ಈಗ ಎಲ್ಲೆಂದರಲ್ಲಿ ಕೊರೊನಾ ವೈರಸ್ ನದ್ದೇ ಸುದ್ದಿ… ಇದು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಇದುವರೆಗೆ ಯಾವುದೇ ನಿಖರವಾದ ಔಷಧಗಳಿಲ್ಲ. ಆದರೆ ನಮ್ಮ ಪುರಾತನ ಆಯುರ್ವೇಧ ಪದ್ದತಿಯಲ್ಲಿ ವೈರಸ್ ಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಲವಾರು ವಿಧಾನಗಳನ್ನು ತಿಳಿಸಿದ್ದಾರೆ. ಇವುಗಳಿಂದ ಕೊವಿಡ್-19 ವೈರಸ್ ನಿಯಂತ್ರಿಸುವ ಅವಕಾಶಗಳಿವೆಯೇ ಎನ್ನುವುದನ್ನು ಇನ್ನು ಮೇಲಷ್ಟೆ ಪ್ರಯೋಗಗಳು ನಡೆದು ತಿಳಿಯಬೇಕಿದೆ. ಆದರೆ ಈ ವೈರಸ್ ವಿರುದ್ದ ಹೋರಾಡಲು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಪ್ರಭಲವಾಗಿರುವುದು ಅತ್ಯವಶ್ಯವಾಗಿದೆ. ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೆಧದಲ್ಲಿ ತಿಳಿಸಲಾಗಿರುವ ಕ್ರಮಗಳನ್ನು ನಮ್ಮ ಆಯುಷ್ ಇಲಾಖೆಯು ತಿಳಿಸಿದ್ದು, ಆ ವಿಧಾನಗಳು ಯಾವವು ಎನ್ನುವುದನ್ನು ನಿಮ್ಮೆಲ್ಲರಿಗೆ ತಿಳಿಸುವ ಉದ್ಧೆಶವನ್ನು ಇಟ್ಟುಕೊಂಡು ನಾವಿಂದು ನಿಮ್ಮ ಮುಂದೆ ಈ ಲೇಖನ ತರುತ್ತಿದ್ದೇವೆ.
ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅದ್ಭುತ ಆಹಾರಗಳು
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುಷ್ ಇಲಾಖೆಯು ಹಲವಾರು ಸಲಹೆಗಳನ್ನು ನೀಡಿದ್ದು, ಅವುಗಳಲ್ಲಿ ಮೊದಲನೆಯದು ಈ ರೀತಿಯಾಗಿ ಇದೆ.
- ಪ್ರತಿದಿನ ಬೆಳಗ್ಗೆ ಕನಿಷ್ಠ ಅರ್ಧ ಗಂಟೆಗಳಷ್ಟಾದರೂ ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ.
- ಕುಡಿಯಲು ಬಿಸಿನೀರನ್ನೇ ಬಳಸುವುದು ಉತ್ತಮ.
- ಅಡುಗೆಗೆ ಬೆಳ್ಳುಳ್ಳಿ, ಅರಿಶಿನ, ಜೀರಿಗೆ, ಲವಂಗ, ಹವೀಜ,ಕಾಳುಮೆಣಸು ಚೆನ್ನಾಗಿ ಬಳಸಿ.
- ಬೆಳಿಗ್ಗೆ ಒಂದು ಚಮಚ ಚವನ್ ಪ್ರಾಶ್ ಸೇವಿಸುವುದು ಉತ್ತಮ.
ಇದನ್ನೂ ಓದಿರಿ: ಸ್ಯಾನಿಟೈಸರ್ ಬಳಕೆ ಹೇಗಿರಬೇಕು? ವಿಪರೀತ ಸ್ಯಾನಿಟೈಸರ್ ಬಳಸುತ್ತಿದ್ದೀರೆ ಎಚ್ಚರ..!
