ಹಾಗಲಕಾಯಿಯ ಸೇವನೆಯಿಂದ ಏನೆಲ್ಲಾ ಉಪಯೋಗಗಳಿವೆ ನಿಮಗೆ ತಿಳಿಯಬೇಕೆ ಹಾಗಾದರೆ ಓದಿ

amazing-benefits-of-bitter-Karela

ನಿಮ್ಮಲ್ಲಿ ಹಲವರಿಗೆ ಹಾಗಲಕಾಯಿಯೆಂದರೆ ಸ್ವಲ್ಪ ತಿರಸ್ಕಾರವೇ ಇರಬಹುದು. ಆದರೆ ಇದು ಕಹಿಯಾದಷ್ಟೇ ಉತ್ತಮ ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ತಲೆನೋವು,ಗಂಟುಗಳಲ್ಲಿ ನೋವು ಮತ್ತು ಮದುಮೇಹದಂತಹ ಗಂಭೀರ ಕಾಯಿಲೆಗಳನ್ನೇ ದೂರಮಾಡುವ ಶಕ್ತಿಯನ್ನು ಹೊಂದಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಪೋತ್ಯಷಿಯಮ್, ವಿಟಮಿನ್ ಎ, ಸಿ, ಬಿ ಮತ್ತು ಇ ಹಾಗೂ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇವಷ್ಟೇ ಅಲ್ಲದೇ ಇದರ ಸೇವನೆಯಿಂದ ಏನೆಲ್ಲಾ ಉಪಯೋಗಗಳು ಇವೆ ಎನ್ನುವ ಕುರಿತು ತಿಳಿದುಕೊಳ್ಳೋಣ.

ಹಾಗಲಕಾಯಿಯು ತನ್ನ ವಿಶಿಷ್ಟವಾದ ರುಚಿಯ ಗುಣದಿಂದಾಗಿ ಹಲವರಿಗೆ ಇಷ್ಟವಾಗುವುದಿಲ್ಲ. ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳು ನಮ್ಮನ್ನು ಇದರತ್ತ ಸೆಳೆದುಕೊಳ್ಳುತ್ತವೆ. ಹಾಗಲಕಾಯಿಯ ಸೊಪ್ಪು, ತಿರುಳು, ಚರ್ಮ, ಬೀಜ ಮತ್ತು ಹಣ್ಣುಗಳಿಂದ ಅನೇಕ ಪ್ರಯೋಜನಗಳಿವೆ. ಇದರಲ್ಲಿರುವ ಪೈಟೋಕೆಮಿಕಲ್ಸ್ ಮಧುಮೇಹ, ಪಿತ್ತಜನಕಾಂಗದ ಸಮಸ್ಯೆ, ಬೊಜ್ಜು ಮತ್ತು ಸಂಭಂಧಿತ ರೋಗಗಳ ವಿರುದ್ಧ ಹೋರಾಡುತ್ತದೆ.

ಇದನ್ನೂ ಓದಿರಿ: ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಏನೇಲ್ಲಾ ಪ್ರಯೋಜನಗಳಿವೆ ಗೊತ್ತೇ..?

ಮಧುಮೇಹ ನಿಯಂತ್ರಿಸುತ್ತದೆ: 

ಹಾಗಲಕಾಯಿಯು ದೇಹದಲ್ಲಿ ಪ್ರತಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾದ ಆಹಾರಗಳಲ್ಲಿ ಒಂದಾಗಿದೆ. ಹಾಗಲಕಾಯಿಯ ಸೊಪ್ಪು, ಕಾಯಿ ಹೀಗೆ ಯಾವುದೇ ಭಾಗವನ್ನು ಔಷಧದ ರೂಪದಲ್ಲಿ ತೆಗೆದುಕೊಂಡರೂ ಉತ್ತಮ ಪರಿಣಾಮವನ್ನು ನೀಡುತ್ತದೆ. ಇದರ ಸೇವನೆಯಿಂದ ಮಧುಮೇಹ ಇರುವವರಲ್ಲಿ ಕರುಳಿನಿಂದ ಗ್ಲುಕೋಸ್ ಹಿರಿಕೆಯಾಗುವ ಅಂಶವನ್ನು ಕಡಿಮೆಗೊಳಿಸುವ ಜೊತೆಗೆ ಸ್ನಾಯುಗಳಲ್ಲಿ ಅವುಗಳ ಬಳಕೆಯನ್ನು ಹೆಚ್ಚಿನದಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಧುಮೇಹಿಗಳು ತಮ್ಮ ಸಮಸ್ಯೆಯಿಂದ ದೂರಾಗಿ ನಿರಾಳತೆಯನ್ನು ಪಡೆಯುತ್ತಾರೆ. ಈ ಎಲ್ಲ ಬದಲಾವಣೆಗಳಿಗೆ ಅದರಲ್ಲಿರುವ ಪೈಟೋಕೆಮಿಕಲ್ಸ್ ಕಾರಣವಾಗಿದೆ.

