ಅಪಾನ ಮುದ್ರೆ ಮಾಡುವ ವಿಧಾನ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ ?

Benefits of Apana Mudra

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಾಚೀನ ಕಾಲದ ಮಹರ್ಷಿಗಳು ಕೆಲವೊಂದು ಸರಳ ವಿಧಾನಗಳನ್ನು ಹೇಳಿಕೊಟ್ಟಿದ್ದಾರೆ. ಅವುಗಳಲ್ಲಿ ಮುದ್ರೆಗಳೂ ಒಂದು. ಇವು ನಮ್ಮ ದೇಹವನ್ನು ಸದೃಡ ಮತ್ತು ಆರೋಗ್ಯವಾಗಿ ಇರಿಸಿಕೊಳ್ಳಲು ಸಹಾಯಕವಾಗಲಿವೆ. ಮುದ್ರಾ ಯೋಗವು ವೈಜ್ಞಾನಿಕವಾಗಿ ಆರೋಗ್ಯ ಕಾಪಾಡಬಲ್ಲವು ಎಂದು ನಿರೂಪಿಸಲ್ಪಟ್ಟಿದ್ದು, ಸುಲಭವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಪಾನ ಮುದ್ರೆಯು ನಮ್ಮ ದೇಹದಲ್ಲಿನ ಕಲ್ಮಷಗಳನ್ನು ಸುಲಭವಾಗಿ ಹೊರಹಾಕಲು ಪ್ರೋತ್ಸಾಹಿಸಿ, ಉಂಟಾಗಬಹುದಾದ ಹಲವಾರು ಕಾಯಿಲೆಗಳನ್ನು ತಡೆಗಟ್ಟುತ್ತದೆ. ಸುಲಭವಾಗಿ ಪದ್ಮಾಸನದಲ್ಲಿ ಕುಳಿತು ಕೈ ಬೆರಳುಗಳ ಮೂಲಕ ಮಾಡುವ ಈ ಬಂಗಿಗಳಿಂದ ಆಶ್ಚರ್ಯಕರವಾದ ಪರಿಣಾಮಗಳನ್ನು ಪಡೆಯಬಹುದಾಗಿದೆ. ಈ ಮುದ್ರೆಯನ್ನು ಮಾಡುವುದರಿಂದ ಹೊಟ್ಟೆಯ ಸಕಲ ಅಂಗಾಂಗಗಳು ಬಲಗೊಂಡು ಸಮಸ್ಯೆಯನ್ನು ದೂರಮಾಡುತ್ತವೆ.

ಈ ಮುದ್ರೆಯನ್ನು ಮಾಡುವ ಕ್ರಮ

ಈ ಮುದ್ರೆಯನ್ನು ಮಾಡಲು ಮೊದಲು ಪದ್ಮಾಸನ/ವಜ್ರಾಸನ/ಸಿದ್ಧಾಸನ/ವೀರಾಸನ ಇವುಗಳಲ್ಲಿ ಯಾವುದಾದರೂ ಒಂದು ಆಸನವನ್ನು ಹಾಕಿ ಕುಳಿತುಕೊಳ್ಳಬೇಕು. ನಂತರ ಮಧ್ಯದ ಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿಗೆ ತಂದು ಮ್ರದುವಾಗಿ ಸ್ಪರ್ಶಿಸಬೇಕು. ಉಳಿದ ತೋರುಬೆರಳು ಮತ್ತು ಕಿರುಬೇರಳುಗಳು ಸಾಧ್ಯವಾದಷ್ಟು ನೇರವಾಗಿರಬೇಕು. ಈ ರೀತಿಯಾಗಿ ಎರಡೂ ಕೈಗಳಲ್ಲಿ ಮಾಡಿಕೊಂಡು ನೇರವಾಗಿ ಮತ್ತು ಸಮಾಧಾನದಿಂದ ಸುಮಾರು ಐದು ನಿಮಿಶದಿನದ 45 ನಿಮಿಷಗಳವರೆಗೆ ಕುಳಿತುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಉತ್ತಮವಾದ ಪರಿಣಾಮಗಳನ್ನು ಕಂಡುಕೊಳ್ಳಲು ಸಹಾಯಕವಾಗಲಿವೆ.

ಇದನ್ನೂ ಓದಿರಿ: ಕಣ್ಣಿನ ಸಮಸ್ಯೆ ಮತ್ತು ನಿಶ್ಯಕ್ತಿಗೆ ಈ ಒಂದು ಮುದ್ರೆ ಮಾಡುವುದರಿಂದ ಪರಿಹಾರ ಕಾಣಬಹುದು..!

