ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ಈ ಗಿಡವನ್ನು “ದೊಡ್ಡ ಪತ್ರೆ” ,”ಸಾಂಬ್ರಾಣಿ ಸೊಪ್ಪು” ಅಥವಾ “ಸಂಬಾರ ಸೊಪ್ಪು” ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ. ಮಲೆನಾಡಿನಲ್ಲಿ ಹೆಚ್ಚಾಗಿ ಇದರ ಉಪಯೋಗ ಕಂಡುಬರುತ್ತದೆಯಾದರೂ ಇದರ ಔಷಧೀಯ ಗುಣಗಳಿಂದಾಗಿ ಎಲ್ಲೆಡೆ ಪರಿಚಿತ. ಹಚ್ಚ ಹಸಿರಿನಿಂದ ಕೂಡಿದ, ದಪ್ಪವಾದ ಎಲೆಗಳನ್ನು ಹೊಂದಿರುವ ಇದು ಘಾಡವಾದ ವಾಸನೆನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಹಲವಾರು ಅಡುಗೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಲ್ಲದೇ ಅನೇಕ ಆರೋಗ್ಯ ಉಪಯೋಗವನ್ನು ಇದು ಹೊಂದಿದೆ.
ದೊಡ್ಡಪತ್ರೆಯ ಔಷಧೀಯ ಗುಣಗಳಿಂದಾಗಿ ಜ್ವರ, ಕೆಮ್ಮು, ಶೀತ ಹೀಗೆ ಅನೇಕ ರೋಗಗಳನ್ನು ದೂರಮಾಡುವ ಚಮತ್ಕಾರಿ ಗುಣವನ್ನು ಇದು ಹೊಂದಿದೆ. ಈ ಕುರಿತು ಸವಿವರವನ್ನು ನಿಮ್ಮೊಂದಿಗೆ ನಾವಿಂದು ಹಂಚಿಕೊಳ್ಳಲಿದ್ದೇವೆ ಕೊನೆಯವರೆಗೆ ಪೂರ್ಣವಾಗಿ ಓದಿ.
ದೊಡ್ಡಪತ್ರೆ ಎಳೆಗಳ ಆರೋಗ್ಯ ಪ್ರಯೋಜನಗಳು
ದೊಡ್ಡಪತ್ರೆಯ ಎಲೆಗಳನ್ನು ಜಜ್ಜಿ ರಸವನ್ನು ತೆಗೆದು, ಅದಕ್ಕೆ ಒಂದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ಪ್ರತಿದಿನ ನೀಡುತ್ತಾ ಬಂದರೆ ಮಕ್ಕಳಲ್ಲಿ ಕಂಡುಬರುವ ಹೊಟ್ಟೆಯುಬ್ಬರ, ಅಜೀರ್ಣದಂತಹ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತವೆ.
ದೊಡ್ಡಪತ್ರೆ 4-5 ಎಲೆಗಳನ್ನು ನೀರಿಗೆ ಹಾಕಿ ಕುದಿಸಿ, ಅದಕ್ಕೆ ಕೆಂಪು ಕಲ್ಲುಸಕ್ಕರೆಯನ್ನು ಸೇರಿಸಿ ಕಷಾಯಮಾಡಿ ಕುಡಿಯುವುದರಿಂದ, ಆಹಾರ ದೋಷಗಳ ಪರಿಣಾಮದಿಂದ ಉಂಟಾದ ತುರಿಕೆ, ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
ಇದನ್ನೂ ಓದಿರಿ: ಒಂದೆಲಗದಲ್ಲಿದೆ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ..!
5-6 ದೊಡ್ಡಪತ್ರೆಯ ಎಲೆಗಳನ್ನು, ಒಂದೆರಡು ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು. ಈ ರಸವನ್ನು ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಪಿತ್ತ ಮತ್ತು ಪಿತ್ತದ ಸಮಸ್ಯೆಗಳಿಂದ ಸುಲಭವಾಗಿ ದೂರವಾಗಬಹುದು.
ಜೀರ್ಣಕ್ರೀಯೆಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ದೊಡ್ಡಪತ್ರೆ 4-5 ಎಲೆಗಳನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಕಾಲಿ ಹೊಟ್ಟೆಯಲ್ಲಿ ಒಂದೆರಡು ಬಾರಿ ಸೇವನೆ ಮಾಡುವುದರಿಂದ ಅಜೀರ್ಣ, ಹೊಟ್ಟೆಯಲ್ಲಿ ಉರಿ ಇಂತಹ ಸಮಸ್ಯೆಗಳಿಂದ ಶಮನ ದೊರೆಯುತ್ತದೆ.
