ಅಜೀರ್ಣ ಉಂಟಾಗಲು ಕಾರಣಗಳೇನು..? ನೈಸರ್ಗಿಕವಾಗಿ ಅಜೀರ್ಣ ಸಮಸ್ಯೆಯನ್ನು ದೂರಮಾಡಿಕೊಳ್ಳುವುದು ಹೇಗೆ..?

Image Copyright : google.com

ಅಜೀರ್ಣ ಸಮಸ್ಯೆಯು ನಮ್ಮನ್ನು ಹಲವಾರುಬಾರಿ ಕಾಡಿರುತ್ತದೆ. ಇದು ಚಿಕ್ಕ ಸಮಸ್ಯೆಯಾಗಿಕಂಡರೂ ತೊಂದರೆ ಹಲವು ಮತ್ತು ಇದನ್ನು ನಿರ್ಲಕ್ಷಿಸಿದರೆ ಇದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಲವಾರು. ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ..? ಈ ಸಮಸ್ಯೆಯಲ್ಲಿರುವವರಲ್ಲಿ ನೀವು ಒಬ್ಬರಾಗಿದ್ದರೆ ತಪ್ಪದೇ ಓದಿ ಇಲ್ಲಿದೆ ಪರಿಹಾರ..!

ಅಜೀರ್ಣ ಉಂಟಾಗಲು ಕಾರಣಗಳೇನು..?

ನಾವು ಮಾದುವೆ ಮತ್ತು ವಿಶೇಷ ಸಮಾರಂಭಗಳ ಔತಣಕೂಟಗಳಿಗೆ ಹೋಗಿರುತ್ತೇವೆ ಅಲ್ಲಿನ ತರಹೇವಾರು ಅಡಿಗೆಗಳನ್ನು ನೋಡಿ ಸ್ವಲ್ಪ ಹೆಚ್ಚಿಗೆಯೇ ಆಹಾರ ಸೇವಿಸುತ್ತೇವೆ. ಇಲ್ಲದಿದ್ದರೆ ನಾವು ಗರಿಗರಿಯಾದ ಸ್ಪೈಸಿ ಆಹಾರಗಳ ಭಕ್ತರಾಗಿರುತ್ತೇವೆ. ಇವುಗಳು ನಮ್ಮನ್ನು ಅಜೀರ್ಣದೆಡೆಗೆ  ಕೊಂಡೊಯ್ಯುತ್ತದೆ. ಆಸಿಡ್ ರಿಪ್ಲೆಕ್ಶನ್ ನಂತಹ ಕಾಯಿಲೆಗಳು, ಗ್ಯಾಸ್ಟ್ರಿಕ್ ಕ್ಯಾನ್ಸರ್ ಗಳು ಅಥವಾ ಜಠರದ  ಹುಣ್ಣುಗಳು ಸೇರಿದಂತೆ ನಮ್ಮಲ್ಲಿರುವ ಹಲವಾರು ಅಸಹಜತೆಗಳು ಕಾರಣವಾಗಿರಬಹುದು. ಅಲ್ಕೋಹಾಲ್ ಸೇವನೆ, ದೂಮಪಾನ ಮತ್ತು ಔಷಧಗಳ ಸೇವನೆಯಿಂದ ಅಜೀರ್ಣ ಸಮಸ್ಯೆ ಕಂಡುಬರಬಹುದು.

ನೈಸರ್ಗಿಕವಾಗಿ ಅಜೀರ್ಣ ಸಮಸ್ಯೆಯನ್ನು ದೂರಮಾಡಿಕೊಳ್ಳುವುದು ಹೇಗೆ..?

ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಅಜೀರ್ಣ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇವುಗಳಿಂದ ನಮಗೆ ಯಾವುದೇ ತೊಂದರೆಗಳಿಲ್ಲದೆ ಶಾಶ್ವತ ಪರಿಹಾರ ದೊರೆಯುತ್ತದೆ. ಅಂತಹ ಉಪಯೋಗಕಾರಿ ನೈಸರ್ಗಿಕ ವಿಧಾನಗಳು ಯಾವುವು ಎಂದು ನೋಡೋಣ…

ಬೇಕಿಂಗ್ ಸೋಡಾ :

ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ..?

