ಡೆಂಗ್ಯು ಜ್ವರವು ಸೊಳ್ಳೆಗಳ ಕಡಿತದ ಮೂಲಕ ವೈರಲ್ ಸೋಂಕಿನಿಂದ ಹರಡುವ ತೀವ್ರ ತರವಾದ ಜ್ವರವಾಗಿದ್ದು, ಅತಿಯಾದ ದೇಹದ ಉಷ್ಣತೆ, ತಲೆನೋವು, ವಾಕರಿಕೆ ಮತ್ತು ಕಣ್ಣುಗಳ ಹಿಂದೆ ನೋವು ಕಾಣಿಸಿಕೊಳ್ಳುತ್ತದೆ. ಈ ಜ್ವರವನ್ನು ಈಡಿಸ್ ಕುಟುಂಬಕ್ಕೆ ಸೇರಿದ ಸೊಳ್ಳೆಗಳು ಸೋಂಕನ್ನು ಹರಡುತ್ತವೆ.
ಡೆಂಗ್ಯು ತುಂಬಾ ಅಪಾಯಕಾರಿಯಾದ ಜ್ವರವಾಗಿದ್ದು, ಅತೀ ಬೇಗ ಬಿಳಿರಕ್ತಕಣಗಳು ಕಡಿಮೆಯಾಗಿ ರೋಗಿಯು ತೊಂದರೆಗೆ ಒಳಗಾಗುತ್ತಾನೆ. ಅಲ್ಲದೇ ಈ ಸಮಯದಲ್ಲಿ ತೀವ್ರವಾದ ಹೊಟ್ಟೆ ನೋವು, ಮಲ ಮೂತ್ರದಲ್ಲಿ ರಕ್ತ, ತೀವ್ರವಾದ ಆಯಾಸ ಮತ್ತು ಸುಸ್ತನ್ನು ಅನುಭವಿಸುತ್ತಾರೆ. ಈ ರೋಗಕ್ಕೆ ತುತ್ತಾದ ತಕ್ಷಣ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೇ ಅದರ ಜೊತೆ ಜೊತೆಗೆ ಈ ಕೆಳಗೆ ನೀಡಲಾದ ಮನೆ ಔಷಧವನ್ನು ಮಾಡುವುದರಿಂದ ಬೇಗನೆ ಚೇತರಿಕೆ ಸಾಧ್ಯವಾಗುತ್ತದೆ. ಅಂತಹ ಆಯುರ್ವೇದ ಔಷಧದ ಬಗ್ಗೆ ಇಂದು ತಿಳಿದುಕೊಳ್ಳೋಣ..
ಪಪ್ಪಾಯ ಎಳೆಯ ರಸ :-

ಪಪ್ಪಾಯ ಎಳೆಯ ರಸವು ಉತ್ತಮ ಪರಿಣಾಮವನ್ನು ಬೀರಬಲ್ಲದು ಎಂದು ಹಲವಾರು ಪ್ರಯೋಗಗಳು ಸಾಬೀತುಪಡಿಸಿವೆ.ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ.. ಪಪ್ಪಾಯಿ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಶುಬ್ರ ಮಾಡಿಕೊಂಡು ಚಿಕ್ಕದಾಗಿ ಕೊಚ್ಚಿಕೊಳ್ಳಬೇಕು. ಅದನ್ನು ಚೆನ್ನಾಗಿ ಜಜ್ಜಿ ಅಥವಾ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದರ ರಸವನ್ನು ಹಿಂಡಿಕೊಂಡು/ ಸೋಸಿಕೊಂಡು ರಸವನ್ನು ಬೇರೆ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿಕೊಂಡು ವಯಸ್ಕರು 30 ಮಿ.ಲಿ. ನಷ್ಟು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬೇಕು. ಪಪ್ಪಾಯ ಜ್ಯೂಸ್ ತುಂಬಾ ವಗರು ರುಚಿಯನ್ನು ಹೊಂದಿದ್ದು, ಅಗತ್ಯವಿದ್ದರೆ ಅದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲವನ್ನು ಸೇರಿಸಬಹುದು. ಚಿಕ್ಕವರಿಗೆ 5 ರಿಂದ 10 ಮಿ.ಲಿ. ನಷ್ಟು ಮಾತ್ರ ಸಾಕಾಗುತ್ತದೆ. ಇದರಿಂದ ವೇಗವಾಗಿ ಬಿಳಿರಕ್ತ ಕಣಗಳು ವೃದ್ಧಿಯಾಗಿ ರೋಗಿಯು ಸುಧಾರಿಸಿಕೊಳ್ಳುತ್ತಾನೆ.
ಇದನ್ನೂ ಓದಿರಿ: ಸೀಬೆಹಣ್ಣು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ ..?
ಅಮೃತಬಳ್ಳಿ ಕಷಾಯ:-

ಅಮೃತಬಳ್ಳಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮನೆಮದ್ದಾಗಿದೆ. ಇದನ್ನು ಬಳಸುವುದರಿಂದ ಅತೀ ಶೀಗ್ರದಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯಬಹುದಾಗಿದೆ. ಈ ಅಮೃತಬಳ್ಳಿಯ ಕಷಾಯವನ್ನು ತಯಾರಿಸುವ ವಿಧಾನವನ್ನು ನೋಡೋಣ..ಒಂದು ಕಪ್ ನೀರನ್ನು ಚೆನ್ನಾಗಿ ಬಿಸಿ ಮಾಡಲು ಇಟ್ಟುಕೊಳ್ಳಬೇಕು. ಅದಕ್ಕೆ ಅಮೃತಬಳ್ಳಿಯನ್ನು ಚೆನ್ನಾಗಿ ಜಜ್ಜಿ ಹಾಕಿಕೊಂಡು ಕುದಿಸಿ ಆರಿಸಿಕೊಳ್ಳಬೇಕು. ಇದನ್ನು ಪ್ರತಿದಿನ ಒಂದರಿಂದ ಎರಡುಬಾರಿ ತೆಗೆದುಕೊಳ್ಳುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದಾಗಿದೆ.
ಸ್ನೇಹಿತರೆ, ನಾವು ತಿಳಿಸಿದ ಮನೆ ಮದ್ದು ಉತ್ತಮ ಪರಿಣಾವನ್ನು ಬೀರುತ್ತದೆ. ಆದರೆ ಕೇವಲ ಇದನ್ನು ಬಳಸಿಕೊಂಡು ಡೆಂಗ್ಯುವನ್ನು ತಡೆಯಲು ಸಾಧ್ಯವಾಗದು. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಇದನ್ನು ತೆಗೆದುಕೊಳ್ಳುವುದರಿಂದ ಬೇಗನೆ ಗುಣಮುಖರಾಗಬಹುದು.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನೂ ಇಂತಹ ಅಪ್[ಅಪಯೋಗಕಾರಿ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮನ್ನು ಫಾಲೋ ಮಾಡಿ.. ಶೇರ್ ಮಾಡುವ ಮೂಲಕ ಇತರರಿಗೂ ಸಹಾಯಮಾಡಿ..
ಇದನ್ನೂ ಓದಿರಿ: ನಿಂಬೆ ಹುಲ್ಲಿನ ಕಷಾಯದ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಕುಡಿಯದೇ ಬಿಡಲಾರಿರಿ..