amazing-benefits-of-bitter-Karela
Image Credit: google.com

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ:

ಹಾಗಲಕಾಯಿಯ ಸೇವನೆಯಿಂದ ದೇಹದಲ್ಲಿ ಶೇಖರಣೆಯಾಗುವ ಕೊಬ್ಬಿನಾಂಶದ ಪ್ರಮಾಣವು ಕಡಿಮೆಯಾಗುತ್ತದೆ. ಕಾರಣ ದೇಹದ ತೂಕದಲ್ಲಿ ಇಳಿಕೆಯನ್ನು ಕಾಣಬಹುದು. ಗ್ಲುಕೋಸ್ ಹೀರಿಕೆಯು ಕಡಿಮೆಯಾಗುವುದರಿಂದ ಶೇಖರನೆಯು ಸಾಧ್ಯವಾಗುವುದಿಲ್ಲ. ಆ ಮೂಲಕ ಸುಲಭವಾಗಿ ತೂಕವನ್ನು ಕಡಿಮೆಮಾಡಿಕೊಳ್ಳಬಹುದು.

ಇದನ್ನೂ ಓದಿರಿ:ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ:

ಹಾಗಲಕಾಯಿಯು ಪಿತ್ತಜನಕಾಂಗದ ಸ್ನೇಹಿತನಂತೆ ಕಾರ್ಯನಿರ್ವಹಿಸುತ್ತದೆ. ಮಧುಮೇಹ, ಹೆಚ್ಚಿದ ಬೊಜ್ಜು ಮತ್ತು ಅಲ್ಕೋಹಾಲ್ ಸೇವನೆಯಿಂದ ಪಿತ್ತಜನಕಾಂಗದ ಜೀವಕೋಶಗಳಿಗೆ ಹಾನಿಯುಂಟಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇಂತಹ ಸಮಯದಲ್ಲಿ ಹಾಗಲಕಾಯಿಯ ಸೇವನೆಯಿಂದ ದೇಹದಲ್ಲಿ ಶೇಖರನೆಯಾಗುವ ಕೊಬ್ಬಿನಾಂಶ ಕಡಿಮೆಯಾಗಿ ಮತ್ತೆ ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗಲಕಾಯಿಯ ಸೇವನೆಯಿಂದ ಅಲ್ಕೋಹಾಲ್ ನಿಂದಾದ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ವಿವಿಧ ಸಮಸ್ಯೆಗಳ ಪರಿಣಾಮವಾಗಿ ಸಾವನ್ನಪ್ಪುವ ಯಕೃತ್ತಿನ ಜೀವಕೋಶಗಳನ್ನು ತಡೆದು ಶಕ್ತಿಯನ್ನು ಹೆಚ್ಚಿಸುವುದರಿಂದ ಇದನ್ನು ಯಕೃತ್ತಿನ ಸ್ನೇಹಿತ ಎನ್ನಲಾಗಿದೆ.

ಮಲಬದ್ಧತೆ ಮತ್ತು ಮೂಲವ್ಯಾಧಿಯನ್ನು ನಿವಾರಿಸುತ್ತದೆ:

ಹಾಗಲಕಾಯಿಯು ಮಾನವನ ದೇಹದಲ್ಲಿ ಉಪಯೋಗಕಾರಿಯಾಗಿ ಕೆಲಸಮಾಡುತ್ತದೆ. ಇದು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ ಆ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೇ ನಡೆಸಿದ ಹಲವಾರು ಪ್ರಯೋಗಗಳಲ್ಲಿ ಮೂಲವ್ಯಾಧಿ ಪೀಡಿತರಿಗೆ ಹಾಗಲಕಾಯಿಯ ಎಲೆಯ ರಸವನ್ನು ನೀಡಲಾಗಿ ಸುಧಾರಣೆಯು ಉಂಟಾದ ಲಕ್ಷಣಗಳು ಕಂಡುಬಂದಿರುವುದಾಗಿ ಧಾಖಲಾಗಿವೆ.