 

ಬೇಕಿಂಗ್ ಸೋಡಾ ಎದೆಯುರಿ ಮತ್ತು ಅಜೀರ್ಣ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಇದು ಹೊಟ್ಟೆಯಲ್ಲಿ ಉಂಟಾಗುವ ಆಮ್ಲೀಯತೆಯನ್ನು ನಿವಾರಿಸಿ, ಪರಿಹಾರವನ್ನು ನೀಡುತ್ತದೆ. ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಟಿ ಚಮಚದಷ್ಟು  ಬೇಕಿಂಗ್ ಸೋಡಾವನ್ನು ಮಿಶ್ರಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ಮತ್ತು ಸೇವಿಸಿರಿ. ಇದರಿಂದ ಅಜೀರ್ಣ, ಎದೆಯುರಿಯಂತಹ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.

ನಿಂಬೆ ಮತ್ತು ಶುಂಟಿ ಟಿ :

ನಿಂಬೆ ಮತ್ತು ಶುಂಟಿ ಇವುಗಳನ್ನು ಹಾಕಿ ತಯಾರಿಸಿದ ಚಹಾ ಹೊಟ್ಟೆಯ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಲಿಂಬು ಹೊಟ್ಟೆಯ ಪಿ.ಹೆಚ್. ಮಟ್ಟವನ್ನು ಸುಧಾರಿಸಿ ಉತ್ತಮ ಡೈಜೆಶನ್ ಗೆ ಸಹಕರಿಸುತ್ತದೆ. ಶುಂಟಿಯಂತು ಅಜಿರ್ಣಕ್ಕೆ ರಾಮಬಾಣವಿದ್ದಂತೆ ಚಹಾ ತಯಾರಿಸಲು ಒಂದು ಇಂಚಿನಷ್ಟು ಶುಂಟಿಯ ಚೂರನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಳ್ಳಿ. ಅದಕ್ಕೆ ಒಂದು ಟಿ ಚಮಚದಷ್ಟು ನಿಂಬೆ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ಬೆಚ್ಚಗಿನ ಹದವಿರುವಾಗ ಸ್ವಲ್ಪ ಜೇನುತುಪ್ಪ ಸೇರಿಸಿ ತಕ್ಷಣ ಕುಡಿಯಿರಿ.

ಇದನ್ನು ಓದಿರಿ : ಸಾಧಾರಣ ಶೀತ, ಕಫ ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ !

ಜೀರಿಗೆ ಕಷಾಯ :

ಜೀರಿಗೆ ಕಷಾಯವು ಸಹ ಅಜಿರ್ಣದ ವಿರುದ್ಧ ಉತ್ತಮ ಪರಿಣಾಮವನ್ನು ಬೀರುತ್ತದೆ. ಜೀರಿಗೆ ಹಸಿವನ್ನು ಹೆಚ್ಚಿಸುತ್ತದೆ. ಒಂದೂವರೆ ಗ್ಲಾಸ್ ನೀರಿಗೆ ಜೀರಿಗೆಯ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ, ಈ ನೀರನ್ನು ಸೋಸಿಕೊಂಡು ಹದವಾಗಿ ಬೆಚ್ಚಗಿರುವಾಗ ಸ್ವಲ್ಪ ಸಿಹಿಯನ್ನು ಸೇರಿಸಿಕೊಂಡು ಊಟಕ್ಕೂ ಮೊದಲು ಕುಡಿಯುತ್ತ ಬಂದರೆ ಈ ಸಮಸ್ಯೆಯನ್ನು ದೂರಮಾದಬಹುದು. ಇದಕ್ಕೆ ಬದಲಾಗಿ ಊಟಕ್ಕೂ ಅರ್ಧ ಗಂಟೆ ಮೊದಲು ಒಂದು ಟಿ ಚಮಚ ಜೀರಿಗೆ ಬೀಜಗಳನ್ನು ಸಹ ಬಾಯಿಗೆ ಹಾಕಿಕೊಂಡು ಅಗಿಯುವ ಮೂಲಕ ಅಜೀರ್ಣವನ್ನು ಓಡಿಸಬಹುದು.

ಮಜ್ಜಿಗೆ ಸೇವಿಸಿ :

ಅಜಿರ್ಣದ ಸಮಸ್ಯೆ ಕಂಡು ಬಂದಾಗ ಒಂದು ಕಪ್ ತಣ್ಣನೆಯ ಮಜ್ಜಿಗೆಯನ್ನು ಸೇವಿಸಿ. ಇದರಿಂದ ನಿಮ್ಮ ಸಮಸ್ಯೆಯು ದೂರವಾಗುತ್ತದೆ. ಮಜ್ಜಿಗೆ ರಿಪ್ರೇಶಿಂಗ್ ಪಾನೀಯಗಳಲ್ಲಿ ಒಂದಾಗಿದೆ. ಅಲ್ಲದೇ ಹೊಟ್ಟೆಯಲ್ಲಿನ ಆಮ್ಲೀಯತೆಯನ್ನು ತಣ್ಣಗಾಗಿಸಿ ಆರಾಮವನ್ನು ನೀಡುತ್ತದೆ. ಮಜ್ಜಿಗೆಯು ಅಜೀರ್ಣ ಮತ್ತು ಹೊಟ್ಟೆಯ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.

