ಕೇವಲ ನುಗ್ಗೆ ಕಾಯಿ ಮಾತ್ರವಲ್ಲ ಅದರ ಸೋಪ್ಪಿನಲ್ಲಿಯೂ ಇದೆ ವಿಶೇಷ ಆರೋಗ್ಯದ ಗುಣಗಳು

health-benefits-eating-drumstick-leaves

ನಾವೆಲ್ಲಾ ಸಾಮಾನ್ಯವಾಗಿ ನುಗ್ಗೆಕಾಯಿ ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಾಯಕ ವಾಗಿದೆ ಎಂದು ತಿಳಿದಿರುತ್ತೇವೆ. ಆದರೆ ಅದರ ಸೋಪ್ಪಿನಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ಬೆರಗಾಗುವುದಂತು ಸುಳ್ಳಲ್ಲ. ಏಕೆಂದರೆ ಇದರಿಂದ ಹಲವಾರು ರೋಗಗಳನ್ನು ನಿವಾರಿಸಿಕೊಳ್ಳಬಹುದು. ಅಲ್ಲದೇ ನಮ್ಮ ದೇಹಕ್ಕೆ ವಿಟಮಿನ್ ಎ, ಪೊಟ್ಯಾಷಿಯಂ, ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂನ್ನು ಒದಗಿಸುತ್ತದೆ.

ನುಗ್ಗೆ ಸೊಪ್ಪು ಎಲ್ಲ ಕಾಲದಲ್ಲಿಯೂ ಲಭ್ಯವಾಗುತ್ತದೆ ಆದರೆ ಮಳೆಗಾಲದಲ್ಲಿ ಹಚ್ಚ ಹಸುರಾಗಿ ಚಿಗುರೊಡೆದು ಬಂದಿರುವುದರಿಂದ ಅತ್ಯುತ್ತಮವಾಗಿರುತ್ತದೆ. ಇದರ ಸೇವನೆಯಿಂದ ಸುಮಾರು 300ಕ್ಕೂ ಅಧಿಕ ತೊಂದರೆಗಳಿಂದ ದೂರವಾಗಬಹುದು ಎಂದು ಹೇಳುತ್ತಾರೆ.

ನುಗ್ಗೆ ಸೊಪ್ಪನ್ನು ಔಷಧವಾಗಿ ಈ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬಳಸಬಹುದು:

ಕೆಲ ಬಾಣಂತಿಯರು ಎದೆ ಹಾಲಿನ ಕೊರತೆಯಿಂದ ಬಳಲುತ್ತಿರುತ್ತಾರೆ. ಅಂತವರು ಮಕ್ಕಳಿಗೆ ಸರಿಯಾಗಿ ಹಾಲುಣಿಸಲಾಗದೆ ತೊಂದರೆ ಅನುಭವಿಸುತ್ತಿರುತ್ತಾರೆ. ಅಂತವರು ಈ ಸೊಪ್ಪನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಹೊರಬರಬಹುದು.

ಇದನ್ನೂ ಓದಿರಿ: ನಿಮ್ಮ ಮಗು ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದೆಯೇ..? ಹಾಗಾದರೆ ಇಲ್ಲಿದೆ ಪರಿಹಾರ..!

health-benefits-eating-drumstick-leaves-001
Image Credit: google.com

ಕೆಲವೊಮ್ಮೆ ತಲೆ ಸುತ್ತುವುದು ತೀವ್ರ ಸಮಸ್ಯೆಯಾಗಿ ಕಾಡುತ್ತದೆ. ಅಂತಹ ತೊಂದರೆಯಿಂದ ಬಳಲುತ್ತಿರುವವರು ಈ ನುಗ್ಗೆ ಸೊಪ್ಪಿನ ರಸವನ್ನು ತೆಗೆದು, ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬೇಕು. ಬೆಳಿಗ್ಗೆ ಒಂದು ವಾರಗಳವರೆಗೆ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಗೆ ಮುಕ್ತಿ ದೊರಕುತ್ತದೆ.

ಮಧುಮೇಹ ಬಹಳಷ್ಟು ಜನರನ್ನು ಕಾಡುತ್ತಿರುವ ಇಂದಿನ ಸಮಸ್ಯೆಯಾಗಿದೆ. ಈ ತೊಂದರೆಯನ್ನು ಪರಿಹರಿಸಿಕೊಳ್ಳಲು ಇದು ಉತ್ತಮ ಆಹಾರವಾಗಿದೆ. ಇದರ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಇರುತ್ತದೆ.

ಅರ್ಧ ತಲೆ ಶೂಲೆ ಸಮಸ್ಯೆಯಿಂದ ಬಳಲುತ್ತಿರುವವರು ಇದರ ರಸವನ್ನು ನಾಲ್ಕರಿಂದ ಐದು ಹನಿಗಳಷ್ಟನ್ನು ಕಿವಿಗಳಲ್ಲಿ ಹಾಕುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಸಮಸ್ಯೆಯಿರುವವರು ಬಲಗಡೆ ನೋವಿದ್ದರೆ ಎಡ ಕಿವಿಯಲ್ಲಿ ಮತ್ತು ಎಡಗಡೆ ನೋವಿದ್ದರೆ ಬಲಕಿವಿಯಲ್ಲಿ ಹಾಕಿಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರವನ್ನು ಕಾಣಬಹುದಾಗಿದೆ.

health-benefits-eating-drumstick-leaves-002
Image Credit: google.com

ಇದರ ಸೇವನೆಯು ಅಧಿಕ ರಕ್ತದೊತ್ತಡದಂತಹ ತೊಂದರೆಗಳಿಗೆ ರಾಮಬಾಣವಾಗಿದೆ. ದಿನನಿತ್ಯದ ನಮ್ಮ ಆಹಾರದಲ್ಲಿ ಇವುಗಳ ಬಳಕೆಯನ್ನು ಮಾಡುತ್ತಬಂದರೆ ಅದರ ಪ್ರಯೋಜನವನ್ನು ಕಾಣಬಹುದು. ಅಲ್ಲದೇ ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಂದು ಉತ್ತಮ ದೇಹವನ್ನು ಹೊಂದಬಹುದಾಗಿದೆ.

ನುಗ್ಗೆ ಕಾಯಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಹೇಗೆ ಸಹಾಯಕವೋ ಹಾಗೆಯೇ ಇದರ ಎಳೆಯು ಪ್ರಯೋಜನಕಾರಿಯಾಗಿದೆ. ಲೈಂಗಿಕ ನಿಷ್ಯಕ್ತಿಯನ್ನು ನಿವಾರಿಸುತ್ತದೆ. ನಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಅಲ್ಲದೆ ಇದರ ರಸವನ್ನು ತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಮೊಡವೆಯ ತೊಂದರೆಯಿಂದ ಬಳಲುತ್ತಿರುವವರು ಇದರ ಉಪಯೋಗವನ್ನು ಮಾಡುವುದರಿಂದ ಚರ್ಮಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತದೆ. ಇದರಿಂದಾಗಿ ಚರ್ಮದ ರಂದ್ರದಿಂದ ಕಲ್ಮಶಗಳು ಹೊರಹೋಗಿ ಉತ್ತಮ ಚರ್ಮವನ್ನು ಪಡೆಯಬಹುದಾಗಿದೆ.

ಇದನ್ನು ಓದಿರಿ: ಡಾರ್ಕ್ ಸರ್ಕಲ್ ಹಾಗೂ ಮುಖದ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ..?

LEAVE A REPLY

Please enter your comment!
Please enter your name here