ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!

ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..! ಚಿಕ್ಕ ವಯಸ್ಸಿನಲ್ಲಿ ಇದು ಸಾಮಾನ್ಯವಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳಿಗೆ ತಿಳಿಯುವ ವಯಸ್ಸಿಗೆ ಬರುತ್ತಿದ್ದಂತೆ ಇವೆಲ್ಲ ನಿಂತು ಹೋಗುತ್ತದೆ. ಆದರೆ ಆರು ವರ್ಷಮೀರಿದ ಹುಡುಗ ಅಥವಾ ಹುಡುಗಿಯರಲ್ಲಿ ಈ ಸಮಸ್ಯೆ ಮುಂದುವರೆಯುತ್ತಿದ್ದರೆ ಅವರಲ್ಲಿ ಏನೋ ಸಮಸ್ಯೆ ಕಾಡುತ್ತಿದೆ ಎಂದು ಪರಿಗಣಿಸಬೇಕಾಗುತ್ತದೆ. ಇದಕ್ಕೆ ಶಿಶುವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ. ನಾವು ಇಂದು ಮಕ್ಕಳಲ್ಲಿ ಕಂಡುಬರುವ  ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಮಸ್ಯೆಗೆ ಕಾರಣಗಳು ಮತ್ತು ನಿವಾರಿಸುವ ಮಾರ್ಗಗಳ ಕುರಿತಾಗಿ ತಿಳಿಸುವ ಪ್ರಯತ್ನ ಮಾಡುತ್ತೇವೆ…

 

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಲು ಕಾರಣಗಳು :

  • ಮಲಗುವುದಕ್ಕೂ ಮೊದಲು ದ್ರವಾಹಾರ ಅಥವಾ ಪಾನೀಯಗಳನ್ನು ಕುಡಿದಿರುವುದು.
  • ಮಗುವಿಗೆ ರಾತ್ರಿಯಿಡಿ ಮೂತ್ರ ಹಿಡಿದಿಡಲು ಸಾಧ್ಯವಾಗದಿರುವುದು.
  • ಮಗು ಮಲಗಿರುವಾಗ ಮೂತ್ರಕೋಶ ತುಂಬಿದರೂ ಗೊತ್ತಾಗದಿರುವುದು.
  • ಹಾರ್ಮೋನುಗಳ ಅಸಮತೊಲನದಿಂದಾಗಿ ಮೂತ್ರ ವಿಸರ್ಜನೆಯ ನರಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು.

 

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ತಡೆಗಟ್ಟಲು ಉಪಯುಕ್ತ ಮಾರ್ಗಗಳು:

1. ಡೈಪರ್ ಗಳ ಬಳಕೆಯನ್ನು ನಿಲ್ಲಿಸಿ

ನಿಮ್ಮ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವ ಸಮಸ್ಯೆಯನ್ನು ತಡೆಯಲು ನಡೆದಾಡಲು ಆರಂಭಿಸಿದ ಸಮಯದಿಂದ ಡೈಪರ್ ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳಿತು. ಇದರಿಂದಾಗಿ ಮಗುವಿಗೆ ಮುತ್ರವಿಸರ್ಜನೆಯ ಸುಳಿವುಗಳು ನಿಧಾನವಾಗಿ ಅರಿವಿಗೆ ಬರಲು ಪ್ರಾರಂಬವಾಗುತ್ತದೆ. ಆ ಮೂಲಕ ನಿಮ್ಮ ಮಗುವು ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ.

ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!
Image Copyright: google.com

2. ಮೂತ್ರ ಹಿಡಿದಿಟ್ಟುಕೊಳ್ಳುವ ಕುರಿತು ತರಬೇತಿ ನೀಡಿ

ಸಣ್ಣ ಮಗುವು ಮೂತ್ರವನ್ನು ತಡೆಹಿಡಿಯಲು ಆಶಕ್ತವಾಗಿರುತ್ತದೆ. ಅದು ಎಲ್ಲಿ ಮೂತ್ರ ಬರುತ್ತದೆಯೋ ಅಲ್ಲಿಯೇ ವಿಸರ್ಜಿಸುತ್ತದೆ. ಕಾರಣ ಅವರ ಮೂತ್ರಕೋಶದ ಹಿಡಿದಿಟ್ಟುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ ಇದರಿಂದಾಗಿ ಅವರು ಮಲಗಿದ ಸಮಯದಲ್ಲಿ ಅದನ್ನು ನಿಯಂತ್ರಿಸುವುದು ಅಸಾದ್ಯವಾಗಿರುತ್ತದೆ. ಅಲ್ಲದೇ ಅಲ್ಲಿನ ಸ್ನಾಯುಗಳ ಸಾಮರ್ತ್ಯದ ಕೊರತೆಯಿಂದಲೂ ಹೀಗಾಗುತ್ತಿರಬಹುದು. ಮಗುವಿಗೆ ಕೆಲಸಮಯಗಳವರೆಗೆ ಮೂತ್ರ ತಡೆಹಿಡಿಯುವುದನ್ನು ಅಭ್ಯಾಸ ಮಾಡುತ್ತ ಬರಬೇಕು. ಇದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಮೂತ್ರಕೋಶದ ಸಾಮರ್ತ್ಯವೂ ಹೆಚ್ಚಾಗುತ್ತದೆ.

