ಮನುಷ್ಯನ ಆರೋಗ್ಯ ನಿಯಂತ್ರಣದಲ್ಲಿ ಪ್ರಮುಖವಾಗಿ ಅವಶ್ಯವಿರುವುದು ನಿದ್ರೆ. ಆದರೆ ಇಂದಿನ ಒತ್ತಡದ ಜೀವನದಿಂದಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ರಾತ್ರಿ ಸಮಯದಲ್ಲಿ ಒಳ್ಳೆಯ ನಿದ್ರೆ ಪಡೆಯಲು ಸಹಾಯವಾಗುವ ಕೆಲವು ಆಹಾರ ಕ್ರಮಗಳನ್ನು ಇಲ್ಲಿ ತಿಳಿಸಲಾಗಿದೆ. ಇವುಗಳನ್ನು ಓದಿರಿ ನಿಮಗೆ ಸಹಾಯವಾಗಬಹುದು ..
- ಒಂದು ಕಪ್ ಬಿಸಿ ಹಾಲಿಗೆ ಎರಡು ಚಮಚದಷ್ಟು ಹುರಿದು ಪುಡಿಮಾಡಿದ ಗಸಗಸೆಯನ್ನು ಹಾಕಿರಿ. ಇದರ ಜೊತೆಗೆ ಜಾಯಿಕಾಯಿ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ಈ ಮಿಶ್ರಣವನ್ನು ಪ್ರತಿದಿನ ಮಲಗುವ ಮುನ್ನ ತಯಾರಿಸಿಕೊಂಡು ಕುಡಿಯಿರಿ.
- ರಾತ್ರಿಯ ಸಮಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅನ್ನವನ್ನು ಸೇವನೆ ಮಾಡುವುದು ಉತ್ತಮ ನಿದ್ರೆಗೆ ಸಹಕಾರಿ. ಏಕೆಂದರೆ ಇದರಲ್ಲಿ ಗ್ಲುಕೋಸ್ ಅಂಶವು ಅಡಕವಾಗಿದೆ. ಇದು ನಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.
- ರಾತ್ರಿ ಊಟವಾದ ನಂತರ ಬಾಳೆಹಣ್ಣು ತಿನ್ನುವುದರಿಂದ ಉತ್ತಮ ನಿದ್ರೆಯು ಬರುತ್ತದೆ. ಈ ಬಾಳೆಹಣ್ಣಿನಲ್ಲಿ ಸೋಡಿಯಂ ಮತ್ತು ಪೊಟ್ಯಾಷಿಯಂಗಳು ತುಂಬಿಕೊಂಡಿವೆ. ಇದು ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ಅಲ್ಲದೆ ಮಿದುಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿರಿ :ಪಿಸ್ತಾ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿದರೆ ನೀವು ದಂಗಾಗುತ್ತಿರಿ..!
- ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಮತ್ತು ಇದರಿಂದ ತಯಾರಿಸಲಾದ ಸಿಹಿ ತಿನಿಸಿಗಳ ಸೇವನೆಯು ನಮ್ಮಲ್ಲಿ ಶಕ್ತಿ ಮತ್ತು ನಿದ್ರೆಯನ್ನು ತರುತ್ತದೆ.
ನಾವು ಅನುಸರಿಸುವ ಕೆಲವು ಅಭ್ಯಾಸಗಳು ನಮ್ಮ ನಿದ್ರೆಯನ್ನು ತಡೆಯುತ್ತವೆ. ಅವುಗಳ ಕುರಿತು ಗಮನ ಹರಿಸೋಣ..
- ನಿದ್ರಿಸುವ ಅವಧಿಯ ಐದು ಗಂಟೆಗಳ ಸಮಯವಿರುವಾಗ ಚಹಾ, ಕಾಫಿಯಂತಹ ಕೆಫಿನ್ ಅಂಶ ಹೊಂದಿರುವ ಪಾನೀಯಗಳನ್ನು ವ್ಯರ್ಜಿಸಿ.
- ಮಲಗುವ ಮುನ್ನ ಟಿವಿ ಅಥವಾ ಮೊಬೈಲ್ ವೀಕ್ಷಣೆಗಳಿಂದ ದೂರವಿರಿ. ಇವು ನಿಮ್ಮ ಕಣ್ಣು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ, ಅಲ್ಲದೇ ನಿದ್ರೆಯನ್ನೂ ತಡೆಯುತ್ತವೆ. ಮಲಗುವ ಮುನ್ನ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ..
ಇದನ್ನೂ ಓದಿರಿ :ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!