ಜೀವನದುದ್ದಕ್ಕೂ ಆರೋಗ್ಯವಾಗಿರಲು 30 ವರ್ಷಗಳ ನಂತರ ಮಹಿಳೆಯರು ಈ 6 ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳಿ

follow-these-6-steps-to-help-women-stay-healthy-after-30-years

ಮಹಿಳೆಯರಲ್ಲಿ 30 ವರ್ಷ ವಯಸ್ಸಿನ ನಂತರ ಜವಾಬ್ದಾರಿಗಳು ಹೆಚ್ಚುತ್ತ ಸಾಗುತ್ತವೆ. ಈ ವಯಸ್ಸಿನಲ್ಲಿ, ನೀವು ಮದುವೆ, ಮಕ್ಕಳು, ಕುಟುಂಬ, ಕೆಲಸ ಮತ್ತು ಹೆಚ್ಚಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಬೇಕಾಗಿರುತ್ತದೆ ಅಥವಾ 30 ವರ್ಷದ ನಂತರ ಮಹಿಳೆಯರು ಸಂಪೂರ್ಣವಾಗಿ ಮನೆಯ ಕಾರ್ಯಗಳಲ್ಲಿ ಬಿಡುವಿಲ್ಲದೆ ಮಗ್ನರಾಗಿರುತ್ತಾರೆ. ಇದು ನಿಮ್ಮ ಇಡೀ ಜೀವನದ ಅತ್ಯಂತ ಬಿಡುವಿಲ್ಲದ ಸಮಯವೂ ಆಗಿರುತ್ತದೆ. ಆದ್ದರಿಂದ, ಈ ವಯಸ್ಸಿನಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಇದರಿಂದ ನಿಮ್ಮ ಮುಂದಿನ ಇಡೀ ಜೀವನವನ್ನು ಸರಿಯಾಗಿ ಮತ್ತು ಆರೋಗ್ಯಯುತವಾಗಿ ಸಾಗಬಹುದಾಗಿರುತ್ತದೆ. ಆದರೆ ನೀವು ನಿಮ್ಮ ಜೀವನವನ್ನು ಹೇಗೆ ಆರೋಗ್ಯಯುತವಾಗಿ ಮಾಡಬಹುದು? 30 ವರ್ಷದ ನಂತರ ಸದೃಡವಾಗಿರಲು ನೀವು ಏನು ಮಾಡಬೇಕು?  ಈ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಹೇಳುವ ಪ್ರಯತ್ನವನ್ನು ಮಾಡಲಿದ್ದೇವೆ.

ಆರೋಗ್ಯ ಕೆಡಿಸುವ ಆಹಾರಗಳನ್ನು ತ್ಯಜಿಸಿ

ಸಾಮಾನ್ಯವಾಗಿ ಇಲ್ಲಸಲ್ಲದ ಆಹಾರಗಳನ್ನು ಸೇವಿಸುತ್ತ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಇದರಿಂದ ದೇಹದ ತೂಕವು ಹೆಚ್ಚಾಗಿ ಸಮಸ್ಯೆಗಳು ಕಂಡುಬರುತ್ತವೆ. ಇಂತಹ ಆಹಾರವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಎಲ್ಲ ಸಮಸ್ಯೆಗಳ ಮೂಲ ಆಹಾರವೇ ಆಗಿದೆ. ಆದ್ದರಿಂದ ಫಾಸ್ಟ್ ಪುಡ್ ಗಳನ್ನು, ಅತಿಯಾದ ಮಸಾಲೆ ಬಳಸಿರುವ ಆಹಾರಗಳನ್ನು ಮತ್ತು ಎಣ್ಣೆಯ ಪದಾರ್ಥಗಳನ್ನು ತ್ಯಜಿಸುವುದು ಉತ್ತಮವಾಗಿದೆ. ನಮ್ಮ ದಿನಚರಿಯಲ್ಲಿ ವಿಶೇಷವಾಗಿ ವ್ಯಾಯಾಮವನ್ನು ಸೇರಿಸಿಕೊಳ್ಳುವುದು ಅವಶ್ಯವಾಗಿದೆ.

