ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಕಾಯ್ದುಕೊಳ್ಳಲು 6 ರಿಂದ 8 ಗ್ಲಾಸ್ ನೀರನ್ನು ಕುಡಿಯಲೇ ಬೇಕಾಗುತ್ತದೆ. ನೀರನ್ನು ಕುಡಿಯುವುದಕ್ಕೂ ಸಹ ಒಂದು ವಿಧಾನವನ್ನು ನಮ್ಮ ಹಿರಿಯರು ಹೇಳಿದ್ದಾರೆ.
ಸಾಮಾನ್ಯವಾಗಿ ಹಿರಿಯರು ನಿಂತುಕೊಂಡು ನೀರನ್ನು ಕುಡಿಯಬಾರದು ಎಂದು ಹೇಳುತ್ತಾರೆ. ಆದರೆ ಇಂದಿನ ಯುವಕರು ಇದೆಂತಹ ಶಾಸ್ತ್ರವೆಂದು ನಗೆಯಾಡುವುದು ಸರ್ವೇಸಾಮಾನ್ಯ. ಆದರೆ ಸಂಶೋಧನೆಗಳಿಂದ ಹಿರಿಯರು ಹೇಳುವುದು ಸರಿಯಾಗಿದೆ, ಇದರಿಂದ ದೇಹಕ್ಕೆ ತೊಂದರೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ. ನಿಂತುಕೊಂಡು ನೀರನ್ನು ಕುಡಿಯುವುದರ ನಾನಾ ಪರಿಣಾಮಗಳನ್ನು ತಿಳಿಸುವ ಸಣ್ಣ ಪ್ರಯತ್ನ ನಮ್ಮ ಕಡೆಯಿಂದ.
ಸಂಧಿವಾತ ಉಂಟಾಗಬಹುದು
ನಿಂತುಕೊಂಡು ನೀರನ್ನು ಕುಡಿಯುವ ಅಭ್ಯಾಸವು ನಿಮ್ಮನ್ನು ಸದಾ ಅಪಘಾತದೆಡೆಗೆ ದೂಡುತ್ತಿರುತ್ತದೆ. ಏಕೆಂದರೆ ಮುಂದೆ ಅದು ನಿಮ್ಮನ್ನು ಸಂಧಿವಾತದ ಕಡೆಗೆ ದೂಡಬಹುದು. ನಿಂತು ನೀರು ಕುಡಿಯುವುದರಿಂದ ದೇಹದ ಗಂಟುಗಳಲ್ಲಿರುವ ದ್ರವಗಳು ಸಮತೋಲನವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಬಾಯಾರಿಕೆ ಹೆಚ್ಚಾಗುತ್ತದೆ
ನಿಂತುಕೊಂಡು ನೀರನ್ನು ಕುಡಿಯುವ ಅಭ್ಯಾಸದಿಂದ ಕುಡಿದ ನೀರು ನಮ್ಮನ್ನು ಸಂಪೂರ್ಣ ತಣಿಸುವುದಿಲ್ಲ. ನಮಗೆ ಮತ್ತೆ ಮತ್ತೆ ನೀರನ್ನು ಕುಡಿಯಬೇಕೆಂಬಂತೆ ಆಗುತ್ತದೆ. ದೇಹದ ಆರೋಗ್ಯಕ್ಕಾಗಿ ಕುಳಿತುಕೊಂಡು ನೀರನ್ನು ಕುಡಿಯುವ ಚಿಕ್ಕ ಬದಲಾವಣೆ ಮಾಡಿಕೊಳ್ಳುವುದು ಒಳಿತು.
ಇದನ್ನೂ ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?
ಅಜೀರ್ಣವನ್ನು ಉಂಟುಮಾಡುತ್ತದೆ
ಸ್ನಾಯುಗಳು ಮತ್ತು ನರಗಳು ಕೆಳಗೆ ಕುಳಿತುಕೊಂಡು ನೀರನ್ನು ಕುಡಿಯುವಾಗ ಸ್ವಸ್ಥಿತಿಯಲ್ಲಿರುತ್ತವೆ. ಉತ್ತಮ ರೀತಿಯಿಂದ ಇತರ ಆಹಾರ ಪದಾರ್ಥಗಳೊಂದಿಗೆ ಬೆರೆತು ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ನಿಂತು ನೀರು ಕುಡಿಯುವುದರಿಂದ ಅಜೀರ್ಣವು ಉಂಟಾಗುತ್ತದೆ.
