ಇತ್ತೀಚಿನ ದಿನಗಳಲ್ಲಿ ವಯಸ್ಕರಿಗೆ ಹಿಮ್ಮಡಿ ನೋವು ಅತೀ ಸಾಮಾನ್ಯ. ಬೆಳಿಗ್ಗೆ ಏಳುವಾಗಲೇ ಪ್ರಾರಂಭವಾಗುವ ನೋವು ಬಹಳ ಹೊತ್ತು ಕಾಡುವುದು. ನಡೆದಾಡುವಾಗ ಮೊಳೆಯಿಂದ ಚುಚ್ಚಿದಂತಾಗಿ ವಿಪರೀತ ನೋವು. ಕೆಲವೊಮ್ಮೆ ಒಂದು ಹೆಜ್ಜೆ ಇಡಲೂ ಕಷ್ಟ. ಒಮ್ಮೆ ಶುರುವಾದರೆ ತಾನಾಗಿಯೇ ನಿಲ್ಲಲು ಹಲವಾರು ತಿಂಗಳುಗಳಿಂದ ಹಿಡಿದು ಒಂದೆರಡು ವರ್ಷ ಬೇಕು.
ಇದು Planters fascistic ಎಂಬ ಸಾಮಾನ್ಯವಾಗಿ 40 ದಾಟಿದ ಎಲ್ಲರೂ ಒಮ್ಮೆಯಾದರೂ ಅನುಭವಿಸುವ ಪಾದಗಳ ತೊಂದರೆ. ಸಾಧಾರಣವಾಗಿ ಒಮ್ಮೆ ಒಂದು ಪಾದದಲ್ಲಿ ಮಾತ್ರ ಕಾಣಿಸುವ ನೋವು . (ಬಹಳಾ ಅಪರೂಪಕ್ಕೆ ಏಕ ಕಾಲದಲ್ಲಿ, ಎರಡೂ ಹಿಮ್ಮಡಿಗಳಲ್ಲಿ ಕಾಣಿಸಿಕೊಳ್ಳಬಹುದು) ಸ್ವಲ್ಪ ಕಾಲದ ನಂತರ ತಾನಾಗಿಯೇ ವಾಸಿಯಾಗುತೆ. ಆದರೆ ಅಲ್ಲಿಯವರೆಗೂ ಅದು ಕೊಡುವ ನೋವು ಸಹಿಸಲು ಅಸಾಧ್ಯ.
ಇದನ್ನೂ ಓದಿರಿ: ಗೋಡಂಬಿ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ನಿಮಗೆ ಗೊತ್ತೇ ?
ನಮ್ಮ ಪಾದದ ಹಿಮ್ಮಡಿಯ ಮಾಂಸಖಂಡದಲ್ಲಿ ಆಗಿರುವ ಸಣ್ಣ ಕುಯ್ತಳಿಂದಾಗಿ ( ligament tear ) ನೋವು ಪ್ರಾರಂಭ ಆಗುತ್ತೆ. ನಂತರ ಒಮ್ಮೆ ಸವೆತವಾದ ಭಾಗ ತಾನಾಗೇ ಕೂಡಿಕೊಂಡ ನಂತರ ನೋವು ತಾನಾಗೇ ಹೋಗುತ್ತೆ. ಈ ತೊಂದರೆಗೆ ನೋವು ನಿವಾರಕ ( pain killers ) ಬಿಟ್ಟರೆ ಬೇರೆ ಪರಿಹಾರ ಅಲೋಪತಿ ಸೇರಿ ಯಾವುದೇ ವೈದ್ಯಕೀಯ ಪದ್ದತಿಯಲ್ಲಿ ಇಲ್ಲ. ಇತ್ತೀಚೆಗೆ operation ಮಾಡಲೇಬೇಕು ಎಂದು ಡಾಕ್ಟರ್ಗಳು ಹೇಳುತ್ತಾರೆ. ತಾನಾಗಿಯೇ ಸರಿ ಹೋಗುವವರೆಗೂ ಕಾಯಬೇಕು. ಅಲ್ಲಿಯವರೆಗೂ ಕೆಲವು ಪಾದದ ವ್ಯಾಯಾಮ ಮಾಡಿ ನೋವು ನಿವಾರಿಸಿಕೊಳ್ಳಬಹುದು.
