತಿನಿಧಿಸುತ್ತವೆ ಹಾಗೂ ಪ್ರತಿ ಬೆರಳೂ ತನ್ನದೇ ಆದ ಶಕ್ತಿ ಮತ್ತು ಚೈತನ್ಯವನ್ನು ಹೊಂದಿದೆ. ಇದನ್ನು ಆಸನಗಳ ಜೊತೆಯಲ್ಲಿ, ಪ್ರಾಣಾಯಾಮವನ್ನು ಮಾಡುತ್ತಾ ಮುಂದುವರೆಯುತ್ತೇವೆ. ಈ ಮುದ್ರಾ ತಂತ್ರಗಳು ನಮ್ಮ ಮೆದುಳನ್ನು ಪ್ರಚೋದನೆ ಮಾಡಿ ಉತ್ತೇಜನವನ್ನು ನೀಡುತ್ತದೆ. ಈ ಮುದ್ರೆಗಳಲ್ಲಿ ಬೇರೆ ಬೇರೆ ಮುದ್ರೆಗಳಿದ್ದು, ಅವುಗಳು ಒಂದೊಂದು ರೀತಿಯಿಂದ ನಮಗೆ ಸಹಾಯವನ್ನು ಮಾಡುತ್ತವೆ. ಇಂದು ನಾವು ಜ್ಞಾನ ಮುದ್ರೆಯ ಕುರಿತು ತಿಳಿದುಕೊಳ್ಳೋಣ. ಇದೇ ರೀತಿಯಲ್ಲಿ ಉಳಿದ ಮುದ್ರೆಗಳ ವಿಶೇಷತೆ ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಸವಿವರವಾಗಿ ತಿಳಿಯಲು ನಮ್ಮ ವಾರ್ತಾವಾಣಿಯ ನೋತಿಫಿಕೆಷನ್ ಆಯ್ಕೆಯನ್ನು ಸಕ್ರೀಯಗೊಳಿಸಿಕೊಳ್ಳಿ. 

increase-memorization-and-concentration-by-doing-this-Mudra

ಇದನ್ನೂ ಓದಿರಿ: ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮನೆ ಮದ್ದುಗಳು

ಜ್ಞಾನ ಮುದ್ರೆ 

ಮುದ್ರೆಗಳನ್ನು ಬೆಳಗಿನ ಸಮಯದ ತಾಜಾ ಮಸ್ಸಿನಲ್ಲಿ ವಜ್ರಾಸನ, ಪದ್ಮಾಸನ, ಸಿದ್ಧಾಸನ, ವೀರಾಸನಗಳಲ್ಲಿ ಯಾವುದಾದರೊಂದು ಆಸನಗಳಲ್ಲಿ ಕುಳಿತು ನಿಮ್ಮ ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಂದು, ಉಳಿದ ಬೆರಳುಗಳನ್ನು ಸಾಧ್ಯವಾದಷ್ಟು ನೇರವಾಗಿ ಹಿಡಿದುಕೊಳ್ಳಿ. ಅದೇ ರೀತಿ ನಿಮ್ಮ ಉಸಿರನ್ನು ನಿಧಾನವಾಗಿ ಎಳೆದುಕೊಳ್ಳುತ್ತ ಸ್ವಲ್ಪ ಸಮಯ ತಡೆಹಿಡಿದು, ನಂತರ ನಿಧಾನವಾಗಿ ಉಸಿರನ್ನು ಬಿಡಿ. ಈ ರೀತಿಯಾಗಿ ಒಂದು ಸುತ್ತು ಜ್ನಾನಮುದ್ರೆಯನ್ನು ನೀವು ಮಾಡಬಹುದು. ಈ ಮುದ್ರೆಯನ್ನು ಮಾಡುವುದರಿಂದ ಮೆದುಳಿನ ಮೇಲೆ ಅನೇಕ ರೀತಿಯಲ್ಲಿ ಉತ್ತಮ ಪ್ರಯೋಜನಗಳು ಉಂಟಾಗುತ್ತದೆ. 

