ಬೇಸಿಗೆ ಎಂದರೆ ನಮ್ಮೆಲ್ಲರಿಗೆ ಕಲ್ಲಂಗಡಿ ಹಣ್ಣು ನೆನೆಪಾಗದೆ ಇರದು. ಸೂರ್ಯನು ಕೆರಳಿರುವ ಈ ದಿನದಲ್ಲಿ ಸಂಪೂರ್ಣ ವಿರಾಮವನ್ನು ಒದಗಿಸುವ ಹಣ್ಣೆಂದರೆ ಇದೊಂದೇ. ಕಲ್ಲಂಗಡಿ ಹಣ್ಣೆಂದರೆ ಎಲ್ಲರಿಗೂ ಇಷ್ಟ, ಅದರಲ್ಲಿಯೂ ನಾವೆಲ್ಲ ಚಿಕ್ಕವರಾಗಿದ್ದಾಗ ನಮ್ಮ ನೆಚ್ಚಿನ ಹಣ್ಣುಗಳ ಪಟ್ಟಿಯನ್ನು ಆಕ್ರಮಿಸಿದ್ದ ಹಣ್ಣು. ಇದು ಶಾಖವನ್ನು ತೆಡೆಯುವ, ಸಾಮಥ್ಯವನ್ನು ಒದಗಿಸುವ ಹಣ್ಣು. ಅತೀ ಹೆಚ್ಚು ನೀರಿನ ಅಂಶದಿಂದ ಕೂಡಿದ್ದು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.
ಇದರಲ್ಲಿ ಹೇರಳವಾದ ಪೋಷಕಾಂಶಗಳು ತುಂಬಿಕೊಂಡಿದ್ದು, ವಿಟಮಿನ್-ಎ, ವಿಟಮಿನ್-ಸಿ, ಆಂಟಿ ಆಕ್ಸಿಡೆಂಟ್, ಅಮೈನೋ ಆಮ್ಲ, ಪೊಟಾಷಿಯಂ ಮತ್ತು ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಹೊಂದಿದೆ. ಇದರಿಂದಾಗಿ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭ್ಯವಾಗಿ ನಮ್ಮ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ. ಈ ಹಣ್ಣಿನ ಆರೋಗ್ಯಕರ ಗುಣಗಳನ್ನು ಈ ಸುಸಂದರ್ಭದಲ್ಲಿ ತಿಳಿದುಕೊಳ್ಳೋಣ.
ಹೃದಯದ ಅರೋಗ್ಯ ಕಾಪಾಡುತ್ತದೆ
ಸಂಶೋಧನೆಗಳ ಪ್ರಕಾರ, ಪ್ರತಿದಿನ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನ ಸಂಗ್ರಹಿಸುವಿಕೆ ನಿಲ್ಲುತ್ತದೆ. ಇದರಿಂದಾಗಿ ಹೃದಯದ ಕಾಯಿಲೆಗಳು ದೂರವಾಗುತ್ತವೆ. ನಿಯಮಿತ ಸೇವನೆಯಿಂದ ರಕ್ತ ನಾಳಗಳಲ್ಲಿ ಕೊಬ್ಬಿನ ಸಂಗ್ರಹವಾಗುವುದು ತಪ್ಪುತ್ತದೆ.
ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತದೆ
ಕಲ್ಲಂಗಡಿ ಹಣ್ಣಿನ ಪ್ರಮುಖ ಗುಣವೇ ಇದಾಗಿದ್ದು, ಶೇಕಡಾ 90 ರಷ್ಟು ನೀರನ್ನೇ ಹೊಂದಿದೆ. ಇದರಿಂದಾಗಿ ದೇಹದಲ್ಲಿ ನೀರಿನ ಪ್ರಮಾಣವು ಹೆಚ್ಚಾಗುತ್ತದೆ. ಇದು ನೈಸರ್ಗಿಕವಾಗಿ ಮೂತ್ರೋತ್ಪತ್ತಿ ಮಾಡುತ್ತದೆ. ಇದರಿಂದಾಗಿ ಕಿಡ್ನಿಯು ತುಂಬಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.
ಇದನ್ನೂ ಓದಿರಿ: ಕರಬೂಜ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತವೆ ತಿಳಿಯಿರಿ
ಗರ್ಭಿಣಿಯರಿಗೆ ಒಳ್ಳೆಯದು
ಕಲ್ಲಂಗಡಿಯು ದೇಹ ನಿರ್ಜಲೀಕರಣ ವಾಗುವುದನ್ನು ತಡೆಯುತ್ತದೆ. ಅಂತೆಯೇ ಗರ್ಭಿಣಿಯರ ಕಾಲು ಮತ್ತು ಕೈಗಳ ಊತವನ್ನು ಕಡಿಮೆಮಾಡುತ್ತದೆ. ಹಾಗೆಯೆ ಬೆಳಗಿನ ಸ್ನಾಯು ಸೆಳೆತವನ್ನು ತಡೆಗಟ್ಟಿ ಲವ-ಲವಿಕೆಯಿಂದ ಇರುವಂತೆ ಮಾಡುತ್ತದೆ.
