ಶಿವರಾತ್ರಿಯ ದಿನ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಜೀವನ ಪಾವನ..!

ಶಿವನೆಂದರೆ ಸರ್ವಶಕ್ತ.. ಆತನ ಕೃಪೆಗೆಪಾತ್ರರಾದರೆ ಈ ಜಗದಲ್ಲಿ ಸೋಲೆಂಬುದೇ ಇಲ್ಲ. ಆ ಮಹಾದೇವನಿಗೆ ಪೂಜೆ ಸಲ್ಲಿಸಲು ವಿಶೇಷ ಈ ದಿನ. ಈ ದಿನದ ಕುರಿತಾಗಿ ಪುರಾಣಗಳಲ್ಲಿಯೇ ಮಹತ್ವವಾದ ಸ್ಥಾನವನ್ನು ನೀಡಿದ್ದಾರೆ.

ಶಿವರಾತ್ರಿ ಎಂದೊಡನೆ ಶಿವಧ್ಯಾನ ಮಾಡುತ್ತಾ ಉಪವಾಸ ಉಳಿದು, ರಾತ್ರಿಯೆಲ್ಲಾ ಜಾಗರಣೆ ಮಾಡುವುದು ನೆನಪಾಗುತ್ತದೆ. ಈ ಶಿವರಾತ್ರಿಯ ದಿನ ದೇಶದೆಲ್ಲೆಡೆ ಶಿವ ಪೂಜೆ, ಶಿವ ಭಜನೆಗಳಲ್ಲಿ ದಿನವನ್ನು ಕಳೆಯುತ್ತಾರೆ. ಶಿವರಾತ್ರಿಯ ದಿನ ಭಕ್ತಿಯಿಂದ ಶಿವನನ್ನು ಭಜಿಸಿದರೆ ಎರಡರಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ನಾವು ಪಥಿಸಬೇಕಾದ ಪ್ರಮುಖ ಮಂತ್ರಗಳ ಕುರಿತು ತಿಳಿದುಕೊಳ್ಳೋಣ..

ಶಿವರಾತ್ರಿಯಂದು “ಪಂಚಾಕ್ಷರಿ ಮಂತ್ರ”ವನ್ನು ಪ್ರತಿಯೊಬ್ಬರೂ ತಪ್ಪದೆ ಜಪಿಸುತ್ತಾರೆ. ಈ ಓಂ ನಮಃ ಶಿವಾಯ ಮಂತ್ರದಲ್ಲಿ ಅಪಾರವಾದ ಶಕ್ತಿ ಇದ್ದು, ಈ ಮೂಲಕ ಶಿವನ ಕೃಪೆಗೆ ಸುಲಭವಾಗಿ ಪಾತ್ರರಾಗಬಹುದಾಗಿದೆ. ಅಲ್ಲದೇ ಶಿವಗಾಯತ್ರಿ ಮಂತ್ರದ ಪಠಣವು ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ.

ಓಂ ತತ್ಪುರುಷಾಯ ವಿದ್ ಮಹೇ
ಮಹಾದೇವಾಯ ಧೀಮಹಿ
ತನ್ನೋ ರುಧ್ರ ಪ್ರಚೋದಯಾತ್ ll

ಈ ಮಂತ್ರದ ಪಠಣೆಯಿಂದ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯು ನೆಲೆನಿಂತು ಜೀವನವನ್ನುಸುಂಧರವಾಗಿಸಿಕೊಳ್ಳಬಹುದು. ಅಲ್ಲದೇ ಶಿವಕೃಪೆ ಗೂ ಪಾತ್ರರಾಗಬಹುದಾಗಿದೆ. ಶಿವನು ಭಕ್ತ ಪ್ರಿಯನಾಗಿದ್ದಾನೆ. ಹಾಗಾಗಿ ಭಕ್ತಿಯಿಂದ ಭಜಿಸಿದವರ ಕೈನ್ನು ಯಾವತ್ತೂ ಬಿದಲಾರನು.

ಓಂ ತ್ರಯಂಭಕಂ ಯಜಾಮಹೇ
ಸುಗಂಧಿಂ ಪುಷ್ಟಿ ವರ್ಧನಂ
ಉರುವಾರುಕಮಿವ ಬಂಧನಾತ್
ಮೃತ್ಯು ಮುಕ್ಯೈ ಮಾಮೃತಾತ್ ll

ಇದು ಮಹಾ ಮೃತ್ಯುಂಜಯ ಮಂತ್ರವಾಗಿದೆ. ಈ ಮಂತ್ರವನ್ನು ವಿಶೇಷ ದಿನವಾದ ಶಿವರಾತ್ರಿಯಂದು ವ್ರತ ಪಾಲನೆಯನ್ನುಮಾಡಿ, ಪಠಣ ಮಾಡುವುದರಿಂದ ಅಕಾಲಿಕವಾದ ಮರಣ, ಭಯಾನಕ ರೋಗ ಮತ್ತು ಇನ್ನೂ ಅನೇಕ ತರವಾದ ಭಯಗಳಿಂದ ನಮ್ಮನ್ನು ದೂರಮಾಡುತ್ತಾನೆ. ಅನೇಕ ರೋಗಗಳನ್ನು ಈ ಮಂತ್ರದ ಪಠಣೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಶಿವರಾತ್ರಿಯ ದಿನ ವಿಶೇಷವಾಗಿ ವೃತವನ್ನಾಚರಿಸಿ ಶಿವನಾಮ ಸ್ತುತಿಯನ್ನು ಮಾಡುವವರಿಗೆ ಆ ಪರಮಾತ್ಮನು ಕೃಪೆಯನ್ನು ತೋರುತಾನೆ. ಆ ಮೂಲಕ ಸರ್ವರಿಗೂ ಶುಭವನ್ನು ಉಂಟುಮಾಡಲಿ ಎಂದು ಆಶಿಸುತ್ತೇವೆ.

Image Copyright :google.com

 

LEAVE A REPLY

Please enter your comment!
Please enter your name here