ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?

ಕೊತ್ತಂಬರಿ ಸೊಪ್ಪು ಇದು ಪ್ರತಿಯೊಂದು ಅಡಿಗೆಮನೆಯ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಇದನ್ನು ಆಹಾರಗಳ ಅಲಂಕರಿಸಲು ಮತ್ತು ಮುಖ್ಯ ಮಸಾಲೆಯ ಪದಾರ್ಥವಾಗಿ ಬಳಸಲಾಗುತ್ತದೆ. ಇದು  ಆಹಾರದ ಪರಿಮಳವನ್ನು ಹೆಚ್ಚಿಸುವ ಶಕ್ತಿ ಮಾತ್ರವಲ್ಲದೇ, ಇದರಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಬಹುದಾದ ಅನೇಕ ಅಂಶಗಳು ಇದರಲ್ಲಿವೆ ಅವುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಕೆಳಗೆ ಓದಿರಿ.

ಕೊತ್ತಂಬರಿ ಸೊಪ್ಪಿನ ಅದ್ಭುತ ಪ್ರಯೋಜನಗಳು

ಗೆಡ್ಡೆ ರಚನೆ ಮತ್ತು ಬೆಳವಣಿಗೆಯನ್ನು ತಡೆಯುತ್ತದೆ

ಕೊತ್ತಂಬರಿ ಸೊಪ್ಪಿನ ಸೇವನೆಯು ದೇಹದ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ಬೀರುತ್ತವೆ. ಇದರಲ್ಲಿರುವ ವಿಶೇಷವಾದ ಔಷಧೀಯ ಗುಣದಿಂದ ದೇಹದಲ್ಲಿ ಗಡ್ಡೆಗಳ ರಚನೆ ಮತ್ತು ಬೆಳವಣಿಗೆಯನ್ನು ತಡೆಗಟ್ಟುತ್ತದೆ.  

ದೇಹದಲ್ಲಿರುವ ವಿಷವನ್ನು ಶಮನಗೊಳಿಸುತ್ತದೆ

ಇದು ನಿಮ್ಮ ದೇಹವನ್ನು ಪುನರ್ಯೌವನಗೊಳಿಸಬಲ್ಲ ಗಿಡಮೂಲಿಕೆಗಳ ಪೈಕಿ ಅತ್ಯುತ್ತಮ ಜೈವಿಕ ರಾಸಾಯನಿಕ ಪ್ರಭೇದಗಳಲ್ಲಿ ಒಂದಾಗಿದೆ.  ಇದು ರಕ್ತದಲ್ಲಿರುವ ಹಾನಿಕಾರಕ ಅಂಶಗಳನ್ನು ಮತ್ತು ವಿಷ ಪದಾರ್ಥಗಳನ್ನು ಒಂದು ಮಟ್ಟದವರೆಗೆ ತಡೆಗಟ್ಟುತ್ತದೆ. ಅಲ್ಲದೇ ವಿಷಕಾರಕ ಬ್ಯಾಕ್ಟೀರಿಯಾಗಳನ್ನೂ ನಾಶಮಾಡುತ್ತದೆ.

ಜೀರ್ಣ ಸಮಸ್ಯೆ ಮತ್ತು ಹೊಟ್ಟೆಯುಬ್ಬರವನ್ನು ತಡೆಯುತ್ತದೆ

ಜೀರ್ಣ ಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಮತ್ತು ಹೊಟ್ಟೆಯುಬ್ಬರವನ್ನು ತಡೆಗಟ್ಟುವಲ್ಲಿ ಇದು ವಿಶೇಷ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಈ ತೊಂದರೆ ನಿವಾರಿಸುವ ವಿಶೇಷ ಗುಣಗಳು ಅಡಕವಾಗಿವೆ. ಈ ಸಮಸ್ಯೆ ನಿವಾರಣೆಗೆ ತಿಳಿಮಜ್ಜಿಗೆಗೆ ಸ್ವಲ್ಪ ಉಪ್ಪು, ಇಂಗು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಮಾಡಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದಾಗಿದೆ.

ಇದನ್ನೂ ಓದಿರಿ: ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಲು ನೆನೆಸಿದ ಬಾದಾಮಿ ತಿನ್ನಿರಿ..!

ತೂಕ ನಷ್ಟದಲ್ಲಿ ಸಹಾಯ ಮಾಡುತ್ತದೆ

ಆಯುರ್ವೇದದ ಪ್ರಕಾರ ಕೊತ್ತುಂಬರಿ ಬೀಜ ಕಷಾಯವು ರಕ್ತ ಲಿಪಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬೀಜಗಳು ಮತ್ತು ಎಲೆಗಳಲ್ಲಿ ಕಂಡುಬರುವ ಸ್ಟೆರಾಲ್ಗಳು ಆಹಾರದ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ, ಇದರಿಂದಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ನಮ್ಮಲ್ಲಿ ಅತಿ ಹೆಚ್ಚಿನ ತೂಕವನ್ನು ಹೊಂದಿರುವವರು ಇದರ ಸೇವನೆಯಿಂದ ಸ್ವಲ್ಪಮಟ್ಟಿನ ತೂಕವನ್ನು ಇಳಿಸಬಹುದಾಗಿದೆ. ನೀವು ಸೇವಿಸುವ ಹೆಚ್ಚಿನ ಪದಾರ್ಥಗಳಲ್ಲಿ ಇದನ್ನು ಸೇರಿಸಿ ಸೇವಿಸುವುದು ಉತ್ತಮ ಪರಿಣಾಮಕಾರಿಯಾಗಬಲ್ಲದು.

