ಈ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ? ಇಲ್ಲಿವೆ ಮಹತ್ವದ ಸಲಹೆಗಳು

ಬೇಸಿಗೆ ಈಗಾಗಲೇ ಆರಂಭವಾಗಿದ್ದು, ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೇ ಸಾಗಿದೆ. ಇಂತಹ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿರ್ಜಲೀಕರಣ, ಹೊಟ್ಟೆಯ ಸಮಸ್ಯೆಗಳು, ಚರ್ಮದ ಕಾಯಿಲೆಗಳು, ದೇಹದ ಉಷ್ಣತೆ ಹೆಚ್ಚಳ ಇಂತಹ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಕಾಳಜಿಗಳನ್ನು ವಹಿಸುವುದು ಮುಖ್ಯವಾಗಿದ್ದು, ಇದಕ್ಕಾಗಿ ಇಲ್ಲಿ ಕೆಲ ಸಲಹೆಗಳನ್ನು ನೀಡಿದ್ದೇವೆ.

ದೇಹದ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ

ಬೇಸಿಗೆಯಲ್ಲಿ ನಮ್ಮ ದೇಹದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯವಾಗಿರುತ್ತದೆ. ನಮ್ಮ ದೇಹವು ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ದೇಹದ ಮೇಲೆ ಬ್ಯಾಕ್ಟೀರಿಯಾ, ಪಂಗಸ್ ನಂತಹವು ಬೇಗನೆ ಬೆಳವಣಿಗೆ ಹೊಂದಿ ಅನೇಕ ಚರ್ಮ ಸಂಬಂಧಿ ಕಾಯಿಲೆಗಳನ್ನು ಉಂಟುಮಾಡುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಬೇಸಿಗೆಯಲ್ಲಿ ದೇಹದ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವುದು ಅವಶ್ಯವಾಗಿದೆ.

ಹೆಚ್ಚೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ

ಬೇಸಿಗೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳನ್ನು ಹೇರಳವಾಗಿ ಸೇವನೆ ಮಾಡುವುದು ಉತ್ತಮ. ಇದು ಬೇಸಿಗೆಯ ದಿನದಲ್ಲಿ ನಮ್ಮನ್ನು ಆರೋಗ್ಯಯುತವಾಗಿ ಇರಲು ಸಹಾಯವನ್ನು ಮಾಡುತ್ತದೆ. ಇವುಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ನಮ್ಮನ್ನು ಸದೃಢರನ್ನಾಗಿ ಮಾಡುತ್ತದೆ. ಬೇಸಿಗೆಯಲ್ಲಿ ಸಿಗುವ ಹಣ್ಣುಗಳಾದ ಮಾವು, ಕಲ್ಲಂಗಡಿ, ಮೋಸಂಬಿ ಮುಂತಾದವುಗಳನ್ನು ಹೆಚ್ಚೆಚ್ಚು ಸೇವಿಸಿ.

ಇದನ್ನೂ ಓದಿರಿ : ಕಲ್ಲಂಗಡಿ ಹಣ್ಣಿನ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ತಿನ್ನದೇ ಬಿಡಲಾರಿರಿ.. !

health-tips-for-summer-to-stay-fit-cool

ಸರಿಯಾದ ಆಹಾರ ಕ್ರಮ ಪಾಲಿಸಿ

ಸರಿಯಾದ ಆಹಾರ ಕ್ರಮವು ನಮ್ಮನ್ನು ಯಾವಾಗಲೂ ಆರೋಗ್ಯವಾಗಿರಲು ಸಹಾಯಮಾಡುತ್ತದೆ. ಬೇಸಿಗೆಯಲ್ಲಿ ನಮ್ಮ ಜೀರ್ಣಕ್ರಿಯಿಯೆಯು ನಿಧಾನವಾಗುವುದರಿಂದ ಆಹಾರ ಸೇವನೆಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಉತ್ತಮ. ಅಲ್ಲದೇ ಆಹಾರದಲ್ಲಿ ಹೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಬೇಕು. ಇದಲ್ಲದೇ ದೇಹವನ್ನು ತಂಪಾಗಿಸುವ ಆಹಾರಗಳನ್ನು ಹೆಚ್ಚೆಚ್ಚು ಸೇವನೆ ಮಾಡಿರಿ. ಇದರೊಂದಿಗೆ ಹೊರಗಡೆಯ ಆಹಾರ, ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಅಗತ್ಯವಿರುವಷ್ಟು ನೀರನ್ನು ಕುಡಿಯಿರಿ

ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ. ನಮ್ಮ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ದಿನವೊಂದಕ್ಕೆ 8 – 10 ಲೋಟಗಳಷ್ಟು ನೀರನ್ನು ತೆಗೆದುಕೊಳ್ಳುವುದು ಉತ್ತಮ. ಅಲ್ಲದೇ ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿದ ನೀರನ್ನು ಸೇವನೆ ಮಾಡುವುದರಿಂದ ದೇಹವು ನಿರ್ಜಲೀಕರಣ ಆಗುವುದು ತಡೆಗಟ್ಟಬಹುದಾಗಿದೆ. ಸಾಧ್ಯವಾದಷ್ಟು ಹಣ್ಣಿನ ರಸ, ಪಾನಕಗಳನ್ನು ಸೇವನೆ ಮಾಡುತ್ತೀರಿ.

ಇದನ್ನೂ ಓದಿರಿ : ಕುಡಿಯುವ ನೀರನ್ನು ಯಾವ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಒಳ್ಳೆಯದು ನಿಮಗೆ ಗೊತ್ತೇ..?

health-tips-for-summer-to-stay-fit-cool

ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ

ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗಿ ಇರುವುದರಿಂದ ಹತ್ತಿಯ ಬಟ್ಟೆಗಳನ್ನು ಬಳಕೆ ಮಾಡುವುದು ಉತ್ತಮವಾಗಿದೆ. ಬಿಗಿಯಾದ ಮತ್ತು ಅತೀ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ದೇಹದ ರಕ್ತಪರಿಚಲನೆ ನಿಧಾನಗೊಳ್ಳುತ್ತದೆ ಮತ್ತು ದೇಹಕ್ಕೆ ಉಷ್ಣಾಂಶ ಹೆಚ್ಚಾಗಿ ಅತಿಯಾಗಿ ಬೆವರುವಂತೆ ಮಾಡುತ್ತದೆ.



ಚೆನ್ನಾಗಿ ನಿದ್ರೆ ಮಾಡಿ

ಬೇಸಿಗೆಯ ಶಾಖಕ್ಕೆ ದೇಹವು ಹೆಚ್ಚಾಗಿ ನಿತ್ರಾಣಗೊಳ್ಳುತ್ತದೆ. ಇದರಿಂದಾಗಿ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಪ್ರತಿದಿನ 7 – 8 ಗಂಟೆಗಳ ಉತ್ತಮ ನಿದ್ರೆಯನ್ನು ಮಾಡುವುದು ಅವಶ್ಯಕವಾಗಿದೆ. ನಿದ್ರೆಕೆಡುವುದು ನಮ್ಮನ್ನು ಅನಾರೋಗ್ಯಕ್ಕೆ ನೂಕುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದನ್ನೂ ಓದಿರಿ : ನಿಮಗೆ ಸರಿಯಾಗಿ ನಿದ್ರೆ ಬರ್ತಾ ಇಲ್ವಾ ? ಹಾಗಾದರೆ ಇಲ್ಲಿದೆ ನಿಮ್ಮ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ

health-tips-for-summer-to-stay-fit-cool

ಬೇಸಿಗೆಯಲ್ಲಿ ಸೂರ್ಯನ ಶಾಖವು ಅತಿಯಾಗಿ ಇರುವುದರಿಂದ ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ತೊಂದರೆಗಳು ಉಂಟಾಗುತ್ತದೆ. ಸಾಧ್ಯವಾದಷ್ಟು ಅತಿಯಾದ ಶಾಖ ಇರುವ ಸಮಯದಲ್ಲಿ ನೇರವಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ತೊಂದರೆಯನ್ನು ಮಾಡಬಹುದು. ಇವುಗಳೊಂದಿಗೆ ನಾವು ಮೇಲೆ ತಿಳಿಸಿದ ಸಲಹೆಗಳನ್ನು ಪಾಲನೆ ಮಾಡುವುದರಿಂದ ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಡುಕೊಳ್ಳಲು ಸಹಕಾರಿಯಾಗುತ್ತದೆ.

ಇದನ್ನೂ ಓದಿರಿ : ಚರ್ಮರೋಗ, ಗಜಕರ್ಣ, ಸೋರಿಯಾಸಿಸ್ ನಂತಹ ಗಂಬೀರ ಸಮಸ್ಯೆಗೆ ತುಂಬೆ ಗಿಡದ ಪರಿಹಾರ..!

LEAVE A REPLY

Please enter your comment!
Please enter your name here