ಗೋಡಂಬಿ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನಿಮಗೆ ಗೊತ್ತೇ ?

benefits-of-cashew-nuts

ಗೋಡಂಬಿ ಒಂದು ಅತ್ಯುತ್ತಮ ಒಣ ಫಲವಾಗಿದೆ. ಇದರಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಗುಣಗಳು ಹೇರಳವಾಗಿಯೇ ತುಂಬಿವೆ. ಸಾಮಾನ್ಯವಾಗಿ ನಮ್ಮಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಲವು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ. ಇದು ಸಾಮಾನ್ಯರಿಗೂ ಕೈಗೆಟಕುವ ಬೆಲೆಯನ್ನು ಹೊಂದಿದ್ದು, ಇದರ ಆರೋಗ್ಯಕರ ಗುಣಗಳನ್ನು ತಿಳಿದವರು ನಿತ್ಯ ಸೇವಿಸುತ್ತಾರೆ. ಇದಲ್ಲದೇ ವಿಶೇಷ ಕಾರ್ಯಕ್ರಮಗಳಲ್ಲಿ ಒಣಹಣ್ಣುಗಳ ಚಿಕ್ಕ ಪೊಟ್ಟಣಗಳನ್ನು ನೀಡಲಾಗುತ್ತದೆ. ಇದರ ಆರೋಗ್ಯಕಾರಿ ಗುಣಗಳಿಂದಾಗಿಯೇ ವಿಶೇಷ ಉಡುಗೊರೆಗಳ ಪೊಟ್ಟಣದಲ್ಲಿ ಗೋಡಂಬಿ ಸ್ಥಾನಪದೆದಿದೆ. 

ಗೋಡಂಬಿಯಲ್ಲಿ ಹೇರಳವಾದ ಕೊಬ್ಬಿನಂಶ, ಪ್ರೋಟೀನ್, ವಿಟಮಿನ್-ಇ, ಸೋಡಿಯಂ, ಮೆಗ್ನೆಶಿಯಂ, ಪೊಟ್ಯಾಷಿಯಂ, ಪೋಷಕ ಸತ್ವಗಳು ಅಡಕವಾಗಿವೆ. ಇದರಿಂದಾಗಿ ಹೃದಯ ಆರೋಗ್ಯ, ಗಟ್ಟಿಮುಟ್ಟಾದ ಎಲುಬು, ಬಲವಾದ ನರಮಂಡಲ ಮತ್ತು ಕ್ಯಾನ್ಸರ್ ನಂತಹ ರೋಗಗಳಿಂದ ನಮಗೆ ರಕ್ಷಣೆಯನ್ನು ದೊರೆಯುತ್ತದೆ. ಇಂತಹ ವಿಶೇಷ ಆರೋಗ್ಯ ಪ್ರಯೋಜನಗಳನ್ನು ನೀಡುವ ಶಕ್ತಿಯನ್ನು ಹೊಂದಿರುವ ಗೋಡಂಬಿಯ ಶಕ್ತಿಯ ಕುರಿತಾಗಿ ತಿಳಿಯೋಣ….

ಹೃದಯದ ಆರೋಗ್ಯ

ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾನೇ ಸಹಾಯಕಾರಿ. ಇದರಲ್ಲಿರುವ ಪೈಟೋಸ್ಟೆರಾಲ್, ಫಿನಲಿಕ್ ಸಂಯುಕ್ತಗಳು ಮತ್ತು  ಒಲಿಕ್ ಆಮ್ಲಗಳು ಹೃದಯ ಕಾಯಿಲೆಗಳ ತಡೆಗಟ್ಟಲು ಬಹಳ ಸಹಾಯಕವಾಗಲಿವೆ. ಗೋಡಂಬಿಯಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬು ಅಡಕವಾಗಿದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶಗಳನ್ನು ಕಡಿಮೆ ಮಾಡಿ ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಇದರ ಸೇವನೆಯಿಂದಾಗಿ ಹೃದಯದ ಸ್ನಾಯುಗಳು ಬಲಗೊಳ್ಳುತ್ತದೆ. ಪ್ರತಿದಿನ 3-4 ಗೋಡಂಬಿ ಸೇವನೆ ಉತ್ತಮ ಆರೋಗ್ಯಕ್ಕೆ ಅಡಿಪಾಯ.

benefits-of-cashew-nuts

ಇದನ್ನೂ ಓದಿರಿ: ಒಣ ದ್ರಾಕ್ಷಿಯ ಸೇವನೆಯಿಂದ ದೊರೆಯುತ್ತದೆ ಅಧ್ಬುತವಾದ ಆರೋಗ್ಯ ಪ್ರಯೋಜನಗಳು…!

ಮೂಳೆ ಆರೋಗ್ಯ

ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೆಶಿಯಂ ಅಂಶವು ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಇದರ ನಿಯಮಿತ ಸೇವನೆಯಿಂದ ಮೂಲೆಗಳ ಹಲವು ಕಾಯಿಲೆಗಳು ದೂರವಾಗುತ್ತವೆ. ದೇಹಕ್ಕೆ ಅಗತ್ಯವಿರುವ ಮೆಗ್ನೆಶಿಯಂ, ಪೊಟ್ಯಾಷಿಯಂ ಒದಗಿಸಿ, ಗಟ್ಟಿಮುಟ್ಟಾದ ಎಲುಬಿನ ಬೆಳವಣಿಗೆಗೆ ಸಹಕಾರಿಯಾಗಿದೆ. 