ಇದನ್ನೂ ಓದಿರಿ: ತೂಕ ಇಳಿಸಿಕೊಳ್ಳಬೇಕೇ ? ಬೆಳಗೆದ್ದ ತಕ್ಷಣ ಈ ಜ್ಯೂಸ್ ಕುಡಿಯಿರಿ..!

ಮೂತ್ರದ ಸೋಂಕನ್ನು  ನಿವಾರಿಸಿ – ಮೂತ್ರಪಿಂಡ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ

ಕೊತ್ತುಂಬರಿ ಬೀಜಗಳು ಮೂತ್ರಪಿಂಡದ ಮೂತ್ರದ ಶೋಧನೆಯ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಮೂತ್ರಜನಕವು ವೇಗವಾಗಿ ಕಾರ್ಯನಿರ್ವಹಿಸುತ್ತವೆ. ಮೂತ್ರಕೋಶದ ಸಮಸ್ಯೆ ಇರುವವರಲ್ಲಿ  ಇದು ದೇಹದಲ್ಲಿ ನೀರು ತುಂಬುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನಿಮ್ಮ ದೇಹವು ಎಲ್ಲಾ ವಿಷ ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕುತ್ತದೆ, ಮೂತ್ರದ ವ್ಯವಸ್ಥೆಯನ್ನು ಸ್ವಚ್ಛವಾಗಿರಿಸುತ್ತದೆ.

ನಿಮ್ಮ ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ

ಕೊತ್ತುಂಬರಿ ಸೊಪ್ಪು ತನ್ನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಎಲೆಗಳು ಮತ್ತು ಕೊತ್ತಂಬರಿ ಬೀಜಗಳು ವಿಶೇಷವಾದ ಗುಣಗಳನ್ನು  ಹೊಂದಿರುತ್ತವೆ, ಇವುಗಳಿಂದಾಗಿ ನಿಮ್ಮ ರಕ್ತವು ಶುಚಿಗೊಳ್ಳುತ್ತದೆ. ಆ ಮೂಲಕ ಚರ್ಮದ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕನ್ನು (ಗುಳ್ಳೆಗಳನ್ನು ಮತ್ತು ಮೊಡವೆ ಸೇರಿದಂತೆ) ತಡೆಗಟ್ಟುತ್ತದೆ. ಮುಖದ ಚರ್ಮ ಹೊಳೆಯುವಂತೆ ಮಾಡಲು ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಸ್ವಲ್ಪ ಹಾಲು, ಲಿಂಬೆ ರಸ ಮತ್ತು ಜೇನುತುಪ್ಪವನ್ನು ಮಿಶ್ರಮಾಡಿ ಫೆಸ್ ಪ್ಯಾಕ್ ರೀತಿಯಲ್ಲಿ ಬಳಸಿ

ರಕ್ತಹಿನತೆಯನ್ನು ತಡೆಯುತ್ತದೆ

ಕೊತ್ತಂಬರಿ ಸೊಪ್ಪು ಮತ್ತು ಬೀಜದಲ್ಲಿ ಐರನ್ ಅಂಶವು ಹೇರಳವಾಗಿದೆ. ಇದರ ಸೇವನೆಯಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದಾಗಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರಕ್ತದ ಉತ್ಪತ್ತಿಯು ಹೆಚ್ಚಾಗುತ್ತದೆ.

ಇದನ್ನೂ ಓದಿರಿ : ನಿಂಬೆ ಹುಲ್ಲಿನ ಕಷಾಯದ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಕುಡಿಯದೇ ಬಿಡಲಾರಿರಿ..

ಕೊತ್ತಂಬರಿ ಸೊಪ್ಪನ್ನು ಕೇವಲ ಆಹಾರಗಳ ಸ್ವಾಧಹೆಚ್ಚಳಕ್ಕೆ ಮಾತ್ರ ಉಪಯೋಗಿಸುತ್ತಿಲ್ಲ ಎಂಬುದನ್ನು ತಿಳಿದುಕೊಂಡಿರಿ ಎಂದು ಬಾವಿಸುತ್ತೇವೆ. ಇವುಗಳಲ್ಲಿರುವ ಈ ವಿಶೇಷ ಔಷಧೀಯ ಗುಣಗಳನ್ನು ನೋಡಿಯೇ ನಮ್ಮ ಪೂರ್ವಜರು ನಮ್ಮ ಆಹಾರದಲ್ಲಿ ಅವುಗಳಿಗೆ ಸ್ಥಾನವನ್ನು ನಿಡಿದ್ದಾರೆ.

LEAVE A REPLY

Please enter your comment!
Please enter your name here