ಮುದ್ರೆಯಿಂದ ದೇಹದಲ್ಲಿನ ಬದಲಾವಣೆಗಳು

ಜ್ನಾನಮುದ್ರೆ ಮಾಡುವುದರಿಂದ ಶರೀರದ ಉಷ್ಣತೆ ಸ್ಥಿರಗೊಂಡು ಪಚನ ಶಕ್ತಿಯು ಸುಧಾರಣೆ ಆಗುತ್ತದೆ. ವಾಯು ಮತ್ತು ಗತಿ ತತ್ವಗಳು ಸುಗಮವಾಗಿ ರಸ ರಕ್ತಗಳು ಯೋಗ್ಯ ರೀತಿಯಲ್ಲಿ ಸಿದ್ಧವಾಗುತ್ತದೆ. ಹೆಬ್ಬೇರಿನ ತುದಿಯು ಮಸ್ತಿಷ್ಕದ ಮಜ್ಜೆ, ಪಿಟ್ಯುಟರಿ, ಫಿನಿಯಲ್ ಗ್ರಂಥಿಗಳ ಕೇಂದ್ರ ಬಿಂದು ಆಗಿದ್ದು, ಮಸ್ತಿಷ್ಕದ ಕಾರ್ಯಗಳಾದ ಚಿಂತನೆ, ಅಧ್ಯಯನ ಶೀಲತೆ, ಏಕಾಗ್ರತೆ, ಸ್ಮರಣ ಶಕ್ತಿ ಇವುಗಳ ವೃದ್ಧಿಯಲ್ಲಿ ಸುಧಾರಣೆ ಉಂಟಾಗುವಂತೆ ಮಾಡುತ್ತದೆ. ಪಿಟ್ಯುಟರಿ ಗ್ರಂಥಿಯು ವಿಶೇಷವಾದ ರಸವನ್ನು ಸ್ರವಿಸುವ ಗುಣವನ್ನು ಹೊಂದಿದೆ. ಇದರಲ್ಲಿ ಉತ್ಪದನೆಗೊಳ್ಳುವ ಸ್ರಾವವು ನೇರವಾಗಿ ರಕ್ತದಲ್ಲಿ ಸೇರುತ್ತದೆ. ‌ನಮ್ಮ ಥೈರಾಯಿಡ್, ಲೈಂಗಿಕ ಗ್ರಂಥಿ, ಇವಗಳ ಮೇಲೆ ಪಿಟ್ಯುಟರಿ ಗ್ರಂಥಿಯ ಅಧಿಕಾರ ಇರುತ್ತದೆ. ಇದರಿಂದ ಥೈರಾಡ್ ಅಡ್ರಿನಾಲ್ ಗ್ರಂಥಿಯ ಕಾರ್ಯವು ಉತ್ತಮಗೊಳ್ಳುತ್ತದೆ. ಇನ್ನು ಫಿನಿಯಲ್ ಗ್ರಂಥಿಯು ಇತರ ಗ್ರಂಥಿಗಳಾದ ಥೈರಾಡ್, ಥ್ಯಾಮಸ್, ಆಂಡ್ರಿನಲ್, ಪಾಂಕ್ರಿಯಸ್ ಇತ್ಯಾದಿಗಳ ಬೆಳವಣಿಗೆ ಮತ್ತು ಕಾರ್ಯಕ್ಷಮತೆ ನಿಯತ್ರಿಸುವ ಶಕ್ತಿಯನ್ನು ಹೊಂದಿದೆ. ಈ ಮುದ್ರೆಯೂ ಫಿನಿಯಲ್ ಗ್ರಂಥಿಯ ಮೇಲೆಯೂ ಪರಿಣಾಮ ಉಂಟುಮಾಡುವುದರಿಂದ ಇದರ ಹಿಡಿತದಲ್ಲಿರುವ ಎಲ್ಲ ಕಾರ್ಯಗಳ ಕಾರ್ಯಕ್ಷಮತೆಯೂ ಉತ್ತಮಗೊಳ್ಳುತ್ತದೆ.

ಈ ಗ್ರಂಥಿಯ ಸ್ರಾವದಿಂದ ಶರೀರದಲ್ಲಿಯ ಪೊಟ್ಯಾಶಿಯಂ ಸೋಡಿಯಂ ಮತ್ತು ನೀರು ಇವುಗಳ ಸಂತುಲನೆ ಉಂಟಾಗುತ್ತದೆ. ಹೆಬ್ಬೇರಿನ ಸಂಬಂಧ ಮಸ್ತಿಷ್ಕದೊಂದಿಗೆ ಇರುವುದರಿಂದ ಈ ಎಲ್ಲರೀತಿಯ ಕಾರ್ಯಗಳು ಸಲೀಸಾಗುವಂತೆ ಪ್ರೇರಣೆ ದೊರೆಯುತ್ತದೆ. ಇದರಿಂದಾಗಿ ನಮ್ಮ ಏನೆಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವುದನ್ನು ಮುಂದೆ ತಿಳಿಯೋಣ..

