ಈ ಗರಿಕೆ ಕೇವಲ ಪೂಜೆಗೆ ಮಾತ್ರ ಶ್ರೇಷ್ಠವಲ್ಲ, ಆಯುರ್ವೇದದ ಔಷಧಗಳಲ್ಲಿಯೂ ವಿಶೇಷವಾದ ಪ್ರಾಮುಖ್ಯತೆಯಿದೆ. ಈ ಗರಿಕೆಯಲ್ಲಿ ಸಾಕಷ್ಟು ಔಷಧ ಗುಣವಿರುವುದರಿಂದ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಬಹುದು. ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಪೊಟ್ಯಾಶಿಯಂ, ಫೈಬರ್ ಮತ್ತು ಪ್ರೊಟೀನ್ ಹೇರಳವಾಗಿ ಅಡಗಿದೆ.
ಇದನ್ನೂ ಓದಿರಿ: ಬಿಳಿ ಕೂದಲಿನ ಸಮಸ್ಯೆ-ಅಂಗೈಯಲ್ಲಿಯೇ ಇದೆ ಮನೆಮದ್ದುಗಳು
ಗರಿಕೆಯ ಆರೋಗ್ಯ ಪ್ರಯೋಜನಗಳು :
⦿ ಗರಿಕೆಯು ಜೀರ್ಣಕ್ರೀಯೆಯನ್ನು ಉತ್ತಮಗೊಳಿಸುತ್ತದೆ.
⦿ ಶೀತ ಮತ್ತು ಕಫವನ್ನು ನಿವಾರಣೆ ಮಾಡುತ್ತದೆ.
⦿ ಬಾಯಿಯಿಂದ ದುರ್ವಾಸನೆಯಿಂದ ಬರುವ ಸಮಸ್ಯೆ ಇದ್ದರೆ ನಿವಾರಣೆ ಮಾಡುತ್ತದೆ.
⦿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ.
⦿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
⦿ ರಕ್ತವನ್ನು ಶುದ್ಧೀಕರಿಸುತ್ತದೆ.
⦿ ನಿದ್ರಾ ಹೀನತೆ, ಆಯಾಸ, ನರ ದೌರ್ಭಲ್ಯ ಸಮಸ್ಯೆಗಳಿದ್ದರೆ ದೂರಮಾಡುತ್ತದೆ.
⦿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಇದನ್ನೂ ಓದಿರಿ: ದೊಡ್ಡ ಪತ್ರೆಯಲ್ಲಿರುವ ಈ ಔಷಧ ಗುಣಗಳ ಬಗ್ಗೆ ನಿಮಗೆ ತಿಳಿದಿರಲಿ
ಗರಿಕೆಯ ಕಷಾಯ ತಯಾರಿಸುವ ವಿಧಾನ:
ಬೆಳಗಿನ ಜಾವ ಸೂರ್ಯನ ಕಿರಣಗಳು ಬೀಳುವ ಮೊದಲು, ಎಳೆಯ ಗರಿಕೆಗಳನ್ನು ತರಬೇಕು. ಹೂಬಿಟ್ಟ ಗರಿಕೆಗಳಲ್ಲಿ ಔಷಧೀಯ ಗುಣ ಕಡಿಮೆಯಾಗಿರುವುದರಿಂದ ಅವುಗಳು ಬೇಡ. ಗರಿಕೆಗಳನ್ನು ಸ್ವಚ್ಛಗೊಳಿಸಿ, ಸಣ್ಣಗೆ ಹೆಚ್ಚಿ ಎರಡು ಗ್ಲಾಸ್ ನೀರಿಗೆ ಹಾಕಿ ಸಣ್ಣ ಉರಿಯಲ್ಲಿ ಕುಡಿಸಿ. ಒಂದು ಲೋಟ ಅಳತೆಗೆ ಬಂದ ನಂತರ ಇಳಿಸಿ, ಆರಿಸಿಕೊಳ್ಳಿ. ಬೆಳಗಿನ ಜಾವ ಕಾಲಿ ಹೊಟ್ಟೆಯಲ್ಲಿ ಪ್ರತಿದಿನ ತೆಗೆದುಕೊಳ್ಳುತ್ತಾ ಬರುವುದರಿಂದ ಮೇಲೆ ತಿಳಿಸಿದ ಆರೋಗ್ಯ ಪ್ರಯೋಜನಗಳು ನಿಮಗೆ ಲಭ್ಯವಾಗಲಿವೆ.