ಕ್ಯಾನ್ಸರ್ ಬರದಂತೆ ಸ್ತನಗಳ ಆರೈಕೆ ಮಾಡುವುದು ಹೇಗೆ ? ತಿಳಿಯಿರಿ

ಸ್ತನ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿಯೇ ತೆಗೆದುಕೊಳ್ಳಬಹುದಾದ ಸರಳ ಮುಂಜಾಗ್ರತಾ ಕ್ರಮಗಳ ಕುರಿತಾಗಿ ವಿವರಿಸಲಾಗಿದ್ದು, ಈ ಉಪಯುಕ್ತ ಮಾಹಿತಿ ನಿಮಗಾಗಿ.

how-to-take-care-of-the-breast

ಅದೆಷ್ಟೋ ಮಹಿಳೆಯರು ಈಗಲೂ ಸ್ತನಗಳ ಆರೋಗ್ಯದ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಸ್ತನಗಳ ಆರೈಕೆ ಮಾಡುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟಬಹುದಲ್ಲದೆ ಸೌಂದರ್ಯವರ್ಧನೆ ಮತ್ತಿತರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟಕ್ಕೂ ಕ್ಯಾನ್ಸರ್ ಬರದಂತೆ ಸ್ತನಗಳ ಆರೈಕೆ ಮಾಡುವುದು ಹೇಗೆ ? ಅದರ ಉಪಯೋಗಗಳೇನು ? ಎಂಬ ವಿಚಾರಗಳ ಕುರಿತಾಗಿ ನಾವಿಂದು ತಿಳಿಯೋಣ…

ಬ್ರೆಸ್ಟ್ ಮಸಾಜ್..!

ಸ್ತನಗಳ ಆರೋಗ್ಯಕ್ಕೆ ಸ್ತನ ಮಸಾಜ್ ಒಂದು ಅತ್ಯುತ್ತಮ ವಿಧಾನವಾಗಿದೆ. ಪ್ರತಿನಿತ್ಯವೂ ಸ್ತನಗಳ ಮಸಾಜ್ ಮಾಡುವುದರಿಂದ ಸ್ತನಗಳ ಆರೋಗ್ಯ ಉತ್ತಮವಾಗಿರುತ್ತವೆ. ಅಲ್ಲದೇ ಕ್ಯಾನ್ಸರ್ ನಂತಹ ಮಹಾ ಮಾರಿಯಿಂದಲೂ ದೂರವಿರಬಹುದು. ಮಸಾಜ್ ಮಾಡುವ ಸಮಯದಲ್ಲಿ ಸ್ತನದಲ್ಲಿ ಉಂಟಾಗುವ ಗಡ್ಡೆಗಳ ಕಡೆಗೆ ಗಮನವನ್ನು ನೀಡುವುದರಿಂದ ಕ್ಯಾನ್ಸರ್ ನ್ನು ಸಹ ತಡೆಗಟ್ಟಬಹುದು.

ಇದನ್ನೂ ಓದಿರಿ: ಪಿತ್ತ ದೋಷ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

ಕೊಬ್ಬರಿ ಎಣ್ಣೆಯೇ ಸ್ತನಗಳ ಸಂಜೀವಿನಿ..!

ಕೈಯಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಎರಡೂ ಕೈಗಳಿಂದ ನಿಧಾನವಾಗಿ ಸ್ತನಗಳನ್ನು ಮಸಾಜ್ ಮಾಡಿ. ಮಸಾಜ್ ಮಾಡುವಾಗ ಬೆರಳನ್ನು ವೃತ್ತಾಕಾರವಾಗಿ ಸ್ತನಗಳ ಮೇಲೆ ಆಡಿಸುತ್ತಾ ಮೇಲ್ಮುಖವಾಗಿ ಮಸಾಜ್ ಮಾಡಬೇಕು. ನಂತರ ಸ್ತನಗಳ ನಿಪ್ಪಲ್ ಕಡೆಗೆ ಮಸಾಜ್ ಮಾಡಬೇಕು. ಈ ರೀತಿಯಾಗಿ ಮೇಲ್ಮುಖ ಹಾಗೂ ಕೆಳಮುಖವಾಗಿ 36 ಬಾರಿ ಮಾಡಬೇಕು. ಇದರಿಂದ ಸ್ತನಗಳಲ್ಲಿ ಉಂಟಾಗುವ ಚಿಕ್ಕ-ಚಿಕ್ಕ ಗಡ್ಡೆಗಳನ್ನು ತಡೆಯಬಹುದು. ಒಂದು ವೇಳೆ ಗಡ್ಡೆ ಉಂಟಾಗಿದ್ದರೆ ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಅಪಾಯದಿಂದ ಪಾರಾಗಬಹುದು.