ಈ ಮುದ್ರೆಯ ವಿಶೇಷತೆ ಮತ್ತು ಪ್ರಯೋಜನಗಳು

ಈ ಮುದ್ರೆಯನ್ನು ಪ್ರತಿದಿನ ಮಾಡುವುದರಿಂದ ವಿಸರ್ಜನಾಂಗವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಮೂಲಕ ಎಲ್ಲ ಕಾರ್ಯಗಳು ಸರಿಯಾದ ಕ್ರಮದಲ್ಲಿ ನಡೆದಾಗ ಯಾವುದೇ ರೋಗ ರುಜಿನಗಳು ಉಂಟಾಗುವುದಿಲ್ಲ. ಹೊಟ್ಟೆಯ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವವರು ಈ ಮುದ್ರೆಯನ್ನು ಮಾಡುವುದರಿಂದ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಈ ಮುದ್ರೆಯನ್ನು ಪ್ರತಿದಿನ 45 ನಿಮಿಷಗಳ ಕಾಲ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಮೂತ್ರ ಪಿಂಡ ಮತ್ತು ಮುತ್ರಕೊಶಗಳಲ್ಲಿನ ಹಲವಾರು ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಮೂಲೆಗೆ ಸಂಬಂದಿಸಿದ ರೋಗಗಳು ದೂರವಾಗುತ್ತವೆ. ದೇಹದಲ್ಲಿ ಸಂಗ್ರಹವಾದ ಕಲ್ಮಶಗಳು ಮತ್ತು ಹಾನಿಕಾರಕಗಳನ್ನು ಹೊರಹಾಕಲು ಸಹಾಯಕವಾಗುತ್ತದೆ. ಹಲ್ಲು ನೋವು ದೂರವಾಗುತ್ತದೆ. ಹೆರಿಗೆಯ ನೋವು ಮತ್ತು ಸುಲಭ ಹೆರಿಗೆಗೆ ಈ ಮುದ್ರೆಯೂ ಸಹಾಯಕವಾಗಿದೆ.

ಸ್ತ್ರೀಯರ ಮಾಸಿಕ ಋತುಚಕ್ರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಮಲಬದ್ಧತೆ, ಉರಿಮೂತ್ರ, ಕೈ ಕಾಲುಗಳಲ್ಲಿ ಉರಿಯುವ ಅನುಭವ ಮತ್ತು ಎದೆಯುರಿಯಂತಹ ಸಮಸ್ಯೆಯಿಂದ ಬಳಲುವವರು ಈ ಮುದ್ರೆಯನ್ನು ಮಾಡುವುದರಿಂದ ನಿವಾರಣೆ ದೊರೆಯುತ್ತದೆ. ವಾಕರಿಕೆ ಮತ್ತು ವಾಂತಿಯಂತಹ ತೊಂದರೆ ಇರುವವರು ಈದರಿಂದ ಪರಿಹಾರವನ್ನು ಪಡೆಯಬಹುದು. ಕಣ್ಣು, ಕಿವಿ ಮೂಗು ಬಾಯಿಯ ಸಮಸ್ಯೆಗಳಿದ್ದರೆ ಇದರಿಂದ ಉತ್ತಮ ಪರಿಣಾಮ ಪಡೆದುಕೊಳ್ಳಬಹುದು.

ಮುದ್ರೆಗಳು ನಮ್ಮ ಹಿರಿಯರು ನಮಗೆ ನೀಡಿದ ಸುಲಭ ಆರೋಗ್ಯ ಪರಿಹಾರ ವಿಧಾನವಾಗಿದೆ. ವ್ಯಾಯಾಮ, ಆಸನಗಳನ್ನು ಮಾಡಲು ಸಾಧ್ಯವಾಗದೆ ಇರುವವರು ಮುದ್ರೆಗಳ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವು ತುಂಬಾ ಸುಲಭವಾಗಿರುವುದರಿಂದ ಮತ್ತು ಇವುಗಳನ್ನು ಮಾಡಲು ಯಾವುದೇ ನಿರ್ಧಿಷ್ಟ ಸಮಯದ ಪರೀದಿ ಇಲ್ಲದಿರುವುದರಿಂದ ಸಮಯ ಸಿಕ್ಕಾಗ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

ಇದನ್ನೂ ಓದಿರಿ: ಸುಲಭವಾಗಿ ಈ ಮುದ್ರೆಯನ್ನು ಮಾಡುವ ಮೂಲಕ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ

LEAVE A REPLY

Please enter your comment!
Please enter your name here