ಈ ರಜೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿದೆ ಕೆಲವು ಅದ್ಭುತ ಸಲಹೆಗಳು..!

here-is-tips-for-childrens-how-to-spend-summer-vacations

ಪ್ರತಿಬಾರಿಯೂ ಬೇಸಿಗೆ ಬಂತೆಂದರೆ ಮಕ್ಕಳಿಗೆ ರಜೆಯ ಮೋಜು. ಆದರೆ ಈ ಬಾರಿ ಎಂದಿಗಿಂತಲೂ ಹೆಚ್ಚಿನ ರಜೆಗಳು ದೊರೆತಿದ್ದರೂ ಕೊರೊನಾ ಕಾರಣದಿಂದ ಹೊರಗೆ ಕಳುಹಿಸಲು ಆಗುತ್ತಿಲ್ಲ. ಮಕ್ಕಳು ಮನೆಯಲ್ಲಿಯೇ ಉಳಿದರೆ ತಾಯಂದಿರ ಪಾಡು ಹೇಳುವುದು ಬೇಡ. ಮಕ್ಕಳನ್ನು ಸುಧಾರಿಸುವುದರಲ್ಲಿ ತಾಯಂದಿರು ಸುಸ್ತಾಗಿ ಹೋಗಿರುತ್ತಾರೆ. ಆದರೆ ನಾವಿಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ಅವರಿಗೆ ಸಮಯ ಕಳೆದಂತೆಯೂ ಆಗುತ್ತದೆ ಮತ್ತು ಈ ದಿನದ ಸದುಪಯೋಗವು ಆಗುತ್ತದೆ.

ಈಗ ಕೊರೊನಾ ಸೋಂಕು ಹರಡುತ್ತಿರುವುದರಿಂದ ಮಕ್ಕಳನ್ನು ಸ್ನೇಹಿತರ ಜೊತೆಯಲ್ಲಿ ಹೊರಗೆ ಕಳುಹಿಸಲು ಆಗುವುದಿಲ್ಲ, ಸಮ್ಮರ್ ಕ್ಯಾಂಪ್, ಪಾರ್ಕ್ ಗಳು ಸಹ ಇಲ್ಲದ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ನಿಭಾಯಿಸುವುದು ಅಮ್ಮಂದಿರಿಗೆ ದೊಡ್ಡ ಸವಾಲಿನ ಕೆಲಸ ಹಾಗಿದ್ದರೆ ಮನೆಯೊಳಗೆ ಮಕ್ಕಳನ್ನು ಎಂಗೇಜ್ ಮಾಡುವುದು ಹೇಗೆ? ಅದು ಕೂಡ ಅವರಿಗೆ ಬೋರ್ ಆಗದಂತೆ ಹೇಗೆ ಅನ್ನುವ ಪ್ರಶ್ನೆಗೆ ನಾನು ಇವತ್ತು ನಿಮಗೆ ಒಂದಿಷ್ಟು ಸಲಹೆ ಕೊಡ್ತಾ ಇದ್ದಿವಿ ನೋಡಿ.

ಮನೆಗೆಲಸ ಕಲಿಸಿ

ಈ ರಜೆಯ ಅವಧಿಯಲ್ಲಿ ಮಕ್ಕಳಿಗೆ ಸಣ್ಣ ಪುಟ್ಟ ಮನೆಗೆಲಸಗಳನ್ನು ಹೇಳಿಕೊಡಿ. ಇದರಿಂದ ಅವರ ಸಮಯವೂ ಕಳೆಯುತ್ತದೆ. ಇದರೊಂದಿಗೆ ಈ ಕೆಲಸಗಳನ್ನು ಮಾಡುವುದು ಹೇಗೆ, ನಾವು ಇತರರಿಗೆ ಹೊರೆಯಾಗಬಾರದು ಎಂಬಂತಹ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಅವರಿಗೆ ಮನೆ ಗುಡಿಸುವುದು, ಒರೆಸುವುದು ಇಂತಹ ಕೆಲಸಗಳನ್ನು ಮಾಡಲು ಹೇಳಿಕೊಡಿ.

