ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ?

ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ

ಬಾಳೆಹಣ್ಣು ಸುಲಭವಾಗಿ ಮತ್ತು ಎಲ್ಲ ಕಾಲದಲ್ಲಿಯೂ ದೊರೆಯುವ ಹಣ್ಣಾಗಿದೆ. ಅಲ್ಲದೇ ಇದು ಎಲ್ಲ ಕಾಲದಲ್ಲಿಯೂ ದೊರೆಯುವುದರಿಂದ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಉತ್ತಮ ರುಚಿ ಮತ್ತು ಯಾವುದೇ ಅಡ್ಡ ವಾಸನೆಗಳಿಲ್ಲದ ಮತ್ತು ಅನೇಕ ಆರೋಗ್ಯಕಾರಿ ಲಕ್ಷಣಗಳನ್ನು ಹೊಂದಿದೆ ಈ ಹಣ್ಣು. ಇದರಲ್ಲಿ ಪೊಟಾಷಿಯಂ, ವಿಟಮಿನ್ ಬಿ 6, ಮೆಗ್ನಿಷಿಯಂ, ಹೇರಳವಾಗಿ ಪೈಬರ್ ಮತ್ತು ಇನ್ನೂ ಅನೇಕ ಜೀವಸತ್ವಗಳು ತುಂಬಿಕೊಂಡಿವೆ. ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ ಎನ್ನುವ ಕುರಿತು ಸವಿವರವಾಗಿ ನಿಮ್ಮ ಮುಂದಿಡಲಿದ್ದೇವೆ.

ಬಾಳೆಹಣ್ಣು ವಿಶ್ವದಲ್ಲಿಯೇ ಅತೀ ಹೆಚ್ಚು ತಿನ್ನಲ್ಪಡುವ ಒಂದು ಹಣ್ಣಾಗಿದೆ. ಇದರ ಸೇವನೆಯಿಂದ 110 ಕೆಲೋರಿಗಳು, 30 ಗ್ರಾಂನಷ್ಟು ಕಾರ್ಬೋಹೈಡ್ರೇಟ್, 1 ಗ್ರಾಂ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಜೊತೆಯಲ್ಲಿ 450 ಮಿಲಿಗ್ರಾಂ ಪೊಟ್ಯಾಷಿಯಂ, 34 ಮಿಲಿಗ್ರಾಂ ಮೆಗ್ನಿಷಿಯಂ ಮತ್ತು ಮೂರು ಗ್ರಾಂ ನಾರಿನಂಶ ತುಂಬಿಕೊಂಡಿದೆ.

ಬಾಳೆಹಣ್ಣು ಮಾತ್ರವಲ್ಲದೇ ಅದರ ಸಿಪ್ಪೆಯಲ್ಲಿ ಮೆಗ್ನಿಷಿಯಂ, ಪೊಟ್ಯಾಷಿಯಂ, ಪ್ರೋಟೀನ್, ಪೈಬರ್, ವಿಟಮಿನ್ ಬಿ 6 ಮತ್ತು ವಿಟಮಿನ್ ಬಿ 12 ಅಡಕವಾಗಿದೆ. ಹಾಗಾಗಿಯೇ ಬಾಳೆಹಣ್ಣಿನ ಜೊತೆಯಲ್ಲಿ ಕೆಲವರು ಸಿಪ್ಪೆಯನ್ನೂ ತಿನ್ನುತ್ತಾರೆ.

ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು:-

ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ
Image Credit: google.com

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6 ಹೆಚ್ಚಿನ ಪ್ರಮಾಣದಲ್ಲಿ ಇದೆ. ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ 6 ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮಾನವನ ಬುದ್ದಿ ಚುರುಕಾಗುತ್ತದೆ. ಬಾಳೆಹಣ್ಣಿನಲ್ಲಿರುವ ಮೆಗ್ನಿಶಿಯಂ ಮೆದುಳಿನ ನರಕೋಶಗಳ ನಡುವಿನ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.

