ಭಾರತೀಯರ ಊಟದಲ್ಲಿ ಹಪ್ಪಳಗಳನ್ನು ನೀಡದೆ ಊಟವು ಪೂರ್ಣವಾಗುವುದಿಲ್ಲ. ಹಪ್ಪಳವು ಬಹುಜನರಿಗೆ ಪ್ರೀಯವಾದ ತಿಂಡಿಯಾಗಿದೆ. ಊಟದ ಜೊತೆಯಲ್ಲಿ ಇದು ರುಚಿಯನ್ನು ಹೆಚ್ಚಿಸುತ್ತದೆ. ಇದಲ್ಲದೇ ಹಪ್ಪಲಗಳೂ ಸಹ ಜನರ ಆಸಕ್ತಿಗಳಿಗೆ ತಕ್ಕಂತೆ ಉಪ್ಪಿನ ಹಪ್ಪಳ, ಮಸಾಲೆ ಬರಿತ ಹಪ್ಪಳ, ಮೆಣಸಿನ ಹಪ್ಪಳ, ಉದ್ದಿನ ಹಪ್ಪಳ ಹೀಗೆ ಬಗೆ ಬಗೆಯ ರೀತಿಯಲ್ಲಿ ಲಭ್ಯವಿದೆ. ಇವುಗಳು ನಮ್ಮ ಆರೋಗ್ಯದ ಮೇಲೆ ಯಾವರೀತಿಯ ಪರಿಣಾಮವನ್ನು ಬೀರುತ್ತವೆ ಎನ್ನುವ ಕುರಿತು ನಿಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಚಿಕ್ಕ ಪ್ರಯತ್ನ ನಮ್ಮದು.
ಇದನ್ನೂ ಓದಿರಿ : ಊಟದ ನಂತರ ತಾಂಬೂಲ ಸೇವನೆಯು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾ.?. ಕೆಟ್ಟದಾ..? ತಿಳಿಯಲು ಓದಿ
ಮಸಾಲೆ ಪದಾರ್ಥಗಳ ಬಳಕೆ:
ಮಸಾಲೆಯುಕ್ತ ಹಪ್ಪಳಗಳನ್ನು ಬಹಳಷ್ಟು ಜನರು ಇಷ್ಟ ಪಡುತ್ತಾರೆ. ಈ ಹಪ್ಪಳಗಳು ಗರಿ ಗರಿಯಾಗಿದ್ದು, ಇತರ ಆಹಾರ ಪದಾರ್ಥಗಳ ಜೊತೆಯಲ್ಲಿ ಸೇವಿಸಲು ಉತ್ತಮವಾಗಿರುತ್ತವೆ. ಹಾಗೆಂದು ಅತಿಯಾಗಿ ಸೇವಿಸಿದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಮಸಾಲೆಯುಕ್ತ ಹಪ್ಪಳಗಳ ಅತಿಯಾದ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಜೀರ್ಣ ಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಅದು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ.
ಅತಿಯಾಗಿ ಉಪ್ಪನ್ನು ಬಳಸುವುದು:
ಹಪ್ಪಳಗಳಿಗೆ ಅತಿಯಾಗಿ ಉಪ್ಪನ್ನು ಬಳಸಿರುತ್ತಾರೆ ಇದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವು ಕಂಡಿತವಾಗಿ ಆಗುತ್ತದೆ. ಏಕೆಂದರೆ ಉಪ್ಪಿನ ಅತಿಯಾದ ಸೇವನೆಯಿಂದ ದೇಹದಲ್ಲಿ ಸೋಡಿಯಂ ಅಂಶವು ಹೆಚ್ಚಾಗಿ, ಅಧಿಕ ರಕ್ತದೊತ್ತಡವು ಉಂಟಾಗುತ್ತದೆ. ರಕ್ತದಲ್ಲಿ ಸೋಡಿಯಂ ಪ್ರಮಾಣವು ಗಣನೀಯವಾಗಿ ಹೆಚ್ಚಾಗುವುದರಿಂದ ಆಗಾಗ್ಗೆ ಬಾಯಾರಿಕೆ ಉಂಟಾಗುತ್ತದೆ. ಹಾಗೆಯೇ ಅಧಿಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗುತ್ತದೆ.

ಎಣ್ಣೆಯ ಬಳಕೆ :
ನಾವು ಇಷ್ಟಪಟ್ಟು ಸೇವಿಸುವ ಹಪ್ಪಳವನ್ನು ಎಣ್ಣೆಯಲ್ಲಿ ಕರಿದಿರುತ್ತಾರೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯ ಅಂಶವು ಸೇರಿಕೊಳ್ಳುತ್ತದೆ. ಅಲ್ಲದೇ ಮರುಬಳಕೆ ಮಾಡಿದ ಎಣ್ಣೆಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವು ಹದಗೆಡುತ್ತದೆ. ಕೆಮ್ಮು, ಅಜೀರ್ಣದಂತಹ ಗಂಭೀರ ಸಮಸ್ಯೆಗಳು ಕಂಡುಬರುತ್ತವೆ. ಮರುಬಳಕೆ ಮಾಡಿದ ಎಣ್ಣೆಯಲ್ಲಿ ಟ್ರಾನ್ಸ್ ಪ್ಯಾಟ್ ಅಂಶವು ಹೆಚ್ಚಿನದಾಗಿ ಕಂಡುಬರುತ್ತದೆ. ಇವೆಲ್ಲವುಗಳು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ.ಇವುಗಳ ಸೇವನೆಯಿಂದ ಹೃದಯ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳು ನಮ್ಮನ್ನು ಕಾಡುತ್ತವೆ.
ಇದನ್ನೂ ಓದಿರಿ :ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!
ಮಲಬದ್ಧತೆ ಸಮಸ್ಯೆಗೆ ಕಾರಣ:
ನಿಮಗೆ ಈ ವಿಷಯವನ್ನು ಕೇಳಿ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ..! ಒಬ್ಬ ವ್ಯಕ್ತಿಯು ಹಪ್ಪಳವನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲಬಹುದು. ಆತನು ಸೇವಿಸಿದ ಹಪ್ಪಲವು ಹಿಟ್ಟಿನ ರೂಪದಲ್ಲಿ ಕರುಳಿನ ಒಳಪದರದಲ್ಲಿ ಸಿಲುಕಿಕೊಂಡು ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆಯಂತಹ ತೊಂದರೆಗಳಿಗೆ ಒಳಗಾಗುತ್ತಾನೆ.
ಈ ಎಲೋಳ ಮಾಹಿತಿಗಳಿಂದ ಹಪ್ಪಳವನ್ನು ಅತಿಯಾಗಿ ತಿನ್ನುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದು ತಿಳಿಯುತ್ತದೆ. ಆದ್ದರಿಂದ ಹಿತ-ಮಿತವಾಗಿ ಸೇವಿಸಿ ನಮ್ಮ ಆರೊಗ್ಯವನ್ನು ಕಾಯ್ದುಕೊಳ್ಳೋಣ ಎಂದು ಹೇಳಲು ಬಯಸುತ್ತೇವೆ. ನಮ್ಮ ಈ ಮಾಹಿತಿ ಇಷ್ಟವಾಗಿದ್ದರೆ ಇತರರೊಂದಿಗೂ ಹಂಚಿಕೊಂಡು ಅವರಿಗೂ ಸಹಾಯಮಾಡಿ.