ಇದನ್ನು ಓದಿರಿ : ಮೂಲವ್ಯಾಧಿ ನಿವಾರಣೆಗೆ ಇಲ್ಲಿದೆ ಪವರ್‌ಫುಲ್ ಹಳ್ಳಿಮದ್ದುಗಳು

ಆಲೋವೆರಾ ಜ್ಯೂಸ್ :

Image Copyright : google.com

ಆಲೋವೆರಾದಲ್ಲಿ ಅನೇಕ ವಿಟಮಿನ್ ಗಳು , ಖನಿಜಗಳು ಮತ್ತು ಅಮೈನೋ ಆಮ್ಲಗಳು ತುಂಬಿವೆ. ಇದು ದೇಹಕ್ಕೆ ಪೋಷಣೆ ನೀಡುವುದಲ್ಲದೇ ದೇಹದ ಉಷ್ಣತೆಯನ್ನು ಸಹ ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆಯನ್ನು ಹೆಚ್ಚಿಸಿ, ಅಜೀರ್ಣ ನಿವಾರಣೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ 2 ಚಮಚದಷ್ಟು ಆಲೋವೆರ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಊಟಕ್ಕೆ ಮುಂಚೆ ಸೇವಿಸಿ ಹೀಗೆ ಮಾಡುವುದರಿಂದ  ದೇಹ ತಂಪಗಾಗುವ ಜೊತೆಗೆ ಅಜೀರ್ಣವೂ ದೂರವಾಗುತ್ತದೆ.
ಇದನ್ನು ಓದಿರಿ : ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ಜೇನುತುಪ್ಪ :

ಜೇನುತುಪ್ಪ ವಿಶೇಷ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದರಲ್ಲಿ ಉರಿಯೂತದಗುಣವನ್ನು ಶಮನ ಮಾಡುವ ಗುಣಗಳಿವೆ. ಅದರಲ್ಲಿರುವ ಖನಿಜಗಳು ಹೊಟ್ಟೆಯ ಆಮ್ಲೀಯತೆಯನ್ನು ಶಮನ ಮಾಡಿ ಅಜಿರ್ಣವನ್ನು ತಡೆಯುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಉತ್ತಮ ಗುಣಮಟ್ಟದ ಜೇನುತುಪ್ಪವನ್ನು ಸೇರಿಸಿಕೊಂಡು ಊಟಕ್ಕೆ ಮುಂಚೆ ಮತ್ತು ಮಲಗುವುದಕ್ಕೂ ಮುನ್ನ ಸೇವಿಸುವುದರಿಂದ ಉತ್ತಮ ಆರೋಗ್ಯ ಪರಿಣಾಮಗಳನ್ನು ಪಡೆಯಬಹುದಾಗಿದೆ.

ಅಜೀರ್ಣವಾಗದಿರಲು ಪರಿಹಾರಗಳೇನು..?

