ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಲು ನೆನೆಸಿದ ಬಾದಾಮಿ ತಿನ್ನಿರಿ..!

Eat soaked almonds for better health
Image Credit: google.com

ಬಾದಾಮಿ ಪೋಷಕಾಂಶಗಳ ನೆಲೆಯಾಗಿದೆ, ಬಾದಾಮಿ ಕಾಯಿಯು ನಮ್ಮ ಆರೋಗ್ಯಕ್ಕೆ ಅಪಾರವಾದ ಸಹಾಯವನ್ನು ಮಾಡುತ್ತದೆ.  ಬಾದಾಮಿಯಲ್ಲಿರುವ ಪೋಷಕಾಂಶಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು, ಅದನ್ನು ತಿನ್ನುವ ಮೊದಲು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ನೆನೆಸಿದ ಬಾದಾಮಿ ಹೆಚ್ಚು ಮೃದುವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಬಾದಾಮಿಯನ್ನು ಹಾಗೆಯೇ ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ, ಆದ್ದರಿಂದ ಬಾದಾಮಿ ತಿನ್ನಲು ಸರಿಯಾದ ಮಾರ್ಗವೆಂದರೆ ಅದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನಿರಿ. ನೆನೆಸಿದ ಬಾದಾಮಿ ತಿನ್ನುವುದರಿಂದ ಜೀರ್ಣಕಾರಿ ಚಟುವಟಿಕೆಯು ಸರಾಗವಾಗಿ ನಡೆಯುತ್ತದೆ. ಬಾದಾಮಿಯನ್ನು ಆರೋಗ್ಯದ ವರದಾನವೆಂದು ಕರೆಯಲಾಗುತ್ತದೆ ಮತ್ತು ಅದರ ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿಸುವ ಚಿಕ್ಕ ಪ್ರಯತ್ನ ನಮ್ಮದು.

ಇದನ್ನೂ ಓದಿರಿ : ನೀವು ಈ ಆಹಾರ ಪದ್ಧತಿ ಅನುಸರಿಸಿದರೆ ರಾತ್ರಿ ಒಳ್ಳೆಯ ನಿದ್ರೆ ಮಾಡಬಹುದು ನೋಡಿ..!

soaked-almonds
Image Credit: google.com

ಬಾದಾಮಿ ಪೋಷಕಾಂಶಗಳ ಕಣಜವಾಗಿದೆ. ಇದು ಮೆದುಳಿನ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ ಮತ್ತು ಮೆದುಳನ್ನು ಕ್ರಿಯಾಶೀಲಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಅಡಕವಾಗಿರುವ ಖನಿಜಗಳು, ಜೀವಸತ್ವಗಳು, ಸತು ಮತ್ತು ಕ್ಯಾಲ್ಸಿಯಂ ಇತ್ಯಾದಿಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.

ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಜೊತೆಗೆ ನಿಮ್ಮ ಹೃದಯವನ್ನು ಸದೃಡವಾಗಿಡಲು ಮತ್ತು ಹೃದಯರಕ್ತನಾಳದ ವ್ಯವಸ್ಥೆಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ನೀವೂ ಸಹ ಯಾವುದೇ  ಹೃದ್ರೋಗದಿಂದ ಬಳಲುತ್ತಿದ್ದರೆ ಆರೋಗ್ಯವಾಗಿರಲು ಇದರ ಸೇವನೆಯು ಸಹಾಯಕವಾಗಬಹುದು.

ಇದನ್ನೂಓದಿರಿ: ತಣ್ಣಗಿನ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದೇ..?

soaked-almonds
Image Credit: google.com

ವೃದ್ದಾಪ್ಯವನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ. ನೆನೆಸಿದ ಬಾದಾಮಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳ ಪ್ರಮಾಣವು ಅಧಿಕವಾಗಿರುತ್ತದೆ. ವೃದ್ಧಾಪ್ಯದ ಚರ್ಮದ ನೆರಿಗೆಗಳನ್ನು ತಡೆಗಟ್ಟಿ ವಯಸ್ಸಿನ ಚಿನ್ಹೆಯನ್ನು ದೂರಮಾಡುತ್ತವೆ.

ನಾವು ಅನೇಕ ಕಡೆಗಳಿಂದ ವಿಷಯವನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಪಾಲೋ ಮಾಡುವ ಮೂಲಕ ಕ್ರತಜ್ನತೆ ನೀಡಿ. ಆ ಮೂಲಕ ನಮ್ಮನ್ನು ಇನ್ನೂ ಹೆಚ್ಚು ಮಾಹಿತಿ ನೀಡಲು ಪ್ರೋತ್ಸಾಹಿಸಿ..ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಿ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.

ಇದನ್ನೂ ಓದಿರಿ : ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?

SPONSORED CONTENT

LEAVE A REPLY

Please enter your comment!
Please enter your name here