ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?

health-benefits-of-chirchita-apamarg

ಉತ್ತರಾಣಿ ಇದು ಅನೇಕ ರೋಗಗಳಿಗೆ ಉತ್ತಮ ಪರಿಹಾರವನ್ನು ನೀಡುವ ಶಕ್ತಿಯನ್ನು ಹೊಂದಿರುವ ಒಂದು ಗಿಡಮೂಲಿಕೆಯ ಸಸ್ಯವಾಗಿದೆ. ಇದು ಎರಡು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ ಮತ್ತು ವಾರ್ಷಿಕ ಬೆಳೆಯಾಗಿದೆ. ಅಲ್ಲದೇ ಈ ಗಿಡದಿಂದ ತುರಾಯಿಯ ರೀತಿಯಲ್ಲಿ ಹೂವಿನ ಗೊಂಚಲು ಬಂದು ಅಲ್ಲಿಯೇ ಬೀಜವಾಗುತ್ತದೆ. ಈ ಗಿಡದ ಎಳೆಗಳ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಎನ್ನುವುದನ್ನು ತಿಳಿಸುವ ಸಣ್ಣ ಪ್ರಯತ್ನ ನಮ್ಮ ವರ್ತಾವಾಣಿ ಕಡೆಯಿಂದ ಮಾಡುತ್ತಿದ್ದೇವೆ.

ಉತ್ತರಾಣಿಯ ಆರೋಗ್ಯ ಪ್ರಯೋಜನಗಳು

ಮೂತ್ರ ವಿಸರ್ಜನೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಉತ್ತರಾಣಿಯ ಗಿಡವನ್ನು ಔಷಧವಾಗಿ ಬಳಸುವುದರಿಂದ ಪರಿಹಾರವನ್ನು ಕಾಣಬಹುದಾಗಿದೆ. ಉತ್ತರಾಣಿಯ ಎರಡು ಮೂರೂ ಎಲೆಗಳನ್ನು ತೆಗೆದುಕೊಂಡು ನೀರಿಗೆ ಹಾಕಿ ಚೆನ್ನಾಗಿ ಕುಡಿಸಿ ಕಷಾಯದ ರೂಪದಲ್ಲಿ ತೆಗೆದುಕೊಳ್ಳುವುದು ಉತ್ತಮ ಪರಿಣಾಮವನ್ನು ಬೀರುತ್ತದೆ.

ಬಾಯಿಯ ಹುಣ್ಣು ತುಂಬಾ ತೊಂದರೆಯನ್ನು ಉಂಟುಮಾಡುವ ಒಂದು ಸಮಸ್ಯೆಯಾಗಿದೆ. ಇದರ ಚಿಕಿತ್ಸೆಯಲ್ಲಿ ಉತ್ತರಾಣಿಯ ಎಲೆಗಳನ್ನು ಬಳಸಬಹುದಾಗಿದೆ. ಸ್ವಚ್ಛವಾದ ಒಂದು ಎಲೆಯನ್ನು ತೆಗೆದುಕೊಂಡು ನಿಧಾನವಾಗಿ ಜಗಿಯುವುದರಿಂದ ಹುಣ್ಣುಗಳು ನಿವಾರಣೆಯಾಗುತ್ತವೆ.

ಉತ್ತರಾಣಿಯು ಮೂಲವ್ಯಾಧಿ, ಹೊಟ್ಟೆಯಲ್ಲಿನ ಹುಣ್ಣು, ಚರ್ಮದ ವ್ಯಾದಿಗಳಿಗೆ ಉತ್ತಮವಾದ ಪರಿಹಾರವನ್ನು ನೀಡುತ್ತದೆ. ಇದರ ಎಲೆ ಮತ್ತು ಬೇರನ್ನು ಕಷಾಯ ರೂಪದಲ್ಲಿ ಅಥವಾ ಚೆನ್ನಾಗಿ ರುಬ್ಬಿ ರಸವನ್ನು ತೆಗೆದು, ಆ ರಸಕ್ಕೆ ತೆಂಗಿನ ಎಣ್ಣೆಯನ್ನು ಸೇರಿಸಿ ಸಮಸ್ಯೆಯಿರುವಲ್ಲಿ ಹಚ್ಚುವುದರಿಂದ ಉತ್ತಮ ಪರಿಹಾರವನ್ನು ಕಾಣಬಹುದಾಗಿದೆ.

