ಗಣೇಶ ಚತುರ್ಥಿ: ಬಂಧು-ಬಾಂಧವರಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು

ಗಣೇಶ ಚತುರ್ಥಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಂಭ್ರಮ. ಮನೆಯನ್ನು ಸಿಂಗಾರಗೊಳಿಸಿ ಸಂಭ್ರಮದ ಸಡಗರವ ಆಚರಿಸಲು ಪ್ರತಿಯೊಂದು ವಸ್ತುವೂ ಸಿದ್ದವಾದಂತೆ ಕಾಣುತ್ತವೆ. ನಮ್ಮ ದೇಶದಲ್ಲಿ ಹಬ್ಬ-ಹರಿದಿನ ಹೀಗೆ ನಡೆಯುತ್ತಲೇ ಇರುತ್ತದೆ. ಎಲ್ಲರೊಂದಿಗೆ ಸೇರಿ ಸಂಭ್ರಮಿಸುತ್ತಲೇ ಇರುತ್ತೇವೆ. ಈಗ ಗಣೇಶ ಚತುರ್ಥಿ ಬಂದಿದ್ದು, ವಿಘ್ನ ವಿನಾಶಕ, ಗಜಮುಖನನ್ನು ಭಕ್ತಿಯಿಂದ ಪೂಜಿಸುತ್ತೇವೆ.

ಗಜಮುಖನ ಮಣ್ಣಿನ ಮೂರ್ತಿಯನ್ನು ಮನೆ ಮನೆಯಲ್ಲಿ ಪ್ರತಿಷ್ಟಾಪಿಸಿ, ಆತನಿಗೆ ಭಕ್ತಿಯಿಂದ ದಾಸವಾಳ, ಎಕ್ಕದ ಹೂವು, ಗರಿಕೆಗಳಿಂದ ಪೂಜಿಸುತ್ತೇವೆ. ಆತನಿಗೆ ಮೊದಕವೆಂದರೆ ಪಂಚಪ್ರಾಣ. ಮೋದಕವನ್ನು ನೈವೇದ್ಯ ಮಾಡುವುದರಿಂದ ನಮ್ಮೆಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ ಎಂಬ ಪ್ರತೀತಿ ಇದೆ. ಹೀಗೆ ಭಕ್ತಿ ಭಾವದಿಂದ ಪೂಜಿಸುವ ಗಣಪನನ್ನು ಮೂರೂ ಅಥವಾ ಏಳು ದಿನಗಳಿಗೆ ಮೆರವಣಿಗೆಯಲ್ಲಿ ಸಾಗಿ ಊರ ಕೆರಯಲ್ಲಿ ಮುಳುಗಿಸಿ ಬರುತ್ತೇವೆ.

ಇಂತಹ ಭಕ್ತಿ ಪ್ರಧಾನವಾದ ನಮ್ಮ ದೇಶದಲ್ಲಿ ಹಬ್ಬಗಳ ಸಮಯದಲ್ಲಿ ಶುಭಾಶಯ ವಿನಿಮಯಕ್ಕೂ ಒಂದು ವಿಶೇಷ ಸ್ಥಾನಮಾನವಿದೆ. ಅಂತಹ ಕೆಲವು ಶುಭಾಶಯ ಪತ್ರಗಳನ್ನು ನಿಮಗೆ ಇಲ್ಲಿ ನೀಡಿದ್ದೇವೆ..   

ಶುಭಾಶಯ 1:
ಗಜವಕ್ತ್ರಂ ಸುರ ಶ್ರೇಷ್ಟಂ
ಕರ್ಣ ಚಾಮರ ಭೂಷಿತಾಂ |
ಪಾಶಾಂಕುಶ ಧರಂ ದೇವಂ
ವಂದೆಹಂ ಗಣನಾಯಕಂ ||
ಗಣೇಶ ಚತುರ್ಥಿಯ ಈ ಸಮಯದಲ್ಲಿ ಗಣೇಶ ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಶುಭವನ್ನು ಉಂಟುಮಾಡಲಿ. ಗಣೇಶ ಚತುರ್ಥಿಯ ಶುಭಾಶಯಗಳು.

ಶುಭಾಶಯ 2:
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ |
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ ||
ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.

ಶುಭಾಶಯ 3:
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಬದುಕಿನ ಕಷ್ಟಗಳೆಲ್ಲ ದೂರವಾಗಲಿ. ದೇವರ ಆಶಿರ್ವಾದದಿಂದ ಖುಷಿ ನೆಲೆಸಲಿ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 4:
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ |
ಜನಕಃ ಶಂಕರೋ ದೇವಃ, ತಮ್ ವಂದೇ ಕುಂಜರಾನನಂ ||
ತಮಗೂ ತಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.

ಶುಭಾಶಯ 5:
ಓಂ ಗಂ ಗಣಪತಯೇ ನಮಃ ||
ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 6:
ಅಗಜಾನನ ಪದ್ಮಾರ್ಕಂ
ಗಜಾನನ ಮಹಾರ್ನಿಶಂ |
ಅನೇಕದಂತಂ ಭಕ್ತಾನಾಂ
ಏಕದಂತಂ ಉಪಾಸ್ಮಹೆಯ್ ||
ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 7:
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||
ಕೋಟಿ ಸೂರ್ಯರ ಪ್ರಭೆಗೆ ಸಮನಾದ ವಿಘ್ನ ವಿನಾಶಕ ಗಣಪತಿಯು ನಿಮಗೆ ಮಂಗಳವನ್ನುಂಟುಮಾಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಶುಭಾಶಯ 8:
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್||
ಮಹಾಗಣಪತಿಯು ನಿಮಗೆ ಸನ್ಮಂಗಳವನ್ನುಂಟು ಮಾಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 9:
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ |
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ ||
ವಿನಾಯಕನ ಕೃಪಾ ದೃಷ್ಟಿಯಿಂದ ನಿಮ್ಮೆಲ್ಲ ಕಷ್ಟಗಳು ದೂರವಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 10:
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ |
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ ||
ನಿಮ್ಮೆಲ್ಲ ದುಃಖ, ಚಿಂತೆ, ನೋವು ದೂರವಾಗಲಿ. ಗಣೇಶ ಚತುರ್ಥಿಯ ಶುಭಗಳಿಗೆ ನಿಮಗೆ ಸುಖ ಶಾಂತಿ ನೆಮ್ಮದಿ ಕರುಣಿಸಲಿ.  ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 11:
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ ||
ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಶುಭಾಶಯ 12:
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ |
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ ||
ಸಿದ್ಧಿ ವಿನಾಯಕನ ಕೃಪೆಯಿಂದ ನಿಮ್ಮ ಜೀವನದಲ್ಲಿ ಸಂತೋಷ ತುಂಬುವಂತೆ ಆಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಇದನ್ನೂ ಓದಿರಿ:ಗೌರಿ ಗಣೇಶ ಹಬ್ಬ ಎಷ್ಟೊಂದು ಸುಂದರ ಅಲ್ಲವೇ ?

LEAVE A REPLY

Please enter your comment!
Please enter your name here