ಪ್ರತಿದಿನ ವ್ಯಾಯಾಮವನ್ನು ಮಾಡಿ

follow-these-6-steps-to-help-women-stay-healthy-after-30-years
Image Credit: google.com

ಪ್ರತಿದಿನ ಹೆಣ್ಣು ಅಥವಾ ಗಂಡೆ ಇರಲಿ ಪ್ರತಿಯೊಬ್ಬ ವ್ಯಕ್ತಿಯು 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು, ಅಥವಾ ವಾರದಲ್ಲಿ 3 ರಿಂದ 5 ದಿನ ವ್ಯಾಯಾಮ ಮಾಡಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಇದಕ್ಕಾಗಿ, ನೀವು ವಾಕಿಂಗ್, ಸೈಕ್ಲಿಂಗ್ ಗಳಂತಹ ವ್ಯಾಯಾಮಗಳನ್ನು ಮಾಡಬಹುದು ಅಥವಾ ನೀವು ಯೋಗ, ದೇಹ ದಾಡ್ಯ ಅಥವಾ ಜಿಮ್‌ಗೆ ಸಹ ಹೋಗಬಹುದು. ದೇಹದ ಎಲ್ಲಾ ಎಂಟು ಪ್ರಮುಖ ಸ್ನಾಯು ಗುಂಪುಗಳಿಗೆ ವ್ಯಾಯಾಮ ಪ್ರತಿದಿನ ಸಿಗುವುದು ಮುಖ್ಯವಾಗಿದೆ. ಏರೋಬಿಕ್ ವ್ಯಾಯಾಮವು ಹೃದಯದ ಆರೋಗ್ಯವನ್ನು ಗರಿಷ್ಠ ಮಟ್ಟದಲ್ಲಿರಿಸಲು ಸಹಾಯ ಮಾಡುತ್ತದೆ. ಇದರಿಂದ ತೂಕ ಕಡಿಮೆಯಾಗುವುದಲ್ಲದೆ ಸ್ನಾಯುಗಳನ್ನು ಬಲಪಡಿಸುತ್ತದೆ. ತೂಕ ಇಳಿಕೆಯ ನಂತರ ದೇಹಕ್ಕೆ ಅನೇಕ ಪ್ರಯೋಜನಗಳು ಉಂಟಾಗುತ್ತದೆ ಅಂದರೆ ರಕ್ತದ ಅಧಿಕ ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವು ಉತ್ತಮ ಸ್ಥಿತಿಯಲ್ಲಿರಲು ಸಹಾಯವಾಗುತ್ತದೆ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ವ್ಯಾಯಾಮ ಅಗತ್ಯ. ಆದ್ದರಿಂದ ನಿಯಮಿತವಾಗಿ ವ್ಯಾಯಾಮ ಮಾಡುವುದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅತ್ಯುತ್ತಮ ಮಾರ್ಗವಾಗಿದೆ.

ಸಾಕಷ್ಟು ನಿದ್ರೆ ಮಾಡಿರಿ

ಈ ವಯಸ್ಸಿನಲ್ಲಿ ನೀವು ಯಾವಾಗಲೂ ಕಾರ್ಯನಿರತರಾಗಿರುವುದರಿಂದ ನಿದ್ರೆಯಿಂದ ವಂಚಿತರಾಗಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಸಂಪೂರ್ಣ ನಿದ್ರೆ ಬಹಳ ಮುಖ್ಯ. ಕಡಿಮೆ ನಿದ್ರೆ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ವಯಸ್ಕರಿಗೆ 7-8 ಗಂಟೆಗಳ ನಿದ್ರೆ ಅವಶ್ಯವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ದೈಹಿಕವಾಗಿ ಅಥವಾ ಮಾನಸಿಕವಾಗಿ ಆರೋಗ್ಯವಾಗಿರಲು ಸಾಕಷ್ಟು ನಿದ್ರೆ ಮಾಡಬೇಕು.

