ದಿನಾ ಓಡೋದ್ರಿಂದ ಸಿಗುವ ಲಾಭಗಳು ತಿಳಿದರೆ ಆಶ್ಚರ್ಯಪಡುತ್ತೀರ..!

Image Copyright : google.com

ಪ್ರತಿದಿನ ಬೆಳಿಗ್ಗೆ ಓದಿವಿದರಿಂದ ಅನೇಕ ಆರೋಗ್ಯಕರ ಲಾಭಗಳು ಉಂಟಾಗಲಿವೆ. ಇದು ದೇಹದ ಪ್ರತಿಯೊಂದು ಭಾಗಕ್ಕೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಪ್ರತಿದಿನ 5-8 ನಿಮಿಷಗಳ ಕಾಲ ಓಡುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ದಿನಾ ಓಡೋದ್ರಿಂದ ಸಿಗುವ ಲಾಭಗಳು ತಿಳಿದರೆ ಆಶ್ಚರ್ಯಪಡುತ್ತೀರ…. ಹೌದು ಸ್ನೇಹಿತರೆ ಆ ಲಾಭಗಳಾವುವು ತಿಳಿಯೋಣವೆ….

ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು  ತಡೆಯಲು ಪ್ರತಿದಿನ ಓಡುವುದನ್ನು ರೂಡಿಸಿಕೊಳ್ಳಬೇಕು. ನೀವು ರನ್ನಿನ್ಗನಲ್ಲಿ ಇರುವಾಗ ದೇಹದ ಪ್ರತಿಯೊಂದು ಭಾಗವೂ ಪಾಲ್ಗೊಳ್ಳಲೇ ಬೇಕಾಗುತ್ತದೆ. ಆ ಮೂಲಕ  ದೇಹದಲ್ಲಿ ಶೇಖರಣೆಯಾಗಿರುವ ಎಲ್ಲ ಕೊಬ್ಬು ಕರಗುತ್ತದೆ. ನೀಳವಾದ ಮತ್ತು ಕೊಬ್ಬಿಲ್ಲದ ದೇಹ ಪಡೆಯಬಹುದು.

Image Copyright : google.com

ದಿನಾಲು ಓಡೋದ್ರಿಂದ ಸೊಂಟದ ಸುತ್ತಲೂ ಮತ್ತು ಕಾಲಿನ ಮಾಂಸ ಖಂಡಗಳು ಬಳಗೊಳ್ಳುತ್ತವೆ. ಇದರಿಂದಾಗಿ ನೀವು ಸದೃಡರಾಗುತ್ತೀರಿ. ಅಲ್ಲದೇ ನಮ್ಮ ದೇಹ ನಮಗೆ ಹಗುರವೆನಿಸುತ್ತದೆ. ಸದೃಡವಾದ ಕಾಲು ಮತ್ತು ಸೊಂಟ ನಮ್ಮನ್ನು ಎಲ್ಲಿಯೂ ಮತ್ತು ಎಂತಹ ಪ್ರದೇಶಗಳಲ್ಲಿಯೂ ಸಂಚರಿಸಲು ಸಹಕಾರಿಯಾಗಿದೆ.
ಇದನ್ನೂ ಓದಿರಿ :ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?
ಓಡುವ ಸಮಯದಲ್ಲಿ ಹೆಚ್ಚು ಹೆಚ್ಚು ಉಸಿರಾಟವನ್ನು ಮಾಡುತ್ತೇವೆ. ಇದರಿಂದಾಗಿ ಲಭ್ಯವಾಗುವ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೇ ದೇಹದ ಎಲ್ಲ ಭಾಗಗಳಿಗೆ ಉತ್ತಮ ರಕ್ತ ಸಂಚಾರ ಉಂಟಾಗುತ್ತದೆ. ಉತ್ತಮ ರಕ್ತ ಸಂಚಾರ ಎಂದರೆ ಉತ್ತಮ ಆರೋಗ್ಯ ಅಲ್ಲವೇ.

