ನಿಂಬೆ ಹುಲ್ಲಿನ ಕಷಾಯದ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಕುಡಿಯದೇ ಬಿಡಲಾರಿರಿ..

ಮಜ್ಜಿಗೆ ಹುಲ್ಲು /ನಿಂಬೆ ಹುಲ್ಲು
ಮಜ್ಜಿಗೆ ಹುಲ್ಲು /ನಿಂಬೆ ಹುಲ್ಲು

 

ನಿಂಬೆ ಹುಲ್ಲು (Lemongrass) ಅಥವಾ ಮಜ್ಜಿಗೆ ಹುಲ್ಲು ಎಂದು ಕರೆಯಲ್ಪಡುವ ಇದು ತುಂಬಾ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. 

ನಾವೆಲ್ಲಾ ಚಿಕ್ಕವರಿರುವಾಗ ಅಜ್ಜಿಯಂದಿರು ಕೆಮ್ಮು, ನೆಗಡಿ ಉಂಟಾದಾಗ ಇದರ ಕಷಾಯ  ಮಾಡಿ ಕೊಡುತ್ತಿದ್ದರು. ಇದನ್ನು ಸೇವಿಸಿದ ನಂತರ ಅವು ಮಾಯವಾಗುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಇದೊಂದು ಔಷಧಿಯ ಸಸ್ಯವಾಗಿದ್ದು ಔಷಧ ತಯಾರಿಕೆಗಾಗಿ ದೋಡ್ಡ ಪ್ರಮಾಣದಲ್ಲಿ ಇಂದು ಬೆಳೆಯಲಾಗುತ್ತಿದೆ. ಈ ಹುಲ್ಲಿನ ಪ್ರಮುಖ ಐದು ಆರೋಗ್ಯಕರ ಪ್ರಯೋಜನವನ್ನು ಇಂದು ತಿಳಿದುಕೊಳ್ಳೋಣ…

ಮಜ್ಜಿಗೆ ಹುಲ್ಲಿನ (ನಿಂಬೆ ಹುಲ್ಲಿನ) ಕಷಾಯ ಕುಡಿಯುವುದರಿಂದ ಆಗುವ ಪ್ರಯೋಜನಗಳು

ತೂಕ ಕಡಿಮೆ ಮಾಡುತ್ತದೆ

ನಿಂಬೆ ಹುಲ್ಲಿನ ಕಷಾಯ ಅತ್ಯಧಿಕ ಕ್ಯಾಲರಿಯನ್ನು ಹೊಂದಿದೆ. ಅಲ್ಲದೇ ಅತಿಯಾಗಿ ಆಹಾರ ಸೇವಿಸುವುದನ್ನು ತಡೆಗಟ್ಟುತ್ತದೆ. 

ಇದನ್ನೂ ಓದಿರಿ : ಸೂರ್ಯನಮಸ್ಕಾರದ ಪ್ರಯೋಜನಗಳು

ಮಜ್ಜಿಗೆ ಹುಲ್ಲಿನ ಕಶಯದಲ್ಲಿ ಪಲಿಫಿನಾಲ್ ಎಂಬ ಅಂಶವು ತುಂಬಿರುತ್ತದೆ. ಇದರಿಂದ ಶಕ್ತಿಯ ಸದುಪಯೋಗ ಮತ್ತು ಕೊಬ್ಬನ್ನು ಉತ್ಕರ್ಷನೆಗೊಳಿಸಿ ತೂಕವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಉತ್ತಮವಾದ ನೈಸರ್ಗಿಕ ಮೂತ್ರವರ್ಧಕವಾಗಿದೆ.  ಇದರಿಂದ ಅನಗತ್ಯ ತ್ಯಾಜ್ಯಗಳು ಸರಾಗವಾಗಿ ಹೊರಹೋಗಿ ತೂಕದ ಇಳಿಕೆಗೆ ಸಹಾಯಕವಾಗುತ್ತದೆ.

ಶೀತ, ಕೆಮ್ಮು ಮತ್ತು ಅಳರ್ಜಿಗಳನ್ನು ಹೋಗಲಾಡಿಸುತ್ತದೆ.

ಶೀತ, ಕೆಮ್ಮು, ಗಂಟಲು ನೋವು ಮತ್ತು ಅಲರ್ಜಿಗಳಂತಹ  ಸಮಸ್ಯೆಗಳನ್ನು ಇದು ಪೂರ್ಣವಾಗಿ ಗುಣಪಡಿಸುತ್ತದೆ.ದೇಹದಿಂದ ವಿಷವನ್ನು ಶುದ್ಧಿಕರಿಸುವ ಮತ್ತು ದುಗ್ದನಾಲಗಳ ಸ್ವಚ್ಚತೆಯನ್ನು ಉತ್ತೇಜಿಸುವ ಸಾಮರ್ಥ್ಯ ಹೊಂದಿದೆ. ಶೀತ,ಕೆಮ್ಮು, ಗಂಟಲು ನೋವು ಮತ್ತು ಅಳರ್ಜಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 

ಚರ್ಮದ ಆರೋಗ್ಯ ಸುಧಾರಿಸುತ್ತದೆ.