ಹಾಗಲಕಾಯಿಯ ರಸದಲ್ಲಿ ಉತ್ತಮ ಜೀರ್ಣಕಾರಿ ಅಂಶಗಳು ಇದ್ದು, ಆ ಮೂಲಕ ಜೀರ್ಣಕ್ರಿಯೆ ಉತ್ತಮಗೊಂಡು ತ್ಯಾಜ್ಯ ವಿಲೇವಾರಿ ಸುಲಭವಾಗುತ್ತದೆ. ಮಲಬದ್ಧತೆಯು ನಿವಾರಣೆಯಾಗುವ ಮೂಲಕ ರಕ್ತನಾಳಗಳ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆಯಾಗುತ್ತದೆ.

amazing-benefits-of-bitter-Karela
Image Credit: google.com

ಚರ್ಮದ ಮೇಲೆ ಉಂಟಾಗುವ ಕಜ್ಜಿಗಳನ್ನು ಕಡಿಮೆಗೊಳಿಸುತ್ತದೆ:

ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಕಜ್ಜಿಯಂತಹ ಚರ್ಮ ರೋಗಗಳು ದೂರವಾಗುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅದು ಪ್ರಯೋಗಗಳಿಂದ ಸಾಬಿತಾಗಿದ್ದು, ತನ್ನ ಅಪರಿಮಿತವಾದ ಶಕ್ತಿಯ ಪರಿಣಾಮವಾಗಿ ರಕ್ತವನ್ನು ಶುದ್ಧೀಕರಿಸಿ ಚರ್ಮದ ಮೇಲೆ ಉಂಟಾಗುವ ಕಜ್ಜಿಯಂತಹ ರೋಗಗಳನ್ನು ತಡೆಯುತ್ತದೆ.

ಇಲಿಗಳ ಮೇಲೆ ನಡೆಸಿದ ಪ್ರಯೋಗಗಳ ಪ್ರಕಾರ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಿ ದೇಹಕ್ಕೆ ಗರಿಷ್ಠ ಸಾಮರ್ಥ್ಯವನ್ನು ನೀಡುವುದು ಸಾಭಿತಾಗಿದೆ. ಅಲ್ಲದೇ ಈ ಪ್ರಯೋಗಗಳಿಂದ ಜೀವನದ ಗುಣಮಟ್ಟ ಸುಧಾರಿಸಿದ್ದಲ್ಲದೆ ಆಯಸ್ಸನ್ನು ಹೆಚ್ಚಿಸಿದೆ.

ಹಾಗಲಕಾಯಿ ತನ್ನ ಕಹಿಯಾದ ಗುಣದಿಂದ ಹಲವರ ಅವಕೃಪೆಗೆ ಗುರಿಯಾಗಿರಬಹುದು. ಆದರೆ ಅದರ ಆರೋಗ್ಯಕಾರಿ ಗುಣಗಳು ಕಡಿಮೆಯೇನಲ್ಲ. ಇದು ಉತ್ಕರ್ಷಣ ನಿರೋಧಕ, ಬೊಜ್ಜು ವಿರೋಧಿ, ಯಕೃತ್ತು ಮತ್ತು ಹೃದಯ ಸ್ನೇಹಿ ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಪ್ರಭಲ ಆಹಾರವಾಗಿದೆ.

ಈ ಗುಣಗಳನ್ನು ತಿಳಿದ ಮೇಲೆ ನೀವೆಲ್ಲರೂ ಹಾಗಲಕಾಯಿಯನ್ನು ಇನ್ನೂ ಹೆಚ್ಚು ಇಷ್ಟಪಟ್ಟು ಸೇವಿಸಿ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ತಮಗೆ ಮತ್ತೇನಾದರೂ ಹೆಚ್ಚಿನ ಮಾಹಿತಿಗಳು ಅವಶ್ಯವಿದ್ದಲಿ ಕಾಮೆಂಟ್ ಮಾಡಿ ತಿಳಿಸಿ. ಇಂತಹ ಮಾಹಿತಿಗಳನ್ನು ಪಡೆಯುತ್ತಿರಲು ನಮ್ಮನ್ನು ಫಾಲೋ ಮಾಡಲು ಮರೆಯದಿರಿ..

SPONSORED CONTENT

ಹಾಗಲಕಾಯಿಯ ವಿವಿಧ ಉತ್ಪನ್ನಗಳನ್ನು ಕರೀದಿಸಿ:

LEAVE A REPLY

Please enter your comment!
Please enter your name here