ಈ ಸಲಹೆಗಳು ನಮ್ಮ ಈ ಲಾಕ್ ಡೌನ್ ಸಮಯದಲ್ಲಿ ನಿರ್ವಹಿಸಲು ಯೂಗ್ಯವಾಗಿದ್ದು, ಸಮಯ ಕಳೆಯುವ ಜೊತೆಗೆ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಲು ಸಹಾಕಾರಿಯಾಗುತ್ತದೆ. ಕೇವಲ ಇವಷ್ಟೇ ಅಲ್ಲದೆ ಇನ್ನೂ ಕೆಲವು ಸಲಹೆಗಳಿವೆ ಅವುಗಳನ್ನು ನೋಡೋಣ..
- ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ ಹಾಕಿದ ಕಷಾಯವನ್ನು ಕುಡಿಯಿರಿ.
- ಗಿಡಮೂಲಿಕೆಗಳನ್ನು ಹಾಕಿದ ಚಹವನ್ನು ಕುಡಿಯಿರಿ. ಸಕ್ಕರೆಯ ಬದಲು ಬೆಲ್ಲವನ್ನು ಬಳಸಿರಿ.
- 150 ಮಿಲಿ ಹಾಲಿಗೆ ಅರ್ಧ ಟಿ ಸ್ಪೂನ್ ಅರಿಶಿನವನ್ನು ಹಾಕಿದ ಬಂಗಾರದ ಹಾಲನ್ನು ಕುಡಿಯಿರಿ. ಇದು ನಿಮ್ಮ ಗಂಟಲಿನ ಸಮಸ್ಯೆಗಳಿಂದ ದೂರವಿಡುತ್ತದೆ.
ಈ ಸಲಹೆಗಳು ನಿಮ್ಮನ್ನು ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಹಾಗಾಗಿ ನೀವು ಕಂಡಿತವಾಗಿ ಈ ಸಲಹೆಗಳನ್ನು ಪಾಲಿಸಬಹುದು. ಅಲ್ಲದೇ ಇಂಗ್ಲಿಷ್ ಮೆಡಿಸಿನ್ ಗಳಂತೆ ಯಾವುದೇ ಹಾನಿಯೂ ಇದರಿಂದ ಉಂಟಾಗುವುದಿಲ್ಲ.
- ದಿನಕ್ಕೆರಡು ಬಾರಿ ಮೂಗಿನ ಹೊಳ್ಳೆಗಳಿಗೆ ತುಪ್ಪ, ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ.
- ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಒಂದು ಟೀ ಸ್ಪೂನಿನಷ್ಟು ತೆಗೆದುಕೊಂಡು ಬಾಯಿಗೆ ಹಾಕಿ ಹಾಗೆಯೇ ಎರಡು ನಿಮಿಷ ಬಾಯಿಗೆ ಚೆನ್ನಾಗಿ ಎಲ್ಲೆಡೆ ತಾಗುವಂತೆ ಮಾಡಿ ನಂತರ ಬಿಸಿ ನೀರನ್ನು ಬಳಸಿ ಮುಕ್ಕಳಿಸಿ ಉಗಿಯಿರಿ. ಈ ರೀತಿ ದಿನಕ್ಕೆರಡು ಬಾರಿ ಮಾಡಬಹುದು.
ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?
ಈ ಸಲಹೆಗಳು ವಿಶೇಷವಾಗಿದ್ದು, ಆಯುರ್ವೆಧದ ಪ್ರಮುಖ ಚಿಕಿತ್ಸೆಗಳಲ್ಲಿನ ಸಲಹೆಯಾಗಿದೆ. ಇದು ಪ್ರತಿಮಾರ್ಶ ನ್ಯಸ್ಯ ಮತ್ತು ಆಯಿಲ್ ಪುಲ್ಲಿಂಗ್ ಎಂಬ ಚಿಕಿತ್ಸೆಯಾಗಿದೆ. ಇವುಗಳ ಜೊತೆಯಲ್ಲಿ ಒಣ ಕೆಮ್ಮು ಮತ್ತು ಗಂಟಲು ಕೆರೆತದಂತಹ ಸಮಸ್ಯೆಗಳಿದ್ದರೆ ಅವುಗಳ ಪರಿಹಾರಕ್ಕಾಗಿ ಕೆಲವು ಸಲಹೆಗಳನ್ನು ನೀಡಿದೆ.