ಆರೋಗ್ಯಕರ ಆಹಾರವನ್ನು ಅಭ್ಯಾಸ ಮಾಡಿ 

follow-these-6-steps-to-help-women-stay-healthy-after-30-years
Image Credit: google.com

ಹೆಚ್ಚಿನ ಮಹಿಳೆಯರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ ಆದರೆ 30 ವರ್ಷ ವಯಸ್ಸು ಆರೋಗ್ಯಕರ ಆಹಾರವನ್ನು ಪ್ರಾರಂಭಿಸಲು ಉತ್ತಮ ಸಮಯ, ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ನಮ್ಮ ಮನೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿರುತ್ತಾರೆ ಮತ್ತು ಏನು ಬೇಯಿಸಬೇಕು ಅಥವಾ ಯಾವುದನ್ನು ಖರೀದಿಸಬೇಕು ಎಂದು ನಿರ್ಧರಿಸುತ್ತಾರೆ. ಸಿಹಿ ಪಾನೀಯಗಳು, ಸಕ್ಕರೆ ಬಳಸಿದ ತಿಂಡಿಗಳು, ಕಡಿಮೆ ಸತ್ವದ ಅಕ್ಕಿ, ಬಿಳಿ ಅಥವಾ ಸಂಸ್ಕರಿಸಿದ ಹಿಟ್ಟು ಇವುಗಳ ಬದಲಾಗಿ ಹೆಚ್ಚು ಧಾನ್ಯಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಬೀಜಗಳು ಮುಂತಾದಆರೋಗ್ಯಯುತ ಆಹಾರಗಳಿಗೆ ಬಲಾಗುವುದು ಉತ್ತಮ. ಆರೋಗ್ಯಕರ ಎಣ್ಣೆಯನ್ನು ಬಳಸುವ ಮೂಲಕ ನಿಮ್ಮ ಆಹಾರದಲ್ಲಿ ಉತ್ತಮ ಬದಲಾವಣೆಗಳನ್ನು ಮಾಡಬಹುದು. ಯಾವಯಾವುದೋ ಎಣ್ಣೆಗಳನ್ನು ಬಳಸುವ ಬದಲು ಸೋಯಾಬೀನ್, ಆಲಿವ್ ಅಥವಾ ಕಡಲೆಕಾಯಿ ಎಣ್ಣೆ ಇತ್ಯಾದಿಗಳನ್ನು ತೆಗೆದುಕೊಳ್ಳುವುದು ಉತ್ತಮ. ಕಡಿಮೆ ಪ್ರಮಾಣದಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ತಿನ್ನುವುದು ಉತ್ತಮವಾಗಿದೆ.

ಆರೋಗ್ಯ ಸಂಭಂದಿಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ

ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಅನೇಕ ರೋಗಗಳು ಪ್ರಾರಂಭವಾಗುವ ಸಂಭವವಿರುತ್ತದೆ. ದೇಹದಲ್ಲಿನ ಕಬ್ಬಿಣದ, ವಿಟಮಿನ್ ಬಿ 12 ಅಥವಾ ವಿಟಮಿನ್ ಡಿ ಕೊರತೆಯು ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಪೂರ್ವ-ಮಧುಮೇಹ, ಮತ್ತು ಕೊಲೆಸ್ಟ್ರಾಲ್ ನಂತಹ ವಿವಿಧ ರೋಗಗಳ ಆಕ್ರಮಣಕ್ಕೆ ಕಾರಣವಾಗಬಹುದು. ಅಂತೆಯೇ, ಹೆಚ್ಚಿನ ಅಪಾಯಕಾರಿ ಲೈಂಗಿಕ ನಡವಳಿಕೆಯನ್ನು ಹೊಂದಿರುವ ಜನರು, ಬಹು ಪಾಲುದಾರರು ಅಥವಾ ಸಲಿಂಗ ಸಂಬಂಧಗಳನ್ನು ಹೊಂದಿರುವವರು, ಎಚ್‌ಐವಿ, ಹೆಪಟೈಟಿಸ್ ಬಿ ಯಂತಹ ರೋಗದ ಲಕ್ಷಣಗಳಿಗಾಗಿ ಪರೀಕ್ಷಿಸಿಕೊಳ್ಳಬೇಕು. ಈ ಪರಿಸ್ಥಿತಿಗಳನ್ನು ಸಮಯೋಚಿತವಾಗಿ ಪತ್ತೆಹಚ್ಚುವುದು ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿರಿ: ನೀವು ಈ ಆಹಾರ ಪದ್ಧತಿ ಅನುಸರಿಸಿದರೆ ರಾತ್ರಿ ಒಳ್ಳೆಯ ನಿದ್ರೆ ಮಾಡಬಹುದು ನೋಡಿ..!