ಅವರ ಬಟ್ಟೆಗಳನ್ನು ಮಾಡಚಿಡಲು ಕಳಿಸಿ

ಬಟ್ಟೆಗಳನ್ನು ಮಡಚುವ ಮತ್ತು ಶಿಸ್ತಾಗಿ ಇಟ್ಟುಕೊಳ್ಳಲು ಅವರಿಗೆ ತಿಳುವಳಿಕೆಗಳನ್ನು ನೀಡಿ. ಅವರ ಬಟ್ಟೆಗಳನ್ನಾದರೂ ಮಡಚಿ ಇಟ್ಟುಕೊಳ್ಳುವುದನ್ನು ಕಲಿತುಕೊಳ್ಳಲಿ. ಇದರಿಂದಾಗಿ ಹಲವಾರು ಸಂಗತಿಗಳು ಅವರಿಗೆ ತಿಳಿಯುತ್ತದೆ. ಮಕ್ಕಳಿಗೆ ಕೆಲಸ ಹೇಳಬಾರದು ಎಂದು ಅತಿಯಾದ ಮುದ್ದು ಮಾಡುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಇಂತಹ ತಿಳುವಳಿಕೆಗಳನ್ನು ನೀಡುವುದು ಅವಶ್ಯವಾಗಿದೆ. 

here-is-tips-for-childrens-how-to-spend-summer-vacations

ಒಳಾಂಗಣ ಆಟಗಳನ್ನು ಹೇಳಿಕೊಡಿ

ಆಸಕ್ತಿದಾಯಕ ಮತ್ತು ಬುದ್ದಿಶಕ್ತಿಯನ್ನು ಹೆಚ್ಚಿಸುವಂತಹ ಆಟಗಳು, ಮೊಜುದಾಯಕ ಆಟಗಳು, ನೀವು ಚಿಕ್ಕಂದಿನಲ್ಲಿ ಆಡುತ್ತಿದ್ದ ಆಟಗಳು ಹೀಗೆ ಅವರಿಗೆ ಹೇಳಿಕೊಡಿ. ಇವುಗಳನ್ನು ಆಡುತ್ತಾ ಸಮಯವನ್ನು ಖುಷಿಯಿಂದ ಕಳೆಯುತ್ತಾರೆ. ಹಾಗೆಯೇ ತಾಯಂದಿರಿಗೆ ಮಕ್ಕಳ ರಗಳೆ ಮತ್ತು ಗಲಾಟೆಯೂ ತಪ್ಪುತ್ತದೆ.

ಚಿತ್ರಗಳನ್ನು ಬಿಡಿಸಲು ಕಳಿಸಿ

ಮಕ್ಕಳಲ್ಲಿನ ಆಸಕ್ತಿ ಮತ್ತು ಕಲೆಯನ್ನು ಹೊರಹಾಕಲು ಇದು ಅತ್ಯುತ್ತಮ ಸಮಯವಾಗಿದೆ. ಅವರ ಕ್ರಿಯೇಟಿವಿಟಿಯನ್ನು ಪ್ರೋತ್ಸಾಹಿಸಿ. ಅವರಿಗೆ ಈನಿಷ್ಟ ಮತ್ತು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಕೊಳ್ಳಿ.  ಚಿತ್ರಕಲೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಅಥವಾ ಅವರ ಆಸಕ್ತಿದಾಯಕ ಕೆಲಸಗಳನ್ನು ಮಾಡಲು ಬೀಡಿ. 

ಕಥೆಗಳನ್ನು ಹೇಳಿ

ಮಕ್ಕಳಿಗೆ ನೀತಿಕಥೆಗಳು, ದೇಶ ಭಕ್ತಿ ಹೆಚ್ಚಿಸುವಕಥೆಗಳು, ಪೌರಾಣಿಕ ಕಥೆಗಳು ಹೀಗೆ ಕಥೆಗಳನ್ನು ಹೇಳಿ ಅದರ ನೀತಿಗಳನ್ನು ತಿಳಿಸಿಕೊಡಬಹುದು. ಇದರೊಂದಿಗೆ ಅವರಿಗೂ ಕಥೆಗಳನ್ನು ಹೇಳಲು ಅವಕಾಶಗಳನ್ನು ಮಾಡಿಕೊಡಿ. ಅವರಲ್ಲಿ ಕಥೆ ಹೇಳುವ, ಮಾತನಾಡುವ ಕೌಶಲ್ಯಗಳು ಬೆಳೆಯಲಿ. 