  • ಅತಿಯಾಗಿ ಊಟಮಾಡದಿರುವುದು ಉತ್ತಮ. ಅಗತ್ಯಕ್ಕಿಂತ ಸ್ವಲ್ಪ ಕಡಿಮೆ ಸೇವಿಸಿ.
  • ಚೆನ್ನಾಗಿ ಜಗಿದು ಆಹಾರ ಸೇವಿಸಿ. ನಿಧಾನವಾಗಿ ಚೆನ್ನಾಗಿ ಅಗೆದು ಸೇವಿಸುವುದು ಜೀರ್ಣ ಕ್ರಿಯೆಗೆ ಸಹಕಾರಿ.
  • ಅತಿಯಾದ ಮಸಾಲೆ ಪದಾರ್ಥದಿಂದ ಕೂಡಿದ ಆಹಾರ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ.
  • ಊಟವಾದ ತಕ್ಷಣ ಮಲಗುವುದು ಉತ್ತಮ ಅಭ್ಯಾಸವಲ್ಲ.
  • ಅಲ್ಕೋಹಾಲ್ ಮತ್ತು ಕೆಫಿನ್ ಸೇವನೆ ಕಡಿಮೆಗೊಳಿಸಿ.
  • ಸಾಕಷ್ಟು ವಿಶ್ರಾಂತಿ ಪಡೆಯಿರಿ.
  • ಅಜೀರ್ಣ ಉಂಟುಮಾಡುವ ರೋಗಗಳನ್ನು ಮತ್ತು ಔಷಧಗಳ ನಿವಾರಣೆಗೆ ವೈಧ್ಯರನ್ನು ಬೇಟಿ ಮಾಡಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ಎಲ್ಲ ರೀತಿಯಿಂದಲೂ ಆರೋಗ್ಯಕ್ಕೆ ಸಹಕಾರಿ.
  • ಜೀವನದಲ್ಲಿ ಧ್ಯಾನ, ಯೋಗ ಅಳವಡಿಸಿಕೊಳ್ಳಿ, ಆ ಮೂಲಕ ಒತ್ತಡದ ಜೀವನದಿಂದ ಹೊರಬನ್ನಿ.
  • ಆಹಾರದಲ್ಲಿ ಹೆಚ್ಚೆಚ್ಚು ಹಸಿರು ತರಕಾರಿಗಳು, ಹಸಿರು ಬೀನ್ಸ್ ಗಳನ್ನು ಬಳಸಿ.
  • ನಾರಿನಂಶವಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ.ಅಲ್ಲದೇ ಅತಿಯಾದ ಸಿಹಿ ಪದಾರ್ಥಗಳಿಂದ ದೂರವಿರಿ.
  • ಕಲ್ಲಂಗಡಿ, ಬಾಳೆಹಣ್ಣು ಹೀಗೆ ನಿಮ್ಮ ಆಹಾರಗಲ್ಲಿ ಹಣ್ಣುಗಳನ್ನು ಸೇರಿಸಿಕೊಂಡು ಉತ್ತಮ ಆರೋಗ್ಯ ಪಡೆಯಿರಿ.
  • ಊಟದೊಂದಿಗೆ ಮೊಸರು, ಮಜ್ಜಿಗೆಗಳನ್ನು ಸೇರಿಸಿಕೊಳ್ಳಿ.

ಅಜೀರ್ಣ ಕಾಣಲು ಸಣ್ಣ ಸಮಸ್ಯೆಯಾಗಿದ್ದರು ಇದರ ಪರಿಣಾಮಗಳು ಹಲವಾರು. ಈ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಸುಮಾರು ಎರಡುಮೂರು ದಿನಗಳಿಂದ ಹಿಡಿದು ತಿಂಗಳುಗಳವರೆಗೆ ಇದು ನಮ್ಮನ್ನು ಕಾಡಬಹುದಾಗಿದೆ. ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ..? ನಿಮ್ಮವರಯಾರದರೂ ಬಳಲುತ್ತಿದ್ದಾರೆಯೇ..? ಹಾಗಾದರೆ ಸುಲಭವಾಗಿ ಇಲ್ಲಿ ಹೇಳಿರುವ ಪರಿಹಾರೋಪಾಯಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ. ಜೊತೆಜೊತೆಗೆ ಅಜೀರ್ಣಕ್ಕೆ ಕಾರಣಗಳು ಮತ್ತು ನಂತರ ಅನುಸರಿಸಬೇಕಾದ ಆಹಾರಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡು ಅದರಂತೆ ಪಾಲಿಸುತ್ತ ಬಂದರೆ ನಿಮ್ಮ ಜೀವನ ಸುಖಮಯ.

ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ ನಮ್ಮ ಚಾನಲ್ ನೋಟಿಫಿಕೆಶನ್ ಆನ್ ಮಾಡಿಕೊಳ್ಳಿ ಅಥವಾ ನಮ್ಮ ಸಾಮಾಜಿಕ ತಾಣಗಳನ್ನು ಪಾಲೋ ಮಾಡಿಯೂ ಸಹ ನಮ್ಮ ಮುಂದಿನ ಲೇಖನಗಳನ್ನು ಪಡೆಯಬಹುದು…ಇಷ್ಟವಾದರೆ ಶೇರ್ ಮಾಡುವ ಮೂಲಕ ಇತರರೊಂದಿಗೆ ಹಂಚಿಕೊಳ್ಳಿ..

ಇದನ್ನೂ ಓದಿರಿ : ಶೀತ, ಕೆಮ್ಮು ಮತ್ತು ಅಳರ್ಜಿಗಳನ್ನು ಹೋಗಲಾಡಿಸಲು ಇಲ್ಲಿದೆ ಪರಿಹಾರ..

LEAVE A REPLY

Please enter your comment!
Please enter your name here