ನಮ್ಮಲ್ಲಿ ಹಿಂದಿನಿಂದಲೂ ಬೆಳೆದುಬಂದ ಸಂಪ್ರದಾಯದಂತೆ ಊಟದ ನಂತರ ತಾಂಬೂಲ ಸೇವನೆ ಮಾಡುವುದು ಸಾಮಾನ್ಯ. ಇದರಿಂದ ಜೀರ್ಣಕ್ರಿಯೆಯು ಸುಘಮವಾಗಿ ಆರೋಗ್ಯವು ಉತ್ತಮವಾಗಿರುತ್ತದೆ ಎಂಬುದು ಹಿರಿಯರ ಹೇಳಿಕೆ. ಈ ಮಾತು ನಿಜವೇ..? ಅಥವಾ ಇದರ ಸೇವನೆಯಿಂದ ನಮ್ಮ ದೇಹದ ಮೇಲೆ ಅಪಾಯಕರವಾದ ರೋಗಗಳು ಬರಲು ಕಾರಣವಾಗುವುದೇ..? ಈ ಕುರಿತು ವಿಸ್ಥಾರವಾಗಿತಿಳಿಯೋಣ ಬನ್ನಿ..
ಮೊದಮೊದಲು ತಾಂಬೂಲವೆಂದರೆ ಎಲೆ, ಅಡಿಕೆ, ಸುಣ್ಣ ಹಾಗೂ ಕೆಲವು ಔಷಧ ಮೂಲಿಕೆಗಳು ಸೇರಿದ್ದವು. ಆದರೆ ಇಂದು ಅವುಗಳ ಜೊತೆಗೆ ಅಪಾಯಕಾರಿಯಾದ ಹೊಗೆಸೊಪ್ಪು ಮತ್ತು ಸುಗಂಧ ಪದಾರ್ಥಗಳು ಸೇರಿಕೊಂಡಿವೆ. ಇವುಗಳ ಪರಿಣಾಮವಾಗಿ ನಮ್ಮ ಆರೋಗ್ಯವು ಕೆಟ್ಟ ದಾರಿಯನ್ನು ಹಿಡಿದಿರುವುದು ದುರದ್ರಷ್ಟಕರ. ಈ ರೀತಿಯ ತಾಂಬೂಲವನ್ನು ಸೇವಿಸದೇ ಇರುವುದೇ ಉತ್ತಮವೆಂದು ಹೇಳಬಹುದು.ಆದರೆ ನಮ್ಮ ಪೂರ್ವಜರ ಹೇಳಿಕೆಯ ವಸ್ತುಗಳನ್ನು ಸೇರಿಸಿದ ತಾಂಬೂಲವು ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ವಿಷಯವನ್ನು ತಿಳಿದ ಮೇಲೆ ಇದರ ಸೇವನೆಯಿಂದ ಯಾವೆಲ್ಲ ಪ್ರಯೋಜನಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯವೆನಿಸುತ್ತದೆ. ಅಲ್ಲವೇ..?
ಇದನ್ನೂ ಓದಿರಿ:ನೀವು ಹಪ್ಪಳವನ್ನು ತುಂಬಾ ಇಷ್ಟಪಡುತ್ತೀರಾ? ಹಾಗಾದರೆ ಇದನ್ನು ಓದಲೇ ಬೇಕು

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ:-
ತಾಂಬೂಲದ ಸೇವನೆಯಿಂದ ಜೀರ್ಣಾಂಗವ್ಯೂಹದ ಕಾರ್ಯಗಳು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತವೆ. ಇದರ ಆರೋಗ್ಯಕಾರಿ ಗುಣಗಳ ಪ್ರಭಾವದಿಂದ ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ಅಜೀರ್ಣ, ಮಲಬದ್ಧತೆ ಇಂತಹ ಸಮಸ್ಯೆಗಳು ದೂರವಾಗುತ್ತವೆ.
ಮಧುಮೇಹ ನಿಯಂತ್ರಕ:-
ಮಧುಮೇಹವು ಹೆಚ್ಚುತ್ತಿರುವ ಈ ಸಮಯದಲ್ಲಿ ಅದರ ನಿಯಂತ್ರಣದ ಕುರಿತು ತಲೆಕೆಡಿಸಿಕೊಳ್ಳುತ್ತಿರುವವರಿಗೆ ಇದು ಒಂದು ಪರಿಹಾರವಾಗಬಲ್ಲದು. ದಿನದಲ್ಲಿ ಮೂರುಬಾರಿ ಇದರ ಸೇವನೆ ಮಾಡುವುದರಿಂದ ಮಧುಮೇಹವು ನಿಯಂತ್ರಣಕ್ಕೆ ಬರುವುದೆಂದು ಅನೇಕ ಪ್ರಯೋಗಗಳು ಸಾಬೀತುಪಡಿಸಿವೆ.