increase-memory-power-and-concentration-by-doing-this-mudra-vartavani

ಇದನ್ನೂ ಓದಿರಿ: ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ

ಈ ಮುದ್ರೆಯ ಆರೋಗ್ಯ ಪ್ರಯೋಜನಗಳು 

  • ಜ್ಞಾನಮುದ್ರೆಯನ್ನು ಮಾಡುವುದರಿಂದ ಜ್ಞಾಪಕ ಶಕ್ತಿಯು ಹೆಚ್ಚಳವಾಗುತ್ತದೆ.
  • ಈ ಮುದ್ರೆಯನ್ನು ಮಾಡುವವರಲ್ಲಿ ಏಕಾಗ್ರತೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
  • ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ.
  • ನಮ್ಮನ್ನು ಕಾಡುವ ಕೆಳ ಬೆನ್ನಿನ ನೋವು ನಿವಾರಣೆಯಾಗುತ್ತದೆ.
  • ಅಧಿಕ ಸಿಟ್ಟನ್ನು ಶಮನಗೊಳಿಸುವುದರೊಂದಿಗೆ ಮನುಷ್ಯ ಸ್ವಭಾವಗಳಾದ ಹಠಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.
  • ಆಧ್ಯಾತ್ಮ ಶಕ್ತಿಯ ವೃದ್ಧಿಗೆ ಈ ಜ್ಞಾನ ಮುದ್ರೆ ಸಹಾಯಕವಾಗುತ್ತದೆ.
  • ಪಿಟ್ಯೂಟರಿ ಪೀನಲ್ ಗ್ರಂಥಿಗಳ ಕಾರ್ಯಕ್ರಮತೆಯನ್ನು ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ.
  • ಪ್ರಯಾಣದ ಸಮಯಗಳಲ್ಲಿ, ಟ್ರಾಫಿಕ್ ಜಾಮ್, ಒತ್ತಡ ಉಂಟಾದಾಗ ಹೀಗೆ ಎಲ್ಲಾದರೂ ಕಾಯುವ ಸಂದರ್ಭಗಳಲ್ಲಿ 10 ನಿಮಿಷಗಳು ಈ ಮುದ್ರೆಯಲ್ಲಿದ್ದಾಗ ಮನಸ್ಸು ಸಮಾಧಾನಗೊಳ್ಳುತ್ತದೆ.
  • ವಿದ್ಯಾರ್ಥಿಗಳು ಓದುವ ಸಂದರ್ಭದಲ್ಲಿ ಈ ಮುದ್ರೆಯನ್ನು ಮಾಡಬೇಕು, ಬೇಡದ ಕೆಟ್ಟ ವಿಚಾರಗಳು ಹತ್ತಿರ ಸುಳಿಯುವುದಿಲ್ಲ. ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಮಾಂದ್ಯ ಮಕ್ಕಳಿಗೆ ಈ ಮುದ್ರೆಯನ್ನು ಅಭ್ಯಾಸ ಮಾಡಿಸಿದರೆ ಮಾನಸಿಕ ಶಕ್ತಿ ಬಲಗೊಳ್ಳಲು ಸಹಕಾರಿಯಾಗುತ್ತದೆ.

ಇದನ್ನೂ ಓದಿರಿ: ಕಣ್ಣಿನ ಸಮಸ್ಯೆ ಮತ್ತು ನಿಶ್ಯಕ್ತಿಗೆ ಈ ಒಂದು ಮುದ್ರೆ ಮಾಡುವುದರಿಂದ ಪರಿಹಾರ ಕಾಣಬಹುದು..!

ಈ ಜ್ಞಾನ ಮುದ್ರೆಯೂ ನಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದು, ಅದರಲ್ಲಿಯೂ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸುತ್ತಿರುವವರು ಮತ್ತು ಹೆಚ್ಚಿನ ಏಕಾಗ್ರತೆಯನ್ನು ಬಯಸುವವರು ಕಂಡಿತವಾಗಿಯೂ ಪ್ರಯತ್ನಿಸಲೇ ಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ..

LEAVE A REPLY

Please enter your comment!
Please enter your name here