ಪಲಾವ್ ಗೆ ಬಳಸುವ ಈ ಚಕ್ರಮೊಗ್ಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ ?

health-benefits-of-stare-anise

ಸಾಮಾನ್ಯವಾಗಿ ಪಲಾವ್, ಮಸಾಲಾ ರೈಸ್ ಗಳಲ್ಲಿ ಬಳಕೆಯಾಗುವ ಈ ಚಕ್ರಮೊಗ್ಗೆಯ ಆರೋಗ್ಯ ಪ್ರಯೋಜನದ ಕುರಿತು ಸಾಮಾನ್ಯರಿಗೆ ಅರಿವೇ ಇರುವುದಿಲ್ಲ. ಇದನ್ನು ಕೇವಲ ಮಸಾಲೆಗೆ ಬಳಕೆ ಮಾಡಿರುತ್ತಾರೆ, ಇದರಿಂದ ಘಮ ಮತ್ತು ರುಚಿ ಹೆಚ್ಚುತ್ತದೆ ಅಂದುಕೊಂಡಿರುವವರೇ ಹೆಚ್ಚು. ಈ ಮಸಾಲೆಯ ಪದಾರ್ಥವು ಜ್ವರ, ಉರಿಯೂತದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು. ಇದರ ಇತರ ಪ್ರಯೋಜನಗಳ ಕುರಿತು ನಾವಿಂದು ಸವಿವರವಾಗಿ ತಿಳಿಯೋಣ.

ಕೆಮ್ಮು ಮತ್ತು ಇತರೆ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಚಕ್ರಮೊಗ್ಗೆಯ ಪೌಡರ್ ಮತ್ತು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಮಾಡಿ ಸೇವಿಸುವುದರಿಂದ ಶಿಗ್ರವೇ ನಿವಾರಣೆಯನ್ನು ಕಾಣಬಹುದಾಗಿದೆ. 

ಚಕ್ರಮೊಗ್ಗಿನಿಂದ ತಯಾರಿಸಲಾದ ಎಣ್ಣೆಯನ್ನು ಖರೀದಿಸಿ. ಇದನ್ನು ಬೆನ್ನು, ಕುತ್ತಿಗೆ, ಭುಜಗಳ ನೋವಿಗೆ ಬಳಕೆ ಮಾಡುವುದರಿಂದ ಉತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿರಿ: ಕಿಡ್ನಿ ಸಮಸ್ಯೆ ಇರುವವರು ಅವಶ್ಯವಾಗಿ ಈ ಆಹಾರವನ್ನು ಸೇವಿಸಬೇಕು

ಅಜೀರ್ಣದಿಂದ ಬಳಲುತ್ತಿದ್ದರೆ, ಈ ಚಕ್ರಮೊಗ್ಗನ್ನು ಕಷಾಯ ತಯಾರಿಸಿಕೊಂಡು ಕುಡಿಯಿರಿ. ಇದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಳವಾಗುತ್ತದೆ. 

ಚಕ್ರಮೊಗ್ಗನ್ನು ಊಟದ ನಂತರ ತಾಂಬುಲದೊಂದಿಗೆ ಸೇವನೆ ಮಾಡುವುದರಿಂದ ಬಾಯಿಯ ದುರ್ಗಂಧ ತೊಲಗುತ್ತದೆ. ಜೊತೆಯಲ್ಲಿ ಜಿರ್ಣಶಕ್ತಿಯೂ ಹೆಚ್ಚುತ್ತದೆ. 

health-benefits-of-stare-anise

ಇದನ್ನೂ ಓದಿರಿ: ಹಿಮ್ಮಡಿ ನೋವಿನಿಂದ ಬಳಲುತ್ತೀದ್ದಿರೆ ? ಹಾಗಾದರೆ ಇಲ್ಲಿವೆ ಉಪಯುಕ್ತ ಮಾಹಿತಿ

ಮೊಡವೆಗಳ ನಿವಾರಣೆಗೆ ಚಕ್ರಮೊಗ್ಗನ್ನು ಹಾಕಿ ಕುಡಿಸಿದ ನೀರನ್ನು ಹಚ್ಚಿಕೊಳ್ಳುವುದರಿಂದ ನಿವಾರಿಸಿಕೊಳ್ಳಬಹುದು. 

ನೆಗಡಿ ಮತ್ತು ಮೂಗು ಕಟ್ಟುವ ಸಮಸ್ಯೆ ನಿವಾರಣೆಗೆ 10 ಗ್ರಾಂ ನಷ್ಟು ಚಕ್ರಮೊಗ್ಗನ್ನು ನೀರಿಗೆ ಹಾಕಿ ಕುದಿಸಿಕೊಳ್ಳಿ. ಈ ನೀರಿನ ಹಬೆಯನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.

LEAVE A REPLY

Please enter your comment!
Please enter your name here