ಆಮ್ಲಿಯ ಮಟ್ಟ ಏರುತ್ತದೆ
ಆಯುರ್ವೇದ ಹೇಳುವ ಪ್ರಕಾರ ನೀರನ್ನು ನಿಧಾನವಾಗಿ ಮತ್ತು ಸಣ್ಣ ಗುಟುಕುಗಳಾಗಿ ಕುಳಿತುಕೊಂಡು ಸೇವಿಸಬೇಕು. ಈ ರೀತಿ ಕುಡಿಯುವುದರಿಂದ ದೇಹದಲ್ಲಿನ ಆಮ್ಲಿಯ ಮಟ್ಟ ಕಡಿಮೆಗೊಳ್ಳುತ್ತದೆ. ನಿಂತು ನೀರನ್ನು ಸೇವಿಸುವುದರಿಂದ ದೇಹದಲ್ಲಿ ಆಮ್ಲಿಯತೆ ಏರುತ್ತದೆ.
ಅಲ್ಸರ್ ಮತ್ತು ಎದೆಯುರಿ ಉಂಟಾಗಬಹುದು
ನಿಂತುಕೊಂಡು ನೀರನ್ನು ಕುಡಿದಾಗ ಅನ್ನನಾಳದ ಕೆಳಭಾಗ ತುಂಬಾ ಕಠಿಣಗೊಳ್ಳುತ್ತದೆ. ಇದರಿಂದ ಅನ್ನನಾಳ ಮತ್ತು ಜಠರದ ನಡುವೆ ಇರುವ ಸ್ಪಿನ್ ಟರ್ (Sphincter) ತೊಂದರೆಗೆ ಒಳಗಾಗುತ್ತದೆ. ಇದರ ಪರಿಣಾಮವಾಗಿ ಅಲ್ಸರ್ ಮತ್ತು ಹೊಟ್ಟೆಯಲ್ಲಿ ಉರಿ ಉಂಟಾಗಬಹುದು.
ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ
ಮೂತ್ರಪಿಂಡದ ಕಾರ್ಯ ಸರಿಯಾಗಿ ಆಗುವುದಿಲ್ಲ
ನಿಂತುಕೊಂಡು ನೀರನ್ನು ಕುಡಿಯುವುದರಿಂದ ಆ ನೀರು ಶೋಧಿಸುವ ಪ್ರಕ್ರಿಯೆಗೆ ಸ್ಪಂದಿಸುವುದಿಲ್ಲ. ಇದರಿಂದ ಮೂತ್ರಪಿಂಡ ಮತ್ತು ಮೂತ್ರಕೋಶಗಳು ಅಸ್ವಸ್ಥಗೊಳ್ಳುತ್ತವೆ ಮತ್ತು ಹಾನಿಗೊಳಗಾಗುತ್ತವೆ.
ಈ ಎಲ್ಲಕರಣಗಳಿಂದಾಗಿಯೇ ಹಿರಿಯರು ನಿಂತುಕೊಂಡು ನೀರನ್ನು ಕುಡಿಯಬಾರದು ಎಂಬುದಾಗಿ ಹೇಳಿದ್ದಾರೆ. ಇನ್ನುಮುಂದಾದರೂ ಅವರ ಮಾತನ್ನು ಅಪಹಾಸ್ಯ ಮಾಡದೇ ಕುಳಿತು ನೀರು ಕುಡಿಯುವ ನಿಯಮ ಪಾಲನೆ ಮಾಡಿ ಆರೋಗ್ಯವನ್ನು ಉಳಿಸಿಕೊಳ್ಳೋಣ.
ಇದನ್ನೂ ಓದಿರಿ: ಪ್ಲೇಟ್ಲೆಟ್ ಕೌಂಟ್ ಕೊರತೆಯಿಂದ ಬಳಲುತ್ತಿದ್ದಿರೇ..? ಹಾಗಾದರೆ ಇಲ್ಲಿದೆ ನೈಸರ್ಗಿಕ ಪರಿಹಾರ..!