- ಬೆಳಿಗ್ಗೆ ಎಚ್ಚರವಾದ ಕೂಡಲೇ, ಮಲಗಿದ್ದಲ್ಲೇ ಎರಡೂ ಪಾದಗಳನ್ನು ಒಟ್ಟಿಗೆ ಮುಂದಕ್ಕೆ ಚೂಪಾಗಿ ಮುಂದಕ್ಕೆ ಚಾಚಿ. 5-10 ಸೆಕೆಂಡ್ ಹಾಗೆಯೇ ಬಿಟ್ಟು ನಂತರ ಒಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಪಾದದ ಬೆರಳುಗಳು ನಿಮ್ಮ ಕಡೆಗೆ ಬರುವಂತೆ ವಾಪಸ್ಸು ಚಾಚಿ, ಪುನಃ 5-10 ಸೆಕೆಂಡ್ ಬಿಡಿ. ಇದು ಒಂದು ಸುತ್ತು. ಹೀಗೆ ಮಲಗಿದ್ದಲ್ಲೇ 50 – 100 ಸಲ ಮಾಡಿ ನಂತರ ಎದ್ದೇಳಿ. ಈಗ ಇಡೀ ದಿನ ಪಾದದ ನೋವು ಬರಲ್ಲ. ತಿಂಗಳಲ್ಲಿ ನೋವು ಮಾಯವಾಗುತ್ತೆ.
- ಒಂದು ರಬ್ಬರ್ ಬಾಲ್ ಅಥವಾ ಟೆನ್ನಿಸ್ ಬಾಲ್ ತೆಗೆದುಕೊಂಡು, ನೋವಿರುವ ಪಾದ ಅದರ ಮೇಲಿಟ್ಟು, ಪಾದವನ್ನು ಹಿಂದೆ ಮುಂದೆ ಆಡಿಸುತ್ತೀರಿ. ನೋವು ಕಮ್ಮಿ ಆಗುತ್ತೆ.
- ಮೆಡಿಕಲ್ ಶಾಪ್ ಗಳಲ್ಲಿ ಹಾಗೂ online ನಲ್ಲಿ MCP ಅಥವಾ ಆರ್ಥೂಪೀಡಿಕ್ ಚಪ್ಪಲಿ / ಶೂ ಸಿಗುತ್ತೆ ಅದನ್ನು ಹಾಕಲು ಪ್ರಾರಂಭಿಸಿ. ತಿಂಗಳಲ್ಲಿ ವಾಸಿಯಾಗುತ್ತೆ. ಹಾಗೆ ಮೃದುವಾದ ಸಿಲಿಕಾನ್ ಹಿಮ್ಮಡಿ ಪಟ್ಟಿ ಸಹ ಸಿಗುತ್ತೆ. ಉಪಯೋಗಿಸಬಹುದು.
- ರಾತ್ರಿ ಬಿಸಿ ನೀರಿಗೆ, ಬೊಗಸೆ ಕಲ್ಲುಪ್ಪು (rock salt/Sea salt) ಹಾಕಿ ಪಾದಗಳನ್ನು ಮುಳುಗಿಸಿ ಅರ್ಧ ಘಂಟೆ ಕುಳಿತುಕೊಳ್ಳಿ. ನೋವು ಕಮ್ಮಿಯಾಗುತ್ತೆ. ಒಳ್ಳೆ ನಿದ್ದೇನೂ ಬರುತ್ತೆ.
- ಪ್ರತೀದಿನ ಒಂದು ಅರ್ಧ ಘಂಟೆ ಬರಿಗಾಲಲ್ಲಿ ಮರಳಿನ ನಡೆಯಿರಿ.
ಈ ರೀತಿಯಾದ ಕ್ರಮಗಳನ್ನು ತಪ್ಪದೆ ಅನುಸರಿಸುವುದರಿಂದ ಅತೀ ಶೀಗ್ರದಲ್ಲಿ ಈ ಸಮಸ್ಯೆಗಳು ದೂರವಾಗುತ್ತವೆ. ಸಾಧ್ಯವಾದಷ್ಟು ನೋವು ನಿವಾರಕ ಮಾತ್ರೆಗಳಿಂದ ಹಾಗೂ steroids ಗಳಿಂದ ದೂರವಿರಿ. ಅವು ನಿಮ್ಮ ಮೂತ್ರಪಿಂಡಗಳ ಮೇಲೆ ಹಾನಿಯನ್ನು ಮಾಡುತ್ತವೆ.
– ಮಂಜುನಾಥ್ ಪ್ರಸಾದ್