here-is-tips-for-childrens-how-to-spend-summer-vacations

ಪುಸ್ತಕಗಳನ್ನು ಓದಲು ಹೇಳಿ

ಮಕ್ಕಳಿಗೆ ಸುಂದರವಾದ ಕಾಮಿಕ್ ಪುಸ್ತಕಗಳನ್ನು ನೀಡಿ, ಅವರ ಓದುವ ಆಸಕ್ತಿಯನ್ನು ಹೆಚ್ಚಿಸಿ. ಓದಿದ ಕಥೆಗಳನ್ನು ಎಷ್ಟು ತಿಳಿದುಕೊಂಡಿದ್ದಾರೆ ಎಂದು ಪರೀಕ್ಷಿಸಲು ಅವರಿಂದಲೇ ಕಥೆಗಳನ್ನು ಹೇಳಿಸಿ. ಇಂತಹ ಚಟುವಟಿಕೆಗಳು ಮಕ್ಕಳಿಗೂ ಖುಷಿಯನ್ನು ನೀಡುತ್ತದೆ. ಇದರೊಂದಿಗೆ ಅವರ ಜ್ಞಾನವೂ ಬೆಳವಣಿಗೆಯಾಗುತ್ತದೆ. ನಾವು ಕೇವಲ ಓದಿನಲ್ಲಿ ಮುಂದಿದ್ದರೆ ಮಾತ್ರ ಬುದ್ಧಿವಂತ ಎನ್ನುವ ಮನೋಭಾವವನ್ನು ಬಿಡಬೇಕು. ಅವರಿಗೆ ಸಮಾಜದೊಂದಿಗೆ ವ್ಯವಹರಿಸುವ ಮತ್ತು ಬಾಳುವ ಕಲೆಗಳು ಈ ಮೂಲಕ ಅಭಿವೃದ್ಧಿ ಆಗುತ್ತವೆ ಹಾಗಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು.

ಫಿಸಿಕಲ್ ಆಕ್ಟಿವಿಟಿ ಮಾಡಿಸಿ 

ರಜೆಯೆಂದರೆ ಮೋಜು ಮಸ್ತಿ ಇರಲೇ ಬೇಕು, ಇವುಗಳ ಜೊತೆಗೆ ಹಾಡು, ಡ್ಯಾನ್ಸ್, ಯೋಗ ಹೀಗೆ ಅವರ ಪ್ರತಿಭೆ ಅರಳಲು ಅವಕಾಶ ಮಾಡಿಕೊಡಬೇಕು. ಇದರಿಂದ ಅವರಿಗೆ ಉತ್ತಮ ಆರೋಗ್ಯದೊಂದಿಗೆ ಸಮಯವೂ ಕಳೆಯುತ್ತದೆ. 

ತಿಳುವಳಿಕೆಗಳನ್ನು ನೀಡಿ

ಮಕ್ಕಳಿಗೆ ನಮ್ಮ ಸಂಸೃತಿ, ಆಚಾರ-ವಿಚಾರ, ದೇಶ, ಹಬ್ಬಗಳು ಹೀಗೆ ಅನೇಕ ವಿಷಯಗಳನ್ನು ಅವರಿಗೆ ತಿಳಿಸಿಕೊಡಿ. ಅವರಲ್ಲಿ ನಮ್ಮ ದೇಶದ ಕುರಿತು ಭಕ್ತಿಯನ್ನು ತುಂಬಿ. ಮಹಾನ್ ಸಾಧಕರ ಕಥೆಗಳನ್ನು ತಿಳಿಸಿಕೊಡಿ. ಇವುಗಳು ಅವರಿಗೆ ಪಾಠವಾಗುತ್ತದೆ. 