ನಮ್ಮ ಮೆದುಳಿನ ಕೋಶಗಳಿಗೆ ಗ್ಲುಕೋಸ್ ಇಂದನವಾಗಿ ಬಳಕೆಯಾಗುತ್ತದೆ. ಆದರೆ ಮೆದುಳಿನ ಕೋಶಗಳಿಗೆ ಗ್ಲುಕೊಸನ್ನು ಸಂಗ್ರಹಿಸಿ ಇಡಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ನಿಯಮಿತವಾಗಿ ನೀಡುತ್ತ ಬರಬೇಕು. ಬಾಳೆಹಣ್ಣನ್ನು ಸೇವಿಸುವುದರಿಂದ ಸಕ್ಕರೆಯ ಅಂಶ ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗುತ್ತದೆ. ಈ ಮೂಲಕ ಮೆದುಳಿಗೆ ನಿಧಾನವಾಗಿ ಗ್ಲುಕೋಸ್ ದೊರೆಯುತ್ತದೆ.

ಮೂಳೆಗಳ ಆರೋಗ್ಯ ಸುಧಾರಿಸುತ್ತದೆ

ಮೂಳೆಗಳ ಆರೋಗ್ಯಕ್ಕೆ ಬಾಳೆಹಣ್ಣು ಸಹಕಾರಿಯಾಗಿದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಂ, ಸಿಲಿಕಾನ್ ಮತ್ತು ಮೆಗ್ನೀಷಿಯಂ ಮೂಲೆಗಳ ಆರೋಗ್ಯಕ್ಕೆ ಸಹಾಯವನ್ನು ಮಾಡುತ್ತವೆ. ಇವುಗಳು ಮೂಲೆಗಳ ಸವೆತವನ್ನು ಮತ್ತು ಕ್ಷಿಣಿಸುವಿಕೆಯನ್ನು ತಡೆಗಟ್ಟುತ್ತವೆ. ಪೊಟ್ಯಾಷಿಯಂ ಯುಕ್ತ ಆಹಾರಗಳ ಸೇವನೆಯಿಂದ ಮೂಳೆಗಳಲ್ಲಿನ ಕ್ಯಾಲ್ಸಿಯಂ ನಷ್ಟವನ್ನು ತಡೆಗಟ್ಟಬಹುದು. ಪೊಟ್ಯಾಷಿಯಂ ಮೂಳೆಗಳ ಸಾಂಧ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಧೀರ್ಘ ಕಾಲಿನ ಪೊಟ್ಯಾಷಿಯಂ  ಸೇವನೆಯಿಂದ ಆಸ್ಟೀಯೊಪೋರೋಸಿಸ್ ನ ಅಪಾಯವನ್ನು ತಡೆಗಟ್ಟುತ್ತದೆ. ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ

Image Credit: google.com

ತ್ವರಿತವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ

ಬಾಳೆಹಣ್ಣು ಕಾರ್ಬೋಹೈಡ್ರೇಟ್, ಅಮೈನೋ ಆಮ್ಲ, ನೈಸರ್ಗಿಕ ಸಕ್ಕರೆ ಮತ್ತು ಹಲವಾರು ಖನಿಜಗಳ ಸಹಯೋಗವಾಗಿದೆ. ಇದರಿಂದಾಗಿ ದೇಹಕ್ಕೆ ತ್ವರಿತವಾಗಿ ಶಕ್ತಿಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್ ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗುತ್ತದೆ. ಇದರಿಂದಾಗಿ ನಿರಂತರವಾಗಿ ದೇಹಕ್ಕೆ ಶಕ್ತಿ ದೊರೆಯುತ್ತದೆ. ಹಲವಾರು ಸಂಶೋಧನೆಗಳಿಂದ ಕೇವಲ 2 ಬಾಳೆಹಣ್ಣು 90 ನಿಮಿಷಗಳಿಗೆ ಸಾಕಾಗುವಷ್ಟು ಶಕ್ತಿಯನ್ನು ಒದಗಿಸುತ್ತವೆ ಎಂದು ತಿಳಿದು ಬಂದಿದೆ.