ಸ್ನಾಯು ನೋವು ನಿವಾರಕ
ಬೆಳಗಿನ ಸಮಯದಲ್ಲಿ ಅಥವಾ ತುಂಬಾ ವ್ಯಾಯಾಮವನ್ನು ಮಾಡಿದ ನಂತರ ಸ್ನಾಯುಗಳಲ್ಲಿ ನೋವು ಕಂಡುಬಂದರೆ ಇದು ತಕ್ಷಣ ನಿವಾರಿಸುತ್ತದೆ. ಜಿಮ್ಗಳಲ್ಲಿ ದೇಹ ದಂಡಿಸುವವರಿಗೆ ಮತ್ತು ಕ್ರೀಡಾಪಟುಗಳಿಗೆ ಇದು ಉತ್ತಮ ಆರೋಗ್ಯ ವರ್ಧಕವಾಗಿದೆ.
ಅಸ್ತಮಾ ತಡೆಯುತ್ತದೆ
ಈ ಹಣ್ಣಿನಲ್ಲಿ ಲೈಕೊಪಿನ್ ಎಂಬ ಅಂಶವು ಹೆಚ್ಚಾಗಿದೆ. ಇದರಿಂದಾಗಿ ಅಸ್ತಮಾ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಸ್ತಮಾ ರೋಗಿಗಳಿಗೆ ಉಸಿರಾಡಲು ಸಾಧ್ಯವಾಗದೆ ಮೂಗು ಕಟ್ಟಿಕೊಂಡಿರುತ್ತದೆ, ಅದನ್ನು ಲೈಕೊಪಿನ್ ತಡೆಗಟ್ಟುತ್ತದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಕಲ್ಲಂಗಡಿ ಸಿಟ್ರುಲೈನ್ನ್ ನ ಒಂದು ಶ್ರೀಮಂತ ನೈಸರ್ಗಿಕ ಮೂಲವಾಗಿದೆ. ಕಲ್ಲಂಗಡಿ ಪೊಟ್ಯಾಶಿಯಂ ನ ಉತ್ತಮ ಮೂಲವಾಗಿದ್ದು, ಇದು ಸಹ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯವನ್ನು ಮಾಡುತ್ತದೆ. ಪೊಟ್ಯಾಶಿಯಂ ವಿದ್ಯುದ್ವಿಚ್ಚೇದಕವಾಗಿದ್ದು ದೈಹಿಕ ವ್ಯಾಯಾಮದ ಸಮಯದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ
ಕಲ್ಲಂಗಡಿ ಹಣ್ಣು ವಿಟಮಿನ್-ಸಿನ್ನು ಹೊಂದಿದೆ. ಜೊತೆಯಲ್ಲಿ ಕೊಲೊಜನ್ ಸಿಂಥೆಸಿಸ್ ಎಂಬ ಅಂಶವನ್ನು ಹೊಂದಿದೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಅಂತೆಯೇ ವಿಟಮಿನ್-ಎಯನ್ನು ಹೊಂದಿದ್ದು ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಹೊಸ ಚರ್ಮದ ಬೆಳವಣಿಗೆಗೆ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
ಇದನ್ನೂ ಓದಿರಿ: ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?
ಲೈಂಗಿಕ ಆರೋಗ್ಯವನ್ನು ಉತ್ತೇಜಿಸುತ್ತದೆ
ಕಲ್ಲಂಗಡಿಯಲ್ಲಿನ ಅಮೈನೋ ಆಸಿಡ್ ಸಿಟ್ರೊಲೈನ್ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಸಾಮಾನ್ಯ ನಿಮಿರುವಿಕೆಯ ಸಮಸ್ಯೆಯ ನಿವಾರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸಿಟ್ರೊಲೈನ್ ನ್ನು ಅರ್ಜಿನೈನ್ ಆಗಿ ಮಾರ್ಪಾಡು ಮಾಡಿ ರಕ್ತನಾಳಗಳ ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಕಲ್ಲಂಗಡಿ ಹಣ್ಣು ಒಂದು ಉತ್ತಮ ಬೇಸಿಗೆಯ ಬೇಗೆಯನ್ನು ನೀಗಿಸುವ ಜೊತೆಗಾರನಾಗಿದ್ದಾನೆ. ಇದನ್ನು ಹಿತ ಮಿತವಾಗಿ ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದನ್ನು ನೀವಿಂದು ತಿಳಿದುಕೊಂಡಿದ್ದೀರಿ.
ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣಿನ ಅತಿಯಾದ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತವೆ ತಿಳಿಯಿರಿ