ಕೂದಲು ಮನುಷ್ಯರ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೂದಲಿಗೆ ಹಲವಾರು ಸಮಸ್ಯೆಗಳು ಉಂಟಾಗಿ ತೊಂದರೆಗಳನ್ನು ಅನುಭವಿಸುತ್ತೇವೆ. ಇಂತಹ ತೊಂದರೆಗಳಲ್ಲಿ ಹೆಚ್ಚಾಗಿ ಕಾಡುವುದೆಂದರೆ ತಲೆಯಲ್ಲಿ ಹೊಟ್ಟು ಉಂಟಾಗಿ, ತಲೆಯ ಚರ್ಮ ಉದುರುವುದು, ತಲೆಯಲ್ಲಿ ತುರಿಕೆ ಹೀಗೆ ಅನೇಕ ರೀತಿಯಲ್ಲಿ ತೊಂದರೆಗಳು ಆಗುತ್ತವೆ. ನಮ್ಮ ಈ ಸಮಸ್ಯೆಗೆ ರಾಸಾಯನಿಕಗಳ ಮೊರೆಹೊಗುವುದಕ್ಕಿಂತ ನೈಸರ್ಗಿಕ ವಿಧಾನಗಳಾವುದಾದರು ಇವೆಯೇ ಎಂದು ನೋಡುವುದು ಉತ್ತಮ. ನೀವು ಅಂತಹ ಹುಡುಕಾಟದಲ್ಲಿದ್ದಾರೆ ಸರಿಯಾದ ಸ್ಥಳದಲ್ಲಿ ಇದ್ದೀರಿ. ನಾವಿಂದು ತಲೆ ಹೊಟ್ಟು (ಡ್ಯಾಂಡ್ರಫ್) ನಿವಾರಿಸಿಕೊಳ್ಳುವ ನೈಸರ್ಗಿಕ ವಿಧಾನಗಳನ್ನು ತಿಳಿಸಿಕೊಡುತ್ತೀದ್ದೇವೆ.
1. ತಲೆ ಹೊಟ್ಟನ್ನು ನಿವಾರಿಸಲು ಮೊಸರು ಅತ್ಯುತ್ತಮ ನೈಸರ್ಗಿಕ ಪದಾರ್ಥವಾಗಿದೆ. ಇದನ್ನು ಕೂದಲಿನ ಬುಡದಲ್ಲಿ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ಮೊಸರನ್ನು ಹಚ್ಚಿಕೊಂಡು ಸುಮಾರು 30 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಈ ರೀತಿ ಸಂಪೂರ್ಣ ಕಡಿಮೆಯಾಗುವವರೆಗೆ ಮಾಡುತ್ತಾಇರಿ. ಮೊಸರಿನಲ್ಲಿರುವ ವಿಟಮಿನ್ ಮತ್ತು ಪ್ರೋಟಿನ್ ಕೂದಲು ಮತ್ತು ಚರ್ಮಕ್ಕೆ ದೊರೆತು ಹೊಟ್ಟಿನ ಸಮಸ್ಯೆ ದೂರವಾಗುವ ಜೊತೆಗೆ ಕೂದಲು ಸೊಂಪಾಗಿ ಬೆಳೆಯುತ್ತದೆ.
2. ತಲೆಗೆ ಹರಳೆಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ವಿಟಮಿನ್-ಇಅಂಶವು ಲಭ್ಯವಾಗುತ್ತವೆ. ಇದನ್ನು ಕೂದಲಿನ ಬುಡದಲ್ಲಿ ಚೆನ್ನಾಗಿ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಬೇಕು. ಇದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಎಣ್ಣೆಯ ಅಂಶವು ಹೊಟ್ಟು ಉಂಟಾಗುವುದನ್ನು ತಡೆಗಟ್ಟಿ ಈ ಕಿರಿ ಕಿರಿಯಿಂದ ನಿಮ್ಮನ್ನು ದೂರಮಾಡುತ್ತದೆ.
ಇದನ್ನೂ ಓದಿರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ಎಂದಿದೆ ಆಯುಷ್ ಮಂತ್ರಾಲಯ
3. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ತೆಂಗಿನೆಣ್ಣೆ ಬಹಳ ಉಪಯುಕ್ತವಾಗಿದೆ. ತಲೆಯ ಎಲ್ಲ ಭಾಗಗಳಿಗೆ ತಗಲುವಂತೆ ನಿಧಾನವಾಗಿ ಹಚ್ಚಿ ಮಸಾಜ್ ಮಾಡಬೇಕು. ಸುಮಾರು ಅರ್ಧಗಂಟೆಗಳ ಬಳಿಕ ತಲೆಯನ್ನು ತೊಳೆದುಕೊಳ್ಳಬಹುದು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಉಳಿದೆಲ್ಲ ಔಷಧಗಳಿಗಿಂತ ಉತ್ತಮ ಎಂದು ಹೇಳಬಹುದು.