ಸೊಳ್ಳೆಕಡಿತದ ತುರಿಕೆಯನ್ನು ತಡೆಯುತ್ತದೆ

ಬಾಳೆಹಣ್ಣಿನ ಸಿಪ್ಪೆಯು ಸೊಳ್ಳೆ ಕಡಿತದ ತುರಿಕೆಯನ್ನು ಉಪಶಮನ ಮಾಡಲು ಸಹಾಯ ಮಾಡುತ್ತದೆ. ಸೊಳ್ಳೆ ಕಡಿತದ ದ್ರವವನ್ನು ಹೊರತೆಗೆದು ತುರಿಕೆಯನ್ನು ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಕಡಿತ ಬರುತ್ತಿರುವ ಜಾಗದಲ್ಲಿ ಸಿಪ್ಪೆಯ ಒಳಭಾಗವನ್ನು ತಿಕ್ಕಿದರೆ ತಕ್ಷಣ ತುರಿಕೆ ಮಾಯವಾಗುವುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬಾಳೆಹಣ್ಣಿನಲ್ಲಿರುವ ತಾಮ್ರದ ಅಂಶವು ರಾಸಾಯನಿಕ ಕ್ರೀಯೆಯ ಸಮಯದಲ್ಲಿ ಜೀವಕೋಶಗಳಿಗೆ ಉಂಟಾಗುವ ಹಾನಿಯನ್ನು ತಡೆಯುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಕಬ್ಬಿಣದ ಅಂಶವು ಇರುವುದರಿಂದ ರಕ್ಷಣಾ ವ್ಯವಸ್ಥೆಗೆ ಸಹಕಾರಿಯಾಗುತ್ತದೆ. ಈ ಹಣ್ಣಿನಲ್ಲಿ ಸಿ ವಿಟಮಿನ್ ಇದ್ದು, ಬಿಳಿರಕ್ತಕಣಗಳ ಉತ್ಪಾಧನೆಗೆ ಸಹಕಾರಿಯಾಗಿದೆ.

ದೂಮಪಾನದಿಂದ ಹೊರಬರಲು ಸಹಾಯ ಮಾಡುತ್ತದೆ

ದೂಮಪಾನವನ್ನು ಮಾಡುವ ವ್ಯಕ್ತಿಯ ರಕ್ತದಲ್ಲಿ ನಿಕೋಟಿನ್ ಅಂಶವು ಸೇರಿಕೊಂಡಿರುತ್ತದೆ. ಇದರಿಂದಾಗಿ ಅವನಿಗೆ ಮತ್ತೆ ಮತ್ತೆ ಆ ವ್ಯಸನವನ್ನು ಮಾಡುವ ಮನಸಾಗುತ್ತದೆ. ಆದರೆ ಬಾಳೆಹಣ್ಣನ್ನು ಸೇವಿಸುವುದರಿಂದ ಅದರಲ್ಲಿರುವ ಪೊಟ್ಯಾಷಿಯಂ ಮತ್ತು ಮೆಗ್ನಿಶಿಯಂ ನಿಕೋಟಿನ್ ನ ಮಟ್ಟವನ್ನು ಕಡಿಮೆಗೊಳಿಸುತ್ತವೆ. ಹಾಗಾಗಿ ದೂಮಪಾನವನ್ನು ಬಿಡಲು ಇಚ್ಚಿಸುವವರಿಗೆ ಇದು ಸಹಕಾರಿಯಾಗಬಲ್ಲದು.

ಇದನ್ನೂ ಓದಿರಿ: ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುತ್ತೀದ್ದಿರೇ ? ಹಾಗಾದ್ರೆ ಇದನ್ನು ಓದಲೇ ಬೇಕು..

ದಿನಾಲು ಎರಡು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಾಗುತ್ತದೆ
Image Credit: google.com

ಜ್ವರವನ್ನು ನಿಯಂತ್ರಿಸುತ್ತದೆ

ಅತಿಯಾಗಿ ಬೆವರುವುದು, ಅತಿಸಾರ, ವಾಂತಿ ಮತ್ತು ಸಾಮಾನ್ಯ ಜ್ವರವನ್ನು ನಾವು ಅನುಭವಿಸುತ್ತಿರುತ್ತೇವೆ. ಈ ರೀತಿಯಾಗಿ ಪದೆ ಪದೆ ಉಂಟಾಗುವುದರಿಂದ ದೇಹದಲ್ಲಿರುವ ಪೊಟ್ಯಾಷಿಯಂ ಮಟ್ಟ ಕಡಿಮೆಯಾಗುತ್ತದೆ. ಈ ಮೂಲಕ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಬಾಳೆಹಣ್ಣು  ಪೊಟ್ಯಾಷಿಯಂ  ಸಮೃದ್ಧ ಮೂಲವಾಗಿರುವುದರಿಂದ ಉತ್ತಮ ಪರಿಣಾಮ ಉಂಟಾಗುತ್ತದೆ. ಅಲ್ಲದೇ ಜ್ವರದಂತಹ ಸಾಮಾನ್ಯ ತೊಂದರೆಗಳನ್ನು ದೂರಕ್ಕೆ ತಳ್ಳುತ್ತದೆ.

