ಮತ್ತೆ ಹಿಂದಿರುಗಬಹುದೇ ಕಾಲ… ಗುರುಕುಲಗಳ ಆರಂಭವೇ…?

ಅಸ್ತವ್ಯಸ್ತ ಜನ ಜೀವನ ಸುಧಾರಿಸಿಕೊಳ್ಳುವುದು ಸದ್ಯಕ್ಕಂತೂ ಕಷ್ಟಕರವೇ. 2020 ಎಂತವರನ್ನು ದೃತಿಗೆಡುವಂತೆ ಮಾಡಿರುವ ವರ್ಷವೇ ಸರಿ ಕೊರೋನವೆಂಬ ಭೀಕರ ಖಾಯಿಲೆಯಿಂದ ಸತ್ತವರು ಅದೆಷ್ಟೋ ಜನ ಆದರೆ ಬದುಕಿದ್ದು ಸತ್ತಂತಾಗಿರುವವರು ಇನ್ನೆಷ್ಟೊ ಜನ. ಇದರ ಮಧ್ಯೆ ಮಹಾಮಳೆಯಿಂದಾಗಿ ಮಲೆನಾಡಿನ ಜನರ ಬದುಕು ಸಂಪೂರ್ಣ ಹಾಳಾಗಿಯೇ ಹೋಗಿದೆ. ಮನೆಯಿಂದಾಚೆಯು ಬಾರದ ಪರಿಸ್ಥಿತಿ. ಕಳೆದ ವರ್ಷದ ಮಳೆಯನ್ನು ಮರೆಯುವ ಮುನ್ನವೇ ಈ ವರ್ಷಧಾರೆಯು ಹಲವಾರು ಸಾವು ನೋವುಗಳನ್ನು ತಂದೊಡ್ಡಿದೆ. ಸಾಮಾನ್ಯ ಜನರ ಜೀವನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ

ಈ ನಡುವೆಯೇ ಮಕ್ಕಳ ವಿದ್ಯಾಭ್ಯಾಸದಾ ಚಿಂತೆ ಪ್ರತಿಯೊಬ್ಬ ಪೋಷಕರನ್ನು ಚಿಂತೆಗೀಡು ಮಾಡುವಂತಗಿದೆ. ಅದರಲ್ಲಿಯು ಪ್ರಾಥಮಿಕ ಶಾಲಾ ಹಂತದ ಮಕ್ಕಳಲ್ಲಿ ಎಂದರೆ ತಪ್ಪಾಗದು ಏಕೆಂದರೆ ಈಗಷ್ಟೆ ಅಕ್ಷರಗಳನ್ನು ಕೂಡಿಸಿ ಓದುವ ಪ್ರಯತ್ನದಲ್ಲಿರುವ ಮಕ್ಕಳಲ್ಲವೇ ಹಾಗಾಗಿ (ಪ್ರೌಢಶಾಲಾ ಮಕ್ಕಳಿಗೆ ಅಲ್ಪಸ್ವಲ್ಪ ಜ್ಞಾನವಿರುತ್ತದೆ ತನ್ನ ಪಠ್ಯೇತರಗಳನ್ನು ಓದಿ ತಿಳಿಯುವ ಸಾಮಾರ್ಥ್ಯವನ್ನು ತಕ್ಕ ಮಟ್ಟಿಗೆ ಹೊಂದಿರುತ್ತಾರೆ ಜೊತೆಗೆ online ತರಗತಿಗಳಿಂದ ಸ್ವಲ್ಪ ಅನುಕೂಲವಾಗಬಹುದು) ಎಲ್ಲಾವನ್ನು ಮರೆಯುವ ವಯಸ್ಸು ಯಾವುದನ್ನಾದರು ಕ್ಷಣಮಾತ್ರದಲ್ಲಿ ಕಲಿಯುವ ವಯಸ್ಸು ಅವರದ್ದು. ಎಲ್ಲವನ್ನು ಮಕ್ಕಳು ಮರೆತರೆ ಪೋಷಕರ- ಶಿಕ್ಷಕರ- ಜೊತೆಗೆ ಮಕ್ಕಳ ಶ್ರಮವು ವ್ಯರ್ಥವೇ ಸರಿ. ನಾವುಗಳು ಚಿಕ್ಕವರಿರುವಾಗ ಓದಿರುತ್ತೆವೇ ತಾಯಿಯೇ ದೇವರು ತಂದೆಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಅಲ್ಲವೇ ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಮಾತುಗಳಾಗಿದ್ದ ಅವುಗಳು ಮತ್ತೆ ವಿಜೃಂಭಿಸುತ್ತಿವೇ. ಇಂದಿನ ಪೋಷಕರಿಗೇ ಕೆಲಸದ ಒತ್ತಡ ಜೊತೆಗೆ ಬಿಡುವಿದ್ದರು ಕೂಡ ಮಕ್ಕಳನ್ನು ಟ್ಯೂಷನ್ ಗೆ ಕಳುಹಿಸುವ ಪೋಷಕರು ಇನ್ನೊಂದೆಡೆ. ಆದರೆ ಈಗ ಎಲ್ಲಾರು ಬದಲಾಗಬೇಕಾದ ಸಮಯ ಬಿಡುವಿಲ್ಲದಿದ್ದರು ಮಕ್ಕಳಿಗೆ ಸಮಯ ಕೊಡಬೇಕಾದ ಪರಿಸ್ಥಿತಿ ಪಾಲಕರು ಗುರುಗಳಾಲೇಬೇಕಾದ ಅನಿವಾರ್ಯ ಜೊತೆಗೆ ಮನೆಯೊಂದು ಗುರುಕುಲದ ಭಾವ ಮೂಡಿಸುವ ಖುಷಿ. ಒಟ್ಟಿನಲ್ಲಿ ಜಗತ್ತು ಎಷ್ಟು ಹಿಂದುಳಿಯುತ್ತದೆಯೋ ತಿಳಿಯದು ಆದರೆ ಪಾಲಕರಿಂದ ಮಕ್ಕಳ ಭವಿಷ್ಯ ಉನ್ನತ ಮಟ್ಟಕ್ಕೇರಲಿ. ದಯವಿಟ್ಟು ಪಾಲಕರು ಮಕ್ಕಳತ್ತ ಹೆಚ್ಚಿನ ಗಮನ ಕೊಡಿ ವರ್ತಮಾನದಿಂದ ಮಕ್ಕಳ ಭವಿಷ್ಯ ಹಾಳಾಗಬಾರದು ಏಕೆಂದರೆ ನಮ್ಮ ನಿಮ್ಮೆಲ್ಲರ ಮುಂದಿನ ಭವಿಷ್ಯ ಅವರೇ ಅಲ್ಲವೇ…?

  • ಸೌಮ್ಯ ಸಾಗರ್

LEAVE A REPLY

Please enter your comment!
Please enter your name here