 

3. ನಿಮ್ಮ ಮಗು ಸಂಜೆ ವೇಳೆಯಲ್ಲಿ ದ್ರವ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ

ನಿಮ್ಮ ಮಗುವು ಮಲಗುವ ಪೂರ್ವದಲ್ಲಿ ದ್ರವ ಪದಾರ್ಥ ಮತ್ತು ನೀರು, ಹಾಲು ಕುಡಿಯುವುದರಿಂದ ಮಗುವು ವಿಸರ್ಜನೆಯ ಸಮಯಕ್ಕೆ ಎಚ್ಚರವಾಗದೆ ಹಾಸಿಗೆ ಒದ್ದೆ ಮಾಡಿಕೊಳ್ಳುತ್ತದೆ. ಹಾಗಾಗಿ ಸಂಜೆಯ ನಂತರ ದ್ರವಾಹಾರ ಸೇವನೆಯನ್ನು ನಿಯಂತ್ರಿಸುವುದು ಸಹಕಾರಿ.
ಇದನ್ನೂ ಓದಿರಿ :ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

4. ಮಕ್ಕಳಿಗೆ ಬೆಂಬಲ ಮತ್ತು ಧೈರ್ಯ ಹೇಳಿ

ಮಕ್ಕಳು ಈ ಸಮಸ್ಯೆಯನ್ನು ಎದುರಿಸಲು ಅವರಿಗೆ ಸಹಾಯ ಮಾಡುವುದು ಅಗತ್ಯವಿರುತ್ತದೆ. ಅವರಿಗೆ ಬೆಂಬಲ ನೀಡಿ ಮತ್ತು ಶಾಂತ ರೀತಿಯಿಂದ ಅವರೊಂದಿಗೆ ವರ್ತಿಸಿ. ಮಕ್ಕಳಿಗೆ ಹೊಡೆಯುವುದು ಮತ್ತು ಹೆದರಿಸುವುದು ಮತ್ತೂ ಸಮಸ್ಯೆ ಉಲ್ಬನಗೊಳ್ಳಲು ಕಾರಣವಾಗಬಹುದು.

5. ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿಸಿ

ಮಕ್ಕಳು ಆಟವಾಡುತ್ತ ಕುಷಿ ಕುಷಿಯಿಂದ ದಿನವನ್ನು ಕಳೆಯುತ್ತಿರುತ್ತಾರೆ. ಹಾಗೆಯೇ ಆಟವಾಡುತ್ತ ನಿದ್ರೆಗೆ ಜಾರುತ್ತಾರೆ. ನಿದ್ರೆಗೆ ಜಾರುವ ಮುನ್ನ ಮೂತ್ರ ವಿಸರ್ಜನೆ ಮಾಡಿಸಿ ಮಲಗಿಸಿದರೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಾಧ್ಯತೆ ಕಡಿಮೆಯಿರುತ್ತದೆ. ಅಲ್ಲದೆ ಮದ್ಯದಲ್ಲಿ ಎಚ್ಚರಿಸಿ ವಿಸರ್ಜನೆ ಮಾದಿಸುವುದು ಸಹ ಸಹಕಾರಿಯಾಗಬಲ್ಲದು.

ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!
Image Copyright:google.com

ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಮೇಲೆ ತಿಳಿಸಿದ ಸಲಹೆಗಳನ್ನು ಅನುಸರಿಸಿ. ಅಲ್ಲದೇ ಚಿಕ್ಕ ಮಕ್ಕಳಲ್ಲಿ ಇದು ಸಾಮಾನ್ಯವಾಗಿದೆ. ಅವರಿಗೆ ಹೆದರಿಸುವುದು, ಹೊಡೆಯುವುದು ಮಾಡಲೇಬಾರದು. ಶಾಂತವಾಗಿ ಅವರನ್ನು ಬೆಂಬಲಿಸುತ್ತಾ ಅದರಿಂದ ಹೊರಬರಲು ಅವರಿಗೆ ಸಹಾಯ ಮಾಡಿ. ಹೇಳಿದ್ದು ತಿಳಿಯುವ ವಯಸ್ಸಿಗೆ ಬಂದ ಮಕ್ಕಳಲ್ಲಿ ಅಂದರೆ ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬಂದರೆ ತಜ್ಞ ವೈದ್ಯರನ್ನು ಬೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯುವುದು ಅವಶ್ಯವಾಗಿರುತ್ತದೆ.

ಈ ಮಾಹಿತಿಯು ತಮಗೆ ಪ್ರಯೋಜನವಾಗಿದ್ದರೆ ಲೈಕ್ ಮಾಡಿ ಮತ್ತು ಇತರರಿಗೂ ತಿಳಿಸಲು ಶೇರ್ ಮಾಡಿ. ಇದೆ ರೀತಿಯ ಇನ್ನೂ ಅನೇಕ ಮಾಹಿತಿಯನ್ನು ತಿಳಿಯಲು ನಮ್ಮ ಸೈಟ್ ನ ನೋಟಿಫಿಕೇಶನ್ಗೆ ಆಲೋ ಮಾಡಿಕೊಳ್ಳಿ ಇದರಿಂದ ಲೇಕನ ಪ್ರಕಟವಾದ ಕೂಡಲೇ  ನೋಟಿಫಿಕೇಶ ನೀಡಲಾಗುತ್ತದೆ.
ಇದನ್ನೂ ಓದಿರಿ :ನಿಂಬೆ ಹುಲ್ಲಿನ ಕಷಾಯದ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಕುಡಿಯದೇ ಬಿಡಲಾರಿರಿ..

LEAVE A REPLY

Please enter your comment!
Please enter your name here