ಚರ್ಮದ ಹೊಳಪಿಗೆ ಸಹಕಾರಿ

ಬಾಳೆಹಣ್ಣು ಸೇವಿಸುವುದರಿಂದ ಮಾತ್ರವಲ್ಲದೇ ಅದರಿಂದ ತಯಾರಿಸಿದ ಫೆಸ್ ಪ್ಯಾಕ್ ಬಳಕೆಯಿಂದ ನಿಮ್ಮ ಮೊಗವು ಹೊಳಪಿನಿಂದ ತುಂಬಿಕೊಳ್ಳುತ್ತದೆ. ಇದು ನೈಸರ್ಗಿಕ ಹೊಳಪು ಮತ್ತು ತಾರುಣ್ಯವನ್ನು ಮರುಪೂರಣ ಮಾಡಲು ಉತ್ತಮ ವಿಧಾನವಾಗಿದೆ. ಉತ್ತಮವಾಗಿ ಮಾಗಿದ ಬಾಳೆಹಣ್ಣನ್ನು ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಅದಕ್ಕೆ ಒಂದು ಸ್ಪೂನ್  ಗಂಧದ ಪೇಸ್ಟ್ ಮತ್ತು ಅರ್ಧ ಸ್ಪೂನ್ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಎಣ್ಣೆಯ ಅಂಶವು ತೊಲಗಿ ಮುಖವು ಹೊಳೆಯುವಂತೆ ಆಗುತ್ತದೆ.

ಬಾಳೆಹಣ್ಣು ನಮಗೆ ಪ್ರಕೃತಿ ನೀಡಿರುವ ಒಂದು ವರಧಾನವಾಗಿದೆ. ಅಲ್ಲದೇ ಇದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಮೇಲೆ ತಿಳಿಸಿರುವಂತೆ ನಮ್ಮ ದೇಹಕ್ಕೆ ಅನೇಕ ರೀತಿಯಿಂದ ಆರೋಗ್ಯವನ್ನು ಒದಗಿಸಲು ಸಹಾಯಕವಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಉತ್ತಮವಾಗಿ ಪ್ರಯೋಜನವನ್ನು ಹೊಂದುವಿರಿ ಎಂದು ಭಾವಿಸುತ್ತೇವೆ.

ಇದನ್ನೂ ಓದಿರಿ:ಊಟದ ನಂತರ ತಾಂಬೂಲ ಸೇವನೆಯು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾ.?. ಕೆಟ್ಟದಾ..? ತಿಳಿಯಲು ಓದಿ

ಸ್ನೇಹಿತರೇ, ನಮ್ಮ ಈ ಸಣ್ಣ ಪ್ರಯತ್ನ ನಿಮಗೆ ಹೇಗೆನಿಸಿತು ಎಂದು ಕಾಮೆಂಟ್ ಮಾಡುತ್ತಿರಿ ಎಂದು ಭಾವಿಸುತ್ತೇವೆ. ಇತರರಿಗೂ ತಿಳಿಸಲು ಶೇರ್ ಮಾಡಿ ಮತ್ತು ಲೈಕ್ ಮಾಡಲು ಮರೆಯದಿರಿ..ಇನ್ನೂ ಇಂತಹದೇ ಮಾಹಿತಿಗಳನ್ನು ಪಡೆಯುತ್ತಿರಲು ನಮ್ಮ ವೆಬ್ ಸೈಟ್ ನ್ನು  Subscribe ಮಾಡಲು ಮರೆಯದಿರಿ. 

LEAVE A REPLY

Please enter your comment!
Please enter your name here