ನರಗಳ ಶಕ್ತಿ ವರ್ಧಕ

ನರಗಳಲ್ಲಿ ಕ್ಯಾಲ್ಸಿಯಂನ ಅಧಿಕ ಪ್ರಮಾಣದಲ್ಲಿ ಹರಿವನ್ನು ತಡೆಹಿಡಿದು, ಅಗತ್ಯವಿರುವಷ್ಟನ್ನು ಪೂರೈಕೆ ಮಾಡಲು ಸಹಾಯಕವಾಗುತ್ತದೆ. ಇದರಲ್ಲಿರುವ ಮೆಗ್ನೆಶಿಯಂನಿಂದಾಗಿ ದೇಹದ ನರಗಳು ಸುಸ್ಥಿತಿಯಲ್ಲಿರುತ್ತವೆ. ಅಲ್ಲದೆ ಇದರ ನಿಯಮಿತವಾದ ಸೇವನೆಯಿಂದ ಮೆದುಳಿನ ನರಗಳು ಶಕ್ತಿಯುತವಾಗಿ ಕೆಲಸ ನಿರ್ವಹಿಸುವಂತಾಗುತ್ತವೆ.

ಇದನ್ನೂ ಓದಿರಿ: ಕರಬೂಜ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತವೆ ತಿಳಿಯಿರಿ

ಕ್ಯಾನ್ಸರ್ ತಡೆಹಿಡಿಯುತ್ತವೆ

ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯು ಅಧಿಕವಾಗಿದೆ. ಇದರಿಂದಾಗಿ ಕ್ಯಾನ್ಸರ್ ನಂತಹ ಕಾಯಿಲೆಗಳು ನಿಯಂತ್ರಿಸಲ್ಪಡುತ್ತವೆ. ಇದರಲ್ಲಿರುವ ವಿಟಮಿನ್-ಇ ಅಂಶದಿಂದಾಗಿ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ಹಲವಾರು ರೋಗಗಳು ನಿಯತ್ರಿಸಲ್ಪಡುತ್ತವೆ. ಇದರಲ್ಲಿ ಕೆಲವು ವಿಶೇಷ ಆಮ್ಲಗಳಿದ್ದು, ಇವುಗಳು ಕ್ಯಾನ್ಸರ್ ತಡೆಗಟ್ಟಲು ಸಹಾಯಮಾಡುತ್ತದೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ತೂಕ ಇಳಿಕೆಗೆ ಸಹಾಯಕ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವಿದ್ದರೂ ಮಿತವಾಗಿ ಸೇವಿಸಿದಾಗ ತೂಕ ಕಡಿಮೆಯಾಗುತ್ತದೆ. 8 ವರ್ಷಗಳ ಅವಧಿಯಲ್ಲಿ 51188 ಮಹಿಳೆಯರ ಮೇಲೆ ನಡೆಸಿದ ಅಧ್ಯಯನಗಳ ಪ್ರಕಾರ ತೂಕ ಇಳಿಕೆಗೆ ಸಹಾಯಕವಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದ ನೇರವಾಗಿ ತೂಕ ಇಳಿಕೆಯಾಗುತ್ತದೆ ಎಂಬ ಕುರಿತು ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ ತೂಕ ಇಳಿಕೆಯು ಕಂಡುಬಂದಿರುವುದು ದಾಖಲಾಗಿದೆ.

ಗೋಡಂಬಿಯಲ್ಲಿರುವ ಉತ್ತಮ ಕೊಬ್ಬಿನಂಶದಿಂದಾಗಿ ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಂದ ದೂರವಿರಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ಅತಿಯಾಗಿ ತಿನ್ನುವ ಬಯಕೆಯು ದೂರವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿಯೇ ಇದರ ಮಿತವಾದ ಸೇವನೆಯಿಂದ ತೂಕ ನಷ್ಟವಾಗಿದೆ ಎನ್ನಲಾಗಿದೆ.

benefits-of-cashew-nuts

ರಕ್ತಹೀನತೆಯನ್ನು ತಡೆಯುತ್ತದೆ

ಗೋಡಂಬಿ ಬೀಜಗಳಲ್ಲಿ ಕಬ್ಬಿಣ ಮತ್ತು ತಾಮ್ರ ಎರಡೂ ಹೇರಳವಾಗಿದೆ. ಇದರಿಂದಾಗಿ ರಕ್ತದ ಉತ್ಪತ್ತಿ ಮತ್ತು ಪರಿಚಲನೆಯು ಸರಾಗವಾಗಿ ಸಾಗುತ್ತದೆ. ಕಬ್ಬಿಣದ ಕೊರತೆಯು ಪ್ರಮುಖವಾಗಿ ರಕ್ತಹೀನತೆಗೆ ಕಾರಣವಾಗಿದೆ. ನಿಮ್ಮ ದೈನಂದಿನ ಆಹಾರದ ಜೊತೆಯಲ್ಲಿ ಇದನ್ನೂ ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಬಚಾವಾಗಬಹುದು.

ಇದನ್ನೂ ಓದಿರಿ: ಪ್ರತಿದಿನ ಮೂರು ಖರ್ಜೂರ ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ಪಡೆಯಬಹುದಂತೆ !

LEAVE A REPLY

Please enter your comment!
Please enter your name here