ಬ್ಲಾಕ್ ಹೆಡ್ಸ್ ಸಮಸ್ಯೆಯಿಂದ ಬಳಲುತ್ತಿದ್ದೀರೆ ? ಅವುಗಳನ್ನು ತೊಲಗಿಸಿ ಸುಂದರವಾದ ಮುಖವನ್ನು ಪಡೆಯಲು ಈ ವಿಧಾನ ಅನುಸರಿಸಿ

how-to-remove-blackheads-at-home

ಪ್ರತಿಯೊಬ್ಬರೂ ಹೊಳೆಯುವ ಸುಂದರ ಮುಖವನ್ನು ಹೊಂದಲು ಸದಾ ಬಯಸುತ್ತಾರೆ. ಆದರೆ ಮುಖದ ಚರ್ಮದ ಮೇಲೆ ಹಲವಾರು ಕಲೆಗಳು, ಮೊಡವೆಗಳು ಮತ್ತು ಬ್ಲಾಕ್ ಹೆಡ್ಸ್ ಇವುಗಳಿಂದಾಗಿ ಮುಖದ ಅಂದವೆ ಹಾಳಾಗಿ ಹೋಗುತ್ತದೆ. ಇಂತಹ ತೊಂದರೆಗಳು ಉಂಟಾದಾಗ ನಮ್ಮನ್ನು ಹೆಚ್ಚಾಗಿ ಆಕರ್ಷಿಸುವುದು ರಾಸಾಯನಿಕ ಯುಕ್ತ ಕ್ರೀಮುಗಳು. ಜಾಹಿರಾತುಗಳನ್ನು ನೋಡಿ ನಾವು ಅವುಗಳ ಹಿಂದೆ ಬೀಳುತ್ತೇವೆ. ಆದರೆ ಇದರಿಂದ ಮತ್ತೆ ಕೆಲವಾರು ಸಮಸ್ಯೆಗಳು ಉಂಟಾಗುತ್ತವೆ.

ಇಂತಹ ಮುಖದ ಸಮಸ್ಯೆಗಳ ನಿವಾರಣೆಗೆ ನಾವಿಂದು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಬ್ಲಾಕ್ ಹೆಡ್ಸ್ ರಿಮುವಲ್ ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅವುಗಳನ್ನು ನಿಯಮಿತವಾಗಿ ಬಳಸುವ ಮೂಲಕ ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. ಇಂತಹ ಇನ್ನೂ ಹಲವಾರು ಸಲಹೆ-ಸೂಚನೆಗಳಿಗಾಗಿ ನಮ್ಮನ್ನು ಫಾಲೋ ಮಾಡಿಕೊಳ್ಳಿ.ಈ ಬ್ಲಾಕ್ ಹೆಡ್ಸ್ ಗಳನ್ನು ತೆಗೆಯಲು ಹಲವಾರು ವಿಧಾನಗಳು ಇಂದು ನಮ್ಮಲ್ಲಿವೆ. ಆದರೆ ಸುಲಭವಾಗಿ ಮನೆಯಲ್ಲಿಯೇ ತೆಗೆಯಲು ಎರಡು ವಿಧಾನಗಳನ್ನು ತಿಳಿಸಿಕೊಡುವ ಪ್ರಯತ್ನವನ್ನು ನಾವಿಂದು ಮಾಡಲಿದ್ದೇವೆ.

ಇದನ್ನೂ ಓದಿರಿ: ಡ್ರೈ ಸ್ಕಿನ್ ಇರುವವರಿಗೆ ಮ್ಯಾಜಿಕ್ ಮಾಡುವ ಫೆಸ್ ಪ್ಯಾಕ್ ಇಲ್ಲಿದೆ ನೋಡಿ

ಮೊದಲ ವಿಧಾನ

ಅಗತ್ಯ ಸಾಮಗ್ರಿಗಳು :

