ರಿಂಗ್‌ವರ್ಮ್ ಸಮಸ್ಯೆಯಿಂದ ಬಳಲುತ್ತಿದ್ದೀರೆ ಹಾಗಾದರೆ ಇಲ್ಲಿದೆ ಪರಿಹಾರ..!

home-remedies-get-rid-ringworms

ರಿಂಗ್‌ವರ್ಮ್ ಇದು ಒಂದು ಶಿಲೀಂದ್ರದಿಂದ ಉಂಟಾಗುವ ಚರ್ಮದ ರೋಗವಾಗಿದೆ. ಇದು ಸಾಮಾನ್ಯವಾಗಿ ಹಸಿಯಾದ ಬಟ್ಟೆಗಳನ್ನು ಹಾಕಿಕೊಳ್ಳುವುದು, ಹೆಚ್ಚಿನ ಪ್ರಮಾಣದಲ್ಲಿ ಬೆವರಿದಾಗ ಸ್ನಾನ ಮಾಡದೆ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಉಂಟಾಗುತ್ತದೆ. ಈ ಸಮಸ್ಯೆಯಿರುವ ಬೇರೊಬ್ಬರ ಬಟ್ಟೆ, ಸೋಪು ಮತ್ತಿತರ  ವಸ್ತುಗಳನ್ನು ಉಪಯೋಗಿಸುವದರಿಂದಲೂ ಹರಡುತ್ತದೆ. ಇದು ತುರಿಕೆಯನ್ನು ಉಂಟುಮಾಡಿ ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಇದು ಒಂದು ಗಂಭೀರ ಚರ್ಮದ ಸಮಸ್ಯೆಯಾಗಿದ್ದು, ನೋವು, ಉರಿ ಮತ್ತು ತುರಿಕೆಯಿಂದ ರೋಗಿಯನ್ನು ಕಾಡುತ್ತದೆ. ಇದರ ನಿವಾರಣೆಗೆ ಹಲವಾರು ಇಂಗ್ಲೀಷ್ ಔಷಧಗಳು ಲಭ್ಯವಿದ್ದರೂ, ಅದರ ಅಡ್ಡ ಪರಿಣಾಮಗಳಿಂದಾಗಿ ಹಲವರು ಬಳಲುತ್ತಿರುತ್ತಾರೆ. ಈ ರೋಗದ ನಿಯಂತ್ರಣದಲ್ಲಿ ಅನೇಕ ನೈಸರ್ಗಿಕ ಪರಿಹಾರಗಳು ಇದ್ದು, ಅವುಗಳ ಕುರಿತು ತಿಳಿಸುವ ಸಣ್ಣ ಪ್ರಯತ್ನ ವಾರ್ತಾವಾಣಿಯದಾಗಿದೆ.

ಈ ನೈಸರ್ಗಿಕ ಪದಾರ್ಥಗಳು ಮನೆಯಲ್ಲಿಯೇ ದೊರೆಯುವಂತಹದ್ದಾಗಿದ್ದು, ಸುಲಭವಾಗಿ ಈ ಮದ್ದುಗಳನ್ನು ತಯಾರಿಸಿಕೊಂಡು ಬಳಸಬಹುದಾಗಿದೆ. ಈ ರಿಂಗ್‌ವರ್ಮ್ ನಿವಾರಣೆಗೆ ಬೆಳ್ಳುಳ್ಳಿ, ಆಲೋವೆರಾ, ಅರಿಶಿನ, ತುಂಬೆ ಗಿಡ, ಕೊಬ್ಬರಿ ಎಣ್ಣೆ ಮತ್ತು ತುಳಸಿಯಂತಹ ಮನೆಮದ್ದು ಬಳಸಿಕೊಂಡು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿರಿ:  ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು

ಬೆಳ್ಳುಳ್ಳಿ

home-remedies-get-rid-ringworms

ಬೆಳ್ಳುಳ್ಳಿಯು ಪ್ರಭಲ ಶಿಲೀಂದ್ರ ನಾಶಕ ಗುಣವನ್ನು ಹೊಂದಿರುವುದರಿಂದ ರಿಂಗ್ ವರ್ಮ್ (ಹುಳಕಡ್ಡಿ) ನಿವಾರಣೆಯನ್ನು ಮಾಡುತ್ತದೆ. ಎರಡು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಫೆಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಅಥವಾ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಹುಳಕಡ್ಡಿ ಇರುವ ಜಾಗಕ್ಕೆ ಚೆನ್ನಾಗಿ ಹಚ್ಚುವುದರಿಂದ ಉತ್ತಮ ಪರಿಣಾಮ ಸಿಗುತ್ತದೆ.

ಇದನ್ನೂ ಓದಿರಿ: ಜೀವನದುದ್ದಕ್ಕೂ ಆರೋಗ್ಯವಾಗಿರಲು 30 ವರ್ಷಗಳ ನಂತರ ಮಹಿಳೆಯರು ಈ 6 ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳಿ

ಕೊಬ್ಬರಿ ಎಣ್ಣೆ

ಸಾಮಾನ್ಯವಾಗಿ ನಮ್ಮ ಹಿಂದಿನವರು ಪ್ರತಿದಿನ ಶುದ್ದ ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಂಡು ಯಾವುದೇ ಚರ್ಮ ರೋಗಗಲಿಲ್ಲದೆ ಆರೋಗ್ಯವಾಗಿರುತ್ತಿದ್ದರು. ಆದರೆ ಇಂದು ತೆಂಗಿನೆಣ್ಣೆಯ ಮಹತ್ವವನ್ನು ನಾವೆಲ್ಲಾ ತಿಳಿಯದೆ ಯಾವ ಯಾವುದೋ ಕ್ರೀಮ್ ಗಳನ್ನು ಹಚ್ಚಿಕೊಳ್ಳುತ್ತಾ ಅದರಲ್ಲಿ ನಮ್ಮ ಆರೋಗ್ಯವನ್ನು ಬಯಸುತ್ತೇವೆ. ತೆಂಗಿನೆಣ್ಣೆ ನೈಸರ್ಗಿಕವಾಗಿ ನಮಗೆ ದೊರೆತಿರುವ ಶಿಲೀಂದ್ರ ನಿವಾರಕವಾಗಿದೆ. ಇದನ್ನು ಹುಳಕಡ್ಡಿ/ರಿಂಗ್‌ವರ್ಮ್ ಆಗಿರುವ ಜಾಗಕ್ಕೆ ದಿನಕ್ಕೆರಡು ಬಾರಿ ಹಚ್ಚುತ್ತ ಬಂದರೆ ಸೋಂಕು ನಿವಾರಣೆಯಾಗುತ್ತದೆ.

ಅರಿಶಿನ

home-remedies-get-rid-ringworms

 

ಅರಿಶಿನ ಶಿಲೀಂದ್ರ ನಾಶಕ ಗುಣವನ್ನು ಹೊಂದಿದ್ದು, ಇದರ ಸರಿಯಾದ ಬಳಕೆಯಿಂದ ಶಿಲೀಂದ್ರ ಸಂಬಂಧಿತ ರೋಗಗಳು ಶೀಘ್ರದಲ್ಲಿ ನಿವಾರಣೆಯಾಗುತ್ತದೆ. ಅರಿಶಿನವನ್ನು ನೀರು ಅಥಾವಾ ತೆಂಗಿನೆಣ್ಣೆಯ ಜೊತೆಗೆ ಸೇರಿಸಿ ದಪ್ಪಗಿನ ಫೆಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ. ಇದನ್ನು ದಿನಕ್ಕೆ ಎರಡು ಬಾರಿಯಂತೆ ಹಚ್ಚುವುದರಿಂದ ರಿಂಗ್ ವರ್ಮ್ ನಿವಾರಣೆಯಾಗುತ್ತದೆ.