here-is-tips-for-childrens-how-to-spend-summer-vacations

ಮೊಬೈಲ್ ಟಿವಿ ನೋಡಲು ಸಮಯ ನಿಗದಿಮಾಡಿ

ರಜೆಯಲ್ಲಿ ಮಕ್ಕಳು ನಮಗೆ ತೊಂದರೆ ಕೊಡುತ್ತಾರೆ ಎಂದು ಮಕ್ಕಳಿಗೆ ಟಿವಿ ಮತ್ತು ಮೊಬೈಲ್ ಕೊಟ್ಟು ಕೂರಿಸಬೇಡಿ. ಹಾಗೆಂದು ಅವುಗಳನ್ನು ನೋಡುವುದು ಬೇಡ ಎಂದಲ್ಲ. ಕೆಲವು ಸಮಯವನ್ನು ಅವರಿಗೆ ಈ ಕಾರ್ಯಕ್ಕಾಗಿ ನಿಗದಿ ಮಾಡಿ. ನಾವು ಟಿವಿ ಮತ್ತು ಮೊಬೈಲ್ ಇವುಗಳನ್ನು ನೋಡಬೇಡ ಎಂದು ಕಡಿವಾಣ ಹಾಕುತ್ತಾ ಇರುವುದರಿಂದ ಮಕ್ಕಳು ಇನ್ನೂ ಜಾಸ್ತಿ ಮೊಬೈಲ್ ಟಿವಿ ಗೋಸ್ಕರ ಹಠ ಮಾಡುತ್ತಾರೆ. ಮೊಬೈಲ್ ಟೀವಿ ಬಳಕೆ ಕೆಟ್ಟದ್ದು ಅಂತ ನಾವು ಹೇಳಲ್ಲ, ಆದರೆ ಟಿವಿ ನೋಡಲು ಇಂತಿಷ್ಟು ಸಮಯ ಅಂತ ಮೀಸಲಿಡಿ ಅವರ ಜತೆ ಕಾರ್ಟೂನ್ ನೋಡಿ ನೀವು ಕೂಡ ಎಂಜಾಯ್ ಮಾಡಿ. ಇನ್ನು ಮೊಬೈಲ್ ನಲ್ಲಿ ರೈಮ್ಸ್ ನೋಡಲು ಡ್ರಾಯಿಂಗ್ ಮಾಡಲು ಹೇಳಿ ಅವರ ಜ್ಞಾನ ವೃದ್ಧಿಗೆ  ಅವಕಾಶ ಆಗುವಂತಹ ವಿಷಯಗಳನ್ನು ನೋಡಲು ಅವಕಾಶ ಮಾಡಿಕೊಡಿ.

ನಾವು ತಿಳಿಸಿದ ಈ ಎಲ್ಲ ವಿಧಾನಗಳನ್ನು ಅನುಸರಿಸಿ ಮಕ್ಕಳು ಈ ರಜೆಯನ್ನು ಮನೆಯಲ್ಲಿಯೇ ಸಂತೋಷದಿಂದ ಕಳೆಯಲು ಅವಕಾಶ ಮಾಡಿಕೊಡಿ. ಹಾಗೆಯೇ ಕೊರೊನಾ ರೋಗದ ವಿರುದ್ಧ ನಮ್ಮನ್ನು ರಕ್ಷಿಕೊಳ್ಳುವ ವಿಧಾನಗಳನ್ನು ಕಳಿಸಿ, ಹೊರಗಡೆ ಹೋಗದೆ ಮನೆಯಲ್ಲಿಯೇ ಆರೋಗ್ಯವಾಗಿ ಇರುವಂತಾಗಲಿ ಎಂದು ಆಶಿಸುತ್ತೇವೆ. ಇದರೊಂದಿಗೆ ಮನೆಯಲ್ಲಿಯೇ ಸಮಯವನ್ನು ಕಳೆಯಲು ಮಕ್ಕಳಿಗೆ ವಿವಿಧ ಆಕ್ಟಿವಿಟಿಗಳನ್ನು ಕೆಳಗಿನ ವಿಡಿಯೋದಲ್ಲಿ ತಿಳಿಸಲಾಗಿದೆ. ಅದನ್ನು ನೋಡಿ ಮತ್ತು ಹೊಸ ಹೊಸ ವಿಧಾನಗಳನ್ನು ಕಲಿಯಿರಿ.

LEAVE A REPLY

Please enter your comment!
Please enter your name here