ಇದನ್ನೂ ಓದಿರಿ: ನಮ್ಮ ಆಹಾರ ಸೇವನಾ ಕ್ರಮ ಹೇಗಿದ್ದರೆ ಆರೋಗ್ಯಕ್ಕೆ ಉತ್ತಮ ಗೊತ್ತೇ ? ಇಲ್ಲಿದೆ ಸಂಪೂರ್ಣ ಮಾಹಿತಿ
ಶೀತ, ಕಫ ಸಮಸ್ಯೆಯಿಂದ ತೀವ್ರವಾದ ತಲೆನೋವನ್ನು ಅನುಭವಿಸುತ್ತಿದ್ದರೆ ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ಅರೆದು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಂಡು ಹಣೆಗೆ ಹಚ್ಚುವುದರಿಂದ ತಲೆನೋವು ಕಫ ಕಟ್ಟಿರುವುದು ನಿವಾರಣೆಯಾಗುತ್ತದೆ.
ಕೆಮ್ಮು, ಕಫ ತೊಂದರೆಯಿಂದ ಬಳಲುತ್ತಿದ್ದರೆ ದೊಡ್ಡಪತ್ರೆ ಎಲೆಗಳನ್ನು ಹುರಿದು, ಅದರ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.
ಚಿಕ್ಕ ಮಕ್ಕಳಲ್ಲಿ ಕಾಡುವ ಶೀತ, ಕೆಮ್ಮು ಸಮಸ್ಯೆಗೆ ದೊಡ್ಡಪತ್ರೆ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ, ತಣ್ಣಗಾದ ಬಳಿಕ ನೆತ್ತಿಗೆ ಕಟ್ಟುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿರಿ: ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುತ್ತೀದ್ದಿರೇ ? ಹಾಗಾದ್ರೆ ಇದನ್ನು ಓದಲೇ ಬೇಕು..
ಸಂಧಿವಾತದ ಸಮಸ್ಯೆಯಿಂದ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ದೊಡ್ಡಪತ್ರೆ ಎಲೆಗಳನ್ನು ಅರೆದು ಪೇಸ್ಟ್ ರೀತಿಯಲ್ಲಿ ತಯಾರಿಕೊಂಡು ಲೇಪನಮಾಡುವುದರಿಂದ ನೋವು ನಿವಾರಣೆಯಾಗಿ ನಿಮ್ಮ ಸಮಸ್ಯೆಯು ದೂರವಾಗುತ್ತದೆ.
ದೊಡ್ಡಪತ್ರೆ ಎಲೆಗಳ ರಸವನ್ನು ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಕಾಮಾಲೆಯಂತಹ ದೊಡ್ಡ ರೋಗಗಳು ಸಹ ದೂರವಾಗುತ್ತವೆ. ಕನಿಷ್ಠ ಒಂದು ವಾರಗಳ ಕಾಲ ಸೇವನೆ ಮಾಡುವುದರಿಂದ ಕಾಮಾಲೆಯೂ ದೂರವಾಗುತ್ತದೆ.
ಇಷ್ಟೊಂದು ಆರೋಗ್ಯಕಾರಿ ಗುಣಗಳನ್ನು ಹೊಂದಿರುವ ದೊಡ್ಡಪತ್ರೆಯನ್ನು ಸುಲಭವಾಗಿ ಮನೆಯಲ್ಲಿಯೇ ಬೆಳೆದುಕೊಳ್ಳಬಹುದಾಗಿದೆ. ಇದರ ಎಲೆಗಳನ್ನು ಆಹಾರ ತಯಾರಿಕೆಯಲ್ಲಿ ತಂಬುಳಿ, ಗೊಜ್ಜು, ಚಟ್ನಿ ಮುಂತಾDದವುಗಳನ್ನು ಮಾಡಿ ಸೇವನೆ ಮಾಡುತ್ತಿರುವುದರಿಂದ ಆರೋಗ್ಯಕ್ಕೂ ಉತ್ತಮವಾಗಿರುತ್ತದೆ.
ಇದನ್ನೂ ಓದಿರಿ: ಚರ್ಮರೋಗ, ಗಜಕರ್ಣ, ಸೋರಿಯಾಸಿಸ್ ನಂತಹ ಗಂಬೀರ ಸಮಸ್ಯೆಗೆ ತುಂಬೆ ಗಿಡದ ಪರಿಹಾರ..!