Image Copyright : google.com

ಒಂದು ಅಧ್ಯಯನದ ಪ್ರಕಾರ ಡಿಪ್ರೆಶನ್ ನಿಂದ ಬಳಲುತ್ತಿರುವವರು ದಿನಾ ಓಡೋದ್ರಿಂದ ಸುಲಭವಾಗಿ ಹೊರಬರಬಹುದಂತೆ. ಮಾನಸಿಕ ಕಿನ್ನತೆ ಇದು ಗಂಭೀರವಾದ ಕಾಯಿಲೆಯಾಗಿದ್ದು, ಅದನ್ನು ನಿರ್ಲಕ್ಷಿಸುವಂತಿಲ್ಲ. ಇದಕ್ಕೆ ಉತ್ತಮ ಚಿಕಿತ್ಸೆಯ ಭಾಗವಾಗಿ ಈ ಹವ್ಯಾಸವನ್ನು ಸೇರಿಸಿಕೊಳ್ಳಬಹುದು. ಇದು ಮನಸ್ಸನು ಉಲ್ಲಸಿತಗೊಳಿಸಿ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.

ದೈಹಿಕ ವ್ಯಾಯಾಮವಾಗಿ ಓಟವನ್ನು ಅಳವಡಿಸಿಕೊಳ್ಳುವುದರಿಂದ ದೈಹಿಕ ಶಕ್ತಿಯ ಹೆಚ್ಚಳದ ಜೊತೆ ಜೊತೆಗೆ ಯಲುಬಿನ ಮತ್ತು ಸಂದುಗಳ ಶಕ್ತಿ ಸಹ ಹೆಚ್ಚಾಗುತ್ತದೆ. ಅಧ್ಯಯನಗಳ ಪ್ರಕಾರ ಶಕ್ತಿ ಹೆಚ್ಚಿಸುವಲ್ಲಿ ಓಟವು ಸಹಕಾರಿಯಾಗಿದೆ. ಅಲ್ಲದೇ ಎಲ್ಲ ಎಲುಬಿನ ಜೋಯಿಂಟ್ ಗಳು ಸಹ ಗಟ್ಟಿ ಮುಟ್ಟಾಗುತ್ತವೆ.

Image Copyright : google.com

ದಿನಾ ಓಡೋದ್ರಿಂದ ಮೇಲೆ ತಿಳಿಸಿದ ಎಲ್ಲ ಪ್ರಯೋಜನಗಳು ಲಭಿಸುತ್ತವೆ. ಇವುಗಳನ್ನು ತಿಳಿದ ಮೇಲೆ ನೀವು ಇದನ್ನು ಪ್ರಾರಂಭಿಸಲು ಬಯಸಿದಲ್ಲಿ ಸರಿಯಾದ ಕ್ರಮವನ್ನು ಅನುಸರಿಸುವುದು ಬಹು ಮುಖ್ಯವಾಗಿದೆ. ಒಂದೇ ಬಾರಿಗೆ ಹೆಚ್ಚು ಓಡುವ ಬದಲು ನಿಧಾನವಾಗಿ ದಿನಕ್ಕಿಂತಲೂ ದಿನ ಹೆಚ್ಚು ಓಟದ ದೂರವನ್ನು ಹೆಚ್ಚಿಸಿ. ಒಮ್ಮೆಲೇ ಬಹಳ ಓದುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಓಡಿ ಮತ್ತು ಸುಸ್ತಾದಲ್ಲಿ ಸ್ವಲ್ಪ ಸಮಯ ನಡೆಯಿರಿ ಅಥವಾ ಕುಳಿತುಕೊಳ್ಳಿ. ಬಾಗದೆ ನೇರವಾಗಿ ಓಡಲು ಅಭ್ಯಸಿಸಿ. ಓದುವುದಕ್ಕೂ ಸಹ ಸರಿಯಾದ ಕ್ರಮ ಅನುಸರಿಸುವುದು ಸಗತ್ಯವಾಗಿದೆ.
ಇದನ್ನೂ ಓದಿರಿ :ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!

LEAVE A REPLY

Please enter your comment!
Please enter your name here