ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ ..?

ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ
Image Credit: goolge.com

ಸೀಬೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಣ್ಣು. ಹಳ್ಳಿಗಳಲ್ಲಿ ಬೆಳೆದ ಪ್ರತಿಯೊಬ್ಬರಿಗೂ ಈ ಹಣ್ಣು ತಿನ್ನದೇ ಇರಲಾರರು. ಇದರ ಸೇವನೆಯಿಂದ ನಮ್ಮ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎನ್ನುವ ಕುರಿತು ನಿಮಗೆ ತಿಳಿದಿದೆಯೇ..?

ಇದನ್ನು ಸೀಬೆ ಹಣ್ಣು , ಪೆರ್ಲ ಹಣ್ಣು, ಗುವಾವ್ ಫ್ರುಟ್ ಅಂತೆಲ್ಲಾ ಕರೆಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಅಲ್ಲದೆ ದೇಹದಲ್ಲಿ ಉಂಟಾಗುವ ಉತ್ಕರ್ಷಣ ಕ್ರಿಯೆಯನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.

ಸೀಬೆ ಹಣ್ಣಿನಲ್ಲಿ ನಮಗೆ ಅಗತ್ಯವಾದ ವಿಟಮಿನ್ ಸಿ, ಪೊಟ್ಯಾಷಿಯಂ, ವಿಟಮಿನ್ ಎ ಮತ್ತು ಅಗತ್ಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಗಾಧಪ್ರಮಾಣದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಆದ್ದರಿಂದ ಇಂದು ನಾವು ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆ ಎನ್ನುವ ಕುರಿತು ತಿಳಿಯೋಣ..

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:-

health-benefits-of-guava-fruit
Image Credit: goolge.com

ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಕಾರಕಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀ, ಜ್ವರ, ಕೆಮ್ಮುಗಳಂತಹ ಚಿಕ್ಕ ಪುಟ್ಟ ತೊಂದರೆಗಳಿಂದ ದೂರವಾಗಬಹುದು.

ವಿಟಮಿನ್ ಸಿ ದೇಹದ ಜೀವಕೋಶಗಳನ್ನು ಹಾನಿಗೊಳಗಾಗದಂತೆ ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್, ಸಂಧಿವಾತ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಂದ ದೂರವಿರಿಸುತ್ತದೆ ಎಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.

ಇದನ್ನೂ ಓದಿರಿ: ಬಿಟ್ರೂಟ ಸೇವನೆಯಿಂದ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ…?

ಹೃದಯವನ್ನು ಕಾಯಿಲೆಗಳಿಂದ ಕಾಪಾಡುತ್ತದೆ :-

ಪೇರಲ ಹಣ್ಣು ಪೈಬರ್ ನ ಒಂದು ಸಮೃದ್ಧ ಮೂಲವಾಗಿದೆ. ಇದರಿಂದಾಗಿ ಕರುಳಿನ ಮತ್ತು ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಪೊಟ್ಯಾಷಿಯಂ ಇರುವುದರಿಂದ ರಕ್ತದ ಅಧಿಕ ಒತ್ತಡವನ್ನು ನಿಯಂತ್ರಿಸುವ ಶಕ್ತಿ ಬರುತ್ತದೆ. ಅಲ್ಲದೇ ಹೇರಳವಾಗಿ ಪೈಬರ್ ಇರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಕಡಿಮೆಯಾಗಿತ್ತದೆ. ಇದರಲ್ಲಿರುವ ಪಾಲಿಸ್ಯಾಕರೈಡ ಎಂಬ ಕಾರ್ಬೋಹೈಡ್ರೆಟ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುತ್ತದೆ:-

health-benefits-of-guava-fruit
Image Credit: goolge.com

ರೋಗನಿರೋಧಕತೆಯನ್ನು ಹೆಚ್ಚಿಸುವ ಲೈಕೊಪಿನ್ ಮತ್ತು ವಿಟಮಿನ್ ಸಿ ಅಂಶವು ಪೇರಲ ಹಣ್ಣಿನಲ್ಲಿ ಹೇರಳವಾಗಿದೆ. ಇವುಗಳು ಕ್ಯಾನ್ಸರ್ ಗೆ ಕಾರಣವಾಗುವ ಪ್ರಕ್ರಿಯೆ ಉಂಟಾಗುವುದನ್ನು ಮೊದಲಿನಿಂದಲೇ ತಡೆಯುತ್ತವೆ. ಪೇರಲದ ಸೇವನೆಯು ಕ್ಯಾನ್ಸರ್ ವಿರುದ್ಧ ನಿರೋಧಕತೆಯನ್ನು ತೋರಲು ಸಹಕಾರಿಯಾಗುತ್ತದೆ.

ಕೇವಲ ಸೀಬೆ ಹಣ್ಣು ಮಾತ್ರವಲ್ಲದೇ ಇದರ ಎಲೆಗಳಲ್ಲಿಯೂ ಕ್ಯಾನ್ಸರ್ ತಡೆಯುವ ಶಕ್ತಿ ಇದೆ. ಇದರ ರಸವನ್ನು ತೆಗೆದುಕೊಳ್ಳುವುದರಿಂದ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳ ಪ್ರಸರಣ ಕ್ರಿಯೆಯನ್ನು ತಡೆಯುತ್ತದೆ. ಇದು ಎಲೆಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಸಾಬೀತಾಗಿದೆ.

ಜೀರ್ಣ ಕ್ರೀಯೆಯನ್ನು ಉತ್ತೇಜಿಸುತ್ತದೆ:-

ಪೇರಲ ಹಣ್ಣು ಜೀರ್ಣ ಕ್ರಿಯಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿರುವ ನಾರಿನಂಶವು ಉತ್ತಮ ಪಚನಕ್ರೀಯೆಗೆ ಸಹಕಾರಿಯಾಗಿದೆ. ಈ ಹಣ್ಣು ಮತ್ತು ಎಲೆಗಳನ್ನು ಸೇವಿಸುವುದರಿಂದ ವಾಂತಿ ಬೇದಿಯಂತಹ ಸಮಸ್ಯೆಗಳು ದೂರವಾಗುತ್ತವೆ. ಸೀಬೆ ಹಣ್ಣು ಮತ್ತು ಎಲೆಯ ಸಾರವು ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಿ ಜೀರ್ಣಾಂಗ ವ್ಯವಸ್ತೆಯ ಮೇಲಾಗುವ ಸೊಂಕುಗಳನ್ನು ತಡೆಗಟ್ಟುತ್ತದೆ.

ಉತ್ತಮ ಕಣ್ಣಿನ ದೃಷ್ಟಿಗೆ ಸಹಕಾರಿ:-

ಸೀಬೆಹಣ್ಣು ವಿಟಮಿನ್ ಎ ಅಂಶವನ್ನು ಹೊಂದಿದೆ. ವಿಟಮಿನ್ ಎ ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯಕವಾಗಿದೆ. ಈ ಪೋಷಕಾಂಶವು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಕ್ಷೀಣತೆಯ ಅಪಾಯವನ್ನು ತಡೆಗಟ್ಟುತ್ತದೆ.

ಇದನ್ನೂ ಓದಿರಿ: ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ಮುಟ್ಟಿನ ನೋವನ್ನು ತಡೆಯುತ್ತದೆ:-

health-benefits-of-guava-fruit
Image Credit: goolge.com

ಒಂದು ಅಧ್ಯಯನದ ಪ್ರಕಾರ, ಮುಟ್ಟಿನ ಸೆಳೆತವಿರುವ 197 ಮಹಿಳೆಯರಿಗೆ ಸೀಬೆ ಹಣ್ಣಿನ ಮತ್ತು ಎಲೆಯ ಸಾರವನ್ನು ನೀಡಲಾಯಿತು. ಇದರ ಪರಿಣಾಮವಾಗಿ ಗರ್ಭಾಶಯದ ಸ್ನಾಯು ಸೆಳೆತವು ಕಡಿಮೆಯಾಗಿ ಹಿತವಾದ ಅನುಭವವನ್ನು ಹೊಂದಿರುವ ಕುರಿತು ವರಧಿಯಾಗಿದೆ.

ಗರ್ಭಾವಸ್ಥೆಯಲ್ಲಿ ಉತ್ತಮ ಪೋಷಕಾಂಶ:-

ಸೀಬೆಹಣ್ಣು ಪೋಲೆಟ್ ಅಂಶವನ್ನು ಹೊಂದಿದೆ. ಇದರಿಂದಾಗಿ ಗರ್ಭದರಿಸಿದ ಮಹಿಳೆಯರಿಗೆ ಉತ್ತಮ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ಸೇವಿಸುವುದರಿಂದ ಜನನ ದೋಷಗಳು ಪರಿಹಾರವಾಗುತ್ತವೆ. ದಿನಕ್ಕೆ ಒಂದು ಪೇರಲ ಹಣ್ಣನ್ನು ಸೇವಿಸುವುದರಿಂದ ಮಗುವಿನ ಬೆನ್ನು ಹುರಿ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಪೇರಲ ಹಣ್ಣು (ಸೀಬೆಹಣ್ಣು) ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಹಣ್ಣಾಗಿರುವುದು ಮತ್ತು ಅನೇಕ ಆರೋಗ್ಯಕರವಾದ ಅಂಶಗಳನ್ನು ಹೊಂದಿರುವುದು ಗಮನಿಸಬಹುದು. ಇದರ ಸೇವನೆಯನ್ನು ಮಾಡುವುದರಿಂದ ಏನೆಲ್ಲಾ ಉಪಯೋಗಗಳು ಆಗುತ್ತವೆ ಎನ್ನುವ ಕುರಿತು ಹಲವಾರು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮ ಅನುಕೂಲಕ್ಕಾಗಿ ಇಟ್ಟಿದ್ದೇವೆ.

ಈ ಮಾಹಿತಿಗಳು ನಿಮಗೆ ಉಪಯೋಗವಾಗುತ್ತವೆ ಎಂದು ಭಾವಿಸುತ್ತೇವೆ. ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದರೆ ಲೈಕ್, ಶೇರ್ ಮತ್ತು ಫಾಲೋ ಮಾಡುವ ಮೂಲಕ ಇನ್ನಷ್ಟು ಹೊಸ ಹೊಸ ವಿಚಾರಗಳನ್ನು ನಿಮ್ಮ ಮುಂದಿಡಲು ನಮ್ಮನ್ನು ಪ್ರೋತ್ಸಾಹಿಸಿ..

ಇದನ್ನೂ ಓದಿರಿ: ಪಿಸ್ತಾ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿದರೆ ನೀವು ದಂಗಾಗುತ್ತಿರಿ..!

LEAVE A REPLY

Please enter your comment!
Please enter your name here