ಜೇನುತುಪ್ಪ ಒಂದು ಪರಿಪೂರ್ಣ ಆಹಾರ. ಅದರಲ್ಲಿ ಅಪಾರ ಪ್ರಮಾಣದ ಜೀವರಕ್ಷಕ ಅಂಶಗಳು ತುಂಬಿಕೊಂಡದ್ದು, ಪ್ರತಿದಿನ ಉಪಯೋಗ ಮಾಡುವುದರಿಂದ ಅನೇಕಾನೇಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಪ್ರತಿ ದಿನ ಬೆಳಗ್ಗೆ ಜೇನುತುಪ್ಪವನ್ನ ತೆಗೆದುಕೊಳ್ಳುವುದರಿಂದ ನಿಮ್ಮ ನಿತ್ಯ ಕರ್ಮಗಳಿಗೆ ಸಹಾಯಕವಾಗುತ್ತದೆ. ಜೇನುತುಪ್ಪವು ನಿಮ್ಮ ದೇಹಕ್ಕೆ ಹೆಚ್ಚು ಶಕ್ತಿಯನ್ನ ನೀಡುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯ ಪೂರ್ಣ ಜೀವನವನ್ನು ನೀಡುತ್ತದೆ.
ಜೇನು ತ್ವಚೆಯ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದನ್ನು ಲೇಪನ ಮಾಡಿಕೊಂಡು ಸ್ನಾನ ಮಾಡುವುದರಿಂದ ಮತ್ತು ಸೇವನೆ ಮಾಡುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗಿ ಮೃದು ಮತ್ತು ಸುಂದರವಾದ ತ್ವಚೆಯನ್ನು ಪಡೆಯಬಹುದು.

ಬೆಳಿಗ್ಗೆ ಕಾದಾರಿದ ನೀರಿಗೆ ಜೇನುತುಪ್ಪ ಹಾಕಿ ಕುಡಿಯುವುದು ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನ ಹೊಂದಿದೆ ಹಾಗೂ ಬ್ಯಾಕ್ಟೀರಿಯಾಗಳಿಂದ ದೇಹವನ್ನ ರಕ್ಷಿಸುತ್ತದೆ.
ಜೇನು ಸೆವನೆಯು ನಮ್ಮ ನಿಸ್ತೇಜತೆ ಮತ್ತು ಆಲಸ್ಯಗಳನ್ನು ದೂರಮಾಡಲು ಸಹಕಾರಿಯಾಗಿದೆ. ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸಿ, ನಿಶ್ಯಕ್ತಿ ಯನ್ನು ದೂರಮಾಡುತ್ತದೆ.
ಜೇನುತುಪ್ಪವನ್ನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಕಾಲಿ ಹೊಟ್ಟೆಯಲ್ಲಿ ಕಾದಾರಿದ ನೀರಿಗೆ ಬೆರೆಸಿ ತೆಗೆದುಕೊಳ್ಳುತ್ತ ಬರುವುದರಿಂದ ದೇಹಕ್ಕೆ ಶಕ್ತಿ ಮತ್ತು ಬೊಜ್ಜಿನಿಂದ ಮುಕ್ತಿಯನ್ನು ನೀಡುತ್ತದೆ.

ಕಪ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ತುಳಸಿ ರಸದ ಜೊತೆಯಲ್ಲಿ ಜೇನುತುಪ್ಪ ಸೇರಿಸಿ ನೆಕ್ಕುವದರಿಂದ ನಿವಾರಣೆಯನ್ನು ಕಾಣಬಹುದು.
ಗಂಟಲು ನೋವಿನಿಂದ ಬಳಲಿಕೆಯನ್ನು ಅನುಭವಿಸುತ್ತಿರುವವರು, ಜೇನುತುಪ್ಪದ ಜೊತೆಯಲ್ಲಿ ಶೇಡಿಮಣ್ಣನ್ನು ಸೇರಿಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಗಂಟಲಿಗೆ ಹಚ್ಚುವುದರಿಂದ ವಾಸಿಯಾಗುತ್ತದೆ.
ಜೇನುತುಪ್ಪದ ಸೇವನೆಯು ರಕ್ತಹೀನತೆಯ ನಿವಾರಣೆಗೆ ಸಹಕಾರಿಯಾಗಿದೆ. ನಿಯಮಿತ ಸೇವನೆಯಿಂದ ಕ್ಯಾಲ್ಸಿಯಂ ಹೀರಿಕೆಯು ಹೆಚ್ಚಾಗಿ, ಹಮೋಗ್ಲೋಬಿನ್ ಪ್ರಮಾಣ ವೃದ್ದಿಯಾಗುತ್ತದೆ.
ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