ಶಾಲೆಯಲ್ಲಿ ತರ್ಲೆ ಮಾಡಿದಾಗ ಕಿವಿ ಹಿಡಿಸಿ ಬಸ್ಕಿ ಹೊಡೆಸುತ್ತಿದ್ದರು ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಗೊತ್ತೇ…?

Benefits of Baski in Old School

ಹಿಂದಿನಿಂದಲೂ ವಿದ್ಯಾರ್ಥಿಗಳನ್ನು ತಿದ್ದಲು ಕಿವಿಗಳನ್ನು ಹಿಡಿದು ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡುತ್ತಾ ಬಂದಿದ್ದಾರೆ. ನಾವೆಲ್ಲ ಇಂತಹ ಶಿಕ್ಷೆಯನ್ನು ಪಡೆದೇ ಇರುತ್ತೇವೆ. ಇಂದಿನ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಇವುಗಳು ನೋಡಲು ಸಿಗದಿರಬಹುದು. ಆದರೆ ಈ ಶಿಕ್ಷೆಯನ್ನು ನೀಡುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿತ್ತು.

ಬಸ್ಕಿ ಶಿಕ್ಷೆ ಎಂದರೆ ತನ್ನ ಬಲಗೈಯಲ್ಲಿ ಎಡಕಿವಿಯನ್ನು ಹಾಗು ಎಡಗೈಯಲ್ಲಿ ಬಲ ಕಿವಿಯನ್ನು ಹಿಡಿದುಕೊಂಡು ಕೂರುವುದು  ಮತ್ತು ಏಳುವುದು.  ರೀತಿಯಾದ ಶಿಕ್ಷೆಯನ್ನು ಅನುಭವಿಸುವುದರಿಂದ ಕಿವಿಯಲ್ಲಿರುವ ಕೆಲವು ಬಿಂದುಗಳು ಜಾಗ್ರತವಾಗಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಜಾಗ್ರತಿ ಉಂಟಾಗುತ್ತಿತ್ತು.

ಪ್ರಪಂಚದಾದ್ಯಂತ ವಿಜ್ಞಾನಿಗಳು ಇದರ ಮೇಲೆ ಸಂಶೋಧನೆ ನಡೆಸಿ ಇದು ಏಕಾಗ್ರತೆಯನ್ನು ಹೆಚ್ಚಿಸಿ, ಮೆದುಳಿನ ಭಾಗವನ್ನು ಸಕ್ರಿಯಗೊಳಿಸುತ್ತದೆ ಎಂದು ಕಂಡುಕೊಂಡರು.

ಇದನ್ನೂ ಓದಿರಿ: ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಮಹಾಶಕ್ತಿಶಾಲಿ ಈ ಬಾಳೆದಿಂಡು ..!

Benefits of Baski in Old School

ಸಂಶೋಧನೆಯ ಸಮಯದಲ್ಲಿ ಕೇವಲ ಒಂದೇ ನಿಮಿಷದಲ್ಲಿ ಬಸ್ಕಿ ಹೊಡೆದ ತಕ್ಷಣ ಅಲ್ಪ ತರಂಗಗಳು ಹೆಚ್ಚಾಗಿದ್ದು ಕಂಡುಬಂದಿತು. ಈ ವಿಧಾನವನ್ನು ಮಾಡುವಾಗ ನಮ್ಮ ಕೈಗಳು ಎರಡೂ ಕಿವಿಯ ಹಾಲೆಗಳನ್ನು ಒತ್ತಲ್ಪಡುತ್ತವೆ. ಇದರಿಂದ ಎಡಕಿವಿ ಒತ್ತುವಿಕೆಯಿಂದ ಬಲ ಮೆದುಳಿನ ಭಾಗವೂ ಮತ್ತು ಬಲಕಿವಿ ಒತ್ತುವುದರಿಂದ ಎಡ  ಮೆದುಳಿನ ಭಾಗವೂ ಸಕ್ರಿಯಗೊಳ್ಳುತ್ತದೆ. ಬಸ್ಕಿ ಹೊಡೆಯುವುದರಿಂದ ಪಿಟ್ಯುಟರಿ ಗ್ರಂಥಿಯು ಪ್ರಚೋದನೆಗೆ ಒಳಗಾಗುತ್ತದೆ.

ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಇದನ್ನು ಶಾಲೆಗಳಲ್ಲಿ ಬುದ್ದಿ ವಿಕಾಸ ಮತ್ತು ಏಕಾಗ್ರತೆಗಾಗಿ ಬಸ್ಕಿಯನ್ನು ಒಂದು ವ್ಯಾಯಾಮವಾಗಿ ಅಳವಡಿಸಿಕೊಂಡಿವೆ. ಇದರ ಪ್ರಯೋಜನವನ್ನು ಕಂಡ ಅವರು ‘ ಸೂಪರ್ ಬ್ರೇನ್ ಯೋಗ ‘ ಎಂದು ಕರೆದಿದ್ದಾರೆ.

ಇದನ್ನು ಓದಿರಿ: ಉತ್ತರಾಣಿ ಎಲೆಯ ರಸವನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಾಗುತ್ತವೆ ಗೊತ್ತೇ..?

LEAVE A REPLY

Please enter your comment!
Please enter your name here