ತುಳಸಿ

ತುಳಸಿಗೆ ನಾವೆಲ್ಲರೂ ಪೂಜನೀಯ ಸ್ಥಾನವನ್ನು ನೀಡಿದ್ದೇವೆ. ಅಂತೆಯೇ ಅದರಲ್ಲಿರುವ ಔಷಧೀಯ ಗುಣಗಳು ಹೇಳಲಸಾಧ್ಯ. ತುಳಸಿಯ ಎಲೆಗಳನ್ನು ತೆಗೆದುಕೊಂಡು, ಅದರ ರಸವನ್ನು ತೆಗೆದು, ಹುಳಕಡ್ಡಿ ಇರುವಲ್ಲಿ ಹಚ್ಚಿಕೊಳ್ಳುವುದರಿಂದ ಶಿಲೀಂದ್ರಗಳು ನಾಶವಾಗಿ ಬೇಗನೆ ರೋಗ ನಿವಾರಣೆಯಾಗುತ್ತದೆ. ತುಳಸಿಯ ಅನೇಕ ಆರೋಗ್ಯಗಕರ ಲಾಭಗಳ ಕುರಿತಾಗಿ ತಿಳಿಯಲು ಈ ಲೇಖನವನ್ನು ಓದಿರಿ ತುಳಸಿ ಎಲೆಗಳಿಂದಾಗುವ ಪ್ರಯೋಜನ ಗೊತ್ತಾದ್ರೆ ದಂಗಾಗಿ ಬಿಡ್ತಿರಾ..!

ಆಲೋವೆರಾ

home-remedies-get-rid-ringworms

ಆಲೋವೆರಾ ಹಲಾವರು ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಸ್ಯವಾಗಿದೆ. ಇದರ ರಸವನ್ನು ಚರ್ಮದ ಸಮಸ್ಯೆಯಾಗಿರುವ ಪ್ರದೇಶದಲ್ಲಿ ಹಚ್ಚುವುದರಿಂದ ಶಿಲೀಂದ್ರಗಳ ನಿವಾರಣೆಯಾಗುತ್ತದೆ. ಆಲೋವೆರಾದ ರಸವನ್ನು ತೆಗೆದು ಅದನ್ನು ರಿಂಗ್‌ವರ್ಮ್ ಇರುವ ಜಾಗಕ್ಕೆ ಚೆನ್ನಾಗಿ ಹಚ್ಚಬೇಕು. ಸುಮಾರು ಒಂದು ಗಂಟೆಗಳ ಕಾಲ ಬಿಟ್ಟು ನಂತರದಲ್ಲಿ ತೊಳೆದುಕೊಂಡರೆ ಶಿಲೀಂದ್ರ ರೋಗದಿಂದ ಬಹುಬೇಗ ನಿವಾರಣೆ ದೊರೆಯುತ್ತದೆ.

ಹುಳಕಡ್ಡಿ/ರಿಂಗ್‌ವರ್ಮ್ ನ್ನು ನಿವಾರಿಸಿಕೊಳ್ಳಲು ಈ ರೀತಿಯಾದ ಅನೇಕ ನೈಸರ್ಗಿಕ ಪರಿಹಾರಗಳು ನಮ್ಮ ಮುಂದಿವೆ.. ಇವುಗಳನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಇವುಗಳಲ್ಲಿ ಶ್ರದ್ಧೆಯನ್ನು ಇಟ್ಟು ಔಷಧವನ್ನು ಮಾಡುವುದರಿಂದ ಗುಣಮುಖರಾಗಲು ಸಹಾಯವಾಗುತ್ತದೆ. ಈ ಲೇಖನ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ.. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುವ.. ವಾರ್ತಾವಾಣಿ..!

LEAVE A REPLY

Please enter your comment!
Please enter your name here