  • ಒಂದು ಚಮಚ ಬೇಕಿಂಗ್ ಸೋಡಾ
  • ಎರಡು ಚಮಚ ಹಲ್ಲು ತಿಕ್ಕುವ ಯಾವುದಾದರೂ ಫೆಸ್ಟ್

ಒಂದು ಬೌಲ್ ನಲ್ಲಿ 1 ಚಮಚ ಬೇಕಿಂಗ್ ಸೋಡಾ ಮತ್ತು ಯಾವುದಾದರೂ ಹಲ್ಲುತಿಕ್ಕುವ ಫೆಸ್ಟ್ ತೆಗೆದುಕೊಳ್ಳಿ. ಇವೆರಡನ್ನೂ ಚೆನ್ನಾಗಿ ಮಿಶ್ರ ಮಾಡಿ. ನಂತರ ಈ ಫೆಸ್ಟ್ ನ್ನು ಬ್ಲಾಕ್ ಹೆಡ್ಸ್ ಇರುವ ಮೂಗಿನ ಮೇಲೆ, ತುಟಿಗಳ ಕೆಳಗೆ  ಚೆನ್ನಾಗಿ ಹಚ್ಚಿರಿ. 5-10 ನಿಮಿಷಗಳ ಕಾಲ ಒಣಗಲು ಬಿಡಬೇಕು. ನಂತರ ತಣ್ಣನೆಯ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ರೀತಿಯಾಗಿ ಪ್ರತಿದಿನ ಮಾಡುವುದರಿಂದ ನಿಧಾನವಾಗಿ ಬ್ಲಾಕ್ ಹೆಡ್ಸ್ ಗಳು ನಿವಾರಣೆಯಾಗುತ್ತವೆ.
ಬೇಕಿಂಗ್ ಸೋಡಾವನ್ನು ಬಳಸುವುದರಿಂದ ಇದರ ಆಂಟಿ ಬ್ಯಾಕ್ಟೀರಿಯಲ್ ಗುಣದ ಪರಿಣಾಮವಾಗಿ ಮೊಡವೆಗಳು ಮತ್ತು ಮುಖದ ಮೇಲಿರುವ ಕಲ್ಮಶಗಳು ದೂರವಾಗುತ್ತವೆ. ಇವುಗಳ ಜೊತೆಯಲ್ಲಿ ಮುಖದ ಮೇಲೆ ಉಳಿದುಕೊಂಡಿರುವ ಡೆಡ್ ಸ್ಕಿನ್ ಸೆಲ್ ಗಳು ದೂರವಾಗುತ್ತವೆ.

ಇದನ್ನೂ ಓದಿರಿ: ಈ ಸ್ಕ್ರಬ್ ಮನೆಯಲ್ಲಿಯೇ ತಯಾರಿಸಿಕೊಂಡು ನಿಮ್ಮ ಮುಖದ ಕಲೆಗಳನ್ನು ತೊಲಗಿಸಿ

ಎರಡನೆಯ ವಿಧಾನ

ಅಗತ್ಯ ಸಾಮಗ್ರಿಗಳು :

  • ಸ್ವಲ್ಪ ಓಟ್ಸ್
  • ಒಂದು ಚಮಚ ಮೊಸರು
  • ಒಂದು ನಿಂಬೆ ಹೋಳು

ಸ್ವಲ್ಪ ಓಟ್ಸ್ ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚ ಮೊಸರು, ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಬೇಕು. ಈ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಫೆಸ್ಟ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಬ್ಲಾಕ್ ಹೆಡ್ಸ್ ಇರುವ ಕಡೆಗಳಲ್ಲಿ ಹಚ್ಚಬೇಕು. 10-15 ನಿಮಿಷಗಳ ಕಾಲ ಬಿಟ್ಟು ಮುಖವನ್ನು ಚೆನ್ನಾಗಿ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು. ಈ ವಿಧಾನವನ್ನು ಕೆಲವು ದಿನಗಳವರೆಗೆ ಮಾಡುವುದರಿಂದ ನಿಮ್ಮ ಸಮಸ್ಯೆ ದೂರವಾಗುವುದು.
ನಾವು ಈ ಪೇಸ್ಟ್ ನಲ್ಲಿ ಓಟ್ಸ್ ಬಳಸಿರುವುದರಿಂದ ಚರ್ಮದ ಮೇಲಿರುವ ಹೆಚ್ಚಿನ ಎಣ್ಣೆಯ ಅಂಶವು ನಿವಾರಣೆಯಾಗುತ್ತದೆ. ಅಲ್ಲದೇ ಓಟ್ಸ್ ಡೆಡ್ ಸೇಲ್ಸ್ ತೆಗೆಯಲು ಸಹಾಯಮಾಡುತ್ತದೆ. ಇದರೊಂದಿಗೆ ಮೊಸರಿನಲ್ಲಿರುವ ಲಕ್ಟಿಕ್ ಆಸಿಡ್ ಮುಖದ ಹೊಳಪನ್ನು ಹೆಚ್ಚಿಸಿ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಈ ಕುರಿತು ನಿಮಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ನೋಡಿ..

LEAVE A REPLY

Please enter your comment!
Please enter your name here