ಇದನ್ನೂ ಓದಿರಿ: ಜೀವನದುದ್ದಕ್ಕೂ ಆರೋಗ್ಯವಾಗಿರಲು 30 ವರ್ಷಗಳ ನಂತರ ಮಹಿಳೆಯರು ಈ 6 ಕ್ರಮಗಳನ್ನು ತಪ್ಪದೇ ಅಳವಡಿಸಿಕೊಳ್ಳಿ
ಕೆಳಬೆನ್ನಿನ ನೋವಿಗೆ:
ಕೆಳಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದರ ನಿವಾರನೆಯು ಸಹ ಇದರಿಂದ ಸಾಧ್ಯವಿದೆ. ನೋವಿರು ಜಾಗಕ್ಕೆ, ವೀಳ್ಯದೆಲೆಯ ಪೇಸ್ಟ್ ಯಾರಿಸಿಕೊಂಡು ಅದಕ್ಕೆ ಸ್ವಲ್ಪ ಬಿಸಿಮಾಡಿದ ಕೊಬ್ಬರಿ ಎಣ್ಣೆಯನ್ನು ಮಿಶ್ರಮಾಡಿ ಬೆಚ್ಚಗಿರುವಾಗಲೇ ಆ ಭಾಗದಲ್ಲಿ ಲೇಪಿಸುವುದರಿಂದ ನೋವು ನಿವಾರಣೆಯಾಗುತ್ತದೆ.

ಕಾಮೋತ್ತೇಜಕ:
ತಾಂಬೂಲವನ್ನು ಸೇವನೆ ಮಾಡುವುದರಿಂದ ಲೈಂಗಿಕ ಆಸಕ್ತಿಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಊಟದ ನಂತರ ಮತ್ತು ಮಲಗುವ ಮುನ್ನದಲ್ಲಿ ಸೇವನೆಯನ್ನು ಮಾಡುತ್ತಾರೆ. ಅಲ್ಲದೇ ಪುರುಷರಲ್ಲಿ ಫಲವಂತಿಕೆಯನ್ನು ಸಹ ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.
ಬಾಯಿಯ ಆರೋಗ್ಯ ಉತ್ತಮವಾಗಿಸುತ್ತದೆ:
ಬಾಯಿಯ ದುರ್ಘಂಧ, ವಸಡುಗಳಲ್ಲಿ ರಕ್ತ ಸ್ರಾವ, ಹಲ್ಲಿನ ಸೆಳೆತ ಮುಂತಾದ ಬಾಯಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುತ್ತದೆ. ವಸಡುಗಳನ್ನು ಗಟ್ಟಿಯಾಗಿಸಿ, ಹಲ್ಲುಗಳ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡುತ್ತದೆ.
ಎರಡು ಸಾವಿರಕ್ಕಿಂತಲೂ ಅಧಿಕ ವರುಷಗಳ ಇತಿಹಾಸವಿರುವ ತಾಂಬೂಲವನ್ನು ಸೇವಿಸುವುದರಿಂದ ಯಾವುದೇ ತೊಂದರೆಗಳಿಲ್ಲದೆ, ಅನೇಕ ಪ್ರಯೋಜನಗಳಿವೆ ಎನ್ನುವುದನ್ನು ಎತ್ತಿಹಿಡಿಯುವ ಸಣ್ಣ ಪ್ರಯತ್ನ ನಮ್ಮದಾಗಿದ್ದು, ಇದರ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ. ಈ ಲೇಖನ ಇಷ್ಟವಾದರೆ ಲೈಕ್, ಶೇರ್ ಮಾಡಿ.. ಮತ್ತು ಇಂತಹ ಅನೇಕ ಮಾಹಿತಿಗಳಿಗಾಗಿ ನಮ್ಮನ್ನು ಫಾಲೋ ಮಾಡಿರಿ.
ಇದನ್ನೂ ಓದಿರಿ: ಹೊಳೆಯುವ, ಸುಂದರ ಮತ್ತು ನಯವಾದ ಮುಖದ ಚರ್ಮಕ್ಕಾಗಿ ಪಪ್ಪಾಯ ಪೇಸ್ ಪ್ಯಾಕ್..!
SPONSORED CONTENT