- ಒಣ ಕೆಮ್ಮು ನಿಮ್ಮನ್ನು ಕಾಡುತ್ತಿದ್ದರೆ, ಬಿಸಿ ನೀರಿಗೆ ಪುದಿನಾ ಎಳೆಗಳು ಮತ್ತು ಒಮಕಾಳನ್ನು ಹಾಕಿ ಅದರ ಹೊಗೆಯನ್ನು ತೆಗೆದುಕೊಳ್ಳಬೇಕು.
- ಲವಂಗದ ಪುಡಿ, ಬೆಲ್ಲ ಅಥವಾ ಜೇನುತುಪ್ಪವನ್ನು ಬೆರೆಸಿಕೊಂಡು ದಿನಕ್ಕೆ ಎರಡು ಬಾರಿಯಂತೆ ತೆಗೆದುಕೊಳ್ಳಿ.
ಈ ಸಲಹೆಗಳು ಸಾಮಾನ್ಯವಾಗಿ ಉಂಟಾಗುವ ಕೆಮ್ಮಿನ ಸಮಸ್ಯೆಯನ್ನು ದೂರಮಾಡಬಲ್ಲವಾಗಿದೆ. ಇವುಗಳಿಗೆ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಉತ್ತಮ. ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡುವುದು ಅಪಾಯಕ್ಕೆ ಕಾರಣವಾಗಬಹುದು.
ಈ ಸಲಹೆಗಳನ್ನು ಆಯುಷ್ ಮಂತ್ರಾಲಯ ಭಾರತೀಯ ಪ್ರಸಿದ್ಧ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋ ಪತಿ ವೈಧ್ಯಕೀಯ ಶಸ್ತ್ರಗಳಿಂದ ಆಯ್ಕೆ ಮಾಡಿಕೊಂಡಿದೆ. ಇವುಗಳು ನಿಮಗೆ ರೋಗಗಳು ಬರದಂತೆ ತಡೆಗಟ್ಟಲು ಸಹಾಯಕವಾಗುತ್ತದೆ. ಅಲ್ಲದೇ ಈ ಸಲಹೆಗಳನ್ನು ತಪ್ಪದೆ ಪಾಲಿಸುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಳವಾಗುತ್ತದೆ.
ಇದನ್ನೂ ಓದಿರಿ: ಪರಿಮಳಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಬೇಕು ಈ ಕರಿಬೇವು
ಸ್ನೇಹಿತರೆ ಈ ಸಲಹೆಯನ್ನು ನಿಮ್ಮ ಆರೋಗ್ಯದ ಹಿತವನ್ನು ಕಾಯುವ ದೃಷ್ಟಿಯಿಂದ ತಿಳಿಸಲಾಗಿದೆ. ಈ ಮಾಹಿತಿಯು ನಿಮಗೆ ಉಪಯುಕ್ತವಾಗುತ್ತವೆ ಎಂದು ಭಾವಿಸುತ್ತೇವೆ. ನಮ್ಮ ಇಂತಹ ಉತ್ತಮ ಸಲಹೆಗಳನ್ನು ತಪ್ಪದೆ ಪಡೆಯಲು ನಮ್ಮ ನೋಟಿಫಿಕೇಶನ್ ಬಟನ್ ಕ್ಲಿಕ್ ಮಾಡಿಕೊಳ್ಳಿ ಮತ್ತು ಇತರರಿಗೆ ಸಹಾಯವಾಗಲು ಶೇರ್ ಮಾಡುವುದನ್ನು ಮರೆಯಬೇಡಿ.