ಉತ್ತರಾಣಿಯು ತಲೆನೋವಿನ ಸಮಸ್ಯೆಯನ್ನು ನಿವಾರಿಸಲು ಉತ್ತಮವಾದ ಆಯುರ್ವೇದ ಔಷಧವಾಗಿದೆ. ಇದರ ಬೇರನ್ನು ಚೆನ್ನಾಗಿ ನೆರಳಿನಲ್ಲಿ ಒಣಗಿಸಿಕೊಂಡು ಪೌಡರ್ ಮಾಡಿ ಇಟ್ಟುಕೊಂಡು, ತಲೆನೋವು ಬಂದಾಗ ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ತಕ್ಷಣದಲ್ಲಿ ನಿವಾರಣೆಯಾಗುತ್ತದೆ.

ಇದನ್ನೂ ಓದಿರಿ: ನಿಂತುಕೊಂಡು ನೀರು ಕುಡಿಯುವುದರಿಂದ ಈ ರೀತಿಯಾದ ಸಮಸ್ಯೆ ಉಂಟಾಗುತ್ತದೆ ಎಚ್ಚರ…!

health-benefits-of-chirchita-apamarg

ನೆಗಡಿ, ಕೆಮ್ಮು, ರಕ್ತಹೀನತೆ ಮತ್ತು ಅಸ್ತಮಾಗೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಈ ಉತ್ತರಾಣಿಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಈ ಗಿಡದ ಕಡ್ಡಿಗಳನ್ನು ಸುತ್ತು ಭಸ್ಮ ಮಾಡಿ ಅದಕ್ಕೆ ಸ್ವಲ್ಪ ಕಾಳುಮೆಣಸು ಮತ್ತು ಜೇನುತುಪ್ಪ ಬೆರೆಸಿ ಪ್ರತಿನಿತ್ಯ ಸೇವಿಸಬೇಕು. ಇದು ರೋಗಗಳ ನಿವಾರಣೆಗೆ ಅತ್ಯುತ್ತಮ ಔಷಧಗಳಲ್ಲಿ ಒಂದಾಗಿದೆ.

ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವವರು ಉತ್ತರಾಣಿಗಿಡದ ಕಾಂಡವನ್ನು ಸುಟ್ಟು ಭಸ್ಮವನ್ನು ಮಾಡಿಕೊಂಡು ಅದನ್ನು ದೇಸಿ ಹಸುವಿನ ಹಾಲಿನಲ್ಲಿ ತೆಗೆದುಕೊಳ್ಳುವುದರಿಂದ ಉತ್ತಮ ಪರಿಣಾವನ್ನು ಕಾಣಬಹುದಾಗಿದೆ.

ಉತ್ತರಾಣಿ ಎಂಬ ಅಮೃತವನ್ನು ಹಿತಮಿತವಾಗಿ ನಮ್ಮ ಉಪಯೋಗಕ್ಕೆ ಬಳಸಿಕೊಂಡು ನೈಸರ್ಗಿಕ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಅಲ್ಲದೇ ಈ ಸಸ್ಯದ ಇನ್ನೂ ಅನೇಕ ಉಪಯೋಗಗಳು ಇದ್ದು, ಅವುಗಳು ನಿಮಗೆ ತಿಳಿದಿದ್ದಲ್ಲಿ ಅಥವಾ ನಮಗೆ ಸಲಹೆಗಳನ್ನು ನೀಡಲು ಬಯಸಿದಲ್ಲಿ ಕಾಮೆಂಟ್ ಮಾಡಿ. ಇಂತಹ ಮಾಹಿತಿಗಳನ್ನು ಪಡೆಯುತ್ತಿರಲು ನಮ್ಮ ವೆಬ್ ಸೈಟ್ ನೋಟಿಫಿಕೇಶನ್ ಆಲೋ ಮಾಡಿ…

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

LEAVE A REPLY

Please enter your comment!
Please enter your name here