ಇದನ್ನೂ ಓದಿರಿ: ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದುಗಳು 

ಮತ್ತಷ್ಟು ಉಪಯೋಗಗಳು.

  • ಸ್ತನ ಜೋತು ಬೀಳುವುದಿಲ್ಲ.
  • ಆಕರ್ಷಕ ಶೇಪ್ ಪಡೆಯಬಹುದು.
  • ಲವ್ ಹಾರ್ಮೋನ್ ಉತ್ಪತ್ತಿಯಾಗುವುದು.
  • ಲೈಂಗಿಕ ಆಸಕ್ತಿ ಹೆಚ್ಚುವುದು.
  • ಲವ್ ಹಾರ್ಮೊನಿನಿಂದ ಸಂತೋಷಕರ ಜೀವನ ನಿಮ್ಮದಾಗುವುದು.
  • ಆಕ್ಸಿಟೋಸಿನ್, ಪ್ರೋಲಾಕ್ಟಿನ್, ಈಸ್ತ್ರೋಜನ್ ಬಿಡುಗಡೆಯಾಗುತ್ತದೆ. ಇವುಗಳು ಸೌಂದರ್ಯವನ್ನು ವೃದ್ದಿಸುವ ಹಾರ್ಮೊನುಗಲಾಗಿವೆ. 

ಇದನ್ನೂ ಓದಿರಿ: ತಕ್ಷಣ ದೇಹದ ಉಷ್ಣತೆ ಕಡಿಮೆ ಮಾಡಬಲ್ಲ ನೈಸರ್ಗಿಕ ಆಹಾರಗಳು

how-to-take-care-of-the-breast

ಆರೋಗ್ಯಯುತವಾದ ಸ್ತನಗಳಿಗಾಗಿ ಹೀಗೆ ಮಾಡಿ

  •   ಸಾಕಷ್ಟು ನಿದ್ರೆ ಮಾಡಿ.
  •   ನಿಯಮಿತವಾಗಿ ವ್ಯಾಯಾಮ ಮಾಡಿ.
  •   ವಿಟಮಿನ್ ಡಿ ಹೊಂದಿರುವ ಆಹಾರಗಳನ್ನು ಸೇವಿಸಿ.
  •   ಸ್ವ-ಆರೈಕೆಯನ್ನು ಮಾಡಿಕೊಳ್ಳಿ.
  •   ಸ್ತನಗಳ ಮಸಾಜ್ ನ್ನು ಮಾಡಿಕೊಳ್ಳುತ್ತಿರಿ.

ಸ್ತನ ಕ್ಯಾನ್ಸರ್ ಒಂದು ಮಾರಕ ಕಾಯಿಲೆ ಅದರಿಂದ ದೂರವಾಗಿ ಆರೋಗ್ಯಯುತವಾದ ಜೀವನ ನಮ್ಮದಾಗಲು ಮೇಲೆ ತಿಳಿಸಲಾದ ಸರಳ ಕ್ರಮಗಳನ್ನು ಅನುಸರಿಸಿ ಮತ್ತು ಸ್ತನಗಳಲ್ಲಿ ಗಡ್ಡೆಗಳು ಅನುಭವಕ್ಕೆ ಬಂದರೆ ತಡಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆಯನ್ನು ಪಡೆದು ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.

ಇದನ್ನೂ ಓದಿರಿ: ಚರ್ಮರೋಗ, ಗಜಕರ್ಣ, ಸೋರಿಯಾಸಿಸ್ ನಂತಹ ಗಂಬೀರ ಸಮಸ್ಯೆಗೆ ತುಂಬೆ ಗಿಡದ ಪರಿಹಾರ..!

LEAVE A REPLY

Please enter your comment!
Please enter your name here