ನಿಂಬೆ ಹುಲ್ಲಿನ ಕಷಾಯ ಸೇವನೆಯಿಂದ ಚರ್ಮದ ಆರೋಗ್ಯ ಉತ್ತಮಗೊಳಿಸುತ್ತದೆ. ಇದು ನಂಜು ನಿರೋಧಕತೆಯನ್ನು ಹೆಚ್ಚಿಸುತ್ತದೆ. ಈ ಹುಲ್ಲಿನ ತೈಲವನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ರಂದ್ರಗಳಲ್ಲಿರುವ ಕ್ರಿಮಿಗಳು ನಾಶವಾಗುತ್ತವೆ. ಅನೇಕ ಚರ್ಮರೋಗಗಳಲ್ಲದೆ ಚರ್ಮದ ಕ್ಯಾನ್ಸರ್ ಗಳನ್ನೂ ತಡೆಗಟ್ಟುತ್ತದೆ. ದೇಹದ ಮೇಲೆ ಉಂಟಾಗುವ ಅನೇಕ ಬ್ಯಾಕ್ಟೀರಿಯಾ ಮತ್ತು ಶಿಲಿಂದ್ರ ಸಂಬಂಧಿ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ.

ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ.

ಹೊಟ್ಟೆಯ ಸಮಸ್ಯೆ, ಕಿರಿಕಿರಿ ಮತ್ತು ಇತರ ಜಿರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿ ಮಜ್ಜಿಗೆ ಹುಲ್ಲಿನ ಕಷಾಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಗ್ಯಾಸ್ಟ್ರಿಕ್ ನಿಂದ ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ಹುಣ್ಣು ಗಳನ್ನೂ ಯಶಸ್ವಿಯಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅಲ್ಲದೇ ಅನೇಕ ಜಿರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. 

ಇದನ್ನು ಓದಿರಿ: ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ..? ಹಾಗಾದರೆ ಇಲ್ಲಿದೆ ಪರಿಹಾರ..!

ಕಿಡ್ನಿಯ ಕಾರ್ಯವನ್ನು ಉತ್ತಮಗೊಳಿಸುತ್ತದೆ. 

ನಿಂಬೆ ಹುಲ್ಲಿನ ಕಷಾಯವು ನೈಸರ್ಗಿಕ ಮೂತ್ರವರ್ದಕವಾಗಿದೆ. ಅಲ್ಲದೆ ಇದು ದೇಹದ ಒಳಗಿನ ಕಲ್ಮಷಗಳನ್ನು ತೊಳೆದು ಹಾಕಲು ಉತ್ತೇಜಿಸುತ್ತದೆ. ಅಂತೆಯೇ ಮೂತ್ರಪಿಂಡವು ಶುದ್ಧಿಕರಣಗೊಳ್ಳುವಂತೆ  ಮಾಡುತ್ತದೆ. 

Lemongrass-Tea

ನಿಂಬೆ ಕಷಾಯ ತಯಾರಿಸುವ ವಿಧಾನ 

ಬೇಕಾಗುವ ಸಾಮಗ್ರಿಗಳು: 

  1. ನಾಲ್ಕು ಕಪ್ ನೀರು.
  2. ಒಂದು ಕಪ್ ಕತ್ತರಿಸಿದ ಹುಲ್ಲಿನ ಎಳೆಗಳು.
  3. ಅಗತ್ಯವಿದ್ದರೆ ಸ್ವಲ್ಪ ಸಕ್ಕರೆ.

ಮಾಡುವ ವಿಧಾನ  :

  1. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಬಿಸಿಯಾಗಿಸಬೇಕು. 
  2. ನಂತರ ಕತ್ತರಿಸಿದ ಹುಲ್ಲನ್ನು ಹಾಕಿ 5 ನಿಮಿಷ ಕುದಿಸಬೇಕು. 
  3. ಕಡಿಮೆ ಶಾಖದಲ್ಲಿ 5 ನಿಮಿಷ ಹಾಗೆಯೇ ಬಿಡಬೇಕು. ನಂತರ ತಣ್ಣಗಾಗಿಸಿಕೊಲ್ಲಬೇಕು. 
  4. ಅಗತ್ಯವಿದ್ದರೆ ಸಕ್ಕರೆಯನ್ನು ಸೇರಿಸಿಕೊಂಡು ಕುಡಿಯಬಹುದು. ದಿನಕ್ಕೆ ಒಂದರಿಂದ ಎರಡು ಗ್ಲಾಸ್ ನಷ್ಟು ಕಷಾಯವನ್ನು ಸೇವಿಸಬಹುದು. ಕಿರಿಯ ವಯಸ್ಸಿನವರಾಗಿದ್ದಾರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀಡಿ.  

ಮಜ್ಜಿಗೆ ಹುಲ್ಲು ಎಂದು ಕರೆಯಲ್ಪಡುವ ಈ ಹುಲ್ಲಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಆದರೆ ಇಲ್ಲಿ ಪ್ರಮುಖ 5 ಲಾಭಗಳನ್ನು ತಿಳಿಸಲಾಗಿದೆ. 

ಇದರ ಉಪಯೋಗವನ್ನು ಮಾಡುತ್ತಿದ್ದರೆ ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.. ನಿಮ್ಮ ಸಮಸ್ಯೆ, ಸಲಹೆ ಸೂಚನೆಗಳಿಗಾಗಿ ಕಾಮೆಂಟ್ ಮಾಡಿ ತಿಳಿಸಿ.. 

LEAVE A REPLY

Please enter your comment!
Please enter your name here