4. ತಲೆ ಹೊಟ್ಟಿಗೆ ಇನ್ನೊಂದು ಮನೆ ಔಷಧವೆಂದರೆ ಮೆಂತೆಕಾಳು. ಇದನ್ನು ನೆನೆಹಾಕಿ ನಂತರ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಚೆನ್ನಾಗಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಗಳ ಬಳಿಕ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ ಜೊತೆಯಲ್ಲಿ ಕೂದಲಿನ ಸಮಸ್ಯೆಗಳು ದೂರವಾಗುತ್ತದೆ.
5. ಲೋಳೆರಸವನ್ನು ರಾತ್ರಿ ತಲೆಗೆ ಚೆನ್ನಾಗಿ ಹಚ್ಚಿಕೊಂಡು ಬೆಳಗ್ಗೆ ಶಾಂಪು ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಲೋಳೆರಸವು ಚರ್ಮದ ಸಮಸ್ಯೆಗಳನ್ನು ನಿವಾರಿಸಿ, ತಲೆ ಹೊಟ್ಟು ಕಡಿಮೆ ಮಾಡುವ ಜೊತೆಗೆ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
6. ತಲೆಹೊಟ್ಟು ನಿವಾರಣೆ ಮತ್ತು ಕೂದಲ ಬೆಳವಣಿಗೆಗೆ ನೆಲ್ಲಿಕಾಯಿ ಪೇಸ್ಟ್ ತಯಾರಿಸಿಕೊಂಡು ಹಚ್ಚಿ. ಸ್ವಲ್ಪ ನೆಲ್ಲಿಕಾಯಿ ಪೇಸ್ಟ್ ಜೊತೆಯಲ್ಲಿ ತುಳಸಿ ಎಳೆಯ ಪೇಸ್ಟ್, ಇವೆರಡನ್ನೂ ಚೆನ್ನಾಗಿ ಮಿಶ್ರಮಾಡಿ ತಲೆಗೆ ಹಚ್ಚಿ. ಅರ್ಧಗಂಟೆ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ. ಈ ರೀತಿಯಲ್ಲಿ 2 ವಾರಗಳಿಗೂ ಹೆಚ್ಚು ಸಮಯ ಮಾಡಬೇಕಾಗುತ್ತದೆ.
ಇದನ್ನೂ ಓದಿರಿ: ನೀವು ಹಾಲನ್ನು ಪ್ರತಿದಿನ ಕುಡಿಯುತ್ತಿದ್ದೀರಾ ? ಹಾಗಾದರೆ ಇದನ್ನು ಓದಲೇ ಬೇಕು..
7. ತಲೆಹೊಟ್ಟು ನಿವಾರಣೆಗೆ ಕರಿಬೇವಿನ ಸೊಪ್ಪು ಮತ್ತು ಹಾಲಿನ ಮಿಶ್ರಣವು ಅತ್ಯುತ್ತಮ ಮನೆಮದ್ದಾಗಿದೆ. ಮೊದಲಿಗೆ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಹಾಲನ್ನು ಮಿಕ್ಸ್ ಮಾಡಿ, ಆ ಪೇಸ್ಟನ್ನು ತಲೆಯ ಚರ್ಮಕ್ಕೆ ತಾಗುವಂತೆ ಹಚ್ಚಿರಿ. ನಂತರ ಎರಡರಿಂದ ಮುರುಗಂಟೆಗಳು ಕಳೆದ ಮೇಲೆ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ 1 – 2 ಬಾರಿ ಮಾಡುವುದರಿಂದ ತಲೆ ಹೊಟ್ಟು ನಿವಾರಣೆ ಆಗುತ್ತದೆ.
8. ತಲೆಹೊಟ್ಟು ನಿವಾರಣೆಗೆ ಮೊಟ್ಟೆಯ ಲೋಳೆಯನ್ನು ಬಳಸುತ್ತಾರೆ. ಈ ಭಾಗವನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆಗಳ ಸಮಯ ಬಿಟ್ಟು, ನಂತರದಲ್ಲಿ ತಲೆಯನ್ನು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲು ಉದ್ದವಾಗಿ ಮತ್ತು ಮೃದುವಾಗಿ ಬೆಳೆಯುತ್ತದೆ.