ತೂಕ ನಿಯಂತ್ರಣದಲ್ಲಿಡುವುದು ಮುಖ್ಯವಾಗಿದೆ

ಅನೇಕ ಕಾರಣಗಳಿಗಾಗಿ ಮಹಿಳೆಯರು 30ವರ್ಷಗಳ ನಂತರ ಅಥವಾ ಮದುವೆಯ ನಂತರ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅತಿಯಾಗಿ ತಿನ್ನುವುದು, ಜೀವನಶೈಲಿಯಲ್ಲಿನ ಬದಲಾವಣೆ, ದೈಹಿಕ ಕೆಲಸದ ಕೊರತೆ ಇವೆಲ್ಲವೂ ತೂಕ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ. ಆದ್ದರಿಂದ, ನಿಮ್ಮ ತೂಕದ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ. ಡಬ್ಲೂ.ಹೆಚ್.ಓ.ನ ಮಾನದಂಡದ ಪ್ರಕಾರ, ವಯಸ್ಕರ ಸರಾಸರಿ BMI (Body Mass Index) ನಂತೆ 18.5 ರಿಂದ 24.9 ಆಗಿರಬೇಕು. ಈ ಅನುಪಾತಕ್ಕೆ ಅನುಗುಣವಾಗಿ ನಿಮ್ಮ ತೂಕ ಕಡಿಮೆಯಾದರೆ ಮತ್ತು ಹೆಚ್ಚಾದರೆ ನೀವು ಅಸುರಕ್ಷಿತ ವಲಯದಲ್ಲಿರುತ್ತೀರಿ. ಆದ್ದರಿಂದ, ನೀವು ಸಕ್ಕರೆಯ ನಿಯಂತ್ರಣ, ರಕ್ತದೊತ್ತಡ ನಿಯಂತ್ರಣ ಮತ್ತು ಬೊಜ್ಜಿನ ನಿಯಂತ್ರಣದಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು.

“ಆರೋಗ್ಯವು ಸಂಪತ್ತು” ಎಂದು ಯಾರೋ ಸರಿಯಾಗಿ ಹೇಳಿದ್ದಾರೆ. ನಿಮ್ಮ 30 ರ ದಶಕದಲ್ಲಿ ನೀವು ನಿಮ್ಮ ಸ್ವಲ್ಪ ಸಮಯವನ್ನು ಆರೋಗ್ಯದ ಕಡೆಗೆ ನೀಡಿದರೆ ಮುಂದಿನ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಹೊಂದಿ ಸುಖಮಯ ಜೀವನ ಸಾಗಿಸಬಹುದು.

ಇದನ್ನೂ ಓದಿರಿ: ಊಟದ ನಂತರ ತಾಂಬೂಲ ಸೇವನೆಯು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾ.?. ಕೆಟ್ಟದಾ..? ತಿಳಿಯಲು ಓದಿ

LEAVE A REPLY

Please enter your comment!
Please enter your name here